ತೂಕ ಇಳಿಸೋದು ಎಲ್ಲರಿಗೂ ದೊಡ್ಡ ಸಮಸ್ಯೆ. ಅದೇನೇ ಕಸರತ್ತು ಮಾಡಿದ್ರೂ ಕೊಬ್ಬು ಕರಗೋದು ಕಷ್ಟ. ಮನೆಯಲ್ಲಿಯೇ ಸುಲಭವಾಗಿ ತೂಕ ಕಡಿಮೆಯಾಗಿ ಫಿಟ್ನೆಸ್ ಮೆಂಟೇನ್ ಮಾಡ್ಬೇಕು ಅಂದ್ರೆ ರಾತ್ರಿ ಒಂದು ಮಸಾಲೆ ವಸ್ತುವಿನ ನೀರು ಕುಡಿದ್ರೆ ಸಾಕು.
ಪ್ರತಿಯೊಬ್ಬರ ಮನೆಯಲ್ಲೂ ಲಭ್ಯವಿರುವ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿ ಕೂಡ ಒಂದು. ದಾಲ್ಚಿನಿ ಇಲ್ಲದೆ ಪಲಾವ್ ಮಾಡೋಕೆ ಸಾಧ್ಯವೇ ಇಲ್ಲ ಎನ್ನುವವರಿದ್ದಾರೆ. ಅನೇಕ ಆಹಾರ ರುಚಿ ಹೆಚ್ಚಿಸುವ ಈ ಮಸಾಲೆ ದಾಲ್ಚಿಯನ್ನು ಔಷಧಿ ರೂಪದಲ್ಲಿಯೂ ಬಳಕೆ ಮಾಡಲಾಗುತ್ತದೆ. ಚಳಿಗಾಲ ಶುರುವಾದ್ರೆ ಮೈ ತಣ್ಣಗಾಗುತ್ತದೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅನೇಕರು ದಾಲ್ಚಿನಿ ಟೀ ಸೇವನೆ ಮಾಡ್ತಾರೆ.
ದಾಲ್ಚಿನಿ (Cinnamon) ಯಲ್ಲಿ ಸತು, ಜೀವಸತ್ವ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್, ಪ್ರೋಟೀನ್, ಕಬ್ಬಿಣ ಮತ್ತು ರಂಜಕದಂತಹ ಅನೇಕ ಪೋಷಕಾಂಶ ಲಭ್ಯವಿದೆ. ದಾಲ್ಚಿನಿಯನ್ನು ನಿಯಮಿತವಾಗಿ ಸೇವಿಸುವುದ್ರಿಂದ ಅನೇಕ ರೋಗ (Disease) ಗಳು ಕಡಿಮೆಯಾಗುತ್ತವೆ. ದಾಲ್ಚಿನಿಯು ತೂಕ (Weight) ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಕೊಬ್ಬು ಕರಗಬೇಕು, ದೇಹ ಸ್ಲಿಮ್ (Slim) ಆಗ್ಬೇಕು ಎನ್ನುವವರು ದಾಲ್ಚಿನಿ ನೀರು ಸೇವನೆ ಮಾಡ್ಬೇಕು. ನಾವಿಂದು ದಾಲ್ಚಿನಿ ನೀರು ತಯಾರಿಸೋದು ಹೇಗೆ ಮತ್ತು ಅದ್ರಿಂದ ಆಗುವ ಲಾಭವೇನು ಎಂಬುದನ್ನು ಹೇಳ್ತೆವೆ.
undefined
ದಾಲ್ಚಿನಿ ನೀರ (Water) ನ್ನು ತಯಾರಿಸೋದು ಹೇಗೆ ? : ತೂಕ ಇಳಿಸಬೇಕು ಎನ್ನುವವರು ನೀವಾಗಿದ್ದರೆ ದಾಲ್ಚಿನಿ ನೀರನ್ನು ಸೇವನೆ ಮಾಡಿ.
ದಾಲ್ಚಿನಿ ನೀರು ತಯಾರಿಸಲು ಬೇಕಾಗುವ ವಸ್ತು : ಒಂದರಿಂದ ಅರ್ಧ ಕಪ್ ನೀರು, ಒಂದು ಚಮಚ ದಾಲ್ಚಿನಿ ಪುಡಿ, ಒಂದು ಚಮಚ ಜೇನುತುಪ್ಪ, ರುಚಿಗೆ ತಕ್ಕಷ್ಟು ನಿಂಬೆ ರಸ, ಒಂದು ಚಮಚ ಕರಿಮೆಣಸು (Black Pepper) ಪುಡಿ ದಾಲ್ಚಿನಿ ನೀರು ತಯಾರಿಸಲು ಬೇಕಾಗುತ್ತದೆ.
MENTAL HEALTH: ಕೆಲಸ ನಿಮ್ಮನ್ನ ಹೈರಾಣ ಮಾಡುತ್ತಿದೆ ಅಂತ ಗೊತ್ತಾಗೋದು ಯಾವಾಗ?
ದಾಲ್ಚಿನಿ ನೀರು ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಬೇಕು. ಈ ನೀರಿಗೆ ದಾಲ್ಚಿನಿ ಪುಡಿಯನ್ನು ಹಾಕಬೇಕು. ನಂತ್ರ ಈ ನೀರನ್ನು ಒಂದರಿಂದ ಎರಡು ನಿಮಿಷ ಕುದಿಸಬೇಕು. ನಂತ್ರ ಈ ನೀರಿಗೆ ಕರಿಮೆಣಸಿನ ಪುಡಿಯನ್ನು ಸೇರಿಸಬೇಕು. ಅದನ್ನು 20 ಸೆಕೆಂಡುಗಳ ಕಾಲ ಕುದಿಸಬೇಕು. ಆ ನಂತ್ರ ಗ್ಯಾಸ್ ಆಫ್ ಮಾಡಿ. ನಂತ್ರ ಈ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಮಿಕ್ಸ್ ಮಾಡಿ. ಈ ನೀರನ್ನು ನೀವು ಫಿಲ್ಟರ್ ಮಾಡಿ ಸೇವನೆ ಮಾಡಬೇಕು. ಉಗುರು ಬೆಚ್ಚಗಿರುವಾಗ್ಲೇ ನೀವು ಈ ನೀರನ್ನು ಕುಡಿಯಬೇಕು.
ದಾಲ್ಚಿನಿ ನೀರನ್ನು ಯಾವಾಗ ಕುಡಿಯೋದು ಒಳ್ಳೆಯದು ? : ತೂಕ ಇಳಿಸಿಕೊಳ್ಳಲು ಬಯಸುವವರು ದಾಲ್ಚಿನಿ ನೀರನ್ನು ಯಾವಾಗ ಕುಡಿಯಬೇಕು ಎಂಬುದನ್ನು ತಿಳಿಯಬೇಕು. ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುತ್ತಾರೆ. ಆದ್ರೆ ದಾಲ್ಚಿನಿ ನೀರನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಸೂಕ್ತವಲ್ಲ. ನೀವು ರಾತ್ರಿ ಮಲಗುವ ಒಂದು ಗಂಟೆ ಮೊದಲು ದಾಲ್ಚಿನ್ನಿ ನೀರನ್ನು ಕುಡಿದ್ರೆ ತೂಕ ಇಳಿಯುತ್ತದೆ.
ದಾಲ್ಚಿನಿ ನೀರಿನ ಪ್ರಯೋಜನ : ದಾಲ್ಚಿನಿ ನೀರನ್ನು ಸೇವನೆ ಮಾಡುವುದ್ರಿಂದ ಚಯಾಪಚ ಶಕ್ತಿ ಹೆಚ್ಚಾಗುತ್ತದೆ. ಮೆಟಾಬಾಲಿಸಮ್ ಬೂಸ್ಟ್ ಆಗುವ ಕಾರಣ ತೂಕ ಇಳಿಯುತ್ತದೆ. ದಾಲ್ಚಿನಿ ನೀರಿನ ಸೇವನೆಯಿಂದ ಕೊಬ್ಬು ಕರಗುತ್ತದೆ.
ದಾಲ್ಚಿನ್ನಿ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಥರ್ಮೋ ಜೆನೆಸಿಸ್ ಉತ್ಪಾದನೆ ಶೇಕಡಾ 20 ರಷ್ಟು ಕಡಿಮೆಯಾಗುತ್ತದೆ. ಇದ್ರಿಂದ ಕ್ಯಾಲೋರಿ ಬರ್ನ್ ಸುಲಭವಾಗುತ್ತದೆ.
ಚಳಿಗಾಲದಲ್ಲಿ ಕುಗ್ಗುವ ರಕ್ತನಾಳ, ಹೀಗೆ ಮಾಡಿಲ್ಲಾಂದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ
ದಾಲ್ಚಿನ್ನಿ ನೀರನ್ನು ನಿಯಮಿತವಾಗಿ ಕುಡಿಯುವುದ್ರಿಂದ ಹಸಿವು ಕಡಿಮೆಯಾಗುತ್ತದೆ. ಹೊಟ್ಟೆ ತುಂಬಿದ ಅನುಭವವಾಗುವ ಕಾರಣ ನಿಮಗೆ ತೂಕ ಇಳಿಕೆ ಸುಲಭವಾಗುತ್ತದೆ. ದಾಲ್ಚಿನ್ನಿ ನೀರಿನ ಸೇವನೆಯಿಂದ ಕೊಬ್ಬು ದೇಹದಲ್ಲಿ ಶೇಖರಣೆಯಾಗುವುದು ಕಡಿಮೆಯಾಗುತ್ತದೆ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದೊಂದಿಗೆ ದಾಲ್ಚಿನ್ನಿ ನೀರನ್ನು ನೀವು ಸೇವನೆ ಮಾಡಿದ್ರೆ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು.