ಕೆಟೋ ಡಯಟ್ ಇತ್ತೀಚೆಗೆ ಜನಪ್ರಿಯ. ಬೊಜ್ಜು ಇಳಿಸುವ ಈ ಆಹಾರ ಪದ್ಧತಿಯಿಂದ ಪುರುಷರಲ್ಲಿ ವೀರ್ಯ ವೃದ್ಧಿ ಕೂಡ ಆಗುತ್ತೆ ಅಂತ ಸಂಶೋಧನೆಗಳು ಹೇಳಿವೆ!
ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ತಿರುವವರು ಇತ್ತೀಚೆಗೆ ಕೆಟೋ ಡಯಟ್ ಫಾಲೋ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದು ಸಾಮಾನ್ಯವಾಗಿ ಬೊಜ್ಜು ಇಳಿಸುವ ಡಯಟ್ ಅಂತ್ಲೇ ಪಾಪ್ಯುಲರ್. ಆದರೆ ಇತ್ತೀಚೆಗೆ ಸಂಶೋಧನೆಯಿಂದ ಕಂಡುಬಂದ ವಿಚಾರ ಅಂದ್ರೆ ಇದು ಪುರುಷರಲ್ಲಿ ವೀರ್ಯವೃದ್ಧಿಗೂ ಕಾರಣವಾಗುತ್ತೆ ಅನ್ನುವುದು.
undefined
ಈ ಡಯಟ್‌ನ ಥಿಯರಿ ಸುಲಭವಾಗಿದೆ. ಇದರಲ್ಲಿ ಹೆಚ್ಚು ಕಾರ್ಬೊಹೈಡ್ರೇಟ್ ಸೇವಿಸುವುದಿಲ್ಲ. ಬದಲಾಗಿ ಆರೋಗ್ಯಕರ ಕೊಬ್ಬನ್ನು ಸೇವಿಸಲಾಗುತ್ತೆ. ಕಾರ್ಬೊಹೈಡ್ರೇಟ್‌ಗಳೆಂದರೆ ಅಕ್ಕಿಯಿಂದ ಮಾಡಿದ ಅನ್ನ, ಇಡ್ಲಿ, ರೈಸ್‌ಬಾತ್ ಮೊದಲಾದ ಆಹಾರ ಪದಾರ್ಥ. ಇದು ಬಲುಬೇಗ ದೇಹದಲ್ಲಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಕೆಟೋ ಡಯಟ್‌ನಲ್ಲಿ ಕೊಬ್ಬನ್ನು ಸೇವಿಸುವುದರಿಂದ, ಈ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಲು ನಮ್ಮ ಜೀರ್ಣಾಂಗವ್ಯೂಹ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಅನವಶ್ಯಕವಾಗಿ ದೇಹದಲ್ಲಿ ಕೊಬ್ಬು ಶೇಖರವಾಗುವುದಿಲ್ಲ. ಲಿವರ್‌ನಲ್ಲಿರುವ ಕೊಬ್ಬು ಕೆಟಾನ್‌ಗಳೆಂಬ ಶಕ್ತಿಕಣಗಳಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿಯೇ ಅದಕ್ಕೆ ಕೆಟೋ ಡಯಟ್ ಎಂದು ಹೆಸರು.
ಬೊಜ್ಜು ಕಡಿಮೆಯಾಗುವುದರಿಂದ, ದೇಹದಲ್ಲಿ ಲೈಂಗಿಕ ಆರೋಗ್ಯ ವರ್ಧಿಸುತ್ತದೆ. ಟೆಸ್ಟೋಟಸ್ಟಿರಾನ್, ಈಸ್ಟ್ರೋಜೆನ್ ಹಾರ್ಮೋನ್‌ಗಳ ಲೆವೆಲ್ ಹೆಚ್ಚಾಗುತ್ತದೆ. ಆನಂದವನ್ನು ಉಂಟುಮಾಡುವ ಹಾರ್ಮೋನ್‌ಗಳ ಸ್ರಾವ ಹೆಚ್ಚಾಗುತ್ತದೆ. ಹೀಗಾಗಿ ವೀರ್ಯವೃದ್ಧಿ ಆಗುವುದು ಮಾತ್ರವೇ ಅಲ್ಲ, ಲೈಂಗಿಕ ಕ್ರಿಯೆಯೂ ಹೆಚ್ಚು ಆನಂದದಾಯಕವಾಗುತ್ತದೆ ಎಂದು ಜರ್ಮನ್ ಮೆಡಿಕಲ್ ಅಸೋಸಿಯೇಶನ್‌ನ ಸಂಶೋಧನಾ ವರದಿ ತಿಳಿಸಿದೆ.
ತೂಕ ಇಳಿಸ್ಕೋಬೇಕಾ..? ನಿಮ್ಮ ತಿಂಡಿ, ಊಟದ ಸಮಯ ಹೀಗಿರಲಿ
ಇದನ್ನು ಮಾಡುವುದು ಸುಲಭ. ಕಾರ್ಬೊಹೈಡ್ರೇಟ್ ಆಹಾರ ಸೇವನೆ ಕಡಿಮೆ ಮಾಡುವುದು ಹಾಗೂ ಅದರ ಜಾಗದಲ್ಲಿ ಆರೋಗ್ಯಕರ ಕೊಬ್ಬಿನ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದು. ಸ್ಟಾಂಡರ್ಡ್ ಕೆಟೋ ಡಯಟ್‌ನಲ್ಲಿ ಎಪ್ಪತ್ತೈದು ಶೇಕಡಾ ಕೊಬ್ಬು, ಇಪ್ಪತ್ತು ಶೇಕಡಾ ಪ್ರೊಟೀನ್ ಹಾಗೂ ಐದು ಶೇಕಡ ಮಾತ್ರ ಕಾರ್ಬೊಹೈಡ್ರೇಟ್ ಇರುತ್ತವೆ. ಕೆಟೋ ಡಯಟ್‌ನಿಂದ ಲೈಂಗಿಕ ಆರೋಗ್ಯ ವೃದ್ಧಿಯಲ್ಲದೆ ಇನ್ನೂ ಹಲವು ಲಾಭಗಳಿವೆ. ಇದರಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿದ್ದರೆ ಅದು ಕಡಿಮೆಯಾಗುತ್ತದೆ. ದೇಹದ ಇನ್ಸುಲಿನ್ ಪ್ರಮಾಣವನ್ನು ಇದು ನಿಯಂತ್ರಿಸುತ್ತದೆ. ಟೈಪ್ ೨ ಡಯಾಬಿಟಿಸ್ ಇದ್ದವರು ಇದರಿಂದ ಭಾರಿ ಪ್ರಯೋಜನ ಪಡೆಯುತ್ತಾರೆ. ಹೃದಯ ಕಾಯಿಲೆಗಳಿದ್ದವರಿಗೆ ಇದರಿಂದ ಕಡಿಮೆಯಾಗುವುದು ಕಂಡುಬಂದಿದೆ. ಮೆದುಳಿನ ಆರೋಗ್ಯಕ್ಕೆ, ನರವ್ಯೂಹದ ಸ್ಪಂದನಗಳಿಗೆ ಇದು ಹೆಚ್ಚು ಒಳ್ಳೆಯದು. ಎಪಿಲೆಪ್ಸಿ, ಡಿಮೆನ್ಷಿಯಾ ಮುಂತಾದ ಮೆದುಳಿನ ಕಾಯಿಲೆಗಳು ಬಾಧಿಸುವುದಿಲ್ಲ.
ರಾತ್ರಿ ಊಟಕ್ಕೆ ಅನ್ನ ಅಥವಾ ಚಪಾತಿ, ಯಾವುದು ಒಳ್ಳೆಯದು?
ಯಾವುದನ್ನು ಕಡಿಮೆ ಮಾಡಬೇಕು?
ಕೇಕ್ ಐಸ್ಕ್ರೀಮ್, ಕ್ಯಾಂಡಿ, ಹಣ್ಣಿನ ಜ್ಯೂಸ್‌ಗಳಂಥ ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳನ್ನು ಕೈಬಿಡಿ. ಅಕ್ಕಿ, ಗೋಧಿಯ ಆಹಾರ ಪದಾರ್ಥಗಳು, ಅನ್ನ, ಚಪಾತಿ ಇವುಗಳನ್ನು ಕಡಿಮೆ ಮಾಡಿ. ಹಣ್ಣುಗಳನ್ನು ಕಡಿಮೆ ಮಾಡಿ. ಬಟಾಣಿ, ಅವರೆ ಮುಂತಾದ ಕಾಳುಗಳು ಬೇಡ. ಹೆಚ್ಚಾಗಿ ಸಂಸ್ಕರಿಸಿದ ಬೇಕರಿ ಪದಾರ್ಥಗಳು ಬೇಡವೇ ಬೇಡ. ಸಂಸ್ಕರಿತ ಅಡುಗೆ ಎಣ್ಣೆ ಬಳಸುವುದನ್ನು ನಿಲ್ಲಿಸಿ. ಆಲ್ಕೋಹಾಲ್ ಸೇವನೆಯೂ ಒಳ್ಳೆಯದಲ್ಲ.
ಅರಿಶಿನ, ಮೆಂತೆ, ವಿಟಮಿನ್ ಡಿ - ಅತಿಯಾದರೆ ಮಟಾಶ್!
ಯಾವುದನ್ನು ಸೇವಿಸಬೇಕು?
ಚಿಕನ್ ಸೇರಿದಂತೆ ಮಾಂಸದ ಕೆಲವು ವಿಧಗಳು, ಸಾಲೊಮನ್ ಮುಂತಾದ ಮೀನಿನ ಪದಾರ್ಥಗಳು, ಇಡೀ ಮೊಟ್ಟೆ ದೇಹಕ್ಕೆ ಒಳ್ಳೆಯದು. ಬಟರ್ ಮತ್ತು ಕ್ರೀಮ್ ತಗೊಳ್ಳಬಹುದು. ಬಾದಾಮಿ, ಗೋಡಂಬಿ, ಪಾಸ್ತಾ ಮುಂತಾದ ಒಣಹಣ್ಣುಗಳು ಒಳ್ಳೆಯದು. ತೆಂಗಿನೆಣ್ಣೆ, ಅವಕಾಡೊ ಆಯಿಲ್‌ನಂಥ ಹೆಚ್ಚು ಸಂಸ್ಕರಿಸದ ಎಣ್ಣೆಗಳನ್ನು ಸೇವಿಸಬಹುದು. ಕಡಿಮೆ ಕಾರ್ಬೊಹೈಡ್ರೇಟ್ ಇರುವ ಹಸಿರು ತರಕಾರಿಗಳು, ಟೊಮೆಟೋ, ಈರುಳ್ಳಿ, ಕಾಳುಮೆಣಸು ಆರೋಗ್ಯಕ್ಕೆ ತುಂಬಾ ಚೆನ್ನ. ಕಾಳುಮೆಣಸು ಸೇರಿದಂತೆ ಹೆಚ್ಚಿನ ಎಲ್ಲ ಮಸಾಲೆ ಪದಾರ್ಥಗಳನ್ನು ಬಳಸಬಹುದು.