ನಾವು ಭಾರತೀಯರು ದೇಹಕ್ಕೆ ಬೇಕಾದ ಉಪ್ಪಿಗಿಂದ ದುಪ್ಪಟ್ಟು ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡುತ್ತೇವೆ. ಇದರಿಂದ ದೀರ್ಘಾವಧಿಯಲ್ಲಿ ವಿವಿಧ ರೀತಿಯ ರೋಗಗಳು ಉಂಟಾಗುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯೂ ಇತ್ತೀಚೆಗೆ ಉಪ್ಪಿನ ಸೇವನೆ ಕುರಿತು ಎಚ್ಚರಿಕೆ ನೀಡಿದೆ.
ಸಂ
ಸಂಜೆಯ ಕಾಫಿ ಅಥವಾ ಟೀಗೆ ಚಿಪ್ಸ್, ಬಿಸ್ಕತ್ ಮುಂತಾದ ಪ್ಯಾಕೆಟ್ ನಲ್ಲಿ ಇರುವಂತಹ ಸ್ನ್ಯಾಕ್ಸ್ ಹೆಚ್ಚು ಜನಪ್ರಿಯ. ದಿನವೂ ಇಂಥವುಗಳನ್ನು ಸೇವಿಸಿದರೆ ನಮಗರಿವಿಲ್ಲದೆ ಹೆಚ್ಚು ಉಪ್ಪು ದೇಹಕ್ಕೆ ಹೋಗುತ್ತದೆ. ಉಪ್ಪನ್ನು ಅಧಿಕ ಪ್ರಮಾಣದಲ್ಲಿ ತಿನ್ನಬಾರದು ಎನ್ನುವ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ಆದರೂ ದೇಹದ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು ಉಪ್ಪು ಸೇವನೆ ನಮ್ಮ ಅಭ್ಯಾಸವಾಗಿದೆ. ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿ ಪ್ರಕಾರ, ಅಧಿಕ ಉಪ್ಪಿನ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಹಾನಿ ತಂದೊಡ್ಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೇಹಕ್ಕೆ ಬೇಕಾದ ಪ್ರಮಾಣಕ್ಕಿಂತ ಉಪ್ಪು ಸೇವನೆ ಮಾಡುವುದರಿಂದ ಅನೇಕ ರೋಗಗಳು ಕಾಡುತ್ತವೆ. ಇದು ಒಂದೆರಡು ದೇಶಗಳಲ್ಲಿ ಕಂಡುಬರುತ್ತಿರುವ ಸಮಸ್ಯೆಯಲ್ಲ, ಜಗತ್ತಿನಾದ್ಯಂತ ಕೆಲವೇ ದೇಶಗಳನ್ನು ಹೊರತುಪಡಿಸಿ ಅಧಿಕ ಉಪ್ಪಿನ ಸೇವನೆ ಟ್ರೆಂಡ್ ಆಗಿದೆ. ಏಕೆಂದರೆ, ಬಾಹ್ಯ ತಿಂಡಿ, ತಿನಿಸುಗಳ ಸೇವನೆ ಅಧಿಕವಾಗಿದೆ. ೨೦೨೫ರೊಳಗೆ ಜನ ತಮ್ಮ ಆಹಾರದಲ್ಲಿ ಶೇಕಡ ೩೦ರಷ್ಟು ಉಪ್ಪನ್ನು ಕಡಿಮೆ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಆದರೆ, ಇದು ಖಂಡಿತವಾಗಿ ಸುಲಭವಲ್ಲ. ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಲಕ್ಷಾಂತರ ಜನ ಸಾವಿಗೀಡಾಗುತ್ತಾರೆ ಎಂದೂ ವರದಿ ಎಚ್ಚರಿಸಿದೆ.
ಉಪ್ಪನ್ನು (Salt) ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಉಪ್ಪಿನಲ್ಲಿ ಸೋಡಿಯಂ (Sodium) ಇರುತ್ತದೆಯಲ್ಲವೇ? ಅದು ದೇಹಕ್ಕೆ (Body) ಎಷ್ಟು ಅಗತ್ಯವೋ ಅಷ್ಟೇ ಅಪಾಯಕಾರಿಯೂ ಹೌದು. ಮಿತವಾದ ಬಳಕೆ ಅನಿವಾರ್ಯ. ಹೆಚ್ಚಾದರೆ ಹೃದಯ ರೋಗಗಳು (Heart Diseases), ಪಾರ್ಶ್ವವಾಯು, ಕಿಡ್ನಿಗೆ (Kidney) ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಹಲವು ಅಧ್ಯಯನಗಳ ಪ್ರಕಾರ, ದೀರ್ಘಕಾಲದವರೆಗೆ ಅತಿಯಾಗಿ ಸೋಡಿಯಂ ಬಳಕೆ ಮಾಡುವುದರಿಂದ ಬೊಜ್ಜು (Obesity), ಹೊಟ್ಟೆಯ ಕ್ಯಾನ್ಸರ್ (Stomach Cancer) ಹಾಗೂ ಆಸ್ಟಿಯೋಪೊರೊಸಿಸ್ ನಂತಹ ರೋಗಗಳ ಅಪಾಯ ಹೆಚ್ಚುತ್ತದೆ.
ರುಚಿ ಹೆಚ್ಚಿರುವ Processed Food ಸಹವಾಸ ಬಿಟ್ಟರೆ ನಿಮ್ಮ ಆರೋಗ್ಯಕ್ಕೇ ಒಳ್ಳೇದು ನೋಡಿ!
ಉಪ್ಪಿನ ಅಗತ್ಯವೇಕೆ?
ಉಪ್ಪಿನಲ್ಲಿ ಸೋಡಿಯಂ ಮತ್ತು ಪೊಟ್ಯಾಷಿಯಂ ಇರುತ್ತವೆ. ಸೋಡಿಯಂ ಅಂಶ ನಮ್ಮ ದೇಹದಲ್ಲಿ ನೀರಿನ ಮಟ್ಟವನ್ನು (Water Level) ಕಾಪಾಡುವ ಜತೆಗೆ, ಆಮ್ಲಜನಕ (Oxigen) ಮತ್ತು ಪೋಷಕಾಂಶಗಳು ಎಲ್ಲ ಅಂಗಾಂಗಗಳಿಗೆ ತಲುಪಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ನಮ್ಮ ವಾಸ್ಕ್ಯುಲರ್ ಮತ್ತು ನರಮಂಡಲ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ, ಭಾರತೀಯರು (Indians) ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಜನರು ದುಪ್ಪಟ್ಟು ಉಪ್ಪು ಸೇವನೆ ಮಾಡುವುದು ಕಂಡುಬಂದಿದೆ. ದಿನಕ್ಕೆ 5 ಗ್ರಾಮ್ ಗಿಂತ ಹೆಚ್ಚು ಪ್ರಮಾಣದಲ್ಲಿ ಉಪ್ಪು ದೇಹಕ್ಕೆ ಸಾಕು. ಆದರೆ, ಜನ 10.8 ಗ್ರಾಮ್ ಗಿಂತ ಹೆಚ್ಚು ಉಪ್ಪು ತಿನ್ನುತ್ತಾರೆ. ಇದರಿಂದ ದೇಹದ ಮೇಲೆ ಭಾರೀ ಪರಿಣಾಮವಾಗುತ್ತಿದೆ.
ನಿಮಗೆ ಗೊತ್ತೇ? ವಿಶ್ವದ 9 ದೇಶಗಳಲ್ಲಿ ಕಡಿಮೆ ಉಪ್ಪು ಸೇವನೆ ಮಾಡುವುದರ ಕುರಿತಂತೆ ನಿಯಮವನ್ನೇ ಮಾಡಲಾಗಿದೆ. ಬ್ರೆಜಿಲ್, ಚಿಲಿ, ಝೆಕ್ ಗಣರಾಜ್ಯ, ಲಿಥುವೆನಿಯಾ, ಮಲೇಷ್ಯಾ, ಮೆಕ್ಸಿಕೋ, ಸೌದಿ ಅರಬ್, ಸ್ಪೇನ್ ಮತ್ತು ಉರುಗ್ವೆಗಳಲ್ಲಿ ಕಡಿಮೆ ಉಪ್ಪು ಸೇವನೆಗೆ ಸಂಬಂಧಿಸಿ ನಿಯಮಗಳಿವೆ.
ಈ ಆಹಾರಗಳು ಹೃದಯದ ಶತ್ರು…, ತಕ್ಷಣವೇ ಅವೈಯ್ಡ್ ಮಾಡಿ!
ಯಾವ ಆಹಾರದಲ್ಲಿ (Food) ಉಪ್ಪು ಹೆಚ್ಚು?
ಭಾರತೀಯರ ಆಹಾರದಲ್ಲಿ ಮಸಾಲೆ ಹೆಚ್ಚು. ಹಾಗೆಯೇ ಉಪ್ಪಿನ ಸೇವನೆಯೂ ಹೆಚ್ಚು. ಆದರೆ, ಮನೆಯಲ್ಲಿ ಸಿದ್ಧಪಡಿಸಿದ ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುವುದಿಲ್ಲ. ರೆಡಿ ಟು ಈಟ್, ಪ್ಯಾಕೇಟ್ ಆಹಾರ, ಫ್ರೋಜನ್ ಮತ್ತು ಜಂಕ್ ಫುಡ್ ಗಳ ಮೂಲಕ ಅತ್ಯಧಿಕ ಪ್ರಮಾಣದ ಉಪ್ಪು ದೇಹ ಸೇರುತ್ತಿದೆ. ಹೀಗಾಗಿ, ಇವುಗಳನ್ನು ಸೇವನೆ ಮಾಡದಿರುವುದು ಉತ್ತಮ. ಮಾಡಲೇಬೇಕಿದ್ದರೆ ಅವುಗಳ ಮೇಲಿರುವ ಸೋಡಿಯಂ ಪ್ರಮಾಣವನ್ನು ಚೆಕ್ ಮಾಡಿಕೊಳ್ಳಬೇಕು.