Makar Sankranti: ಸುಗ್ಗಿ ಕಾಲ ಹಿಗ್ಗಿ ಬರುತಿದೆ, ಎಳ್ಳು ಬೆಲ್ಲ ಆರೋಗ್ಯಕ್ಕೆ ನೀಡುತ್ತೆ ಲಾಭ

By Suvarna News  |  First Published Jan 13, 2023, 12:28 PM IST

ಹಳ್ಳಿಯಿಂದ ನಗರಕ್ಕೆ ಸಂಚರಿಸಿರುವ ಸುಗ್ಗಿ ಹಬ್ಬ ಎಂದರೆ ಅದು ಮಕರ ಸಂಕ್ರಾಂತಿ. ಸಂಭ್ರಮ ಸಡಗರದಿಂದ ಆಚರಿಸುವ ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನು ಸಿಹಿ ಕಬ್ಬಿನೊಂದಿಗೆ ಮನೆ ಮನೆಗೆ ಹಂಚುವುದೇ ಒಂದು ಸಂಭ್ರಮ. ಅಷ್ಟಕ್ಕೂ ಎಳ್ಳು ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.


ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಿದ್ದಾಯ್ತು. ವರ್ಷದ ಆರಂಭದ ಮೊದಲ ಹಬ್ಬವಾಗಿ ಮಕರ ಸಂಕ್ರಾAತಿಯನ್ನು ಆಚರಿಸುತ್ತೇವೆ. ಇದನ್ನು ಸುಗ್ಗಿ ಕಾಲವೆಂದೂ ಹಳ್ಳಿಗಳಲ್ಲಿ(Village) ಕರೆಯಲಾಗುತ್ತದೆ. ಸುಗ್ಗಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ನಂತರ ಬೆಳೆದ ಬೆಳೆಗಳ ಕಟಾವು ಕಾರ್ಯ ಶುರುವಾಗುತ್ತದೆ. ಹಬ್ಬದಲ್ಲಿ ಬೆಳೆದದ್ದನ್ನು ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಇನ್ನು ನಗರ ಪ್ರದೇಶದಲ್ಲಿ ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚಿ, ಕಬ್ಬು(Sugar Cane) ಸವಿದು ಶುಭಕೋರಿ ಆಚರಿಸುತ್ತಾರೆ.

ನಮ್ಮ ಪೂರ್ವಜರ ಕಾಲದಿಂದಲೂ ಸಂಕ್ರಾAತಿ ಹಬ್ಬದ ದಿನ ಎಳ್ಳು ಬೆಲ್ಲವನ್ನು ಹಂಚಿ ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡೋಣ ಎನ್ನುತ್ತಾ ಶುಭಕೋರಿ ಆಚರಿಸಲಾಗುತ್ತದೆ. ಅಲ್ಲದೆ ಎಳ್ಳು ಬೆಲ್ಲದ ಮಿಶ್ರಣವು ವೈಜ್ಞಾನಿಕ ಮತ್ತು ಧಾರ್ಮಿಕ ಶಕ್ತಿಯು ವ್ಯಕ್ತಿಯ ಜೀವನದಲ್ಲಿ ಶುಭ ತರುತ್ತದೆ ಎಂಬ ನಂಬಿಕೆಯೂ ಇದೆ. ಸಂಕ್ರಾAತಿ ಹಬ್ಬದ ದಿನ ಎಳ್ಳು ಬೆಲ್ಲವನ್ನು ಪರಸ್ಪರ ಹಂಚುವುದೇಕೆ? ಇದಕ್ಕೆ ವೈಜ್ಞಾನಿಕ ಕಾರಣವಿದೆ. ಆಯುರ್ವೇದದ(Ayurveda) ಪ್ರಕಾರವೂ ಚಳಿಗಾಲದಲ್ಲಿ ಎಳ್ಳು ಬೆಲ್ಲ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಲಾಗಿದೆ. 

Tap to resize

Latest Videos

ಮಕರ ಸಂಕ್ರಾAತಿ 
ಮಕರ ಸಂಕ್ರಾAತಿ ಎಂದರೆ ಸೂರ್ಯ(Sun) ತನ್ನ ಪಥವನ್ನು ಬದಲಾಯಿಸುತ್ತಾನೆ. ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಯತ್ತ ಸೂರ್ಯನ ಪಥ ಬದಲಾಗುತ್ತದೆ. ಸೂರ್ಯನ ಈ ಪಥ ಬದಲಾವಣೆಯು ರಾಶಿಫಲಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ಮಕರ ಸಂಕ್ರಾAತಿಯು ಜನವರಿ 15 ಭಾನುವಾರ ಬಂದಿದೆ.

ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ
ಕರ್ನಾಟಕ ಜನತೆಗೆ ಸಂಕ್ರಾAತಿ ಎಳ್ಳು ಬೆಲ್ಲ, ಕಬ್ಬಿನೊಂದಿಗೆ ಸವಿಯುವುದು ಹಾಗೂ ಹಳ್ಳಿ ಜನರಿಗೆ ಇದು ಸುಗ್ಗಿ ಕಾಲವಾಗಿದೆ. ಹೀಗೆ ಬಹುತೇಕ ರಾಜ್ಯಗಳಲ್ಲಿ ಸಂಕ್ರಾAತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಹೊಸ ಫಸಲಿನಿಂದ ಸಿಹಿ(Sweet), ಖಾರ "ಪೊಂಗಲ್'(Pongal) ಎಂದು ಆಚರಿಸಲಾಗುತ್ತದೆ. ಇನ್ನು ಕೇರಳದಲ್ಲಿ ಅಯ್ಯಪ್ಪ ಸನ್ನಿಧಾನ ಶಬರಿಮಲೆಯಲ್ಲಿ ಕಂಡುಬರುವ ಸಂಕ್ರಮಣ ಜ್ಯೋತಿಯೇ(Jyothi) ಮೂಲಕ ಆಚರಿಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ ರಂಗೋಲಿ, ಗಾಳಿಪಟ(Kite) ಹಾರಿಸುವುದು ವಿಶೇಷ. 

ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ
ಡಿಸೆಂಬರ್‌ನಿAದ ಫೆಬ್ರವರಿ ಕೊನೆಯವರೆಗೂ ಮೈಕೊರೆಯುವ ಚಳಿಯ(Winter) ಕಾಲ. ಈ ಸಂದರ್ಭದಲ್ಲಿ ಬರುವ ಹಬ್ಬ ಎಂದರೆ ಅದು ಮಕರ ಸಂಕ್ರಾAತಿ. ಧನುರ್ಮಾಸವು ಸಂಕ್ರಾAತಿ ಹಬ್ಬದ ಮೂಲಕ ಕೊನೆಗೊಳ್ಳುತ್ತದೆ. ಈ ಚಳಿಯ ಹವೆಯಲ್ಲಿ ದೇಹವನ್ನು ಬೆಚ್ಚಗಿರಿಸಲು ಎಳ್ಳು ಸಹಕಾರಿಯಾಗುತ್ತದೆ. ಅಲ್ಲದೆ ಎಳ್ಳು ಬೆಲ್ಲದ ಸಂಮಿಶ್ರಣವು ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು(Protein) ಒದಗಿಸುತ್ತದೆ. 

ಎಳ್ಳಿ ಬೆಲ್ಲ ಸವಿಯುವುದರಿಂದ ಆರೋಗ್ಯ ಪ್ರಯೋಜನಗಳು
ಮಕರ ಸಂಕ್ರಾಂತಿ ಹಬ್ಬದಂದು ಉತ್ತರಾಯಣ(Uttarayana) ಕಾಲ ಪ್ರಾರಂಭವಾಗುತ್ತದೆ. ಅಂದರೆ ಸೂರ್ಯ ನಮಗೆ ಸ್ವಲ್ಪ ಹತ್ತಿರವಾಗುತ್ತಾನೆ. ಆಗ ದೇಹದ ಉಷ್ಣಾಂಶ(Body Temperature) ಕಾಪಾಡಿಕೊಳ್ಳಲು ಎಳ್ಳು(Sesame) ಸಹಕಾರಿ. ಬೆಲ್ಲದಲ್ಲಿ ಆಂಟಿಆಕ್ಸಿಡೆAಟ್(Anti Oxident) ಅಂಶ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಚಯಪಚಯ ಕ್ರಿಯೆಗೆ ಸಹಕಾರಿ
ಎಳ್ಳಿನಲ್ಲಿ ಪೌಷ್ಠಿಕಾಂಶ ಹೇರಳವಾಗಿದೆ. ಇದು ಹಾನಿಗೊಳಗಾದ ಸ್ನಾಯುಗಳನ್ನು(Muscles) ಸರಿಪಡಿಸುತ್ತದೆ. ಅಲ್ಲದೆ ಚಯಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ಮಲಬದ್ಧತೆ(Constipation) ಸಮಸ್ಯೆ ನಿವಾರಿಸುತ್ತದೆ. 

ಸಂಕ್ರಾಂತಿ, ಲೋಹ್ರಿ, ಓಣಂ, ಪೊಂಗಲ್.. ಹಬ್ಬ ಒಂದು, ಹೆಸರು ಹಲವು

ಸುಗಮ ರಕ್ತ ಸಂಚಾರ
ಚಳಿಗಾಲದಲ್ಲಿ ಮೈ ಕೊರೆಯುವ ಚಳಿಯಿಂದಾಗಿ ರಕ್ತ ಸಂಚಾರ(Blood Circulation) ನಿಧಾನವಾಗುತ್ತದೆ. ಈ ಸಂದರ್ಭದಲ್ಲಿ ಹೃದಯ ಸಂಬAಧಿ(Heart Disease) ಸಮಸ್ಯೆಗಳು, ರಕ್ತ ಹೆಪ್ಪುಗಟ್ಟುವಿಕೆ(Blood Clot), ಗಾಯಗಳು ಬೇಗ ಗುಣಮುಖವಾಗದಿರುವುದು ಸಮಸ್ಯೆ ಹೆಚ್ಚು, ಹಾಗಾಗಿ ಎಳ್ಳು ತಿಂದರೆ ರಕ್ತವನ್ನು ಶುದ್ಧೀಕರಿಸಿ, ರಕ್ತ ಸಂಚಲನ ಚೆನ್ನಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಆಯುರ್ವೇದದಲ್ಲಿ ಎಳ್ಳು
ಆಯುರ್ವೇದದಲ್ಲಿ ಎಳ್ಳಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಎಳ್ಳೆಣ್ಣೆ ಬಳಸಲಾಗುವುದು. ತಲೆ ಕೂದಲಿನಿಂದ ಹಿಡಿದು ಒಡೆದ ಚರ್ಮ, ಒಡೆದ ಕಾಲುಗಳಿಗೆ, ಹೃದಯ ಸಂಬAಧಿ ಕಾಯಿಲೆ, ಮಧುಮೇಹ(Diabetes), ಅಲ್ಸರ್(Ulcer), ಕಣ್ಣು(Eye), ಮಲಬದ್ಧತೆ ಹೀಗೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು. ಅತಿಯಾದ ಚಳಿಯಿಂದಾಗಿ ರಕ್ತ ಸಂಚಾರ ಸಮಸ್ಯೆ ಹೆಚ್ಚು. ದೇಹವನ್ನು ಬೆಚ್ಚಗಿಡುವ ಮೂಲಕ ರಕ್ತ ಸಂಚಾರ ಸುಗಮಗೊಳಿಸುತ್ತದೆ.

ವಾತ ದೋಷ, ಕಫ ನಿವಾರಣೆ
ದೇಹವನ್ನು ಆರೈಕೆ ಮಾಡುವುದರಲ್ಲಿ ಹಾಗೂ ಶಕ್ತಿ ತುಂಬುವಲ್ಲಿ ಎಳ್ಳು ಬಹಳ ಒಳ್ಳೆಯದು. ಎಳ್ಳೆಣ್ಣೆ ಬಳಸುವುದರಿಂದ ವಾತ ಹಾಗೂ ಪಿತ್ತ ದೋಷ(Pitta Dosha) ತಡೆಗಟ್ಟುತ್ತದೆ. ಇದು ತ್ವಚೆಯನ್ನು(Face) ಮೃದುವಾಗಿಸಿ ಜೊತೆಗೆ ಕಾಂತಿಯುತಗೊಳಿಸುತ್ತದೆ.

ಅನಿಯಮಿತ ಮುಟ್ಟಿನ ಸಮಸ್ಯೆ
ಆಯುರ್ವೇದದಲ್ಲಿ ಮುಟ್ಟಿನ ಸಮಸ್ಯೆ ಇರುವವರಿಗೆ ಎಳ್ಳಿನಿಂದ ಮಾಡಿದ ಪುಡಿ, ಕಷಾಯವನ್ನು(Kashaya) ನೀಡಲಾಗುತ್ತದೆ. ಎಳ್ಳು ತಿನ್ನುವುದರಿಂದ ಅನಿಯಮಿತ ಮುಟ್ಟು ತಡೆಗಟ್ಟಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದೆ.

ಎಳ್ಳಿನೊಂದಿಗೆ ಬೆಲ್ಲ
ಎಳ್ಳು ದೇಹದ ಉಷ್ಣಾಂಶ ಕಾಪಾಡಿದರೆ ಬೆಲ್ಲ ದೇಹದ ಶಕ್ತಿ ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯೂ(Immunity Power) ಹೆಚ್ಚಿಸುತ್ತದೆ. ದೇಹದಲ್ಲಿ ಬೆಲ್ಲ ಇಂಧನವಾಗಿ ಕೆಲಸ ಮಾಡಿದರೆ ಎಳ್ಳು ಶಕ್ತಿಯಾಗಿ ಆರೋಗ್ಯ ವೃದ್ಧಿಸುತ್ತದೆ.

ಎಳ್ಳು ಬೆಲ್ಲ ತಯಾರಿಸುವುದು ಹೇಗೆ?
ಚಳಿಗಾಲದಲ್ಲಿ ಎಳ್ಳು ಬೆಲ್ಲ ತಿನ್ನುವ ಪ್ರಮುಖ ಉದ್ದೇಶವೇ ಆರೋಗ್ಯ ವೃದ್ಧಿಸುವುದು. ಬ್ಯುಸಿಯಾದ ಜೀವನಶೈಲಿಯಲ್ಲಿ(Lifestyle) ಎಳ್ಳು ಬೆಲ್ಲವನ್ನು ಡಬ್ಬಿಗಟ್ಟಲೆ ತಯಾರಿಸುವ ಮಾತು ದೂರಾಗಿದೆ. ಮಾರ್ಕೆಟ್‌ಗೆ ಹೋಗಿ ಖರೀದಿಸುವವರೇ ಹೆಚ್ಚು. ಮನೆಯಲ್ಲಿ ತಯಾರಿಸಲು ಇಷ್ಟ ಪಡುವವರು ಹೀಗೆ ಮಾಡಿ.
ಬೇಕಾದ ಸಾಮಗ್ರಿಗಳು: ಬಿಳಿ ಎಳ್ಳು, ಅಚ್ಚು ಬೆಲ್ಲ, ಕೊಬ್ಬರಿ, ಪುಟಾಣಿ, ಶೇಂಗ.

ಮಾಡುವ ವಿಧಾನ: ಅಚ್ಚು ಬೆಲ್ಲ ಹಾಗೂ ಕೊಬ್ಬರಿಯನ್ನು(Dry Coconut) ಸಣ್ಣದಾಗಿ ಹೆಚ್ಚಿಕೊಂಡು ಎರಡು ದಿನ ಬಿಸಿನಲ್ಲಿ ಇಡಬಹುದು. ಪುಟಾಣಿಯನ್ನು ಸ್ವಲ್ಪ ಬೆಚ್ಚಗೆ ಹುರಿದುಕೊಳ್ಳಿ, ಶೇಂಗವನ್ನು ಚೆನ್ನಾಗಿ ಗೋಲ್ಡನ್ ಬ್ರೌನ್(Gold Brown) ಬರುವವರೆಗೂ ಹುರಿಯಿರಿ. ತಣ್ಣಗಾದ ನಂತರ ಸಿಪ್ಪೆಯನ್ನು ತೆಗೆಯಿರಿ. ನಂತರ ಎಳ್ಳನ್ನು ಒಮ್ಮೆ ತೊಳೆದು ಚಟ ಚಟ ಎನ್ನುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಎಳ್ಳಿಗೆ ಬೇಕೆಂದರೆ ಸಕ್ಕರೆ ಪಾಕವನ್ನು ಮಾಡಿ ಸೇರಿಸಿ ಮತ್ತೆ ಹುರಿದುಕೊಳ್ಳಬಹುದು. ಈ ಎಲ್ಲಾ ಪದಾರ್ಥಗಳನ್ನು ಒಂದು ಡಬ್ಬಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಬೇಕೆಂದರೆ ಜೀರಿಗೆ ಪೆಪ್ಪರ್‌ಮೆಂಟ್ ಸೇರಿಸಿಕೊಳ್ಳಬಹುದು. ಇದನ್ನು ಒಂದು ತಿಂಗಳವರೆಗೂ ಇಟ್ಟು ತಿನ್ನಬಹುದು. 
 

click me!