ಮಲಗುವ ಮುನ್ನ ನೀರು ಕುಡಿಯೋದು ಒಳ್ಳೇದೋ ಅಲ್ವೋ?

Published : Apr 17, 2022, 10:15 AM IST
ಮಲಗುವ ಮುನ್ನ ನೀರು ಕುಡಿಯೋದು ಒಳ್ಳೇದೋ ಅಲ್ವೋ?

ಸಾರಾಂಶ

ರಾತ್ರಿ ಮೂತ್ರ ವಿಸರ್ಜನೆ ಮಾಡ್ಬೇಕೆಂಬ ಕಾರಣಕ್ಕೆ ಅನೇಕರು ನೀರು ಕುಡಿಯುವುದಿಲ್ಲ. ಆದ್ರೆ ರಾತ್ರಿ ಹಾಸಿಗೆಗೆ ಹೋಗುವ ಮೊದಲು ನೀರು ಕುಡಿಯಬೇಕು. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.  

ನೀರು (Water) ನಮ್ಮ ದೇಹ (Body) ಕ್ಕೆ ಬಹಳ ಮುಖ್ಯ. ನೀರಿಲ್ಲದೆ ಒಂದು ದಿನ ಕಳೆಯಲೂ ಸಾಧ್ಯವಿಲ್ಲ. ನೀರನ್ನು ಇದೇ ಕಾರಣಕ್ಕೆ ಜೀವಜಲವೆಂದು ಕರೆಯಲಾಗುತ್ತದೆ. ಪ್ರತಿ ದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದು ಬಹಳ ಮುಖ್ಯ. ಕೆಲವರು ಅತಿಯಾಗಿ ನೀರು ಸೇವನೆ ಮಾಡ್ತಾರೆ. ಒತ್ತಾಯ ಪೂರ್ವಕವಾಗಿ ದೇಹಕ್ಕೆ ನೀರನ್ನು ನೀಡಬಾರದು. ದೇಹಕ್ಕೆ ನೀರು ಕಡಿಮೆಯಾದ್ರೂ ಸಮಸ್ಯೆಯಾಗುತ್ತದೆ. ಹಾಗೆ ನೀರು ಹೆಚ್ಚಾದ್ರೂ ಸಮಸ್ಯೆಯಾಗುತ್ತದೆ.  ಬೆಳಿಗ್ಗೆ ಹೆಚ್ಚು ನೀರು ಕುಡಿಯಬೇಕು, ರಾತ್ರಿ ನೀರು ಕುಡಿಯಬಾರದು ಎಂದು ಕೆಲವರು ಹೇಳ್ತಾರೆ. ಮತ್ತೆ ಕೆಲವರು ರಾತ್ರಿ ನೀರು ಕುಡಿಯಬೇಕೆನ್ನುತ್ತಾರೆ. ಇದ್ರಿಂದಾಗಿ ಅನೇಕರಿಗೆ ಗೊಂದಲ ಕಾಡುತ್ತದೆ. ರಾತ್ರಿ ನೀರು ಕುಡಿಯಬೇಕೇ ಬೇಡವೇ ಎಂಬ ಪ್ರಶ್ನೆ ಏಳುತ್ತದೆ. ನೀರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ರಾತ್ರಿಯಲ್ಲಿ ನೀರು ಕುಡಿಯುವುದು ಬಹಳ ಒಳ್ಳೆಯದು. ರಾತ್ರಿ ಎಷ್ಟು ನೀರು ಸೇವನೆ ಮಾಡ್ಬೇಕು? ರಾತ್ರಿ ಯಾರು ನೀರು ಕುಡಿಯಬೇಕು? ರಾತ್ರಿ ನೀರು ಕುಡಿಯುವುದು ಎಷ್ಟು ಒಳ್ಳೆಯದು ಎಂಬುದನ್ನು ನಾವಿಂದು ಹೇಳ್ತೇವೆ. 

ರಾತ್ರಿ ನೀರು ಕುಡಿಯಬೇಕೇ ಅಥವಾ ಬೇಡವೇ?

ರಾತ್ರಿ ನೀರು ಕುಡಿಯಬೇಕು : ರಾತ್ರಿ ಮಲಗುವ ಮುನ್ನ ನೀರು ಕುಡಿಯಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ರಾತ್ರಿ ಮಲಗುವ ಮೊದಲು ನೀವು ನೀರು ಕುಡಿದ್ರೆ ಅದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ರಾತ್ರಿಯಲ್ಲಿ ನೀರು ಕುಡಿಯುವುದರಿಂದ ಚಯಾಪಚ ಕ್ರಿಯೆ ಆರಾಮವಾಗಿ ನಡೆಯುತ್ತದೆ. ಇದರಿಂದ ದೇಹದಲ್ಲಿರುವ ವಿಷ ಮತ್ತು ತ್ಯಾಜ್ಯ (Waste) ಉತ್ಪನ್ನಗಳನ್ನು ಹೊರ ಹಾಕಲು ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ರಾತ್ರಿ (Night ) ಮಲಗುವ ಮೊದಲು ನೀರು ಕುಡಿಯಬೇಕು. 

ಮಕ್ಕಳಿಗೆ ನಿರ್ಜಲೀಕರಣದ ಸಮಸ್ಯೆಯಿದ್ದರೆ ಗೊತ್ತಾಗೋದು ಹೇಗೆ ?

ರಾತ್ರಿ ಯಾವ ರೀತಿ ನೀರು ಕುಡಿಯಬೇಕು? : ನೀರು ಕುಡಿಯಬೇಕು ಎಂದು ಹೇಳಿದ ತಕ್ಷಣ ನಾವು ತಣ್ಣನೆಯ ನೀರು ಅಥವಾ ಬಿಸಿ ನೀರಿನ ಸೇವನೆ ಮಾಡ್ತೇವೆ. ಆದ್ರೆ ರಾತ್ರಿ ಬರಿ ನೀರು ಕುಡಿಯುವುದು ಸೂಕ್ತವಲ್ಲ. ಖಾಲಿ ನೀರು ಕುಡಿಯುವ ಬದಲು  ಗ್ರೀನ್ ಟೀ (Green Tea) , ಹರ್ಬಲ್ ಟೀ (Herbal Tea) ಅಥವಾ ನಿಂಬೆ ಪಾನಕದ ಮೂಲಕ ನೀರನ್ನು ಸೇವಿಸಬೇಕು. ಇದ್ರಿಂದ ನಿಮಗೆ ಹೆಚ್ಚು ಪ್ರಯೋಜನ ಸಿಗುತ್ತದೆ. ಏಕೆಂದರೆ ನೀವು ರಾತ್ರಿ ಸಾಮಾನ್ಯ ನೀರನ್ನು ಕುಡಿದರೆ ನೀವು  ಪದೇ ಪದೇ ಶೌಚಾಲಯ (Toilet)ಕ್ಕೆ ಹೋಗಬೇಕಾಗುತ್ತದೆ. ಮೂತ್ರ ವಿಸರ್ಜನೆಗೆ ಏಳುವ ಕಾರಣ ನಿದ್ರೆಗೆ ಭಂಗವಾಗುತ್ತದೆ. 

ರಾತ್ರಿ ನೀರನ್ನು ಏಕೆ ಕುಡಿಯಬೇಕು ಗೊತ್ತಾ? : ರಾತ್ರಿ ಊಟದ ನಂತರ ನೀರು ಕುಡಿಯುವುದರಿಂದ ದೇಹ ಸ್ವಚ್ಛವಾಗುತ್ತದೆ. ವಿಷಕಾರಿ ವಸ್ತುಗಳನ್ನು ಹೊರಹಾಕುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಸಿಡಿಟಿ ಅಥವಾ ಗ್ಯಾಸ್ ಸಮಸ್ಯೆ ಇರುವವರು ರಾತ್ರಿ ನೀರು ಕುಡಿಯಬೇಕು. ಶೀತ ಮತ್ತು ಕೆಮ್ಮು ಸೇರಿದಂತೆ ಶೀತಕ್ಕೆ ಸಂಬಂಧಿಸಿದ ರೋಗಿಗಳು ರಾತ್ರಿ ನೀರು ಕುಡಿಯುವುದು ಪ್ರಯೋಜನಕಾರಿಯಾಗಿದೆ.

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಬೊಜ್ಜು ಹೆಚ್ಚಾಗುತ್ತೆ

ಯಾರು  ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯಬಾರದು ? : ರಾತ್ರಿ ನೀರು ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಂತ ಎಲ್ಲರೂ ರಾತ್ರಿ ನೀರು ಕುಡಿಯುವುದು ಸೂಕ್ತವಲ್ಲ. ಕೆಲವರು ರಾತ್ರಿ ನೀರಿನಿಂದ ದೂರವಿರುವುದೇ ಒಳ್ಳೆಯದು. ಮಧುಮೇಹ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವ ರೋಗಿಗಳು ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯಬಾರದು. ಜನರು ರಾತ್ರಿ ಹೆಚ್ಚು ನೀರು ಕುಡಿದರೆ  ಅವರು ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಇದರಿಂದ ಅವರ ನಿದ್ರೆಗೆ ತೊಂದರೆಯಾಗುತ್ತದೆ. ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಹಸಿರು ಎಲೆ ಅನೇಕರಿಗೆ ವರ, ಯಾರು ಪಾನ್ ತಿನ್ನಬಾರದು?
ಪ್ರತಿದಿನ ಬ್ರೆಡ್-ಆಮ್ಲೆಟ್ ತಿನ್ನೋದು ಆರೋಗ್ಯಕ್ಕೆ ವರವೋ, ಶಾಪವೋ? ಆಮ್ಲೆಟ್ ತಿಂದ್ರೆ ತೂಕ ಹೆಚ್ಚುತ್ತಾ?