ನಮ್ಮನ್ನು ನಾವು ಮೊದಲು ಪ್ರೀತಿಸಬೇಕು ಎಂದು ಹೇಳಿರುವುದು ಕೇಳಿದ್ದೇವೆ. ಅದರಂತೆ ನಮ್ಮ ಹೆಣ್ಮಕ್ಳು ತ್ವಚೆಯ ಕುರಿತು ಎಷ್ಟೆಲ್ಲಾ ಕಾಳಜಿವಹಿಸುತ್ತಾರೆ. ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ಹೆಚ್ಚಾಗಿ ಬಳಸುವ ಮಾಯಿಶ್ಚರೈಸರ್, ಸನ್ ಸ್ಕ್ರೀನ್ ಅನ್ನು ಮುಖಕ್ಕೆ ಹಚ್ಚುವ ಮುನ್ನ ನಿಮಗೆ ಗೊತ್ತಿರಲೇ ಬೇಕಾದ ಒಂದಷ್ಟು ಮಾಹಿತಿ ಇಲ್ಲಿದೆ.
ನಮ್ಮನ್ನು ನಾವು ಮೊದಲು ಪ್ರೀತಿಸಬೇಕು ಎಂದು ಹೇಳಿರುವುದು ಕೇಳಿದ್ದೇವೆ. ಅದರಂತೆ ನಮ್ಮ ಹೆಣ್ಮಕ್ಳು ತ್ವಚೆಯ ಕುರಿತು ಎಷ್ಟೆಲ್ಲಾ ಕಾಳಜಿವಹಿಸುತ್ತಾರೆ. ಮನೆಯಿಂದ ಹೊರಗೆ ಕಾಲಿಡುವ ಮೊದಲು ಮುಖವೆಲ್ಲಾ ಕವರ್ ಮಾಡಿಕೊಂಡು ಹೋಗ್ತಾರೆ. ತ್ವಚೆಯನ್ನು ಅಷ್ಟು ಪ್ರೀತಿಸುತ್ತಾರೆ. ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ಹೆಚ್ಚಾಗಿ ಬಳಸುವ ಮಾಯಿಶ್ಚರೈಸರ್, ಸನ್ ಸ್ಕಿçÃನ್‌ಅನ್ನು ಮುಖಕ್ಕೆ ಹಚ್ಚುವ ಮುನ್ನ ನಿಮಗೆ ಗೊತ್ತಿರಲೇ ಬೇಕಾದ ಒಂದಷ್ಟು ಮಾಹಿತಿ ಇಲ್ಲಿದೆ.
ಎಲ್ಲರೂ ನಮ್ಮ ಚರ್ಮವನ್ನು ಮುದ್ದಿಸುವುದನ್ನು ಆನಂದಿಸುತ್ತೇವೆ ಮತ್ತು ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೇವೆ. ಅದಾಗ್ಯೂ, ಮಾರುಕಟ್ಟೆಯಲ್ಲಿ ಸಿಗುವ ಸೌಮದರ್ಯವರ್ಧಕಗಳನ್ನು ನಮ್ಮ ಚರ್ಮಕ್ಕನುಗುಣವಾಗಿ ಖರೀದಿಸುತ್ತೇವೆ. ಅವುಗಳನ್ನು ಬಳಸುವ ಮೊದಲು ಚರ್ಮವನ್ನು ತೇವಗೊಳಿಸುವುದನ್ನು ಮರೆತುಬಿಡುತ್ತೇವೆ. ಕೆಲವರು ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ದಿನವೂ ಬಳಸುತ್ತಾರೆ. ಏಕೆಂದರೆ ಅದು ಸೌಂದರ್ಯದ ಹಿತಕರವಾದ ಅಭ್ಯಾಸವೆಂದು ಪರಿಗಣಿಸುತ್ತಾರೆ. ಆದರೂ ಇದು ಉತ್ತಮ ಚರ್ಮಕ್ಕೆ ಅವಶ್ಯಕವಾಗಿದೆ.
ಐದು ಅಂಗಗಳಲ್ಲಿ ಒಂದಾದ ಚರ್ಮವು ಯುವ, ದೋಷರಹಿತ ಮತ್ತು ಆರೋಗ್ಯಕರವಾಗಿರಲು ನಿಯಮಿತವಾದ ಆರೈಕೆ ಅಗತ್ಯ. ಮಾಯಿಶ್ಚರೈಸರ್ ಸಹಾಯದಿಂದ ತ್ವಚೆಯ ಪೋಷಣೆ ಮತು ಹೊಸದಾದ ಹೊಳಪಿನಿಂದ ಕೂಡಿರಬಹುದು. ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವ ಎಣ್ಣೆಯುಕ್ತ ಕ್ರೀಮ್‌ಗಳು ಚರ್ಮವನ್ನು ವಯಸ್ಸಾದಂತೆ ಕಾಣುವ ಹಾಗೆ ಹೊಳಪನ್ನು ಕಳೆದುಕೊಳ್ಳುತ್ತವೆ. ಚರ್ಮದಿಂದ ನೈಸರ್ಗಿಕವಾಗಿ ಹೊರಹೊಮ್ಮುವ ಎಣ್ಣೆಯನ್ನು ಉತ್ಪಾದಿಸಲು ಕಡಿಮೆ ಮಾಡುತ್ತದೆ. ಪ್ರತೀ ದಿನ ತ್ವಚೆಯನ್ನು ತೇವಗೊಳಿಸಿದಾಗ ಜೀವಿತಾವಧಿಯಲ್ಲಿ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಅದಕ್ಕಾಗಿ ಮಾಯಿಶ್ಚರೈಸರ್‌ನ ಸರಿಯಾದ ಬಳಕೆ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ.
ಬಿಸಿಲು: ಮನೆಯಲ್ಲಿ ತಯಾರಿಸಬಹುದಾದ ಮಾಯಿಶ್ಚರೈಸರ್ಸ್
1. ಒಣ ತ್ವಚೆಯ ಮೇಲೆ ನೇರವಾಗಿ ಮಾಯಿಶ್ಚರೈಸರ್ ಅನ್ನು ಬಳಸುವುದರಿಂದ ತ್ವಚೆಯಲ್ಲಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣವಾಗುತ್ತದೆ. ಜೊತೆಗೆ ತೇವವಾದ ಚರ್ಮವನ್ನು ದೀರ್ಘಕಾಲದವರೆಗೆ ಹೈಡ್ರೀಕರಿಸುತ್ತದೆ.
2. ಮಾಯಿಶ್ಚರೈಸರ್ ಕ್ರೀಮ್ ಹೈಗ್ರೊಸ್ಕೋಪಿಕ್ ಆಗಿದ್ದು, ನೀರನ್ನು ಹೀರಿಕೊಳ್ಳುತ್ತದೆ ಮತ್ತು ಒಣ ಚರ್ಮದ ಮೇಲೆ ಹೈಲುರಾನಿಕ್ ಆಮ್ಲವನ್ನು ಅನ್ವಯಿಸುವುದರಿಂದ ಚರ್ಮದ ಆಳವಾದ ಪದರಗಳಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳಬಹುದು. ಅದು ಹೆಚ್ಚು ಶುಷ್ಕ ಮತ್ತು ನಿರ್ಜಲೀಕರಣಗೊಳ್ಳುತ್ತದೆ.
3. ಮಾಯಿಶ್ಚರೈಸರ್ ಅನ್ನು ಒಣ ಚರ್ಮದ ಮೇಲೆ ಮಾತ್ರ ಅನ್ವಯಿಸುತ್ತದೆ. ಮುಖ ಮತ್ತು ಎಣ್ಣೆಯುಕ್ತ ಭಾಗಗಳನ್ನು ಬಿಡುವುದು ಸಹಾಯ ಮಾಡುತ್ತದೆ. ಅದಾಗ್ಯೂ, ಮಾಯಿಶ್ಚರೈಸರ್ ಅನ್ನು ಸ್ಕಿಪ್ ಮಾಡುವುದರಿಂದ ಸೆಬಾಸಿಯಸ್ ಗ್ರಂಥಿಗಳಿAದ ಅಧಿಕ ತೈಲ ಸ್ರವಿಸುವಿಕೆಗೆ ಕಾರಣವಾಗಬಹುದು. ತ್ವಚೆಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಜ್ಞರ ಬಳಿ ಕೇಳಿ ಉಪಯೋಗಿಸುವುದು ಒಳ್ಳೆಯದು.
ಮಾಯಿಶ್ಚರೈಸರ್ ಸಲಹೆಗಳು: ಚರ್ಮಕ್ಕನುಗುಣವಾಗಿ ಮಾಯಿಶ್ಚರೈಸರ್ ಬೇಸ್ ಬಳಸುವುದು.
ಒಣ ಚರ್ಮ- ಕ್ರೀಮ್ ಮತ್ತು ಬಾಮ್
ಕಾಂಬೊ ಚರ್ಮ- ಜೆಲ್ ಕ್ರೀಮ್ ಮತ್ತು ಲೋಷನ್
ಎಣ್ಣೆಯುಕ್ತ ಚರ್ಮ- ಜೆಲ್ ಮತ್ತು ಹಾಲಿನ ಬೇಸ್ ಕ್ರೀಮ್
ಈ 7 ಚರ್ಮ ರಕ್ಷಣೆಯ ತಪ್ಪುಗಳನ್ನು ನೀವು ಕೂಡಲೇ ನಿಲ್ಲಿಸಬೇಕು!
ಮಾಯಿಶ್ಚರೈಸರ್ ಅಪ್ಲಿಕೇಶನ್ ಟಿಪ್ಸ್
1. ಹೆಚ್ಚು ತೇವಾಂಶವನ್ನು ದೀರ್ಘಕಾಲದವರೆಗೂ ಕಾಯ್ದುಕೊಳ್ಳಲು ಒದ್ದೆಯಾದ ಚರ್ಮದ ಮೇಲೆ ಅನ್ವಯಿಸಿ. ವಾಸನೆ ಇಲ್ಲದ ಮುಖದ ಮಾಯಿಶ್ಚರೈಸರ್‌ಗಳನ್ನು ಕಣ್ಣುಗಳ ಕೆಳಗೆಯೂ ಬಳಸಬಹುದು.
2. ಮಾಯಿಶ್ಚರೈಸರ್ ಕ್ರೀಮ್ ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ಸೋಪ್ ಅಥವಾ ಫೇಸ್ ವಾಶ್‌ನಿಂದ ಕೈ ಹಾಗೂ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುವುದನ್ನು ಮರೆಯಬೇಡಿ.
3. ಮುಖದಲ್ಲಿ ಎಣ್ಣೆ ಅಂಶಗಳು ಇರದಂತೆ ನೋಡಿಕೊಳ್ಳಿ. ಮುಖ ತೊಳೆದ ಮೇಲೂ ಎಣ್ಣೆ ಅಂಶವಿದ್ದರೆ ಒಂದು ಟವೆಲ್ ಅಥವಾ ಹಗುರ ಬಟ್ಟೆಯಿಂದ ನಯವಾಗಿ ಒರೆಸಿಕೊಳ್ಳಬೇಕು.
4. ಮಾಯಿಶ್ಚರೈಸರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿ. ಹೆಚ್ಚು ಬಳಸಿದರೆ ಗ್ರಂಥಿಗಳನ್ನು ಸಂಪೂರ್ಣವಾಗಿ ಮುಚ್ಚಬಹುದು. ಅಗತ್ಯಕ್ಕಿಂತ ಕಡಿಮೆ ಬಳಸುವುದು ಉತ್ತಮ.
5. ಮಾಯಿಶ್ಚರೈಸರ್ ಹಚ್ಚಿದ ಮೇಲೆ ಕ್ಲಾಕ್‌ವೈಸ್‌ನಲ್ಲಿ ಮಸಾಜ್ ಮಾಡಿಕೊಳ್ಳುವುದನ್ನು ಮರೆಯದಿರಿ.