Women Health: ಪೀರಿಯಡ್ಸ್ ಹತ್ತಿರದಲ್ಲಿ ಸೆಕ್ಸ್ ನಿರಾಸಕ್ತಿಯೇ? ಕಾರಣ ಇದಿರಬಹುದು!

By Suvarna NewsFirst Published May 30, 2023, 12:46 PM IST
Highlights

ಮಹಿಳೆಯರಲ್ಲಿ ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ಅಂದರೆ ಪಿಎಂಎಸ್ ಲಕ್ಷಣಗಳು ಇತ್ತೀಚಿಗೆ ಹೆಚ್ಚುತ್ತಿವೆ ಎನ್ನುತ್ತವೆ ಅಧ್ಯಯನಗಳು. ಇದಕ್ಕೆ ಪರಿಹಾರವೆಂದರೆ, ಚಿಕಿತ್ಸೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದೇ ಆಗಿದೆ. 
 

ಪೀರಿಯೆಡ್ಸ್ ಅಥವಾ ಮಾಸಿಕ ಋತುಸ್ರಾವ ಕಾಣಿಸಿಕೊಳ್ಳುವ ಮುನ್ನ ಮಹಿಳೆಯರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಇಂತಹ ಬದಲಾವಣೆಗಳನ್ನು ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಪ್ರಿ ಮೆನ್ಸುರೇಷನ್ ಲಕ್ಷಣಗಳೆಂದರೆ ಮನಸ್ಥಿತಿಯಲ್ಲಿ ಏರುಪೇರು, ಏನಾದರೂ ತಿನ್ನುವ ಬಯಕೆ, ಸುಸ್ತು, ಕಿರಿಕಿರಿ ಮತ್ತು ಖಿನ್ನತೆಗಳೂ ಒಳಗೊಂಡಿವೆ. ಆದರೆ, ಇವು ಚಿಕ್ಕ ವಯಸ್ಸಿನಲ್ಲಿ ಅನುಭವಕ್ಕೆ ಬರುವುದು ಕಡಿಮೆ. ಬಂದರೂ ಹೊಟ್ಟೆನೋವು, ವಾಕರಿಕೆ, ತಲೆಸುತ್ತುವುದು, ಸ್ತನಗಳಲ್ಲಿ ನೋವು ಇಂಥವು ಹೆಚ್ಚಾಗಿ ಗೋಚರಿಸುತ್ತವೆ. ವಯಸ್ಸು ಚಿಕ್ಕದಾದರೂ ಕೆಲವು ಮಹಿಳೆಯರಲ್ಲಿ ಕಂಡುಬರಬಹುದು. ಪ್ರತಿ ನಾಲ್ಕು ಮಹಿಳೆಯರ ಪೈಕಿ ಮೂವರಲ್ಲಿ ಪ್ರಿ ಮೆನ್ಸುರೇಷನ್ ಲಕ್ಷಣಗಳು ಕಂಡುಬರುತ್ತವೆ ಎಂದಿವೆ ಅಧ್ಯಯನಗಳು. ಕೆಲವರಲ್ಲಿ ಇವು ಇನ್ನಷ್ಟು ಗಾಢವಾಗಿ ಗೋಚರಿಸುತ್ತವೆ. 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಮೂಡ್ ಏರಿಳಿತವನ್ನು ಹೆಚ್ಚಾಗಿ ಗುರುತಿಸಬಹುದು. ಒಟ್ಟಿನಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಲಕ್ಷಣಗಳು ಕಾಣಿಸುವುದು ಗ್ಯಾರೆಂಟಿ. ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಯ ಮೂಲಕ ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ಅನ್ನು ನಿಭಾಯಿಸಬಹುದು. 

ಅಳಬೇಕೆಂದು (Cry) ಅನಿಸುತ್ತೆ!
ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ (Pre Menstrual Syndrome) ಲಕ್ಷಣಗಳು ಹಲವು ರೀತಿಯಿಂದ ಕೂಡಿರುತ್ತವೆ. ಭಾವನಾತ್ಮಕವಾಗಿ (Emotionally), ದೈಹಿಕವಾಗಿ (Physically) ಹಲವು ರೀತಿಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಯದಲ್ಲಿ ಹೆಚ್ಚು ಒತ್ತಡ (Stress) ವಾಗುತ್ತದೆ. ಆತಂಕ (Anxiety) ಹೆಚ್ಚುತ್ತದೆ. ಅಳಬೇಕೆಂದು ಅನಿಸುತ್ತದೆ. ಹೀಗಾಗಿ, ರಿಲ್ಯಾಕ್ಸ್ (Relax) ಮಾಡುವ ಅಗತ್ಯವಿರುತ್ತದೆ. ಆದರೆ, ಬಹಳಷ್ಟು ಮಹಿಳೆಯರಿಗೆ (Woman) ಯಾಕಾಗಿ ಒತ್ತಡವಾಗುತ್ತಿದೆ ಎನ್ನುವುದು ಅರಿವಾಗದೆ ಹಿಂಸೆ ಮಾಡಿಕೊಳ್ಳುತ್ತಾರೆ ಹಾಗೂ ಈ ಸಮಯದಲ್ಲಿ ಮನೆಯವರು, ಪತಿ, ಮಕ್ಕಳಿಂದಲೂ ಬೈಗುಳ, ದೂಷಣೆ ಎದುರಿಸುತ್ತ ಇನ್ನಷ್ಟು ಕುಗ್ಗುವುದು ಕಂಡುಬರುತ್ತದೆ. ಜತೆಗೆ, ಹಸಿವಾಗದಿರಬಹುದು ಅಥವಾ ಕರಿದ ತಿಂಡಿಗಳನ್ನು ತಿನ್ನುವ ಬಯಕೆ (Cravings) ಹೆಚ್ಚಬಹುದು. ಸೆಕ್ಸ್ ನಲ್ಲಿ ಆಸಕ್ತಿ ಇರುವುದಿಲ್ಲ. ಏಕಾಗ್ರತೆಯ (Concentration) ಕೊರತೆಯುಂಟಾಗುತ್ತದೆ. 

Lower Back Pain: ಸೊಂಟದ ನೋವು ಅಬ್ಬಬ್ಬಾ ಬೇಡ್ವೇ ಬೇಡ, ಅದ್ಯಾಕೆ ಮಹಿಳೆಯರನ್ನ ಕಾಡುತ್ತೆ?

ತಲೆನೋವು (Headache), ಸುಸ್ತು (Fatigue)
ದೇಹದ ಕೀಲುಗಳು, ಮಾಂಸಖಂಡಗಳಲ್ಲಿ ನೋವು ಕಂಡುಬರುತ್ತದೆ. ತಲೆನೋವು, ಸುಸ್ತು, ತೂಕ ಹೆಚ್ಚುವುದು, ಗ್ಯಾಸ್ಟ್ರಿಕ್, ಸ್ತನಗಳಲ್ಲಿ ನೋವು (Pain), ವಾಂತಿ, ಭೇದಿ ಉಂಟಾಗಬಹುದು. ಕೆಲವು ಮಹಿಳೆಯರಿಗೆ ಈ ಸಮಯದಲ್ಲಿ ಗಂಭೀರವಾದ ದೈಹಿಕ ನಿಶ್ಯಕ್ತಿ ಕಾಡುತ್ತದೆ. ಇದರಿಂದಾಗಿ ದೈನಂದಿನ ಜೀವನದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಎಲ್ಲ ಲಕ್ಷಣಗಳು 3-4 ದಿನಗಳಲ್ಲಿ ಇಲ್ಲವಾಗುತ್ತವೆ. 
ಕೆಲವು ಮಹಿಳೆಯರಲ್ಲಿ ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ಮಾನಸಿಕವಾಗಿ ಭಾರೀ ಸಮಸ್ಯೆ ತಂದೊಡ್ಡುತ್ತದೆ. ಇದನ್ನು ಪ್ರಿ ಮೆನ್ಸ್ಟ್ರುವಲ್ ಡಿಸ್ಫೋರಿಕ್ ಡಿಸಾರ್ಡರ್ ಎನ್ನಲಾಗುತ್ತದೆ. ಇದನ್ನು ಅನುಭವಿಸುವ ಮಹಿಳೆಯರು ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ಮೂಡ್ ನಲ್ಲಿ ಭಾರೀ ಏರಿಳಿತ, ಕೋಪ, ಆತಂಕ, ಭಾವುಕತೆ ಹೆಚ್ಚಿ ಅಳುವುದು, ಸಿಕ್ಕಾಪಟ್ಟೆ ಒತ್ತಡ, ಕಿರಿಕಿರಿಗೆ ಒಳಗಾಗಿ ಅಕ್ಷರಶಃ ಮಾನಸಿಕ ರೋಗಿಯಂತೆ ಇತರರಿಗೆ ಭಾಸವಾಗುತ್ತಾರೆ. ಮುಟ್ಟು ಸಮೀಪಿಸುತ್ತಿರುವ ಸಮಯದಲ್ಲಿ ಹೀಗಾದರೆ ಮಹಿಳೆಯರು ಎಚ್ಚೆತ್ತುಕೊಂಡು ಸರಿಯಾದ ಚಿಕಿತ್ಸೆ (Treatment) ಪಡೆದುಕೊಳ್ಳಲು ಮುಂದಾಗಬೇಕು. ಒಂದೊಮ್ಮೆ ಅವರ ಅರಿವಿಗೆ ಬಾರದಿದ್ದರೂ ಮನೆಯಲ್ಲಿರುವ ತಿಳಿದವರು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯ. 

ಯಾವ ಬದಲಾವಣೆ ಅಗತ್ಯ?
ವ್ಯಾಯಾಮ (Exercise) , ಧ್ಯಾನ, ಪ್ರಾಣಾಯಾಮ ಮಾಡಬೇಕು. ತರಕಾರಿ, ಹಣ್ಣು, ಧಾನ್ಯಗಳ ಸೇವನೆ ಮಾಡಬೇಕು. ಕರಿದ ತಿನಿಸು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸಬೇಕು. ಇಷ್ಟೆಲ್ಲ ಬದಲಾವಣೆ (Changes) ಮಾಡಿಕೊಂಡ ಬಳಿಕವೂ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಕಾಣುವುದು ಅಗತ್ಯ.

ಉದ್ಯೋಗಸ್ಥ ಮಹಿಳೆಯರಿಗೆ ಪಿರಿಯಡ್ಸ್ ಲೀವ್ ನೀಡಬೇಕೆ? ಬೇಡವೇ? ಏನಂತೀರಿ

ಯಾಕೆ ಹೀಗೆ?
ಹಾರ್ಮೋನ್ (Hormones) ಸ್ರವಿಕೆಯಲ್ಲಾಗುವ ಬದಲಾವಣೆಯಿಂದ ಮಹಿಳೆಯರ ದೇಹದಲ್ಲಿ ಪ್ರತಿತಿಂಗಳು ಇಷ್ಟೆಲ್ಲ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಯದಲ್ಲಿ ಮಿದುಳಿನಲ್ಲಿ ರಾಸಾಯನಿಕಗಳ ಬದಲಾವಣೆಯೂ ಆಗುತ್ತದೆ. ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಕುಗ್ಗಿ ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ಲಕ್ಷಣಗಳು ಹೆಚ್ಚುವಂತಾಗುತ್ತದೆ. 

click me!