
ಹಬ್ಬ ಅಂದ್ರೆ ಸಾಕು ಎಲ್ಲಿಲ್ಲದ ಸಂಭ್ರಮ. ಜನರು ಮನೆಯನ್ನು ಕ್ಲೀನ್ ಮಾಡಿ, ಹಬ್ಬದಡುಗೆ ಮಾಡಿ, ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಮನೆ ತುಂಬಾ ದೀಪ ಹಚ್ಚಿಟ್ಟು ಬೆಳಕನ್ನು ಪಸರಿಸುತ್ತಾರೆ. ಆದ್ರೆ ಇನ್ನೂ ಕೆಲವೊಬ್ಬರು ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸೋಕೆ ಇಷ್ಟಪಡುತ್ತಾರೆ. ಪಟಾಕಿಗಳು ವರ್ಣರಂಜಿತವಾಗಿ ಕಾಣುತ್ತವೆ. ಹೀಗಾಗಿಯೇ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಆದರೆ ಇದು ಅವರ ಆರೋಗ್ಯಕ್ಕೆ ಪ್ರಕೃತಿ ಮತ್ತು ಪ್ರಾಣಿಗಳಿಗೂ ಎಷ್ಟು ಹಾನಿಕಾರಕವಾಗಿದೆ ಅನ್ನೋದು ನಿಮಗೆ ತಿಳಿದಿದೆಯಾ ?
ಪಟಾಕಿ ಸಿಡಿಸೋದ್ರಿಂದ ಆಗುವ ತೊಂದರೆಗಳೇನು ?
1. ವಾಯು ಮಾಲಿನ್ಯ: ಪಟಾಕಿ ಸಿಡಿಸುವುದರಿಂದ ಸಾಕಷ್ಟು ವಾಯು ಮಾಲಿನ್ಯ (Air pollution)ವಾಗುತ್ತದೆ. ದೀಪಾವಳಿಯ ಮರುದಿನ ನೀವು ಮನೆಯಿಂದ ಹೊರಗಡೆ ದಟ್ಟವಾದ ಹೊಗೆಯನ್ನು ನೋಡಿರಬಹುದು. ಇಂಥಾ ವಾಯುಮಾಲಿನ್ಯಕ್ಕೆ ಪಟಾಕಿಯೇ ಕಾರಣ. ಪಟಾಕಿ (Crackers)ಗಳನ್ನು ಸುಡುವಾಗ, ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸಲ್ಫರ್ ಆಕ್ಸೈಡ್, ಟ್ರೈಆಕ್ಸಿಜನ್ ಮತ್ತು ಕಪ್ಪು ಇಂಗಾಲದಂತಹ ವಿಷಕಾರಿ ವಾಯು ಮಾಲಿನ್ಯಕಾರಕಗಳನ್ನು ಬಿಡುಗಡೆಯಾಗುತ್ತೆ. ಇವೆಲ್ಲಾ ದಟ್ಟವಾದ ಹೊಗೆಯ ಉತ್ಪಾದನೆಗೆ ಕಾರಣವಾಗುತ್ತವೆ. ಇದು ಕಣ್ಣು, ಗಂಟಲು, ಶ್ವಾಸಕೋಶ (Lungs), ಹೃದಯ (Heart) ಮತ್ತು ಚರ್ಮದ (Skin) ಮೇಲೆ ಪರಿಣಾಮ ಬೀರುತ್ತದೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಪಲ್ಮನಾಲಜಿ ವಿಭಾಗದ ಸಹಾಯಕ ಸಲಹೆಗಾರ ಡಾ.ಮಿತಾಲಿ ಅಗರವಾಲ್ ಹೇಳುತ್ತಾರೆ.
Deepavali ನಂತ್ರ ಆರೋಗ್ಯ ರಕ್ಷಣೆ ಹೀಗಿರಲಿ, ಅಸ್ತಮಾ ಇರೋರಿಗೆ ಹೆಚ್ಚು ಕಾಳಜಿ ಅಗತ್ಯ
2. ಶಬ್ದ ಮಾಲಿನ್ಯ: ಪಟಾಕಿಗಳ ಜೋರಾಗಿ ಸಿಡಿಯುವ ಶಬ್ದಗಳು ಶಬ್ದ ಮಾಲಿನ್ಯಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಇದು ಯುವಕರ ಮೇಲೆ ಹೆಚ್ಚು ಪರಿಣಾಮ ಬೀರದಿರಬಹುದು, ಆದರೆ ಇದು ಹಿರಿಯರು ಮತ್ತು ಚಿಕ್ಕ ಮಕ್ಕಳ ಆರೋಗ್ಯದ (Health) ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಹಿರಿಯರು ಮತ್ತು ಮಕ್ಕಳು ತುಂಬಾ ಸೂಕ್ಷ್ಮವಾದ ಶ್ರವಣವನ್ನು ಹೊಂದಿರುತ್ತಾರೆ. ಹೀಗಾಗಿಯೇ ಇವರು ದೊಡ್ಡ ಶಬ್ದಗಳಿಂದ ನಕಾರಾತ್ಮಕವಾಗಿ ಪ್ರಭಾವಿತರಾಗುತ್ತಾರೆ ಎಂದು ತಿಳಿದುಬಂದಿದೆ. ಅಸ್ವಸ್ಥತೆಯ ಹೊರತಾಗಿ, ಪಟಾಕಿಗಳ ಶಬ್ದದಿಂದ ಜನರು ತಮ್ಮ ಶ್ರವಣ ಶಕ್ತಿಯನ್ನೂ ಕಳೆದುಕೊಂಡಿರುವ ಅದೆಷ್ಟೋ ಪ್ರಕರಣಗಳಿವೆ.
3. ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ: ಪಟಾಕಿ ಸಿಡಿಸುವುದರಿಂದ ಧೂಳಿನ ಸಾಂದ್ರತೆಯು ಹೆಚ್ಚಾಗುತ್ತದೆ. ಇದು ಆಸ್ತಮಾ ಮತ್ತು ಅಲರ್ಜಿಕ್ ಬ್ರಾಂಕೈಟಿಸ್ ಇತಿಹಾಸ ಹೊಂದಿರುವವರ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಪಟಾಕಿಯಿಂದ ಬಿಡುಗಡೆಯಾಗುವ ವಾಯು ಮಾಲಿನ್ಯಕಾರಕಗಳು ದೀರ್ಘಕಾಲದ ಉಸಿರಾಟದ ಕಾಯಿಲೆಗಳನ್ನು (Disease) ಪ್ರಚೋದಿಸುತ್ತದೆ. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗುವ ದರಗಳು ಮತ್ತು ಔಷಧಿಗಳ ಬಳಕೆಯನ್ನು ಹೆಚ್ಚಿಸುತ್ತದೆ. ಬಿಡುಗಡೆಯಾದ ವಿಷಕಾರಿ ಅನಿಲಗಳು ಸಂಪೂರ್ಣವಾಗಿ ಹಿಂದೆ ಆರೋಗ್ಯವಂತ ಜನರಲ್ಲಿ ತೀವ್ರವಾದ ಪ್ರತಿಕ್ರಿಯಾತ್ಮಕ ವಾಯುಮಾರ್ಗದ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು.
Diwali 2022: ಬೇಕಾಬಿಟ್ಟಿ ತಿಂದು ಆರೋಗ್ಯ ಕೆಡ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
4. ಕ್ಯಾನ್ಸರ್ ಗೆ ಕಾರಣವಾಗಬಹುದು: ನಂಬಲು ತುಸು ಕಷ್ಟವಾದರೂ ಇದು ನಿಜ. ಪಟಾಕಿಯಲ್ಲಿರುವ ರಾಸಾಯನಿಕ (Chemical) ಅಂಶ ಕೆಲವು ಕ್ಯಾನ್ಸರ್‌ಗಳಿಗೂ ಸಹ ಕಾರಣವಾಗಬಹುದು. ಪಟಾಕಿಗಳನ್ನು ತಯಾರಿಸಿದಾಗ ಅವುಗಳ ಸಿಡಿತದ ಮೇಲೆ ಬಣ್ಣಗಳನ್ನು ಸೃಷ್ಟಿಸಲು ವಿಕಿರಣಶೀಲ ಮತ್ತು ವಿಷಕಾರಿ ವಸ್ತುಗಳನ್ನು ಸೇರಿಸಲಾಗುತ್ತದೆ. ಈ ವಸ್ತುಗಳು ಗಾಳಿಯನ್ನು ಕಲುಷಿತಗೊಳಿಸಿದಾಗ ಜನರಿಗೆ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
5. ಸಾಕುಪ್ರಾಣಿಗಳಿಗೆ ಅನಾನುಕೂಲ: ಜೋರಾಗಿ ಪಟಾಕಿ ಸಿಡಿಸುವುದರಿಂದ ಸಾಕು ಪ್ರಾಣಿಗಳಿಗೆ (Pets) ವಿಪರೀತ ಒತ್ತಡ, ಭಯ ಮತ್ತು ಆತಂಕ ಉಂಟಾಗುತ್ತದೆ. ಮಾತ್ರವಲ್ಲ ಪ್ರಾಣಿಗಳು ಪಟಾಕಿಗಳಲ್ಲಿನ ರಾಸಾಯನಿಕಗಳಿಗೆ ಕೆಲವು ವಿಪರೀತ ಪ್ರತಿಕ್ರಿಯೆಗಳನ್ನು ಅನುಭವಿಸುತ್ತಾರೆ. ಪಟಾಕಿಗಳಿಂದ ಗಾಳಿಯಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ಪ್ರಾಣಿಗಳು ಮತ್ತು ಪಕ್ಷಿಗಳು ಸುಡುವ ಸಂವೇದನೆಯನ್ನು ಅನುಭವಿಸಲು ಕಾರಣವಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಇದು ಕೆಲವು ಗಾಯಗಳಿಗೆ ಕಾರಣವಾಗುತ್ತದೆ.
ಹೀಗಾಗಿ ಪಟಾಕಿಗಳ ಬಳಕೆಯನ್ನು ನಿಲ್ಲಿಸಿ. ಈ ಮೂಲಕ ನೀವು ಕೇವಲ ನಿಮ್ಮ ಬಗ್ಗೆ, ನಿಮ್ಮ ಕುಟುಂಬದ ಬಗ್ಗೆ ಮಾತ್ರ ಕಾಳಜಿ ವಹಿಸುವುದಿಲ್ಲ. ಪರಿಸರ, ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು, ಮೂಕಪ್ರಾಣಿಗಳಿಗೂ ಸಹ ನೆಮ್ಮದಿ ನೀಡುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.