
ಮಹಿಳೆ(Woman)ಯರ ಜನನಾಂಗವನ್ನು ಯೋನಿ(Vagina) ಎಂದೂ ಕರೆಯುತ್ತಾರೆ. ಯೋನಿಯು ಗರ್ಭಾಶಯ(Uterus)ವನ್ನು ಬಾಹ್ಯ ದೇಹಕ್ಕೆ ಸಂಪರ್ಕಿಸುತ್ತದೆ. ದೇಹದ ಉಳಿದ ಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಯೋನಿಯ ಸ್ವಚ್ಛತೆಯೂ ಅಷ್ಟೇ ಮುಖ್ಯ. ಮಹಿಳೆಯರು ಜನನಾಂಗದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.
ತುರಿಕೆ, ಹಠಾತ್ ಸ್ರಾವ, ಬಿಳಿ ಸ್ರಾವ, ದುರ್ವಾಸನೆ, ಜನನಾಂಗದ ನೋವು ಹೀಗೆ ಅನೇಕ ಸಮಸ್ಯೆ ಕಾಡುತ್ತದೆ. ಯೋನಿ ಸ್ವಚ್ಛವಾಗಿದ್ದರೆ ಇದ್ಯಾವ ಸಮಸ್ಯೆಯಿರುವುದಿಲ್ಲ. ಯೋನಿಯ ಚರ್ಮವು ನೈಸರ್ಗಿಕವಾಗಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಇದು ಯೋನಿಯನ್ನು ಆರೋಗ್ಯವಾಗಿಡುತ್ತದೆ. ಯೋನಿಯ ಸೋಂಕಿನಿಂದಾಗಿ, ಮಹಿಳೆಯರು ಮಾತ್ರವಲ್ಲದೆ ಅವರ ಲೈಂಗಿಕ ಪಾಲುದಾರರೂ ಅಪಾಯಕ್ಕೆ ಒಳಗಾಗಬಹುದು. ಅನೇಕ ಮಹಿಳೆಯರಿಗೆ ಯೋನಿ ನೈರ್ಮಲ್ಯದ ಪ್ರಾಮುಖ್ಯತೆ ತಿಳಿದಿಲ್ಲ. ಯೋನಿಯನ್ನು ಸ್ವಚ್ಛಗೊಳಿಸಲು ಸೋಪ್ ಅನ್ನು ಬಳಸುವುದು ಹಾನಿಕಾರಕವಾಗಿದೆ. ಆದ್ದರಿಂದ ಅದನ್ನು ಸ್ವಚ್ಛಗೊಳಿಸಲು ವಿ ವಾಶ್ ಅನ್ನು ಬಳಸಬೇಕು. ಇಂದು ವಿ ವಾಶ್ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೆವೆ.
ವಿ ವಾಶ್ ಎಂದರೇನು? : ವಿ ವಾಶ್ ಎನ್ನುವುದು ಯೋನಿಯನ್ನು ಸ್ವಚ್ಛಗೊಳಿಸಲು ಬಳಸುವ ಉತ್ಪನ್ನವಾಗಿದೆ. ಇದನ್ನು ತಯಾರಿಸಲು ಲ್ಯಾಕ್ಟಿಕ್ ಆಮ್ಲ, ಟೀ ಟ್ರೀ ಆಯಿಲ್ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದು ಯೋನಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಯೋನಿಯ ತುರಿಕೆ, ಉರಿ,ಶುಷ್ಕತೆಯಿಂದ ರಕ್ಷಿಸುತ್ತದೆ.
FOOD TIPS: ಹಸಿವಾಗುತ್ತೆ ಅಂತ ಆಗಾಗ ತಿನ್ಬೇಡಿ..ಊಟದ ಮಧ್ಯೆ ಇಷ್ಟು ಗಂಟೆ ಗ್ಯಾಪ್ ಇರ್ಲೇಬೇಕು
ವಿ ವಾಶ್ ಏಕೆ ಬಳಸಬೇಕು? : ಸಾಮಾನ್ಯವಾಗಿ ಮಹಿಳೆಯರು ನೀರು ಮತ್ತು ಸಾಬೂನಿನಿಂದ ಯೋನಿಯನ್ನು ತೊಳೆಯುತ್ತಾರೆ. ಆದರೆ ಸಾಮಾನ್ಯ ಸೋಪಿನ ಪಿಹೆಚ್ ಮಟ್ಟವು 8 ಕ್ಕಿಂತ ಹೆಚ್ಚಿರುತ್ತದೆ. ಹೆಚ್ಚಿನ ಪಿಎಚ್ ಮಟ್ಟ ಯೋನಿಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಯೋನಿಯ ರಕ್ಷಣೆಗೆ ಅಗತ್ಯವಾದ ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆದ್ದರಿಂದ ವಿ ವಾಶ್ ಬಳಸುವುದು ಒಳ್ಳೆಯದು. ವಿ ವಾಶ್ 3.5 ರಿಂದ 4.5ಪಿಎಚ್ ಮಟ್ಟವನ್ನು ಹೊಂದಿರುತ್ತದೆ. ಆದ್ದರಿಂದ ಯೋನಿಯನ್ನು ಸ್ವಚ್ಛಗೊಳಿಸಲು ಇದು ಅವಶ್ಯಕವಾಗಿದೆ.
ವಿ ವಾಶ್ ಬಳಕೆ ಹೇಗೆ?
ಮೊದಲ ಹಂತ : ಮೊದಲು ಮೂರ್ನಾಲ್ಕು ಹನಿ ವಿ ವಾಶ್ ತೆಗೆದುಕೊಂಡು ಅದನ್ನು ಯೋನಿ ಹೊರ ಭಾಗಕ್ಕೆ ಹಾಕಿ ನಿಧಾನವಾಗಿ ಉಜ್ಜಿ. ಯೋನಿ ಒಳಗೆ ಯಾವುದೇ ಕಾರಣಕ್ಕೂ ವಿ ವಾಶ್ ಹಾಕಬೇಡಿ.
ಎರಡನೇ ಹಂತ: ನಂತ್ರ ಯೋನಿಯನ್ನು ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳಿ. ವಿ ವಾಶ್ ಯೋನಿಯೊಳಗೆ ಹೋಗುವುದಿಲ್ಲ. ಆದ್ದರಿಂದ ಯಾವುದೇ ಸೋಂಕಿನ ಅಪಾಯವಿರುವುದಿಲ್ಲ.
ಮೂರನೇ ಹಂತ : ವಿ ವಾಶ್ ಬಳಸಿದ ನಂತ್ರ ಅದನ್ನು ಸ್ವಚ್ಛಗೊಳಿಸಲು ವೈಪ್ ಸಿಗುತ್ತದೆ. ಅದನ್ನು ನೀವು ಬಳಸಬಹುದು. ಇಲ್ಲವೆ ಸ್ವಚ್ಛವಾದ ಬಟ್ಟೆಯಿಂದ ಯೋನಿಯನ್ನು ಕ್ಲೀನ್ ಮಾಡಬಹುದು.
Healthy Gut: ಆರೋಗ್ಯಪೂರ್ಣ ಕರುಳಿನಿಂದ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ
ವಿ ವಾಶ್ ಬೆಲೆ : ವಿ ವಾಶ್ ಬೆಲೆ ಬೇರೆ ಬೇರೆಯಿದೆ. ವಿ ವಾಶ್ ಮಾತ್ರವಲ್ಲ ಬೇರೆ ಹೆಸರಿನ ಯೋನಿ ಜೆಲ್ ಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ವೈದ್ಯರ ಸಲಹೆ ಪಡೆದು ನೀವು ಈ ಜೆಲ್ ಗಳನ್ನು ಬಳಸಬಹುದು.
ವಿ ವಾಶ್ ಅಡ್ಡಪರಿಣಾಮಗಳು : ವಿ ವಾಶ್ ಬಳಕೆಯಿಂದ ಸಾಮಾನ್ಯವಾಗಿ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಕೆಲವೇ ಕೆಲವು ಮಹಿಳೆಯರಿಗೆ ಇದ್ರಿಂದ ಸಮಸ್ಯೆ ಕಾಡುತ್ತದೆ. ಯೋನಿ ಶುಷ್ಕತೆ, ಯೋನಿ ಬಿಸಿಯಾಗುವ ಅನುಭವ, ಯೋನಿಯ ತುರಿಕೆ, ಅಲರ್ಜಿ ಮತ್ತು ಊದುವ ಸಮಸ್ಯೆ ಕಾಡುತ್ತದೆ. ಒಂದು ವೇಳೆ ವಿ ವಾಶ್ ಬಳಸಿದ ನಂತ್ರ ನಿಮಗೆ ಈ ಮೇಲಿನ ಸಮಸ್ಯೆ ಕಾಣಿಸಿಕೊಂಡರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಯೋನಿ ಸ್ವಚ್ಛತೆಗೆ ಸೋಪ್ ಬಳಸಬೇಡಿ. ವೈದ್ಯರ ಸಲಹೆಯಂತೆ ಜೆಲ್ ಬಳಕೆ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.