ದೀರ್ಘಾವಧಿಯ ಸಮಯಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಕೋಹಾಲ್ ಸೇವಿಸಿದರೆ ನಿದ್ರೆಯಲ್ಲಿರುವ ಪ್ರಯಾಣಿಕರ ಹೃದಯದ ಆರೋಗ್ಯಕ್ಕೆ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ದೀರ್ಘಾವಧಿಯ ಸಮಯಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಕೋಹಾಲ್ ಸೇವಿಸಿದರೆ ನಿದ್ರೆಯಲ್ಲಿರುವ ಪ್ರಯಾಣಿಕರ ಹೃದಯದ ಆರೋಗ್ಯಕ್ಕೆ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ)ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ, ಜರ್ಮನ್ ಸಂಶೋಧಕರು ವಿಮಾನದಲ್ಲಿ ಮದ್ಯಪಾನ ಮಾಡುವ ಅಭ್ಯಾಸ ರಕ್ತದ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ.
ಅಧ್ಯಯನದ ತಂಡವು ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟ 18ರಿಂದ 40 ವರ್ಷ ವಯಸ್ಸಿನ 48 ಆರೋಗ್ಯವಂತ ಭಾಗವಹಿಸುವವರ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ವಿಶ್ಲೇಷಿಸಿದರು. ಒಂದು ಗುಂಪು ಎರಡು ರಾತ್ರಿಗಳನ್ನು ನಿದ್ರೆಯ ಪ್ರಯೋಗಾಲಯದಲ್ಲಿ ಕಳೆದರೆ, ಇನ್ನೊಂದನ್ನು ಸಮುದ್ರ ಮಟ್ಟದಿಂದ ಸರಿಸುಮಾರು 2,438 ಮೀಟರ್‌ಗಳಷ್ಟು ಎತ್ತರದ ಕೊಠಡಿಯಲ್ಲಿ ಇರಿಸಲಾಯಿತು.
undefined
ಹಾಲುಗಲ್ಲದ ಹಸುಳೆ ಹಾಲಿನ ಪುಡಿಗೆ ವೈನ್ ಸೇರಿಸಿದ ಅಜ್ಜಿ, ಕೋಮಾಗೆ ಜಾರಿದ ಕಂದಮ್ಮ!
ಅಧ್ಯಯನದಲ್ಲಿ ಭಾಗವಹಿಸಿದವರು ಅಲ್ಕೋಹಾಲ್ ಸೇವಿಸಿದರು. ನಂತರ ಎರಡು ಎಂಟು ಗಂಟೆಗಳ ರಾತ್ರಿಗಳನ್ನು ಕಳೆದರು. ಕ್ಯಾಬಿನ್ ಒತ್ತಡ ಮತ್ತು ಆಲ್ಕೋಹಾಲ್ ಸಂಯೋಜನೆಗೆ ಒಡ್ಡಿಕೊಂಡವರು ನಿದ್ರೆಯ ಸಮಯದಲ್ಲಿ ಅವರ ರಕ್ತದ ಆಮ್ಲಜನಕದ ಮಟ್ಟವು ಸರಾಸರಿ 85 ಪ್ರತಿಶತದಷ್ಟು ಕಡಿಮೆಯಾಗಿದೆ. ಹೃದಯ ಬಡಿತಗಳು ಪ್ರತಿ ನಿಮಿಷಕ್ಕೆ ಸರಾಸರಿ 87.7 ಬಡಿತಗಳಿಗೆ (ಬಿಪಿಎಂ) ಹೆಚ್ಚಾಯಿತು ಎಂದು ತಿಳಿದುಬಂದಿದೆ.
ಇದು 88 ಪ್ರತಿಶತ ರಕ್ತದ ಆಮ್ಲಜನಕದ ಮಟ್ಟಕ್ಕೆ ಹೋಲಿಸಿದರೆ ಮತ್ತು ಅಲ್ಕೋಹಾಲ್ ಸೇವಿಸದೆ ಕ್ಯಾಬಿನ್ ಒತ್ತಡವನ್ನು ಅನುಭವಿಸುವವರಿಗೆ 72.9 bpm. ಕುಡಿಯದೇ ಇರುವ ನಿದ್ರಾ ಪ್ರಯೋಗಾಲಯದ ಗುಂಪಿನಲ್ಲಿ, ಸರಾಸರಿ ರಕ್ತದ ಆಮ್ಲಜನಕದ ಮಟ್ಟವು 63.7 ಬಿಪಿಎಂ ಹೃದಯ ಬಡಿತದೊಂದಿಗೆ ಶೇಕಡಾ 95.8 ರಷ್ಟಿತ್ತು.
ಅಲ್ಕೋಹಾಲ್‌ಗೆ ಮೊಸಳೆ ರಕ್ತ ಸೇರಿಸಿ ಕುಡಿಯೋ ಉದ್ಯಮಿ, ದೇಹ ಫಿಟ್ ಆಗಿಡೋ ಟಾನಿಕ್ ಅಂತೆ!
'ಅಲ್ಕೋಹಾಲ್, ನಿದ್ರೆ ಮತ್ತು ಹೈಪೋಬಾರಿಕ್ ಹೈಪೋಕ್ಸಿಯಾ ಆಮ್ಲಜನಕದ ಶುದ್ಧತ್ವವನ್ನು ಕಡಿಮೆ ಮಾಡುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಅದರ ಪರಿಣಾಮವು ತುಂಬಾ ಪ್ರಬಲವಾಗಿರುವುದನ್ನು ನೋಡಿ ನಮಗೆ ಆಶ್ಚರ್ಯವಾಯಿತು' ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಹೀಗಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯ ಸೇವನೆ ತುರ್ತು ವೈದ್ಯಕೀಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ಅಧ್ಯಯನ ನಡೆಸಿದ ತಂಡ ಎಚ್ಚರಿಸಿದೆ. ಸಣ್ಣ ಅಧ್ಯಯನವು ಆರೋಗ್ಯವಂತ ವ್ಯಕ್ತಿಗಳನ್ನು ಮಾತ್ರ ಒಳಗೊಂಡಿರುವುದರಿಂದ, ಇದು ಸರಾಸರಿ ಜನಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ ಎಂಬುದು ಗಮನಾರ್ಹವಾದ ಅಂಶ.