ಭೀತಿ ಹುಟ್ಟಿಸಿದೆ ಡೇಂಜರಸ್ ಸ್ಕ್ರಬ್​ ಟೈಫಸ್ ಸೋಂಕು, ರೋಗ ಲಕ್ಷಣಗಳೇನು?

By Suvarna News  |  First Published Oct 1, 2022, 3:57 PM IST

ಎರಡು ವರ್ಷಗಳ ಹಿಂದೆ ಕೊರೋನಾ ಕಾಣಿಸಿಕೊಂಡ ನಂತರ ನಾನಾ ಬಗೆಯ ಕಾಯಿಲೆಗಳು ವಕ್ಕರಿಸುತ್ತಿವೆ. ವಿವಿಧ ರೀತಿಯ ವೈರಸ್‌ಗಳು ಮತ್ತು ವಿಚಿತ್ರ ಜ್ವರದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಈ ಮಧ್ಯೆ ಸ್ಕ್ರಬ್ ಟೈಫಸ್ ಎಂಬ ಹೊಸ ಮಾದರಿಯ ಜ್ವರ ಜನರನ್ನು ಹೈರಾಣಾಗಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 


ಕೊರೋನಾ ಸೋಂಕಿನಿಂದ ಜನರು ಹೈರಾಣಾಗಿ ಹೋಗಿರುವಾಗಲೇ ಹಂದಿ ಜ್ವರ, ಮಂಕಿಪಾಕ್ಸ್ ಸೇರಿದಂತೆ ಹಲವು ಹೊಸ ಹೊಸ ಕಾಯಿಲೆಗಳು ಜನರಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಈ ಮಧ್ಯೆ ನಾಗಾಲ್ಯಾಂಡ್​ ರಾಜ್ಯದ ನೋಕ್ಲಾಕ್​ ಜಿಲ್ಲಾಡಳಿತವು ಹೊಸತೊಂದು ರೋಗವನ್ನು ಪತ್ತೆ ಹಚ್ಚಿದೆ. ಆ ಹೊಸ ರೋಗದ ಹೆಸರೇ 'ಸ್ಕ್ರಬ್​ ಟೈಫಸ್​'. ಇದುವರೆಗೆ 618 ಜನರಿಗೆ ಸ್ಕ್ರಬ್​ ಟೈಫಸ್ ಪಾಸಿಟಿವ್ ಬಂದಿದ್ದು, ಹಲವರು ಈ ಸೋಂಕಿಗೆ ಬಲಿಯಾಗಿದ್ದಾರೆ. ಮನುಷ್ಯ ಮತ್ತು ದನಕರುಗಳನ್ನು ಈ ವಿಚಿತ್ರ ಜ್ವರಗಳು ಕಾಡುತ್ತಿವೆ. ಸ್ಕ್ರಬ್ ಟೈಫಸ್ ಎಂದು ಕರೆಯಲ್ಪಡುವ ಜ್ವರವು ವಿದೇಶಗಳಲ್ಲಿ ಶೀಘ್ರವಾಗಿ ಹರಡುತ್ತಿದ್ದು ಜನರಲ್ಲಿ ಭೀತಿ ಮೂಡಿಸುತ್ತಿದೆ. ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದರೂ, ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. 

ಸ್ಕ್ರಬ್​ ಟೈಫಸ್ ಜ್ವರದ ರೋಗ ಲಕ್ಷಣಗಳು (Symptoms) ಯಾವುವು ? ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇದಕ್ಕೆ ಚಿಕಿತ್ಸೆ (Treatment)ಯೇನು ಎಂಬುದನ್ನು ತಿಳಿದುಕೊಳ್ಳೋಣ.

Tap to resize

Latest Videos

ಮಕ್ಕಳನ್ನು ಸೊಳ್ಳೆ ಕಡಿತದಿಂದ ರಕ್ಷಿಸೋಕೆ ಇಲ್ಲಿವೆ ಸಿಂಪಲ್ ಟಿಪ್ಸ್

ಸ್ಕ್ರಬ್​ ಟೈಫಸ್ ರೋಗ ಲಕ್ಷಣಗಳು 
ಸ್ಕ್ರಬ್​ ಟೈಫಸ್ ಜ್ವರ ದೀರ್ಘಕಾಲದವರೆಗೆ ಮುಂದುವರಿದರೆ. ಇದು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಸ್ಕ್ರಬ್ ಟೈಫೂನ್ ಎಂದು ಕರೆಯಲ್ಪಡುವ ಜ್ವರವು (Fever) ಒಂದು ನಿರ್ದಿಷ್ಟ ರೀತಿಯ ಕೀಟ ಕಡಿತದಿಂದ ಉಂಟಾಗುತ್ತದೆ. ಈ ಸ್ಫೋಟಗಳು ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಜ್ವರದಿಂದ ಬಳಲುತ್ತಿರುವ ಜನರನ್ನು ದೆಹಲಿಯಲ್ಲಿ ಗುರುತಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳು (Children) ಮತ್ತು ವಯಸ್ಸಾದವರು ಎಂದು ವೈದ್ಯರು ತಿಳಿಸಿದ್ದಾರೆ.

ಸ್ಕ್ರಬ್ ಟೈಫಸ್ ಸೋಂಕಿನ ರೋಗ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿಗೆ ಒಳಗಾದ ಅಥವಾ ಹುಳ ಕಚ್ಚಿದ 10 ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಸಿ ತಿಳಿಸಿದ ಕೆಲ ರೋಗ ಲಕ್ಷಣಗಳು ಹೀಗಿವೆ. ಜ್ವರ ಮತ್ತು ಶೀತ, ತಲೆನೋವು (Headache), ಮೈ ಕೈ ನೋವು ಮತ್ತು ಸ್ನಾಯು ನೋವು ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಸೋಂಕು (Virus) ಹರಡುವ ಹುಳ ಕಚ್ಚಿದ ಜಾಗದಲ್ಲಿ ಉಬ್ಬಿದ ರೀತಿಯಾಗಿ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದನ್ನು ಎಸ್ಚಾರ್ ಎಂದೂ ಕರೆಯುತ್ತಾರೆ. ಇದು ಮಾನಸಿಕ ಅಸ್ವಸ್ಥತೆಯಿಂದ ಹಿಡಿದು ಕೋಮಾಕ್ಕೂ ಕಾರಣವಾಗುತ್ತದೆ.

Dengue Fever Diet: ಡೆಂಗ್ಯೂದಿಂದ ಬೇಗ ಚೇತರಿಸಿಕೊಳ್ಳಬೇಕೆ? ಈ ರೀತಿ ಆಹಾರ ಸೇವಿಸಿ

ಕೀಟಾಣು ಕಡಿತದಿಂದ ಗೋಚರಿಸುವ ಚಿಹ್ನೆ ಅಥವಾ ಕಲೆಗಳನ್ನು ಎಚ್ಚರಿಕೆಯ ಸಂಕೇತ ಎಂದು ಹೇಳಲಾಗುತ್ತದೆ. ಸ್ಕ್ರಬ್ ಟೈಫಸ್ ಒಂದು ವಿಶಿಷ್ಟ ಕಾಯಿಲೆಯಾಗಿದೆ. ವರದಿಗಳ ಪ್ರಕಾರ. ದ್ವಾರಕಾದಿಂದ ದೆಹಲಿಗೆ ಬಂದಿದ್ದ ಮಗುವೊಂದರಲ್ಲಿ ಜ್ವರ ಕಂಡುಬಂದಿದೆ. ಈ ರೋಗವು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಜ್ವರಕ್ಕೆ ಕಾರಣವಾಗುವುದಿಲ್ಲ. ಆದರೂ ಇದು ಅಪಾಯಕಾರಿಯಾಗಿದೆ. ಅದಕ್ಕಾಗಿಯೇ ನಿಮಗೆ ಈ ರೀತಿಯ ಜ್ವರ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಇದರ ಕೆಲವು ರೋಗಲಕ್ಷಣಗಳು ಡೆಂಗ್ಯೂಗೆ ಹೋಲುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಜ್ವರವು ಸಾಮಾನ್ಯವಾಗಿ ಏಳು ದಿನಗಳ ವರೆಗೆ ಇರುತ್ತದೆ.

ಸೋಂಕು ತಗುಲಿರುವುದನ್ನು ತಿಳಿದುಕೊಳ್ಳುವುದು ಹೇಗೆ ?
ಸ್ಕ್ರಬ್ ಟೈಫಸ್ ಸೋಂಕಿನ ಲಕ್ಷಣಗಳು ಇತರ ರೋಗಗಳಂತೆ ಇರುತ್ತದೆ. ಹೀಗಾಗಿ ಇದನ್ನು ವೇಗವಾಗಿ ಪತ್ತೆ ಹಚ್ಚಲು ಸಮಸ್ಯೆಯಾಗಬಹುದು. ಸೋಂಕಿನ ಲಕ್ಷಣಗಳು ಕಂಡು ಬಂದರೆ ಅಥವಾ ಈ ಸೋಂಕು ವ್ಯಾಪಿಸಿರುವ ಪ್ರದೇಶಗಳಿಗೆ ಪ್ರಯಾಣಿಸಿದ್ದರೆ ತಕ್ಷಣ ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಯಾವುದೇ ರೋಗಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ, ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಸಾಮಾನ್ಯವಾಗಿ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಇನ್ನುಳಿದಂತೆ, ರೋಗದ ಲಕ್ಷಣಗಳ ಪ್ರಕಾರ, ಸ್ಕಿನ್​ ಬಯಾಪ್ಸಿ, ವೆಸ್ಟರ್ನ್ ಬ್ಲಾಟ್, ಇಮ್ಯುನೊಫ್ಲೋರೊಸೆನ್ಸ್ ಅಸ್ಸೇ  ಪರೀಕ್ಷೆಗಳನ್ನು ಮಾಡಲಾಗುತ್ತದೆ.

Tomato Fever: ಟೊಮ್ಯಾಟೋ ಜ್ವರ ಯಾಕಾಗಿ ಬರುತ್ತೆ? ಲಕ್ಷಣವೇನು?

ಸ್ಕ್ರಬ್ ಟೈಫಸ್‌ಗೆ ಚಿಕಿತ್ಸೆಯೇನು ?
ಸ್ಕ್ರಬ್ ಟೈಫಸ್ ರೋಗಕ್ಕೆ ಸಿಡಿಸಿ (Centers for Disease Control and Prevention) ಶಿಫಾರಸು ಮಾಡಿದ ಚಿಕಿತ್ಸಾ ಕ್ರಮಗಳು ಹೀಗಿವೆ. ಸ್ಕ್ರಬ್ ಟೈಪಸ್​ ಸೋಂಕಿಗೆ ಆ್ಯಂಟಿ ಬಯೊಟಿಕ್ ಡಾಕ್ಸಿಸೈಕ್ಲಿನ್​ ಮೂಲಕ ಚಿಕಿತ್ಸೆ ನೀಡಬೇಕು ಎಂದು ಸಿಡಿಸಿ ಸೂಚಿಸುತ್ತದೆ. ಡಾಕ್ಸಿಸೈಕ್ಲಿನ್ ಯಾವುದೇ ವಯಸ್ಸಿನ ವ್ಯಕ್ತಿಗಳಲ್ಲಿ ಬಳಸಬಹುದು. ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ನೀಡಿದರೆ ಆ್ಯಂಟಿ ಬಯೋಟಿಕ್ ಹೆಚ್ಚು ಪರಿಣಾಮ ಬೀರುತ್ತದೆ. ತ್ವರಿತವಾಗಿ ಡಾಕ್ಸಿಸೈಕ್ಲಿನ್ ಚಿಕಿತ್ಸೆ ಪಡೆಯುವ ಜನರು ಸಾಮಾನ್ಯವಾಗಿ ಬೇಗ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ, ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇತರ ನಿಯಂತ್ರಣ ಕ್ರಮಗಳು
ಸ್ಕ್ರಬ್ ಟೈಫಸ್ ಜ್ವರಕ್ಕೆ ಇತರ ನಿಯಂತ್ರಣ ಕ್ರಮಗಳನ್ನು ಅನುಸರಿಸಬಹುದು. ವಸ್ತ್ರಗಳನ್ನು ಪರ್ಮೆಥ್ರಿನ್ ದ್ರಾವಣದಿಂದ ಶುದ್ದೀಕರಿಸಿ, ಅಥವಾ ಪರ್ಮೆಥ್ರಿನ್​ನಿಂದ ಸಂಸ್ಕರಿಸಿದ ವಸ್ತುಗಳನ್ನೇ ಬಳಸಿ. ಪರ್ಮೆಥ್ರಿನ್ ಸೋಂಕು ಹರಡುವ ಹುಳಗಳನ್ನು ಕೊಲ್ಲುತ್ತದೆ. ಅಲ್ಲದೆ, ಬಟ್ಟೆ, ಶೂ ಸೋಂಕು ರಹಿತಗೊಳಿಸಲು ಬಳಸಬಹುದು.ಸೋಂಕು ನಿವಾರಕದಿಂದ ಸ್ವಚ್ಚಗೊಳಿಸಿದ ಬಟ್ಟೆಗಳು ರಕ್ಷಣೆಯನ್ನು ಒದಗಿಸುತ್ತವೆ. ಪರ್ಮೆಥ್ರಿನ್ ಉತ್ಪನ್ನಗಳನ್ನು ಚರ್ಮದ  (Skin) ಮೇಲೆ ನೇರವಾಗಿ ಬಳಸಬೇಡಿ. ಭಾರತದ ಕೆಲ ಭಾಗಗಳಲ್ಲಿ ಮಾತ್ರ ಈ ಸೋಂಕು ಕಾಣಿಸಿಕೊಂಡಿದೆ. ಆ ಪ್ರದೇಶಗಳಿಗೆ ಪ್ರಯಾಣಿಸುವಾಗ ಜಾಗರೂಕರಾಗಿರಿ. ಸದ್ಯಕ್ಕೆ , ಈ ಸೋಂಕಿಗೆ ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.

click me!