ಲಾಕ್‌ಡೌನ್ ತೆರೆದ ನಂತರ ಒಮ್ಮೆಲೇ ಕೆಂಪು ದೀಪದ ಪ್ರದೇಶಗಳನ್ನು ತೆರೆಯುವುದರಿಂದ ಅಪಾಯವಿದೆ. ಈ ಪ್ರದೇಶಕ್ಕೆ ಭೇಟಿ ನೀಡುವ ವಿಟಪುರುಷರ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿ ಆಗಬಹುದು. ಯಾಕೆಂದರೆ ಇಷ್ಟು ದಿನ ಕಟ್ಟಿಟ್ಟ ದೇಹದ ದಾಹವೆಲ್ಲ ಗೇಟ್ ತೆಗೆದಂತೆ ಹೊರಬೀಳುವ ಕಾಲವಿದು, ಪಾನಿಪುರಿ ತಿನ್ನಲು ಜನ ಮುಗಿಬಿದ್ದಂತೆ ರೆಡ್‌ಲೈಟ್ ಪ್ರದೇಶಗಳಿಗೆ ಹೋಗುವುದರಲ್ಲಿ ಸಂಶಯವಿಲ್ಲ.
ಲಾಕ್‌ಡೌನ್ ಸ್ವಲ್ಪ ದಿನಗಳ ಕಾಲ ವಿಸ್ತರಣೆಯಾಗಬಹುದು. ಲಾಕ್‌ಡೌನ್ ನಂತರ ಎಲ್ಲ ಅಂಗಡಿ, ವ್ಯವಹಾರ ಓಪನ್ ಆಗಬಹುದು. ಆದರೆ, ಒಂದನ್ನು ಮಾತ್ರ ತೆರೆಯಬೇಡಿ ಎನ್ನುತ್ತಿದ್ದಾರೆ ತಜ್ಞರು. ಅದು ರೆಡ್‌ಲೈಟ್ ಏರಿಯಾಗಳು. ಅಮೆರಿಕದ ಯೇಲ್ ಯೂನಿವರ್ಸಿಟಿಯ ತಜ್ಞರು ಕೋವಿಡ್ ಕೇಸ್‌ಗಳ ಮಾದರಿಗಳನ್ನು ಸ್ಟಡಿ ಮಾಡಿದ್ದು, ಅದರಿಂಧ ಈ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಹೇಳುವ ಪ್ರಕಾರ, ಲಾಕ್‌ಡೌನ್ ತೆರೆದ ನಂತರ ಒಮ್ಮೆಲೇ ಕೆಂಪು ದೀಪದ ಪ್ರದೇಶಗಳನ್ನು ತೆರೆಯುವುದರಿಂದ ಅಪಾಯವಿದೆ. ಈ ಪ್ರದೇಶಕ್ಕೆ ಭೇಟಿ ನೀಡುವ ವಿಟಪುರುಷರ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿ ಆಗಬಹುದು. ಯಾಕೆಂದರೆ ಇಷ್ಟು ದಿನ ಕಟ್ಟಿಟ್ಟ ದೇಹದ ದಾಹವೆಲ್ಲ ಗೇಟ್ ತೆಗೆದಂತೆ ಹೊರಬೀಳುವ ಕಾಲವಿದು, ಪಾನಿಪುರಿ ತಿನ್ನಲು ಜನ ಮುಗಿಬಿದ್ದಂತೆ ರೆಡ್‌ಲೈಟ್ ಪ್ರದೇಶಗಳಿಗೆ ಹೋಗುವುದರಲ್ಲಿ ಸಂಶಯವಿಲ್ಲ.
ಕಾಮಾಟಿಪುರದ ವೈಶ್ಯೆರು ಈಗೇನು ಮಾಡುತ್ತಿದ್ದಾರೆ?
undefined
ಒಂದು ಅಂದಾಜಿನ ಪ್ರಕಾರ ಭಾರತದ ಮಹಾನಗರಗಳಲ್ಲಿ ಇರುವ ವೇಶ್ಯಾವಾಟಿಕೆ ಪ್ರದೇಶಗಳಲ್ಲಿ ಸುಮಾರು ಆರು ಲಕ್ಷ ಮೂವತ್ತು ಸಾವಿರ ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ. ಪ್ರತಿದಿನ ಸುಮಾರು ಐದು ಲಕ್ಷ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಸದ್ಯಕ್ಕೆ ಲಾಕ್‌ಡೌನ್‌ನಿಂದಾಗಿ ಈ ಪ್ರದೇಶಗಳು ಮುಚ್ಚಿವೆ. ಲಾಕ್‌ಡೌನ್ ನಂತರ ಈ ಪ್ರದೇಶಗಳನ್ನೂ ತೆರೆದರೆ ಆಗ ಇಲ್ಲಿ ಯಾವುದೇ ಸೋಶಿಯಲ್ ಡಿಸ್ಟೆನ್ಸ್ ವ್ಯವಸ್ಥೆ ಕಾಪಾಡಲು ಸಾಧ್ಯವೇ ಇಲ್ಲ. ಸೋಶಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ಸೆಕ್ಸ್ ನಡೆಸುವುದು ಸಾಧ್ಯವೇ! ಒಟ್ಟೂ ಬ್ಯುಸಿನೆಸ್ ಈಗ ಕುಸಿದುಬಿದ್ದಿದೆ. ಆದರೆ ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಅನಿರ್ದಿಷ್ಟಾವಧಿ ಮುಂದುವರಿಸುವುದು ಅಗತ್ಯ. ಈಗಾಗಲೇ ಪ್ರತಿದಿನ ಸರಾಸರಿ ಐದು ಸಾವಿರದಂತೆ ಕೋವಿಡ್ ಕೇಸುಗಳು ಹೆಚ್ಚುತ್ತ ಹೋಗುತ್ತಿವೆ. ಇದು ಇನ್ನಷ್ಟು ಏರಲಿದೆ. ರೆಡ್‌ಲೈಟ್ ಏರಿಯಾಗಳನ್ನು ತೆರೆದರೆ ಅತ್ಯಂತ ಹೆಚ್ಚು ಕೋವಿಡ್ ಕೇಸು ಹಾಗೂ ಸಾವುಗಳ ಅವಧಿ ನಾವು ಊಹಿಸಿದ್ದಕ್ಕಿಂತ 17 ದಿನ ಬೇಗನೇ ಬಂದುಬಿಡಬಹುದು. ಅಂದರೆ ರೆಡ್‌ಲೈಟ್ ಏರಿಯಾಗಳ ಮುಚ್ಚುಗಡೆ, ಅಷ್ಟರ ಮಟ್ಟಿಗೆ ಅಪಾಯವನ್ನು ಮುಂದೂಡಿ ಹೆಚ್ಚಿನ ಸುರಕ್ಷತಾ ಕ್ರಮಗಳಿಗೆ ಸರಕಾರಕ್ಕೆ ಅನುವು ಮಾಡಿಕೊಡಲಿದೆ. ಸುಮಾರು 72 ಶೇಕಡ ಕೋವಿಡ್ ಕೇಸುಗಳನ್ನು ಇದರಿಂದ ತಡೆಗಟ್ಟಬಹುದು. ನೂರಕ್ಕೆ 63ರಷ್ಟು ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ ತಜ್ಞರು. ಪ್ರಸ್ತುತ ದಿಲ್ಲಿ, ಮುಂಬಯಿ, ಕೋಲ್ಕತಾ, ನಾಗಪುರ, ಪುಣೆಗಳಲ್ಲಿ ದೊಡ್ಡ ದೊಡ್ಡ ರೆಡ್‌ಲೈಟ್ ಪ್ರದೇಶಗಳು ಇವೆ.
ಕೊರೋನಾ ; ಸಿಂಗಲ್ಸ್ ತೃಷೆ ತೀರಿಸ್ಕೊಳೋಕೆ ಏನ್ ಮಾಡಬೇಕು?
ಹೀಗೇ ಎಷ್ಟು ಕಾಲ ಈ ಪ್ರದೇಶವನ್ನು ಮುಚ್ಚಬೇಕಾದೀತು. ಬಹುಶಃ ಕೊರೋನಾಗೆ ಲಸಿಕೆಯೊಂದು ಸಿದ್ಧ ಆಗುವವರೆಗೂ ಈ ಪ್ರದೇಶಗಳನ್ನು ಮುಚ್ಚಬೇಕಾದೀತು ಎನ್ನುತ್ತಾರೆ. ಇಲ್ಲವಾದರೆ ಈ ಪ್ರದೇಶಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗಿ ರೂಪಾಂತರ ಆಗುವ ಸಂಭವ ಇದೆಯಂತೆ. ಇದನ್ನು ಅರಿತೇ ಅಮೆರಿಕ, ಸಿಂಗಾಪುರ, ಆಸ್ಟ್ರೇಲಿಯಗಳೆಲ್ಲ ಬಹುಬೇಗನೆ ತಮ್ಮಲ್ಲಿದ್ದ ರೆಡ್‌ಲೈಟ್ ಪ್ರದೇಶಗಳನ್ನು ಮುಚ್ಚಿವೆ. ಥಾಯ್ಲೆಂಡ್, ಮಲೇಷ್ಯಾ, ಬ್ಯಾಂಕಾಕ್ ಮುಂತಾದ- ಇಂಥ ಚಟುವಟಿಕೆಗಳಿಗೇ ಕುಖ್ಯಾತವಾದ ದೇಶಗಳೆಲ್ಲ ತಮ್ಮ ಈ ಭಾರಿ ದುಡ್ಡು ತರುವ ಬ್ಯುಸಿನೆಸ್ಸುಗಳನ್ನು ಮುಚ್ಚಿಕೊಂಡು, ಹಣವಿಲ್ಲದೆ ಕಂಗಾಲಾಗಿ ಕೂತಿವೆ. ಕೋವಿಡ್ ಈ ಭೂಮಿಯ ಮೇಲೆ ಎಷ್ಟು ಬೇಗ ಮಂಗಮಾಯವಾದರೆ ಈ ದೇಶಗಳಿಗೆ ಬ್ಯುಸಿನೆಸ್ ಮುಂದುವರಿಸಲು ಅಷ್ಟು ಒಳ್ಳೆಯದು. ಇಲ್ಲವಾದರೆ ಈ ದೇಶಗಳೇ ಮುಳುಗಿ ಹಳ್ಳ ಹಿಡಿಯುತ್ತವೆ.
ಸಾವಿನ ನೋವಿನ ಯಾಕೂಬ್- ಅಮೃತ್ ಸ್ನೇಹ ವೈರಲ್!
ಜಪಾನ್ ಈ ಪ್ರದೇಶಗಳನ್ನು ಮೊದಲಿಗೆ ಮುಚ್ಚಲಿಲ್ಲ. ಆದರೆ ಇವುಗಳು ಕೋವಿಡ್ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಗೊಂಡು, ಕೇಸುಗಳ ಸಂಖ್ಯೆ ಹೆಚ್ಚಾದಾಗ, ಜನರೆಲ್ಲ ಸರಕಾರಕ್ಕೆ ಉಗಿಯತೊಡಗಿದರು. ಆಗ ಎಚ್ಚೆತ್ತುಕೊಂಡ ಸರಕಾರ ಈ ಪ್ರದೇಶಗಳನ್ನು ಮುಚ್ಚಿತು.
ಮಾರಕ ಕೊರೋನಾ ಭೀತಿ: ಕ್ವಾರಂಟೈನ್ ಕೇಂದ್ರಗಳು ಅದೆಷ್ಟು ಸುರಕ್ಷಿತ..?
ಆದರೆ ದೇಹ ಮಾರಾಟವನ್ನೇ ಹೊತ್ತು ಹೊತ್ತಿನ ತುತ್ತಿನ ಮೂಲವಾಗಿ ಪರಿಗಣಿಸಿ ದುಡಿಯುತ್ತಿರುವವರು ಹಸಿವಿನಿಂದ ಸಾಯದಂತೆ ಏನಾದರೂ ವ್ಯವಸ್ಥೆ ಕಲ್ಪಿಸುವುದು ಸರಕಾರದ ಹೊಣೆ. ವಾಸ್ತವವಾಗಿ ಸೆಕ್ಸ್ ಉದ್ಯಮವೇ ಮಕಾಡೆ ಮಲಗಿದೆ. ಕೋವಿಡ್ ಬಗ್ಗೆ ಚೆನ್ನಾಗಿ ಅರಿತವರು ಯಾರೂ ಈ ಪ್ರದೇಶಗಳಿಗೆ ಇನ್ನು ಮುಂದೆ ಭೇಟಿ ಕೊಡಲಾರರು. ಆದರೆ ಇದರ ಬಗ್ಗೆ ಅರಿವಿಲ್ಲದ ಸಾಮಾನ್ಯರು ರೆಡ್‌ಲೈಟ್ ಪ್ರದೇಶಗಳು ತೆರೆಯುತ್ತಿದ್ದಂತೆ ಅತ್ತ ಭೇಟಿ ಕೊಡುವುದು ಸಹಜ. ಇವರು ಸಾಂಕ್ರಾಮಿಕ ಮುಂದುವರಿಸುವವರಾಗುತ್ತಾರೆ.