Conjunctivitis Prevention: ಮಳೆಗಾಲದಲ್ಲಿ ಕಾಡುವ ಕಣ್ಣಿನ ಸಮಸ್ಯೆ… ರೋಗ ಲಕ್ಷಣ, ಪರಿಹಾರ ತಿಳಿಯಿರಿ

Published : Jun 29, 2026, 01:39 PM IST
Conjunctivitis

ಸಾರಾಂಶ

Conjunctivitis: ಮಳೆಗಾಲದಲ್ಲಿ ಕಾಂಜಂಕ್ಟಿವಿಟಿಸ್ (ಕಣ್ಣಿನ ಜ್ವರ ಅಥವಾ ಕಣ್ಣಿನ ಇನ್ಫೆಕ್ಷನ್) ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಕಣ್ಣಿನ ಇನ್ಫೆಕ್ಷನ್ ಲಕ್ಷಣಗಳೇನು? ಹಾಗೂ ನಿಮ್ಮ ಕಣ್ಣುಗಳನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎನ್ನುವ ಕುರಿತಾಗಿ ಸಂಪೂರ್ಣ ಮಾಹಿತಿ ತಿಳಿಯೋಣ.

ಮಳೆಗಾಲದಲ್ಲಿ ಕಾಡುವ ಕಾಂಜಂಕ್ಟಿವಿಟಿಸ್

ಹೆಚ್ಚಿನ ಜನರು ಮಳೆಗಾಲವನ್ನು ಇಷ್ಟಪಡುತ್ತಾರೆ, ಆದರೆ ಇದು ಹಲವಾರು ಸಮಸ್ಯೆಗಳನ್ನು ಸಹ ತರುವುದು ಈ ಮಳೆಗಾಲ. ಈ ಸಮಯದಲ್ಲಿ ಹಲವಾರು ಕಾಯಿಲೆಗಳು ದೇಹವನ್ನು ಕಾಡುತ್ತವೆ. ವಿವಿಧ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಅಪಾಯವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇವುಗಳಲ್ಲಿ ಒಂದು ಕಾಂಜಂಕ್ಟಿವಿಟಿಸ್ ಅಪಾಯವಾಗಿದ್ದು, ಇದು ಎಲ್ಲರೂ ಕಾಳಜಿ ವಹಿಸಬೇಕಾದ ಒಂದು ಸಮಸ್ಯೆಯಾಗಿದೆ.

ಮಳೆಗಾಲದಲ್ಲಿ, ಹೆಚ್ಚಿದ ಆರ್ದ್ರತೆ, ಕೊಳಕು ನೀರು ಮತ್ತು ಸಾಂಕ್ರಾಮಿಕ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ಕಣ್ಣುಗಳನ್ನು ವೇಗವಾಗಿ ಪ್ರವೇಶಿಸುತ್ತವೆ, ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಅನೇಕ ಜನರು ಇದಕ್ಕೆ ಬಲಿಯಾಗುತ್ತಾರೆ ಮತ್ತು ಸಮಸ್ಯೆ ಇನ್ನಷ್ಟು ಹದಗೆಡುತ್ತಲೇ ಇರುತ್ತದೆ. ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಈ ಸಮಸ್ಯೆ ಉಲ್ಬಣಗೊಳ್ಳಬಹುದು. ಮಳೆಗಾಲದಲ್ಲಿ ಕಣ್ಣುಗಳನ್ನು ಸ್ವಚ್ಛಗೊಳಿಸಲು ಮತ್ತು ರಕ್ಷಿಸಲು ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ತಿಳಿಯಿರಿ.

ಕಾಂಜಂಕ್ಟಿವಿಟಿಸ್ ಎಂದರೇನು?

ಮಳೆಗಾಲದಲ್ಲಿ ಕಾಂಜಂಕ್ಟಿವಿಟಿಸ್ ತೀವ್ರವಾಗಿ ಹೆಚ್ಚಾಗುತ್ತದೆ, ಇದು ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಕಣ್ಣಿನ ಹೊರ ಪದರದ ಉರಿಯೂತ ಅಥವಾ ಸೋಂಕಾಗಿದ್ದು, ಇದು ವೈರಲ್, ಬ್ಯಾಕ್ಟೀರಿಯಾ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಿಂದ ಉಂಟಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದ ಮೂಲಕ ಈ ಸಮಸ್ಯೆ ಸುಲಭವಾಗಿ ಹರಡಬಹುದು.

ಕಾಂಜಂಕ್ಟಿವಿಟಿಸ್‌ನ ಸಾಮಾನ್ಯ ಲಕ್ಷಣಗಳು

ಕಾಂಜಂಕ್ಟಿವಿಟಿಸ್‌ನ ಲಕ್ಷಣಗಳು ತುಂಬಾನೆ ಸಾಮಾನ್ಯವಾಗಿದೆ, ಮತ್ತು ಹೆಚ್ಚಿನ ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ, ನಿರ್ಲಕ್ಷಿಸುವ ತಪ್ಪು ಮಾಡಬೇಡಿ.

  • ಕಣ್ಣುಗಳು ಕೆಂಪಾಗುವುದು
  • ಕಣ್ಣುಗಳಲ್ಲಿ ತುರಿಕೆ ಅಥವಾ ಉರಿ
  • ನಿರಂತರ ನೀರು ಬರುವುದು
  • ಕಣ್ಣುಗಳಿಂದ ಬಿಳಿ ಅಥವಾ ಹಳದಿ ಜಿಗುಟಾದ ಸ್ರಾವ
  • ಬೆಳಿಗ್ಗೆ ಎದ್ದ ತಕ್ಷಣ ಕಣ್ಣುರೆಪ್ಪೆಗಳು ಜಿಗುಟಾಗಿರುವುದು
  • ಬೆಳಿಗ್ಗೆ ಕಣ್ಣು ತೆರೆಯಲು ಕಷ್ಟವಾಗುವುದು.

ಮಳೆಗಾಲದ ಸೋಂಕಿನಿಂದ ನಿಮ್ಮ ಕಣ್ಣುಗಳನ್ನು ಹೇಗೆ ರಕ್ಷಿಸಿಕೊಳ್ಳುವುದು?

  • ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ
  • ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದನ್ನು ತಪ್ಪಿಸಿ
  • ಐ ಮೇಕಪ್ ಮಾಡಿಕೊಳ್ಳಬೇಡಿ
  • ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮುಟ್ಟುವುದನ್ನು ತಪ್ಪಿಸಿ
  • ವೈದ್ಯರನ್ನು ಸಂಪರ್ಕಿಸದೆ ಐ ಡ್ರಾಪ್ಸ್ ಬಳಸಬೇಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Jaggery-Respiratory Issues: ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆ ಆಗುತ್ತಾ? ತಜ್ಞರು ಈ ಬಗ್ಗೆ ಹೇಳೋದೇನು?
Toilet Cleaning Shocking Tips: ಕೇವಲ 5 ರೂಪಾಯಿಗೆ ಟಾಯ್ಲೆಟ್ ಹೊಚ್ಚಹೊಸದರಂತೆ ಆಗುತ್ತೆ; ಇಂದೇ ಟ್ರೈ ಮಾಡಿ!