ಹೆಚ್ಚಿದ ಕೊರೋನಾ: ರಾಜ್ಯಗಳಲ್ಲಿ ಆಕ್ಸಿಜನ್ ಶಾರ್ಟೇಜ್‌, ಜೀವವಾಯುವಿನ ಬೆಲೆ 5 ಪಟ್ಟು ಹೆಚ್ಚಳ..!

By Suvarna News  |  First Published Sep 15, 2020, 11:35 AM IST

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಆಕ್ಸಿಜನ್ ಬೆಲೆಯನ್ನು ಒಂದು ಕ್ಯೂಬಿಕ್ ಮೀಟರ್‌ಗೆ 17.2 ಎಂದು ಜನವರಿಯಲ್ಲಿ ನಿಗದಿಪಡಿಸಿತ್ತು. ಆದರೆ ಈಗ ಒಂದು ಕ್ಯೂಬಿಕ್ ಮೀಟರ್‌ ಆಮ್ಲಜನಕದ ಬೆಲೆ 50ಕ್ಕೆ ತಲುಪಿದೆ.


ಕೊರೋನಾ ವೈರಸ್ ಪ್ರಕರಣಗಳು ದಿನೇ ದಿನ ಹೆಚ್ಚಾಗುತ್ತಿದ್ದು ಇದೀಗ ರಾಜ್ಯಗಳು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿವೆ. ಬಹಳಷ್ಟು ಕಡೆ ಆಕ್ಸಿಜನ್ ಸಪ್ಲೈ ಆಗುತ್ತಿರುವುದೇ ಇತರ ರಾಜ್ಯಗಳಿಂದ.

ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಬೆಲೆ ಹೆಚ್ಚಾಗಿರುವುದು ಮಾತ್ರವಲ್ಲದೆ, ಕೆಲವು ರಾಜ್ಯಗಳಲ್ಲಿ ಆಕ್ಸಿಯನ್ ಬೇರೆ ರಾಜ್ಯಗಳಿಗೆ ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಆಕ್ಸಿಜನ್ ಸಾಗಿಸಲು ತಡೆ ಮಾಡಬೇಡಿ ಎಂದು ಸೂಚನೆ ನೀಡಿದೆ.

Latest Videos

undefined

ಹಾಲಿಗೆ ಫುಲ್ ಡಿಮ್ಯಾಂಡ್, ಏನಿದರ ವಿಶೇಷತೆ..?

ಮಹಾರಾಷ್ಟ್ರ ಸರ್ಕಾರ ವಿಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ರಾಜ್ಯದಿಂದ ಆಕ್ಸಿಜನ್ ಬೇರೆ ರಾಜ್ಯ ಹೋಗಬಾರದು ಎಂದು ಕೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ಆಕ್ಸಿಜನ್ ಮೂವ್‌ಮೆಂಟ್ ತಡೆಯದಂತೆ ಸೂಚಿಸಿದೆ.

ಮಹಾರಾಷ್ಟ್ರ ಆಕ್ಸಿಜನ್ ಸಪ್ಲೈ ಮಾಡುವುದು ನಿಲ್ಲಿಸಿದಾಗ ಮಧ್ಯಪ್ರದೇಶ ಹಾಗೂ ಕರ್ನಾಟಕ ಆಕ್ಸಿಜನ್ ಕೊರತೆ ಎದುರಿಸಿತ್ತು. ಮಹಾರಾಷ್ಟ್ರ ಸರ್ಕಾರ ಸೆಪ್ಟಂಬರ್ 7ರಂದು ಹೊರ ರಾಜ್ಯಗಳಿಗೆ ಆಕ್ಸಿಜನ್ ಸಪ್ಲೈ ನಿಲ್ಲಿಸಿತ್ತು.

ಕೊರೋನಾ ಕೊನೆಯಲ್ಲ, ಜಗತ್ತಿಗೆ ವಕ್ಕರಿಸಲಿದೆ ಇನ್ನಷ್ಟು ಮಹಾಮಾರಿ: WHO ಎಚ್ಚರಿಕೆ

ಮಹಾರಾಷ್ಟ್ರದ ಆಕ್ಸಿಜನ್ ಪ್ರೊಡಕ್ಷನ್‌ನ ಶೇ.50ನ್ನು ತನ್ನ ರಾಜ್ಯಕ್ಕೆ ಬಳಸುತ್ತಿದ್ದ ಮಹಾರಾಷ್ಟ್ರ ಈಗ ಶೇ 80ರಷ್ಟುನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಿದೆ. ಮಧ್ಯಪ್ರದೇಶದ ದೇವಸ್ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ 4 ರೋಗಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಈ ಆರೋಪವನ್ನು ಅಲ್ಲಿನ ಸರ್ಕಾರ ತಳ್ಳಿ ಹಾಕಿದೆ.

ನಾಗಪುರ ಮೂಲಕದ ಆಕ್ಸಿಜನ್ ಸಪ್ಲೈ ಕೇಂದ್ರ ಆಕ್ಸಿಜನ್ ಪೋರೈಕೆ ಮಾಡುವುದು ನಿಲ್ಲಿಸಿದಾಗ ದೇವಸ್, ಜಬಲಪುರ್, ಚಿಂಡ್ವಾರ, ದಮೋ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿತ್ತು.

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಆಕ್ಸಿಜನ್ ಬೆಲೆಯನ್ನು ಒಂದು ಕ್ಯೂಬಿಕ್ ಮೀಟರ್‌ಗೆ 17.2 ಎಂದು ಜನವರಿಯಲ್ಲಿ ನಿಗದಿಪಡಿಸಿತ್ತು. ಆದರೆ ಈಗ ಒಂದು ಕ್ಯೂಬಿಕ್ ಮೀಟರ್‌ ಆಮ್ಲಜನಕದ ಬೆಲೆ 50ಕ್ಕೆ ತಲುಪಿದೆ.

click me!