ಹೊಟ್ಟೆಯೊಳಗೇನು ಬ್ಯೂಟಿಪಾರ್ಲರ್ ಇಟ್ಕೊಂಡಿದ್ನಾ : ವ್ಯಕ್ತಿ ಹೊಟ್ಟೆಯಲ್ಲಿದ್ದ ವಸ್ತುಗಳ ನೋಡಿ ವೈದ್ಯರೇ ಶಾಕ್

Published : Aug 20, 2023, 07:17 AM ISTUpdated : Aug 20, 2023, 09:01 AM IST
 ಹೊಟ್ಟೆಯೊಳಗೇನು ಬ್ಯೂಟಿಪಾರ್ಲರ್ ಇಟ್ಕೊಂಡಿದ್ನಾ : ವ್ಯಕ್ತಿ ಹೊಟ್ಟೆಯಲ್ಲಿದ್ದ ವಸ್ತುಗಳ ನೋಡಿ ವೈದ್ಯರೇ ಶಾಕ್

ಸಾರಾಂಶ

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯೊಳಗಿದ್ದ 13 ಹೇರ್‌ಪಿನ್‌, 5 ಸೇಫ್ಟಿಪಿನ್‌ ಮತ್ತು 8 ರೇಜರ್‌ ಬ್ಲೇಡ್‌ಗಳನ್ನು ಎಂಡೋಸ್ಕೋಪಿಕ್‌ ವಿಧಾನದಿಂದ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. 

ಪುದುಚೇರಿ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯೊಳಗಿದ್ದ 13 ಹೇರ್‌ಪಿನ್‌, 5 ಸೇಫ್ಟಿಪಿನ್‌ ಮತ್ತು 8 ರೇಜರ್‌ ಬ್ಲೇಡ್‌ಗಳನ್ನು ಎಂಡೋಸ್ಕೋಪಿಕ್‌ ವಿಧಾನದಿಂದ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. 

ಈ ವ್ಯಕ್ತಿ ಬಹಳ ಕಾಲದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಕೆಲವು ದಿನಗಳಿಂದ ಭಾರಿ ಹೊಟ್ಟೆನೋವಿಂದ ಬಳಲುತ್ತಿದ್ದ ಕಾರಣ ಸ್ಕ್ಯಾನ್ (scan)ಮಾಡಿದಾಗ ಪಿನ್‌ ಹಾಗೂ ಬ್ಲೇಡ್‌ ಹೊಟ್ಟೆಯೊಳಗಿರುವುದು ಪತ್ತೆಯಾಗಿದೆ. ಅದೃಷ್ಟವಶಾತ್‌ ಈ ಚೂಪಾದ ವಸ್ತುಗಳು ಯಾವುದೂ ಕೂಡ ಆತನ ಹೊಟ್ಟೆಯ ಒಳಗೆ ಯಾವುದೇ ಗಾಯ ಮಾಡಿರಲಿಲ್ಲ. ಸುಮಾರು 2 ಗಂಟೆಗಳ ಕಾಲ ಎಂಡೋಸ್ಕೋಪಿ ನಡೆಸಿದ ವೈದ್ಯರು, ಯಶಸ್ವಿಯಾಗಿ ಎಲ್ಲಾ ವಸ್ತುಗಳನ್ನು ಹೊರ ತೆಗೆದಿದ್ದಾರೆ. ಇವುಗಳನ್ನು ಆಹಾರದ ಜೊತೆ ಬೆರೆಸಿ ತಿಂದಿರಬೇಕು ಎಂದು ವೈದ್ಯರು ಹೇಳಿದ್ದು, ಆರೋಗ್ಯ ಸ್ಥಿರವಾಗಿರುವ ಕಾರಣದಿಂದ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ವೈದ್ಯಲೋಕಕ್ಕೆ ಅಚ್ಚರಿ.. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿತ್ತು ಭ್ರೂಣ!

ಅಬ್ಬಬ್ಬಾ..ಮೂರು ಹೊತ್ತು ಕೂದಲನ್ನೇ ತಿನ್ತಿದ್ಲಾ? ಬಾಲಕಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1 ಕೆಜಿ ಕೂದಲು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ರೀತಿ ಲೈಫ್‍ಸ್ಟೈಲ್ ಫಾಲೋ ಮಾಡಿ, ಗರ್ಭಕಂಠದ ಕ್ಯಾನ್ಸರ್ ಅಪಾಯದಿಂದ ದೂರವಿರಿ
ನೈಟ್ ಶಿಫ್ಟ್‌ ನರ್ಸ್ ಸಹಾಯಕ್ಕೆ ಬಂದ ಪ್ರಿಯಕರ; ಮೈಮರೆತು ಕೆಲಸ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಸಸ್ಪೆಂಡ್!