ತಾಮ್ರದ ಬಾಟಲಿಯಲ್ಲಿ ನೀರು ಕುಡಿಯೋ ಮುನ್ನ ಎಚ್ಚರ!

By Roopa Hegde  |  First Published Jan 4, 2025, 12:42 PM IST

ಈಗಿನ ದಿನಗಳಲ್ಲಿ ಜನರಿಗೆ ಆರೋಗ್ಯದ ಮಹತ್ವ ಗೊತ್ತಾಗಿದೆ. ಉತ್ತಮ ಆರೋಗ್ಯಕ್ಕಾಗಿ ಹಳೆ ಪದ್ಧತಿಗಳನ್ನು ಜನರು ಪಾಲಿಸ್ತಿದ್ದಾರೆ. ನೀವೂ ತಾಮ್ರದ ಬಾಟಲಿಯಲ್ಲಿ ನೀರು ಕುಡಿತಿದ್ರೆ ಕೆಲವೊಂದು ಮುಖ್ಯ ವಿಷ್ಯವನ್ನು ತಿಳಿದುಕೊಳ್ಳಿ. 
 


ತಾಮ್ರದ ಬಾಟಲಿ (copper bottle)ಯಲ್ಲಿ ಅಥವಾ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯೋದು ಸಂಸ್ಕೃತಿಯ ಒಂದು ಭಾಗವಾಗಿದೆ. ದಕ್ಷಿಣ ಏಷ್ಯಾದಲ್ಲಿ ದೀರ್ಘ ಕಾಲದಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗ್ತಿದೆ. ಇದಕ್ಕೆ ಆಯುರ್ವೇದ (Ayurveda)ದ ನಂಟಿದೆ. ತಾಮ್ರದ ಬಾಟಲಿಯಲ್ಲಿರುವ ನೀರನ್ನು ಕುಡಿಯೋದ್ರಿಂದ ಜೀರ್ಣಕ್ರಿಯೆ (Digestion) ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ತಾಮ್ರ ನೀಡುತ್ತದೆ ಎಂದು ಪ್ರಾಚೀನ ವೈದ್ಯಕೀಯ ಪದ್ಧತಿ ನಂಬುತ್ತದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗ್ತಿದೆ. ಜೊತೆಗೆ ಹಳೇ ಪದ್ಧತಿಗಳು ಹೊಸದಾಗಿ ಜಾರಿಗೆ ಬರ್ತಿವೆ. ಆರೋಗ್ಯ ಹಾಗೂ ಫಿಟ್ನೆಸ್ ಬಯಸುವ ಜನರು ತಾಮ್ರದ ಬಾಟಲಿಗೆ ಆದ್ಯತೆ ನೀಡ್ತಿದ್ದಾರೆ. ರಾತ್ರಿಪೂರ್ತಿ ತಾಮ್ರದ ಬಾಟಲಿಯಲ್ಲಿ ನೀರಿಟ್ಟು ಬೆಳಿಗ್ಗೆ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಡೀ ದಿನ ತಾಮ್ರದ ಬಾಟಲಿಯಲ್ಲಿರುವ ನೀರನ್ನು ಕುಡಿಯುವವರೂ ನಮ್ಮಲ್ಲಿದ್ದಾರೆ. 

ತಾಮ್ರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತೆಗೆದುಹಾಕುವ ಮೂಲಕ ನೀರನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಮರ್ಥವಾಗಿ ಸಹಾಯ ಮಾಡುತ್ತದೆ.  ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ತಾಮ್ರದ ಬಾಟಲಿಯಲ್ಲಿರುವ ನೀರನ್ನು ಪ್ರತಿ ದಿನ ನೀವು ಸೇವನೆ ಮಾಡ್ತೀರಿ ಎಂದಾದ್ರೆ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಅದನ್ನು ಬಳಕೆ ಮಾಡದೆ ಹೋದ್ರೆ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತದೆ.

Tap to resize

Latest Videos

ಜಿಮ್‌ಗೆ ಹೋಗಿ ಬೆವರು ಸುರಿಸದೆ ಕೇವಲ 1 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?

ತಾಮ್ರದ ಬಾಟಲಿ ಬಳಸುವ ಮುನ್ನ ಇದು ನೆನಪಿರಲಿ : 

• ಮಿತವಾದ ಸೇವನೆ : ತಾಮ್ರ ಆರೋಗ್ಯಕ್ಕೆ ಒಳ್ಳೆಯದಾದ್ರೂ ಅತಿಯಾದ ಸೇವನೆ ಅಪಾಯಕಾರಿ. ತಾಮ್ರದ ವಿಷತ್ವಕ್ಕೆ ಇದು ಕಾರಣವಾಗಬಹುದು. ವಾಕರಿಕೆ, ವಾಂತಿ, ಅತಿಸಾರ ಮತ್ತು ಯಕೃತ್ತಿನ ಹಾನಿಯಂತಹ ರೋಗಲಕ್ಷಣಗಳು ನಿಮ್ಮನ್ನು ಕಾಡಬಹುದು. ಹಾಗಾಗಿ ತಾಮ್ರದ ಬಾಟಲಿಯ ನೀರನ್ನು ಮಿತವಾಗಿ ಮತ್ತು ಸರಿಯಾದ ಮಾರ್ಗದಲ್ಲಿ ಬಳಸಿ. ಪ್ರತಿ ದಿನ, ಪ್ರತಿ ಬಾರಿ ತಾಮ್ರದ ಬಾಟಲಿಯ ನೀರು ಕುಡಿಯೋದನ್ನು ತಪ್ಪಿಸಿ.

• ಗುಣಮಟ್ಟಕ್ಕೆ ಆದ್ಯತೆ : ಉತ್ತಮ ಗುಣಮಟ್ಟದ ತಾಮ್ರದ ಬಾಟಲಿಯನ್ನು ನೀವು ಖರೀದಿ ಮಾಡುವುದು ಮುಖ್ಯ. ಕಡಿಮೆ ಬೆಲೆಗೆ ಸಿಗುವ ಬಾಟಲಿಯಲ್ಲಿ ಇತರ ಲೋಹ ಅಥವಾ ಮಿಶ್ರಲೋಹ ಇರುವ ಸಾಧ್ಯತೆ ಇದೆ. ಅವು ನೀರಿನಲ್ಲಿ ಕರಗುತ್ತದೆ. ನಿಮ್ಮ ಆರೋಗ್ಯವನ್ನು ಹದಗೆಡಿಸುವ ಅಪಾಯವಿರುತ್ತದೆ.  ತಾಮ್ರದ ಬಾಟಲಿ ಖರೀದಿ ಮಾಡುವ ಮುನ್ನ ಅದ್ರ ಗುಣಮಟ್ಟವನ್ನು ಪರಿಶೀಲಿಸಿ.

• ನೈರ್ಮಲ್ಯ ಮುಖ್ಯ : ಬಾಟಲಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ. ಬಾಟಲಿಯ ಶುಚಿತ್ವ  ಕಾಪಾಡಿಕೊಳ್ಳಲು ನಿಂಬೆ ರಸ ಮತ್ತು ಉಪ್ಪು ಅಥವಾ ವಿಶೇಷ ತಾಮ್ರದ ಕ್ಲೀನರ್ ಮಿಶ್ರಣವನ್ನು ಬಳಸಿ. ಒರಟಾದ ಸ್ಕ್ರಬ್ಬರ್ ಬಳಸಿ ಬಾಟಲಿಯನ್ನು ಉಜ್ಜಬೇಡಿ.  

ಹೆಣ್ಮಕ್ಕಳು ರಾತ್ರಿ ಬ್ರಾ ಧರಿಸಿ ಮಲಗಲೇಬಾರದು, ಈ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿಬಿಡಿ

• ಬಾಟಲಿಗೆ ಈ ಆಹಾರ ಪದಾರ್ಥ ಹಾಕ್ಬೇಡಿ : ತಾಮ್ರದ ಬಾಟಲಿಯಲ್ಲಿ ನೀರನ್ನು ಮಾತ್ರ ಸಂಗ್ರಹಿಸಿ.  ಹಣ್ಣಿನ ರಸ, ನಿಂಬೆ ರಸವನ್ನು ಅದಕ್ಕೆ ಹಾಕಬೇಡಿ. ಹಣ್ಣಿನ ರಸ ಅಥವಾ ಆಮ್ಲೀಯ ತಾಮ್ರದ ಜೊತೆ ಬೆರೆತು ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. 

• ನೀರಿನ ಶುದ್ಧತೆ : ಫಿಲ್ಟರ್ ಮಾಡಿದ ಶುದ್ಧ ನೀರನ್ನು ನೀವು ಬಾಟಲಿಗೆ ಹಾಕಿ. ದೀರ್ಘಕಾಲ ಬಾಟಲಿಯಲ್ಲಿರುವ ನೀರನ್ನು ಕುಡಿಯಬೇಡಿ. ಬಾಟಲಿಯಲ್ಲಿ ದೀರ್ಘಕಾಲ ನೀರಿದ್ದರೆ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿರುತ್ತದೆ.  

• ಅಲರ್ಜಿ ಕಾಡ್ಬಹುದು ಎಚ್ಚರ : ತಾಮ್ರದ ನೀರನ್ನು ಕುಡಿಯುವ ಮೊದಲು ನಿಮಗೆ ಅದ್ರಿಂದ ಅಲರ್ಜಿ ಇದೆಯಾ ಎಂಬುದನ್ನು ಪತ್ತೆ ಮಾಡ್ಕೊಳ್ಳಿ. ಅನೇಕರು ತಾಮ್ರದ ಅಲರ್ಜಿಗೆ ಒಳಗಾಗ್ತಾರೆ.  

click me!