
ಇಲೆಕ್ಟ್ರಿಕ್ ಕುಕ್ಕರ್ ಬಳಸುವವರಿಗೆ ಈಗ ಇನ್ನೊಂದು ಹೊಸ ಉಪಯೋಗ ಸೇರಿಕೊಳ್ಳಲಿದೆ. ಅಡುಗೆ ಜೊತೆಗೆ ಈಗ ನಿಮ್ಮ ಮಾಸ್ಕ್ ಸ್ಯಾನಿಟೈಸ್ ಮಾಡುವುದಕ್ಕೂ ನಿಮ್ಮ ಅಡುಗೆಮನೆ ಕುಕ್ಕರ್ ಬಳಸಬಹುದು.
ಇಲೆಕ್ಟ್ರಿಕ್ ಕುಕ್ಕರ್‌ನಲ್ಲಿ ಎನ್95 ಮಾಸ್ಕ್‌ಗಳನ್ನು ಸ್ಯಾನಿಟೈಸ್ ಮಾಡಬಹುದೆಂದು ಸಂಶೋಧನೆಯೊಂದು ಸಾಬೀತುಪಡಿಸಿದೆ. ಈ ಮೂಲಕ ಎನ್95 ಮಾಸ್ಕ್‌ಗಳನ್ನು ಸುರಕ್ಷಿತವಾಗಿ ಮರು ಬಳಕೆ ಮಾಡಬಹುದಾಗಿದೆ.
ಕೊರೋನಾ ಗುಣಮುಖರು ಹೆಚ್ಚು, ಆದ್ರೆ ಅಪಾಯ ಮುಗಿದಿಲ್ಲ, ಮಾಸ್ಕ್ ಹಾಕ್ಕೊಳಿ, ತಜ್ಞರ ವಾರ್ನಿಂಗ್
ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಲೆರ್ಸ್ ಎಂಬ ಪತ್ರಿಕೆ ಪ್ರಕಟಿಸಿದ ಅಧ್ಯಯನ ವರದಿ ಇದು ಸಾಧ್ಯ ಎನ್ನುತ್ತಿದೆ. 50 ನಿಮಿಷಗಳ ಕಾಲ ಡ್ರೈ ಹೀಟ್‌ನಲ್ಲಿಟ್ಟರೆ ಮಾಸ್ಕ್ ಟ್ಯಾನಿಟೈಸ್ ಮಾಡಬಹುದು ಎನ್ನಲಾಗುತ್ತಿದೆ.
ಯಾವುದೇ ವಸ್ತುವನ್ನು ಸ್ಯಾನಿಟೈಸ್ ಮಾಡುವುದಕ್ಕೂ ಹಲವಾರು ವಿಧಾನಗಳಿವೆ. ಆದರೆ ಅವುಗಳಲ್ಲಿ ಬಹುತೇಕ ವಿಧಾನಗಳು ನಿಮ್ಮ ಎನ್95 ಮಾಸ್ಕ್‌ನ್ನು ಹಾನಿ ಮಾಡಬಹುದು. ಈ ಸಂದರ್ಭ ಮಾಸ್ಕ್ ಲೂಸಾಗುವುದು, ಅದರಲ್ಲಿ ರೆಸ್ಪಿರೇಟರಿ ಫಿಲ್ಟರ್‌ಗೆ ತೊಂದರೆಯಾಗುವುದು ನಡೆಯುತ್ತದೆ.
ಬೆಟ್ಟದಂತೆ ಬೆಳೆಯುತ್ತಿರುವ ಮಹಿಳೆಯ ಹೊಟ್ಟೆ; ಕಾರಣ ನಿಗೂಢ
ಸ್ಯಾನಿಟೈಸ್ ಮಾಡುವುದರ ಜೊತೆಗೆ ಅದನ್ನು ಸುರಕ್ಷಿತವಾಗಿ ಬಳಸಲು ಸಾಧ್ಯವಾಗುವ ಸ್ಥಿಯಲ್ಲಿ ಕಾಪಾಡುವುದು ಅಗತ್ಯ. ಹೀಗಾಗದಿದ್ದರೆ ನಿಮಗೆ ಮೊದಲ ಬಾರಿ ನೀಡಿದ ಸುರಕ್ಷತೆಯನ್ನು ಎನ್95 ಮಾಸ್ಕ್ ನೀಡಲಾರದು.
ಜನರು ಎಲ್ಲೆಡೆ ಸುಲಭವಾಗಿ ಬಳಸಬಹುದಾದ ಎಲೆಕ್ಟ್ರಿಕ್ ಕುಕ್ಕರ್‌ನಲ್ಲಿ ಮಾಸ್ಕ್‌ನ ಹೊರ ಭಾಗ ಮತ್ತು ಒಳಭಾಗವನ್ನು 100 ಡಿಗ್ರಿ ಸೆಲ್ಶಿಯಸ್‌ನಲ್ಲಿಟ್ಟು, 50 ನಿಮಿಷಗಳ ಕಾಲ ಬಿಡಬೇಕು. ನಂತರ ತೆಗೆದು ಅದರ ಫಿಟ್‌ನೆಸ್ ಪರೀಕ್ಷಿಸಿದಾಗ ಸರಿಯಾಗಿತ್ತು ಎನ್ನುತ್ತಾರೆ ಸಂಶೋಧಕರು.
ಹೀಟ್ ಎಂದರೆ ಅಲ್ಲಿ ನೀರಿರಬಾರದು. ಡ್ರೈ ಹೀಟ್ ಆಗಿರಬೇಕು. 100 ಡಿಗ್ರಿ ಸೆಲ್ಶಿಯಸ್ ಬಿಸಿ ಇರಬೇಕು. 50 ನಿಮಿಷಗಳ ಕಾಲ ಬಿಡಬೇಕು. ಕುಕ್ಕರ್‌ನ ಮೇಲ್ಭಾಗ ಸಣ್ಣ ಬಟ್ಟೆಯಿಂದ ಕವರ್ ಮಾಡಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.