ರತನ್ ಟಾಟಾ ಅವರ 165,00,00,000 ರೂ. ವೆಚ್ಚದ ಪ್ರಾಣಿಗಳ ಆಸ್ಪತ್ರೆ ಕಾರ್ಯಾಚರಣೆಗೆ ಸಿದ್ಧ!

By Suvarna News  |  First Published Feb 8, 2024, 12:25 PM IST

ಸಾಕು ಪ್ರಾಣಿಗಳಿಗಾಗಿ ರತನ್ ಟಾಟಾ ಅವರ 1650000000 ರೂ. ವೆಚ್ಚದ ಆರೋಗ್ಯ ಯೋಜನೆಯು ಮುಂಬೈನಲ್ಲಿ ಅಂತಿಮ ಹಂತಕ್ಕೆ ಬಂದಿದೆ. 


ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷ ರತನ್ ಟಾಟಾ ಸುಮಾರು 3800 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಜಗತ್ತಿನಾದ್ಯಂತ ಅತ್ಯಂತ ಪ್ರಸಿದ್ಧ ಭಾರತೀಯ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಲೋಕೋಪಕಾರ, ವ್ಯವಹಾರ ಕೌಶಲ್ಯ ಮತ್ತು ಬುದ್ಧಿವಂತಿಕೆಗಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಟಾಟಾ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅತ್ಯಂತ ಜನಪ್ರಿಯ ಭಾರತೀಯ ಬಿಲಿಯನೇರ್‌ಗಳಲ್ಲಿ ಒಬ್ಬರು. ವ್ಯಾಪಾರ ಜಗತ್ತಿನಲ್ಲಿ ಅವರ ಸಾಧನೆಗಳ ಹೊರತಾಗಿ, ರತನ್ ಟಾಟಾ ಅವರು ಪ್ರಾಣಿ ಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. 

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ರತನ್ ಟಾಟಾ ಅವರ ಫೋಟೋಗಳನ್ನು ಚೆಕ್‌ ಮಾಡಿದರೆ ನಾಯಿಗಳ ಮೇಲಿನ ಅವರ ವಿಶೇಷ ಪ್ರೀತಿ ಅರ್ಥವಾಗುತ್ತದೆ. ಟಾಟಾ ಗ್ರೂಪ್ ಪ್ರಾಣಿಗಳ ಬಗ್ಗೆ ಸಹಾನುಭೂತಿ ಹೊಂದಿದೆ ಮತ್ತು ಅದಕ್ಕಾಗಿ ಜಾಗೃತಿ ಮೂಡಿಸಲು ಹಲವಾರು ಅಭಿಯಾನಗಳನ್ನು ಪ್ರಾರಂಭಿಸಿದೆ. ಆ ಹಾದಿಯಲ್ಲಿ ಮುಂದುವರಿಯುತ್ತಾ, ರತನ್ ಟಾಟಾ ಮುಂದಿನ ತಿಂಗಳು ಭಾರತದ ಅತಿದೊಡ್ಡ ಪ್ರಾಣಿ ಆಸ್ಪತ್ರೆಗಳಲ್ಲಿ ಒಂದನ್ನು ಪ್ರಾರಂಭಿಸಲಿದ್ದಾರೆ.

ಸಲಿಂಗಿ ಮಗನ ಅಂತ್ಯಕ್ರಿಯೆಗೆ ಒಪ್ಪದ ಕುಟುಂಬ; ಸಂಗಾತಿಯ ಪಾರ್ಥಿವ ಶರೀರ ಕೋರಿ ಕೋರ್ಟ್ ಮೆಟ್ಟಿಲೇರಿದ ಗೆಳೆಯ

Tap to resize

Latest Videos

ಹೌದು, ರತನ್ ಟಾಟಾ ಅವರ ಈ 'ಪೆಟ್' ಯೋಜನೆಯನ್ನು ಮುಂಬೈನಲ್ಲಿ 1650000000 ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಟಾಟಾ ಅವರ ಬಹುಕಾಲದ ಕನಸಿನ ಯೋಜನೆ ಇದಾಗಿದ್ದು, ಟಾಟಾ ಟ್ರಸ್ಟ್ಸ್ ಸ್ಮಾಲ್ ಅನಿಮಲ್ ಹಾಸ್ಪಿಟಲ್ ಮುಂಬೈನಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ. 2.2 ಎಕರೆಗಳಲ್ಲಿ ಹರಡಿರುವ ಇದು ನಾಯಿಗಳು, ಬೆಕ್ಕುಗಳು, ಮೊಲಗಳು ಮತ್ತು ಇತರ ಸಣ್ಣ ಪ್ರಾಣಿಗಳಿಗೆ ಇರುವ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ. ಅದು 24x7 ಕಾರ್ಯ ನಿರ್ವಹಿಸುತ್ತದೆ. 

ರತನ್ ಟಾಟಾ ಪ್ರಕಾರ 'ಸಾಕುಪ್ರಾಣಿಗಳು ಇಂದು ಒಬ್ಬರ ಕುಟುಂಬದ ಸದಸ್ಯರಿಗಿಂತ ಭಿನ್ನವಾಗಿಲ್ಲ. ನನ್ನ ಜೀವನದುದ್ದಕ್ಕೂ ಹಲವಾರು ಸಾಕುಪ್ರಾಣಿಗಳನ್ನು ನೋಡಿರುವ ನಾನು, ಈ ಆಸ್ಪತ್ರೆಯ ಅಗತ್ಯವನ್ನು ಕಂಡುಕೊಂಡಿದ್ದೇನೆ' ಎಂದಿದ್ದಾರೆ. 

ಇನ್ನೂ ಎಷ್ಟು ಅಲೀಬೇಕು ಸ್ವಾಮಿ?; ಸರ್ಕಾರದ ಸೌಲಭ್ಯ ಪಡೆಯಲು ದಿವ್ಯಾಂಗರಿಗೆ ಅಧಿಕಾರಿಗಳೇ ಬೇಲಿ

ರತನ್ ಟಾಟಾ ಅವರ ಹೊಸ ಪ್ರಾಣಿಗಳ ಆಸ್ಪತ್ರೆಯು ತರಬೇತಿಗಾಗಿ ಲಂಡನ್ ರಾಯಲ್ ವೆಟರ್ನರಿ ಕಾಲೇಜ್ ಸೇರಿದಂತೆ ಐದು ಯುಕೆ ಪಶುವೈದ್ಯಕೀಯ ಶಾಲೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಆಸ್ಪತ್ರೆಯು ಬಹುಶಿಸ್ತಿನ ಆರೈಕೆಯೊಂದಿಗೆ ಶಸ್ತ್ರಚಿಕಿತ್ಸೆ, ರೋಗನಿರ್ಣಯ ಮತ್ತು ಔಷಧಾಲಯ ಸೇವೆಗಳನ್ನು ನೀಡುತ್ತದೆ. ಆಸ್ಪತ್ರೆಯು ಗ್ರೌಂಡ್ ಪ್ಲಸ್-ನಾಲ್ಕು ಅಂತಸ್ತಿನದ್ದಾಗಿದೆ ಮತ್ತು 200 ಪಶುಗಳಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ನೇತೃತ್ವವನ್ನು ಬ್ರಿಟಿಷ್ ಪಶುವೈದ್ಯ ಥಾಮಸ್ ಹೀತ್‌ಕೋಟ್ ವಹಿಸಲಿದ್ದಾರೆ.
 

click me!