14ನೇ ಶತಮಾನದಲ್ಲಿ 50 ಮಿಲಿಯನ್ ಜನರ ಸಾವಿಗೆ ಕಾರಣವಾದ ಬುಬೊನಿಕ್ ಪ್ಲೇಗ್ ಪತ್ತೆ!

By Vinutha PerlaFirst Published Feb 14, 2024, 11:56 AM IST
Highlights

ಅಮೆರಿಕದ ಒರೆಗಾನ್‌ನಲ್ಲಿ 14ನೇ ಶತಮಾನದಲ್ಲಿ 50 ಮಿಲಿಯನ್ ಜನರ ಸಾವಿಗೆ ಕಾರಣವಾದ ಬುಬೊನಿಕ್ ಪ್ಲೇಗ್ ಪತ್ತೆಯಾಗಿದೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸ್ಥಳೀಯ ನಿವಾಸಿಗಳಲ್ಲಿ ಬುಬೊನಿಕ್ ಪ್ಲೇಗ್ ಪ್ರಕರಣವನ್ನು ವರದಿ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಲಾಸ್ ಏಂಜಲೀಸ್: ಅಮೆರಿಕದ ಒರೆಗಾನ್‌ನಲ್ಲಿ ಸಾಕಿದ ಬೆಕ್ಕಿನಿಂದ ಹರಡುವ ಅಪರೂಪದ ಬಬೊನಿಕ್ ಪ್ಲೇಗ್‌ ಪತ್ತೆಯಾಗಿದೆ. ಒರೆಗಾನ್‌ನ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸ್ಥಳೀಯ ನಿವಾಸಿಗಳಲ್ಲಿ ಬುಬೊನಿಕ್ ಪ್ಲೇಗ್ ಪ್ರಕರಣವನ್ನು ವರದಿ ಮಾಡಿದ್ದಾರೆ. ಜನರು ಸಾಕು ಬೆಕ್ಕಿನಿಂದ ರೋಗಕ್ಕೆ ತುತ್ತಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವ್ಯಕ್ತಿ ಮತ್ತು ಬೆಕ್ಕಿನ ಎಲ್ಲಾ ನಿಕಟ ಸಂಪರ್ಕಗಳನ್ನು ಸಂಪರ್ಕಿಸಲಾಗಿದೆ ಮತ್ತು ಔಷಧಿಗಳನ್ನು ನೀಡಲಾಗಿದೆ ಎಂದು ಡೆಸ್ಚುಟ್ಸ್ ಕೌಂಟಿಯ ಆರೋಗ್ಯ ಅಧಿಕಾರಿ ಡಾ. ರಿಚರ್ಡ್ ಫಾಸೆಟ್ ಕಳೆದ ವಾರ ತಿಳಿಸಿದ್ದಾರೆ.

ಈ ಪ್ರಕರಣವನ್ನು ಅದರ ಆರಂಭಿಕ ಹಂತಗಳಲ್ಲಿ ಗುರುತಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಇದು ಸಮುದಾಯಕ್ಕೆ ಕಡಿಮೆ ಅಪಾಯವನ್ನುಂಟು ಮಾಡುತ್ತದೆ ಎಂದು ಕೌಂಟಿ ಹೇಳಿದರು. ಡೆಸ್ಚುಟ್ಸ್ ಕೌಂಟಿಯಲ್ಲಿರುವ ರೋಗಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ.

ರಕ್ತ ಪರೀಕ್ಷೆಯಿಂದಲೇ 6 ತಿಂಗಳೊಳಗೆ ಸಂಭವಿಸಲಿರುವ ಹೃದಯಾಘಾತ ಪತ್ತೆ ಸಾಧ್ಯ: ಅಧ್ಯಯನ

ಬ್ಲ್ಯಾಕ್ ಡೆತ್ ಎಂದು ಕರೆಯಲ್ಪಡುವ ಸಾಂಕ್ರಾಮಿಕ ಪ್ಲೇಗ್‌
ಬ್ಲ್ಯಾಕ್ ಡೆತ್ ಎಂದು ಕರೆಯಲ್ಪಡುವ ಈ ಪ್ಲೇಗ್‌ ಸಾಂಕ್ರಾಮಿಕ ಸಮಯದಲ್ಲಿ ಮಧ್ಯಯುಗದಲ್ಲಿ ಯುರೋಪಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರ ಸಾವಿಗೆ ಕಾರಣವಾಗಿತ್ತು. ಹಿಂದೆ ಇದಕ್ಕೆ ಚಿಕಿತ್ಸೆಯೂ ಇರಲ್ಲಿಲ್ಲ. ಆದರೆ ಈಗ ಇದಕ್ಕೆ ಚಿಕಿತ್ಸೆ ನೀಡಬಹುದಾದರೂ ಅಪಾಯಕಾರಿಯಾಗಿ ಉಳಿದಿದೆ.

ಹಠಾತ್ ಜ್ವರ, ವಾಕರಿಕೆ, ದೌರ್ಬಲ್ಯ, ಶೀತ ಮತ್ತು ಸ್ನಾಯು ನೋವುಗಳ ಹಠಾತ್ ಆಕ್ರಮಣವನ್ನು ಬುಬೊನಿಕ್ ಪ್ಲೇಗ್‌ನ ಲಕ್ಷಣಗಳು ಒಳಗೊಂಡಿದೆ. ಸೋಂಕಿತ ಪ್ರಾಣಿ ಅಥವಾ ಚಿಗಟಕ್ಕೆ ಒಡ್ಡಿಕೊಂಡ ಎರಡರಿಂದ ಎಂಟು ದಿನಗಳ ನಂತರ ಬಬೊನಿಕ್ ಪ್ಲೇಗ್‌ನ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ. ಬುಬೊನಿಕ್ ಪ್ಲೇಗ್‌ನ್ನು ಮೊದಲೇ ಗುರುತಿಸದಿದ್ದರೆ ರಕ್ತಪ್ರವಾಹ ಮತ್ತು ಶ್ವಾಸಕೋಶದ ಸೋಂಕುಗಳಿಗೆ ಕಾರಣವಾಗಬಹುದು. ರೋಗದ ಈ ರೂಪಗಳು ಹೆಚ್ಚು ತೀವ್ರವಾಗಿರುತ್ತವೆ ಮತ್ತು ಚಿಕಿತ್ಸೆ ನೀಡಲು ಕಷ್ಟಕರವಾಗುತ್ತದೆ.

Health: ಅಲಾಸ್ಕಾಪಾಕ್ಸ್‌ಗೆ ಮೊದಲ ಸಾವು, ಏನಿದರ ಲಕ್ಷಣ?

14ನೇ ಶತಮಾನದಲ್ಲಿ ಬ್ಲ್ಯಾಕ್ ಡೆತ್ ಯುರೋಪಿನಾದ್ಯಂತ ವ್ಯಾಪಿಸಿತು, ಮಾನವ ಇತಿಹಾಸದಲ್ಲಿ ಮಾರಣಾಂತಿಕ ಸಾಂಕ್ರಾಮಿಕ ರೋಗಗಳಲ್ಲಿ 50 ಮಿಲಿಯನ್ ಜನರನ್ನು ಕೊಂದಿತು. ಒರೆಗಾನ್ ಕೊನೆಯ ಬಾರಿಗೆ 2015ರಲ್ಲಿ ಬುಬೊನಿಕ್ ಪ್ಲೇಗ್ ಪ್ರಕರಣವನ್ನು ವರದಿ ಮಾಡಿದೆ.

click me!