ಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಹಣ್ಣು ತಿಂದ್ರೆ ತೂಕ ಇಳಿಯುತ್ತೆ. ಇಷ್ಟೇ ನಮಗೆ ಗೊತ್ತು. ಹಾಗಾಗಿ ನಾವು ಇದ್ದಬಿದ್ದ ಎಲ್ಲ ಹಣ್ಣನ್ನು ಡಯಟ್ ನಲ್ಲಿ ಸೇರಿಸ್ತೇವೆ. ಆದ್ರೆ ಎಲ್ಲ ಹಣ್ಣುಗಳು ತೂಕ ಇಳಿಸಲ್ಲ. ಕೆಲ ಹಣ್ಣುಗಳು ತೂಕ ಜಾಸ್ತಿ ಮಾಡುತ್ತೆ.
ಹಣ್ಣು (Fruit) ,ತರಕಾರಿ (Vegetable) ಗಳು ದೇಹಕ್ಕೆ ಅಗತ್ಯವಿರುವ ಪೋಷಕಾಂಶ (Nutrition) ಗಳು, ಜೀವಸತ್ವಗಳು, ಖನಿಜಗಳನ್ನು ಒದಗಿಸುತ್ತದೆ. ಆದ್ದರಿಂದ ಅವುಗಳನ್ನು ಪ್ರತಿ ನಿತ್ಯ ಸೇವನೆ ಮಾಡ್ಬೇಕು. ತಜ್ಞರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ ಬೆಳಗಿನ ಉಪಹಾರದ ವೇಳೆ ಒಂದು ಹಣ್ಣನ್ನು ಅವಶ್ಯಕವಾಗಿ ಸೇವನೆ ಮಾಡ್ಬೇಕು. ಅಲ್ಲದೆ ತರಕಾರಿಗಳನ್ನು ಡಯಟ್ (Diet) ನಲ್ಲಿ ಸೇರಿಸಬೇಕು. ಯಾವ ವ್ಯಕ್ತಿ ದಿನದಲ್ಲಿ ಕನಿಷ್ಠ ಐದು ಬಾರಿ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವನೆ ಮಾಡ್ತಾನೋ ಆ ವ್ಯಕ್ತಿಗೆ ಹೃದ್ರೋಗ (Heart disease) , ಪಾರ್ಶ್ವವಾಯು ಮತ್ತು ಕೆಲವು ರೀತಿಯ ಕ್ಯಾನ್ಸರ್ (Cancer) ಅಪಾಯ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ತೂಕ ಏರಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ತೂಕ (Weight) ಕಡಿಮೆ ಮಾಡಲು ಜನರು ಹಣ್ಣುಗಳ ಸೇವನೆಗೆ ಆದ್ಯತೆ ನೀಡ್ತಿದ್ದಾರೆ. ಪ್ರತಿ ದಿನ ಹಣ್ಣುಗಳ ಸೇವನೆ ಮಾಡಿದ್ರೆ ತೂಕ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಡಯೆಟ್ ನಲ್ಲಿ ಹಣ್ಣು – ತರಕಾರಿ ಸೇರಿಸಲಾಗುತ್ತದೆ. ಆದ್ರೆ ಎಲ್ಲ ಹಣ್ಣುಗಳು ತೂಕ ಕಡಿಮೆ ಮಾಡಲು ನೆರವಾಗುವುದಿಲ್ಲ. ಕೆಲ ಹಣ್ಣುಗಳು ತೂಕ ಏರಿಕೆಗೆ ಕಾರಣವಾಗುತ್ತದೆ. ತೂಕ ಕಡಿಮೆ ಮಾಡಲು ಬಯಸುವವರು ಅಪ್ಪಿತಪ್ಪಿ ಆ ಹಣ್ಣು ತಿನ್ನಬಾರದು. ಅದ್ರ ಸೇವನೆಯಿಂದ ತೂಕ ಹೆಚ್ಚಾಗುವುದಲ್ಲದೆ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಡಯೆಟ್ ನಲ್ಲಿ ಹಣ್ಣು ಸೇರಿಸುವ ಮೊದಲು ಯಾವ ಹಣ್ಣು ತೂಕ ಹೆಚ್ಚು ಮಾಡುತ್ತದೆ ಎಂಬುದನ್ನು ತಿಳಿದಿರಬೇಕು.
ಆರೋಗ್ಯವಾಗಿರುವ ಹಾಗೂ ಆರೋಗ್ಯಕರ ತೂಕ ಹೊಂದಿರುವ ವ್ಯಕ್ತಿ ಪ್ರತಿ ದಿನ ಹಣ್ಣುಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ತೂಕ ಹೆಚ್ಚಿದ್ದು, ಕೊಬ್ಬು ಇಳಿಸಿಕೊಳ್ಳಲು ಡಯೆಟ್ ಮಾಡುವ ಜನರು ಸೇಬು, ನೇರಳೆ ಹಣ್ಣು,ಅಂಜೂರ, ರಾಸ್ಪ್ಬೆರಿ ಅಥವಾ ಆವಕಾಡೊವನ್ನು ಸೇವನೆ ಮಾಡ್ಬಹುದು. ಯಾಕೆಂದ್ರೆ ಇದರಲ್ಲಿ ಕಡಿಮೆ ಸಕ್ಕರೆ ಪ್ರಮಾಣವಿರುತ್ತದೆ. ಆದ್ರೆ ತೂಕ ಇಳಿಸಲು ಬಯಸುವವರು ಮಾವಿನ ಹಣ್ಣು, ಹಲಸಿನ ಹಣ್ಣು, ಅನಾನಸ್ ಹಣ್ಣನ್ನು ಸೇವಿಸಬಾರದು. ಯಾಕೆಂದ್ರೆ ಇದರಲ್ಲಿ ನ್ಯಾಚ್ಯುರಲ್ ಶುಗರ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಅನಾರೋಗ್ಯದಿಂದ ಬಳಲುತ್ತಿರುವಾಗ ಕಣ್ಣಿನಿಂದ ನೀರು ಬರುವುದು ಯಾಕೆ ?
ವೈದ್ಯರ ಪ್ರಕಾರ, ಒಂದು ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲಿ 45 ಗ್ರಾಮ್ ಸಕ್ಕರೆಯಿರುತ್ತದೆ. ಅದೇ ಒಂದು ಅಂಜೂರದಲ್ಲಿ 23 ಗ್ರಾಂ ಸಕ್ಕರೆಯಿರುತ್ತದೆ. ರಸ್ ಬೆರಿಯಲ್ಲಿ 5 ಗ್ರಾಂ ಸಕ್ಕರೆಯಿರುತ್ತದೆ. ಆವಕಾಡೊದಲ್ಲಿ 1.33 ಗ್ರಾಂ ಸಕ್ಕರೆಯಿರುತ್ತದೆ. ತೂಕ ಹೆಚ್ಚಿದೆ ಎನ್ನುವವರು ಮಾವಿನ ಹಣ್ಣಿನ ಜೊತೆ ಬಾಳೆ ಹಣ್ಣಿನಿಂದಲೂ ದೂರವಿರುವುದು ಒಳ್ಳೆಯದು. ಯಾವ ವ್ಯಕ್ತಿ ತೂಕ ಕಡಿಮೆಯಿದ್ದು, ತೂಕ ಹೆಚ್ಚಿಸಿಕೊಳ್ಳುವ ಆಸೆ ಹೊಂದಿದ್ದರೆ ಅವರು ಮಾವಿನ ಹಣ್ಣು, ಬಾಳೆ ಹಣ್ಣು, ಹಲಸಿನ ಹಣ್ಣಿನ ಸೇವನೆಯನ್ನು ಅವಶ್ಯಕವಾಗಿ ಮಾಡ್ಬೇಕು.
ದಿನಾ ಜೇನು ತುಪ್ಪ ತಿನ್ನಿ, ಆರೋಗ್ಯ ಸಮಸ್ಯೆ ಕಾಡೋ ಭಯವಿಲ್ಲ
ತೂಕ ಇಳಿಸಲು ಬಯಸುವವರು ಇದ್ರಿಂದ ದೂರವಿರಿ : ತೂಕ ಇಳಿಕೆ ಸುಲಭವಲ್ಲ. ಒಂದು ದಿನದಲ್ಲಿ ತೂಕ ಕಡಿಮೆಯಾಗಲು ಸಾಧ್ಯವೂ ಇಲ್ಲ. ಇದಕ್ಕೆ ನಿರಂತರ ಪ್ರಯತ್ನ ಅವಶ್ಯಕ. ಡಯೆಟ್ ಜೊತೆ ವ್ಯಾಯಾಮ ಮುಖ್ಯವಾಗುತ್ತದೆ. ಕೊಬ್ಬು ಕಡಿಮೆ ಇರುವ ಆಹಾರವನ್ನು ಸೇವನೆ ಮಾಡ್ಬೇಕಾಗುತ್ತದೆ. ಇದ್ರ ಜೊತೆಗೆ ಸಕ್ಕರೆ ಅಂಶವಿರುವ ಆಹಾರದಿಂದ ದೂರವಿರಬೇಕು. ಉಪ್ಪನ್ನು ಹೆಚ್ಚಾಗಿ ಸೇವನೆ ಮಾಡ್ಬಾರದು. ಪ್ಯಾಕೇಟ್ ಫುಡ್ ಗಳು ಆರೋಗ್ಯಕ್ಕೆ ಹಾನಿಕರ. ತೂಕ ಏರಿಕೆಗೆ ಇದು ಕಾರಣವಾಗುತ್ತದೆ. ಹಾಗಾಗಿ ಅದರ ಸೇವನೆ ಕಡಿಮೆ ಮಾಡಿ. ಬಿಸ್ಕೆಟ್ ಅಥವಾ ಚಿಪ್ಸ್ ನಂತಹ ಆಹಾರವನ್ನು ಕೂಡ ತಿನ್ನಬೇಡಿ. ಒಂದ್ವೇಳೆ ಮನೆಯಲ್ಲಿ ಇದೇ ಆಹಾರವಿದ್ದರೆ ಅದನ್ನು ತಕ್ಷಣ ಮನೆಯಿಂದ ಹೊರಗೆ ಹಾಕಿ. ಅನೇಕರು ಹಸಿವಾದಾಗೆಲ್ಲ ಬಿಸ್ಕೆಟ್, ಚಿಪ್ಸ್ ತಿನ್ನುತ್ತಾರೆ. ಇದು ಒಳ್ಳೆಯದಲ್ಲ.