Health Tips: ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರಲು ಜೀರಿಗೆಯನ್ನು ತಿಂದರೆ ಸಾಕು

By Suvarna News  |  First Published Dec 25, 2021, 11:23 AM IST

ಕ್ಯುಮಿನ್ (Cumin) ಅಥವಾ ಜೀರಾ ಎಂದು ಕರೆಸಿಕೊಳ್ಳುವ ಜೀರಿಗೆ ಆರೋಗ್ಯ (Health)ಕ್ಕೆ ಅತ್ಯುತ್ತಮವಾದ ಹಲವು ಅಂಶಗಳನ್ನು ಹೊಂದಿದೆ. ನಿಯಮಿತವಾಗಿ ಜೀರಿಗೆಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ (Cholesterol) ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಅನ್ನೋದು ನಿಮಗೆ ಗೊತ್ತಾ..?


ಭಾರತದ ಮಸಾಲೆಗಳು ಸ್ವಾದದಲ್ಲಿ ಮಾತ್ರವಲ್ಲ ಆರೋಗ್ಯಕರ ಗುಣಗಳಲ್ಲೂ ಅತ್ಯುತ್ತಮವಾಗಿದೆ. ಲವಂಗ, ಅರಿಶಿನ, ಕರಿಮೆಣಸು ಎಲ್ಲವೂ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿಗೆ. ಅದೇ ರೀತಿ ಕ್ಯುಮಿನ್ ಅಥವಾ ಜೀರಾ ಎಂದು ಕರೆಸಿಕೊಳ್ಳುವ ಜೀರಿಗೆಯಲ್ಲಿಯೂ ಹಲವು ಹೆಲ್ತೀ ಬೆನಿಫಿಟ್ಸ್ ಇದೆ. ಕಂದುಬಣ್ಣದಲ್ಲಿರುವ ಈ ಕಾಳುಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಪ್ರಯೋಜನದಲ್ಲಿ ಬಹಳ ಹಿರಿದಾಗಿವೆ. ಜೀರಿಗೆಯನ್ನು ಯಥಾವತ್ತಾಗಿ ಕಾಳುಗಳ ರೂಪದಲ್ಲಿ ಅಥವಾ ಪುಡಿ ಮಾಡಿ ಬಳಸಿಕೊಳ್ಳಲಾಗುತ್ತದೆ.

ಜೀರಿಗೆ, ಕ್ಯುಮಿನಮ್ ಸಿಮಿನಮ್ ಎಂಬ ಸಸ್ಯದಿಂದ ಬರುತ್ತದೆ. ಜೀರಿಗೆ ಯಾವುದೇ ಪಾಕ ವಿಧಾನಕ್ಕೂ ರುಚಿಕರವಾದ ಮಸಾಲೆಯಾಗಿದೆ. ಜೀರಿಗೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಇದು ದೇಹವನ್ನು ತಂಪಾಗಿಡುತ್ತದೆ. ಜೀರಿಗೆಯು ಜೀರ್ಣಕ್ರಿಯೆಗೂ ಅತ್ಯುತ್ತಮವಾಗಿರುವ ಕಾರಣ ಭಾರತೀಯ ಶೈಲಿಯ ಹೆಚ್ಚಿನ ಅಡುಗೆಗಳಲ್ಲೂ ಜೀರಿಗೆಯನ್ನು ಬಳಸಿಕೊಳ್ಳುತ್ತಾರೆ. 

Tap to resize

Latest Videos

ಜೀರಿಗೆಯ ಪ್ರಯೋಜನಗಳು

ಜೀರಿಗೆ (Cumin)ಯ ಆರೋಗ್ಯಕರ ಪ್ರಯೋಜನಗಳಲ್ಲಿ ಮುಖ್ಯವಾದುದು ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಆಹಾರಕ್ರಮದಲ್ಲಿ ಜೀರಿಗೆ ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುವುದರಿಂದ ರಕ್ತದ ಸಕ್ಕರೆ (Sugar)ಯ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಇಲ್ಲವೇ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

undefined

Low Blood Sugar Level: ಮೂತ್ರಪಿಂಡಕ್ಕೆ ಹಾನಿ: ಜೀರಿಗೆಯಿಂದ ಅಡ್ಡ ಪರಿಣಾಮಗಳು ಇವೆ

ಕಫಗಟ್ಟುವುದು,ಶೀತದ ವಿರುದ್ಧವೂ ಜೀರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೀರಿಗೆಯಲ್ಲಿರುವ ವಿಟಮಿನ್ (Vitamin) ಸಿ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ವೈರಲ್ ಸೋಂಕಿನಿಂದ ಉಂಟಾಗುವ ಶೀತವನ್ನು ಸಹ ಶೀಘ್ರ ಶಮನಗೊಳಿಸುತ್ತದೆ. ಅಸ್ತಮಾ ಮತ್ತು ಉಬ್ಬಸ ರೋಗಕ್ಕೂ ಜೀರಿಗೆ ಸೇವನೆ ಉತ್ತಮವಾಗಿದೆ. ಉಬ್ಬಸಕ್ಕೆ ಕಾರಣವಾಗುವ ಉರಿಯೂತ ಜೀರಿಗೆ ಕಾಳುಗಳ ಸೇವನೆಯಿಂದ ಕಡಿಮೆಯಾಗುತ್ತದೆ. ಉಸಿರಾಟದ ಸಮಸ್ಯೆಯ ನಿವಾರಣೆಗೂ ಜೀರಿಗೆ ಕಾಳುಗಳ ಸೇವನೆ ಉತ್ತಮವಾಗಿದೆ. ಜೀರಿಗೆಯಲ್ಲಿ ಬ್ಯಾಕ್ಟಿರೀಯಾ (Bacteria) ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣ ಇರುವುದರಿಂದ ಇದು ಉಸಿರಾಟದ ಸಮಸ್ಯೆಗೆ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ.

ಜೀರಿಗೆ ಕಾಳುಗಳಲ್ಲಿ ಕಬ್ಬಿಣಾಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಅನಿಮೀಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವವರು ಜೀರಿಗೆ ಕಾಳುಗಳನ್ನು ಆಗಾಗ ಸೇವಿಸುವ ಅಭ್ಯಾಸ ಒಳ್ಳೆಯದು. ಮಾತ್ರವಲ್ಲ ಜೀರಿಗೆ ಕಾಳುಗಳ ಸೇವನೆ ದೇಹದ ರಕ್ತ (Blood)ದ ಶುದ್ಧೀಕರಣದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಹಾರಕ್ರಮದಲ್ಲಿ ಪುಡಿಯ ರೂಪದಲ್ಲಿ ಜೀರಿಗೆಯನ್ನು ಬಳಸುವುದರಿಂದ ರಕ್ತದ ಸ್ವಾಸ್ಥ್ಯ ಸಮತೋಲನದಲ್ಲಿರುತ್ತದೆ. 

ತೂಕ ಇಳಿಸಲು ಜೀರಿಗೆ ನೀರು: ಕುಡಿಯೋಕೆ ಈ ಟೈಂ ಬೆಸ್ಟ್

ಅನಿಯಮಿತವಾದ ಋತುಚಕ್ರದ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ (Woman)ಯರು ಜೀರಿಗೆ ಸೇವಿಸುವುದರಿಂದ ಕಾಲ ಕ್ರಮೇಣ ಈ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ. ಮೂರು ತಿಂಗಳ ಕಾಲ ದಿನಕ್ಕೆ 3 ಗ್ರಾಂ ಜೀರಿಗೆ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಜೀರಿಗೆಯಲ್ಲಿರುವ  ಅಂಶ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹೃದ್ರೋಗ ಮತ್ತು ಇತರ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೌಡರ್ ಜೀರಿಗೆಯನ್ನು ಬಳಸುವ ಬದಲು ಜೀರಿಗೆ ಕಾಳುಗಳನ್ನು ಬಳಸುವುದು ಉತ್ತಮ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಜೀರಿಗೆ ಕಾಳುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಬಿ, ವಿಟಮಿನ್ ಇ, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಅಂಶಗಳು ದೇಹಕ್ಕೆ ಲಭಿಸುತ್ತದೆ. ಜೀರಿಗೆಯನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಸಂಗ್ರಹಿಸುವುದು ಅಗತ್ಯ. 

ಎಷ್ಟು ಪ್ರಮಾಣದಲ್ಲಿ ಜೀರಿಗೆಯನ್ನು ಸೇವಿಸಬೇಕು?

ಪಾಕವಿಧಾನಗಳಲ್ಲಿ ಯಾವುದೇ ಪ್ರಮಾಣದ ಜೀರಿಗೆಯನ್ನು ಸೇರಿಸುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಜೀರಿಗೆ ಪುಡಿ ಮಾಡಿ ಬಳಸುವಾಗ ಮಾತ್ರ ಕಡಿಮೆ ಪ್ರಮಾಣದ ಜೀರಿಗೆಯ ಪುಡಿಯನ್ನು ಬಳಸುವುದು ಉತ್ತಮ. ಜೀರಾ ನೀರು (Water) ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಜೀರಿಗೆಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ತೂಕ (Weight)ಇಳಿಸಲು ಸಹ ಜೀರಿಗೆ ನೀರಿನ ಸೇವನೆ ಉತ್ತಮವಾಗಿದೆ.

click me!