Udupi: ಮಣಿಪಾಲದಲ್ಲಿ ಪಾರ್ಕಿನ್ಸನ್ ರೋಗಕ್ಕೆ ಶಸ್ತ್ರ ಚಿಕಿತ್ಸೆ: 12 ವರ್ಷದ ನಂತರ ಚೇತರಿಕೆ

By Sathish Kumar KH  |  First Published Dec 10, 2022, 3:29 PM IST

ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಲ್ಲಿ ದಾವಣಗೆರೆ ಜಿಲ್ಲೆಯ 62 ವರ್ಷದ ಮಹಿಳೆಯ ಪಾರ್ಕಿನ್ಸನ್ ಕಾಯಿಲೆಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನದೊಂದಿಗೆ ಯಶಸ್ವಿಯಾಗಿ ಚಿಕಿತ್ಸೆ  ನೀಡಲಾಯಿತು.


ಉಡುಪಿ (ಡಿ.10): ಉಡುಪಿ ಬಳಿಯ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಲ್ಲಿ ದಾವಣಗೆರೆ ಜಿಲ್ಲೆಯ 62 ವರ್ಷದ ಮಹಿಳೆಯ ಪಾರ್ಕಿನ್ಸನ್ ಕಾಯಿಲೆಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನದೊಂದಿಗೆ ಯಶಸ್ವಿಯಾಗಿ ಚಿಕಿತ್ಸೆ  ನೀಡಲಾಯಿತು. ಇದು ಕರಾವಳಿ ಕರ್ನಾಟಕದಲ್ಲಿ ಮೊದಲನೆಯದು ಎಂದು ವೈದ್ಯರು ತಿಳಿಸಿದ್ದಾರೆ. 

ಕಳೆದ 12 ವರ್ಷಗಳಿಂದ ನರ ದುರ್ಬಲಗೊಳಿಸುವ ನರವೈಜ್ಞಾನಿಕ ಸ್ಥಿತಿಯಿಂದ ಬಳಲುತ್ತಿದ್ದರು ಮತ್ತು ನಿಧಾನವಾಗಿ ಔಷಧಿಗಳಿಗೆ ಪ್ರತಿರೋಧ ಬೆಳೆಯಿತು. ಅವರ  ಕೈಕಾಲುಗಳಲ್ಲಿನ ನಡುಕ, ಬಿಗಿತ ಮತ್ತು ನಿಧಾನಗತಿಯ ಕಾರಣದಿಂದಾಗಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವುದು ಮತ್ತು ನಡಿಗೆಗೆ ತೊಂದರೆಯಾಗ ತೊಡಗಿತು. ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಮೆನನ್, ನರವಿಜ್ಞಾನ ವಿಭಾಗದ ಮುಖ್ಯಸ್ಥೆ  ಡಾ.ಅಪರ್ಣಾ ಪೈ, ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ದುಷ್ಯಂತ್ ಬಾಬು ಮತ್ತು ನರಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಜಯ್ ಹೆಗ್ಡೆ ಅವರ ತಂಡದ ಸಮಗ್ರ ಮೌಲ್ಯಮಾಪನದ ನಂತರ, ಅವರು ಹತ್ತು-ಗಂಟೆಗಳ ಶಸ್ತ್ರಚಿಕಿತ್ಸೆ ಒಳಗಾದರು. ನಿರಂತರ ಇಂಟ್ರಾ -ಆಪರೇಟಿವ್ ಮೇಲ್ವಿಚಾರಣೆಯಲ್ಲಿ ರೋಗಿಯನ್ನು ಎಚ್ಚರದಲ್ಲಿರುವಂತೆ ನೋಡಿಕೊಳ್ಳಾಯಿತು.

Tap to resize

Latest Videos

undefined

ಲಾಲೂ ಪ್ರಸಾದ್‌ ಯಾದವ್‌ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, ಮಗಳಿಂದಲೇ ಕಿಡ್ನಿ ದಾನ!

ಮೆದುಳಿನ ಆಳದಲ್ಲಿ ಸಾಧನ ಅಳವಡಿಕೆ: ಶಸ್ತ್ರಚಿಕಿತ್ಸೆಯು 1 ಸೆಂ.ಮೀ ಗಿಂತ ಕಡಿಮೆ ಗಾತ್ರದ ಮತ್ತು ಮೆದುಳಿನಲ್ಲಿ ಬಹಳ ಆಳದಲ್ಲಿರುವ ಸಬ್‌ಥಾಲಾಮಿಕ್ ನ್ಯೂಕ್ಲಿಯಸ್ ಎಂದು ಕರೆಯಲ್ಪಡುವ ಮೆದುಳಿನ ಪ್ರದೇಶಗಳಲ್ಲಿ ವಿದ್ಯುದ್ವಾರಗಳಂತಹ ಎರಡು ತೆಳುವಾದ ತಂತಿಯನ್ನು ಇರಿಸುವುದನ್ನು ಒಳಗೊಂಡಿತ್ತು. ಈ ತಂತಿಗಳನ್ನು ನಂತರ ಮೆದುಳಿನ ಪೇಸ್‌ಮೇಕರ್‌ಗೆ ಸಂಪರ್ಕಿಸಲಾಯಿತು.  ಇದನ್ನು ಶಸ್ತ್ರಚಿಕಿತ್ಸೆಯ 3 ವಾರಗಳ ನಂತರ ಸ್ವಿಚ್ ಆನ್ ಮಾಡಲಾಯಿತು.

ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ: ಈಗ ರೋಗಿಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ.  ಕಳೆದ 5-6 ವರ್ಷಗಳಿಂದ ಸೇವಿಸುತ್ತಿದ್ದ ಔಷಧಿಗಳನ್ನು ಶೇ.60 ರಷ್ಟು ಕಡಿಮೆ ಮಾಡಲು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅವಳು ಶಕ್ತಳಾಗಿದ್ದಾರೆ. ಇತ್ತೀಚಿನ ಬ್ರೈನ್ಸೆನ್ಸ್ ತಂತ್ರಜ್ಞಾನದೊಂದಿಗೆ ಅಳವಡಿಸಲಾದ ಸಾಧನವು ಲೈವ್ ಆಗಿ ಮೆದುಳಿನ ಸಂಕೇತಗಳನ್ನು ದಾಖಲಿಸುತ್ತದೆ. ಜೊತೆಗೆ, ಅಡ್ಡ ಪರಿಣಾಮಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಪ್ರಚೋದನೆಗೆ ತಕ್ಕಂತೆ ಡೇಟಾ ಚಾಲಿತ ವಿಧಾನವನ್ನು ಬಳಸಲು ನರವಿಜ್ಞಾನಿಗಳನ್ನು ಶಕ್ತಗೊಳಿಸುತ್ತದೆ. ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ಪ್ರಚೋದನೆಯನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಸಾಧನವು  ರಿಮೋಟ್ ಕಂಟ್ರೋಲ್  ಅನ್ನು ಸಹ ಹೊಂದಿದೆ.

ಯಶಸ್ವಿ ಚಿಕಿತ್ಸೆ: ವೃದ್ಧನ ಹೊಟ್ಟೆಯಿಂದ 187 ನಾಣ್ಯ ಹೊರತೆಗೆದ ವೈದ್ಯರು!

ಹೊಸ ಜೀವನದ ಭರವಸೆ ಬಂದಿದೆ: ಜೀವನವನ್ನು ಬದಲಾಯಿಸುವ ಈ ಶಸ್ತ್ರಚಿಕಿತ್ಸೆಯು ನನಗೆ ಭರವಸೆ ಮತ್ತು ಹೊಸ ಜೀವನವನ್ನು ನೀಡಿದೆ ಎಂದು ರೋಗಿಯು ಹೇಳಿದ್ದಾರೆ. ರೋಗಿಯು ಮತ್ತು ಅವರ ಕುಟುಂಬವು ತಜ್ಞ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮಣಿಪಾಲದಲ್ಲಿ ಈ ಶಸ್ತ್ರ ಚಿಕಿತ್ಸೆ ಯನ್ನು ಸುಗಮವಾಗಿ ನಡೆಸಿಕೊಟ್ಟದ್ದಕ್ಕೆ  ತಮ್ಮ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯ: ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಲ್ಲಿ ಲಭ್ಯವಿರುವ ಸುಧಾರಿತ ಉಪಕರಣಗಳು ಮತ್ತು ಪರಿಣತಿಯ ತಂಡದಿಂದ ಸುಧಾರಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸುಗಮಗೊಳಿಸಿದೆ. ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಸಂಪೂರ್ಣ ನರವಿಜ್ಞಾನ ತಂಡವನ್ನು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅಭಿನಂದಿಸಿದ್ದಾರೆ. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಯ ಸಿಒಒ ಡಾ. ಆನಂದ್ ವೇಣುಗೋಪಾಲ್ ಅವರು ಮಾತನಾಡಿ, ಬೆಂಗಳೂರು, ಮುಂಬೈಯಂತಹ ಮಹಾ ನಗರಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಈ ರೀತಿಯ ಸಂಕೀರ್ಣ ಪ್ರಕ್ರಿಯೆಯು ಈಗ ಕಡಿಮೆ ವೆಚ್ಚದಲ್ಲಿ ಕಸ್ತೂರಿಬಾ ಆಸ್ಪತ್ರೆಯ ಮಣಿಪಾಲದಲ್ಲಿ ಲಭ್ಯವಿದೆ ಎಂದು ಹೇಳಿದರು.

click me!