ಹಬ್ಬ ಬಂತೆಂದ್ರೆ ಖುಷಿ ಹೆಚ್ಚಾಗುವ ಜೊತೆ ಬಾಯಿ ಚಪಲ ಕೂಡ ಹೆಚ್ಚಾಗುತ್ತದೆ. ಯರ್ರಾಬಿರ್ರಿ ತಿಂದಿರ್ತೇವೆ. ಪಾರ್ಟಿ ಮೂಡ್ ನಲ್ಲಿ ಎಲ್ಲ ರೀತಿಯ ಡ್ರಿಂಕ್ಸ್ ಸೇವನೆ ಮಾಡಿರ್ತೇವೆ. ಆ ನಂತ್ರ ಒಂದೊಂದೆ ಸಮಸ್ಯೆ ಶುರುವಾಗುತ್ತದೆ. ಆದ್ಮೇಲೆ ಅನುಭವಿಸುವ ಬದಲು ಮೊದಲೇ ಎಚ್ಚರಿಕೆಯಿಂದಿದ್ದರೆ ಒಳ್ಳೆಯದು.
ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೀಪಾವಳಿ ಮುಗಿಯಲು ಇನ್ನೊಂದು ದಿನ ಬಾಕಿಯಿದೆ. ದೀಪಾವಳಿ ಮುಗಿದು ಒಂದು ವಾರವಾದ್ರೂ ದೀಪಾವಳಿ ಸಡಗರವನ್ನು ನಾವು ನೋಡಬಹುದು. ದೀಪಾವಳಿ ಸಮಯದಲ್ಲಿ ಅನೇಕ ಪಾರ್ಟಿಗಳು ನಡೆಯುತ್ತವೆ. ಹಬ್ಬದ ಖುಷಿಯಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದ್ರಿಂದಾಗಿ ಹಬ್ಬ ಮುಗಿದ್ಮೇಲೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಯಿಂದ ಹಿಡಿದು, ನೆಗಡಿ, ಜ್ವರದವರೆಗೆ ಕೆಲ ಖಾಯಿಲೆ ನಮ್ಮನ್ನು ಕಾಡುತ್ತದೆ. ಮಲಬದ್ಧತೆ, ಹೊಟ್ಟೆ ನೋವು ಮತ್ತು ಹೊಟ್ಟೆ ಉಬ್ಬುವುದು ಸಾಮಾನ್ಯವಾಗಿದೆ. ದೀಪಾವಳಿ ನಂತ್ರವೂ ನಾವು ಆರೋಗ್ಯವಾಗಿರಬೇಕು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ದೀಪಾವಳಿ (Diwali) ನಂತ್ರ ಆರೋಗ್ಯ (Health) ಸರಿಯಾಗಿರ್ಬೇಕೆಂದ್ರೆ ಹೀಗೆ ಮಾಡಿ :
undefined
ನಿದ್ರೆ (Sleep) ಯಲ್ಲಿ ಯಾವುದೇ ರಾಜಿ ಬೇಡ : ನಿದ್ರೆ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ. ಸಾಮಾನ್ಯವಾಗಿ ದೀಪವಾಳಿ ಸಂದರ್ಭದಲ್ಲಿ ಪೂಜೆ, ಸಂಬಂಧಿಕರು ಮನೆಗೆ ಬರುವುದು, ಸಂಬಂಧಿಕರ ಮನೆಗೆ ಹೋಗುವುದು ಸಾಮಾನ್ಯ. ಹಾಗೆಯೇ ಸಾಕಷ್ಟು ಪಾರ್ಟಿಗಳಿಗೆ ಜನರು ಹೋಗ್ತಾರೆ. ಇದ್ರಿಂದಾಗಿ ದಿನದಲ್ಲಿ ಬರೀ 2- 3 ಗಂಟೆ ನಿದ್ರೆ ಮಾಡ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕೆಲ ಸಮಸ್ಯೆಗೂ ಇದು ಕಾರಣವಾಗುತ್ತದೆ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಕೂಡ ನೀವು ನಿದ್ರೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ. ಸಮಯ ಸಿಕ್ಕಾಗ ನಿದ್ರೆ ಮಾಡೋದನ್ನು ಮರೆಯಬೇಡಿ.
ಸಾಕಷ್ಟು ನೀರು ಕುಡಿಯಿರಿ (Have Plenty of water): ಹಬ್ಬ ಅಂದ್ಮೇಲೆ ಎಣ್ಣೆ ಪದಾರ್ಥ, ಮಸಾಲೆ ಪದಾರ್ಥ ಹಾಗೂ ಕಾಕ್ಟೆಲ್ ಹಾಗೂ ಕೋಲ್ಡ್ ಡ್ರಿಂಕ್ಸ್ ಸೇವನೆ ಸಾಮಾನ್ಯ. ಅತಿಯಾಗಿ ಈ ಆಹಾರ ಸೇವನೆ ಮಾಡೋದ್ರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾದಂತೆ ಬ್ಲೋಟಿಂಗ್ ಸಮಸ್ಯೆ ಶುರುವಾಗುತ್ತದೆ. ಹಬ್ಬದ ಕೆಲಸ ಎಷ್ಟೇ ಇರಲಿ, ಎಣ್ಣೆಯುಕ್ತ ಆಹಾರವನ್ನು (Fried Items) ಎಷ್ಟೇ ಸೇವನೆ ಮಾಡಿ ಆದ್ರೆ ನೀರು ಕುಡಿಯೋದನ್ನು ಮರೆಯಬೇಡಿ. ದಿನಕ್ಕೆ 2 -3 ಲೀಟರ್ ನೀರು ಸೇವನೆ ಮಾಡಿ.
WHO : 2023ರ ವೇಳೆಗೆ ಹೆಚ್ಚಾಗಲಿದೆ ಈ ರೋಗ, ಈಗ್ಲೇ ಎಚ್ಚೆತ್ತುಕೊಂಡ್ರೆ ಒಳಿತು
ಹಬ್ಬದ ಸಂದರ್ಭದಲ್ಲಿ ಹಣ್ಣು ಸೇವನೆ : ಅನೇಕರಿಗೆ ನೀರು ಕುಡಿಯೋಕೆ ಕಷ್ಟವಾಗುತ್ತದೆ. ಅಂಥವರು ಹಣ್ಣನ್ನು ಸೇವನೆ ಮಾಡಬಹುದು. ಸಾಕಷ್ಟು ನೀರಿನಾಂಶವಿರುವ ಹಣ್ಣುಗಳನ್ನು ನೀವು ಸೇವನೆ ಮಾಡಬಹುದು. ಇಲ್ಲವೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ನೀವು ಕರ್ಬೂಜ, ಅನಾನಸ್, ಕಲ್ಲಂಗಡಿ, ನಿಂಬೆ, ಕಿತ್ತಳೆ ಮತ್ತು ದ್ರಾಕ್ಷಿಯಂತ ನೀರಿನಾಂಶವಿರುವ ಹಣ್ಣುಗಳನ್ನು ತಿನ್ನಬಹುದು. ಈ ಹಣ್ಣುಗಳು ಬ್ಲೋಟಿಂಗ್ ಸಮಸ್ಯೆ ಕಡಿಮೆ ಮಾಡುವ ಜೊತೆಗೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚು ಮಾಡುತ್ತದೆ. ಹಣ್ಣಿನಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಹಾಗೂ ಪೌಷ್ಟಿಕಾಂಶ ಸಿಗುತ್ತದೆ.
ಡಯಟ್ ಮೇಲೆ ಗಮನವಿರಲಿ : ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ಬಹಳ ಮುಖ್ಯ. ಹಾಗಾಗಿ ಜೀರ್ಣಕ್ರಿಯೆ ಸುಧಾರಿಸುವ ಹಾಗೂ ಕರುಳಿನ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ನೀವು ಸೇವನೆ ಮಾಡಬೇಕು. ಮೊಸರು, ಮಜ್ಜಿಗೆ, ಸೂಪ್ ಸೇರಿದಂತೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಆಹಾರ ತಿನ್ನಿ.
ಆಲ್ಕೊಹಾಲ್ (Alchohol) ನಿಂದ ದೂರವಿರಿ : ದೀಪಾವಳಿ ಅಂದ್ಮೇಲೆ ಪಾರ್ಟಿ ಸಾಮಾನ್ಯ. ಪ್ರತಿ ದಿನ ಪಾರ್ಟಿಗೆ ಹೋಗುವವರು ಆಲ್ಕೋಹಾಲ್ ಸೇವನೆ ಮಾಡದಿರುವುದು ಒಳ್ಳೆಯದು. ಆಲ್ಕೊಹಾಲ್ ನಲ್ಲಿ ಹೊಟ್ಟೆ ಉಬ್ಬುವಿಕೆಯನ್ನು ಉಂಟುಮಾಡುವ ಉತ್ಪನ್ನಗಳಿರುತ್ತವೆ. ಇದನ್ನು ಹೆಚ್ಚು ಕುಡಿಯುವುದರಿಂದ ಹೊಟ್ಟೆ ಉಬ್ಬುವ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.
Bone Health: ಮೂಳೆಗಳ ವೀಕ್ ನೆಸ್ಸಾ? ಕೆಲವು ಲಕ್ಷಣಗಳಿಂದ ತಿಳ್ಕೊಳಿ
ಕೆಫೀನ್ ಸೇವನೆ ಕಡಿಮೆ ಮಾಡಿ : ಹಬ್ಬದ ಸಮಯದಲ್ಲಿ ಮನೆಯಲ್ಲಿರುವ ಜನರು ದಿನಕ್ಕೆ ಮೂರ್ನಾಲ್ಕು ಬಾರಿ ಕಾಫಿ ಸೇವನೆ ಮಾಡ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವನೆಯಿಂದ ನಿದ್ರೆ ಸಮಸ್ಯೆ ನಿಮ್ಮನ್ನು ಕಾಡುತ್ತದೆ.