ಸಂಕಲ್ಪ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಂದು ಉದ್ಘಾಟನೆ

By Kannadaprabha NewsFirst Published Sep 2, 2022, 2:29 PM IST
Highlights
  • ಸಂಕಲ್ಪ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಂದು ಉದ್ಘಾಟನೆ

  • ವೈದ್ಯಕೀಯ ಕ್ಷೇತ್ರದ ಹಲವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಕಲ್ಪ ಸೂಪರ್‌ ಸ್ಪೆಷಾಲಿಟಿ

  • ಡಾ. ಅವಿನಾಶ ಓದುಗೌಡ್ರ ಮಾಹಿತಿ

 ಗದಗ (ಸೆ.2) : ವೈದ್ಯಕೀಯ ಕ್ಷೇತ್ರದ ಹಲವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಕಲ್ಪ ಸೂಪರ್‌ ಸ್ಪೆಷಾಲಿಟಿ ಮತ್ತು ಹೆರಿಗೆ ಆಸ್ಪತ್ರೆ ಸೆ. 2ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಡಾ. ಅವಿನಾಶ ಓದುಗೌಡ್ರ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹಳೇ ಡಿ.ಸಿ. ಆಫೀಸ್‌ ಹತ್ತಿರದ ಎಪಿಎಂಸಿ ಡಬಲ್‌ ರೋಡ್‌ನ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ನಮ್ಮ ಆಸ್ಪತ್ರೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಗದಗ ತೋಂಟದಾರ್ಯ ಮಠದ ಜ. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು.

ತಳ್ಳೋ ಗಾಡಿಯಲ್ಲಿ ಗರ್ಭಿಣಿ ಪತ್ನಿಯ ಆಸ್ಪತ್ರೆ ಕರೆ ತಂದ ಪತಿಗೆ ಶಾಕ್, ತನಿಖೆಗೆ ಆದೇಶಿಸಿದ ಸರ್ಕಾರ!

ಶಾಸಕ ಎಚ್‌.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ವಿಧಾನಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಮಾಜಿ ಶಾಸಕ ಡಿ.ಆರ್‌. ಪಾಟೀಲ ಆಗಮಿಸುವರು. ಡಾ.ಅವಿನಾಶ್‌ ಓದುಗೌಡರ, ಡಾ. ಮೇಘನಾ ಹಿಪ್ಪರಗಿ, ಡಾ. ಪವನ್‌ಕುಮಾರ ಕೋಳಿವಾಡ, ಡಾ. ಮಹಾಲಕ್ಷ್ಮೀ ಎ.ಎಚ್‌., ಡಾ. ದೀಪಕ್‌ ಕುರಹಟ್ಟಿ, ಡಾ. ನಮ್ರತಾ ಬಾಲರೆಡ್ಡಿಯವರ, ಡಾ. ಶಿವಕುಮಾರ ಪವಾಡಶೆಟ್ಟರ, ಡಾ. ಶಿಲ್ಪಾ ಪವಾಡಶೆಟ್ಟರ, ಡಾ. ಇರ್ಫಾನ್‌ ಮಕಾನದಾರ ತಜ್ಞ ವೈದ್ಯರ ತಂಡ ಜನಸೇವೆಯ ಸಂಕಲ್ಪದೊಂದಿಗೆ ಈ ಆಸ್ಪತ್ರೆ ರೂಪುಗೊಂಡಿದೆ. ಗ್ಯಾಸ್ಟೊ್ರೕಎಂಟರಾಲಜಿ ಮತ್ತು ಅವರ್‌ಸೈನ್ಸ್‌ ವಿಭಾಗ, ಯುರೋಲಜಿ ಮತ್ತು ನೆಫ್ರಾಲಜಿ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಶ್ವಾಸಕೋಶ ವಿಭಾಗವನ್ನು ಈ ಆಸ್ಪತ್ರೆ ಹೊಂದಿದೆ. ಔಷಧಾಲಯ, ಲ್ಯಾಬ್‌, ಒಪಿಡಿ ಡೇ ಕೇರ್‌, ಸ್ಕ್ಯಾ‌ನಿಂಗ್‌, ಶಸ್ತ್ರಚಿಕಿತ್ಸೆ, ಒಳರೋಗಿ ಆರೈಕೆ, ಡಯಾಲಿಸಿಸ್‌, ಐಸಿಯು, ಲ್ಯಾಪೋ›ಸ್ಕೋಪಿ, ಹೆರಿಗೆ ಮತ್ತು ಸ್ತ್ರೀರೋಗ, ಬಂಜೆತನ ಮೌಲ್ಯಮಾಪನ ಮತ್ತು ನಿರ್ವಹಣೆ, ತುರ್ತು ಚಿಕಿತ್ಸೆ, ಕ್ರಿಟಿಕಲ್‌ ಕೇರ್‌, ಸುಧಾರಿತ ಎಂಡೋಸ್ಕೋಪಿ ಕಾರ್ಯ ವಿಧಾನಗಳು, ಯುರೋಲಜಿ, ಗ್ಯಾಸ್ಟೊ್ರೕಎಂಟರಾಲಜಿ ಮತ್ತು ಲಿವರ್‌ ಸೈನ್ಸಸ್‌, ಮೂತ್ರಪಿಂಡ, ಪಲ್ಮನರಿ ಮೆಡಿಸಿನ್‌, ಅಥೋಪೆಡಿಕ್ಸ್‌ ಮತ್ತು ಟ್ರಾಮಾ ಕೇರ್‌, ನರವಿಜ್ಞಾನ, ಪಿಸಿಯೋಥೆರಪಿ, ಆ್ಯಂಬುಲೆನ್ಸ್‌ ಹೀಗೆ ಮುಂತಾದ ಸೌಲಭ್ಯಗಳನ್ನು ಹೊಂದಿದೆ.

ಸರ್ಕಾರದಿಂದ ರೋಗಿಗಳಿಗೆ ಲಭ್ಯವಿರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನೂ ಸಹ ಹೊಂದಲಾಗಿದ್ದು, ಜನಸಾಮಾನ್ಯರ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನತೆಗೆ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶವನ್ನು ಸಂಕಲ್ಪ ಹೊಂದಲಾಗಿದೆ ಎಂದು ಡಾ. ಅವಿನಾಶ್‌ ಓದುಗೌಡರ, ಡಾ.ಶಿವಕುಮಾರ ಪವಾಡಶೆಟ್ಟರ ತಿಳಿಸಿದ್ದಾರೆ.ಏಮ್ಸ್‌ ಮಾದರಿಯ ಸುಸಜ್ಜಿತ ಆಸ್ಪತ್ರೆ ಬಗ್ಗೆ ಠರಾವು ಹೊರಡಿಸಲು ಮನವಿ

click me!