Health Tips : ತೂಕ ಇಳಿಸ್ಬೇಕಾ? ಹಾಗಾದ್ರೆ ಪ್ಲ್ಯಾಸ್ಟಿಕ್‌ನಿಂದ ದೂರವಿರಿ!

By Suvarna News  |  First Published Feb 5, 2022, 3:23 PM IST

ಪ್ಲಾಸ್ಟಿಕ್ ಪ್ಲೇಟ್, ಲೋಟ ಹೀಗೆ ಪ್ಲಾಸ್ಟಿಕ್ ವಸ್ತುಗಳನ್ನು ನೋಡ್ತಿದ್ದಂತೆ ಅನೇಕರು ಆಕರ್ಷಿತರಾಗ್ತಾರೆ. ಬಣ್ಣ ಬಣ್ಣದ, ಡಿಸೈನ್ ಡಿಸೈನ್ ವಸ್ತುಗಳು ಗಮನ ಸೆಳೆಯುತ್ತವೆ. ಆದ್ರೆ ಈ ಪ್ಲಾಸ್ಟಿಕ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತು. ಈಗ ಅಧ್ಯಯನವೊಂದು ಹೊಸ ವಿಷ್ಯ ಹೇಳಿದೆ.
 


ಸ್ಥೂಲಕಾಯ(Obesity)ತೆ ಹೆಚ್ಚುತ್ತಿರುವ ಗಂಭೀರ ಆರೋಗ್ಯ (Health )ಅಪಾಯಗಳಲ್ಲಿ ಒಂದಾಗಿದೆ. ಸ್ಥೂಲಕಾಯ ಮಧುಮೇಹ, ಹೃದ್ರೋಗ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ತ್ವರಿತವಾಗಿ ಹೆಚ್ಚಿಸುತ್ತಿದೆ ಎಂದು ಅಧ್ಯಯನಗಳು ಹೇಳ್ತಿವೆ. ತೂಕ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ನಾವು ಅದರ ನಿಯಂತ್ರಣಕ್ಕೆ ಸತತ ಪ್ರಯತ್ನ ನಡೆಸ್ತೇವೆ. ವ್ಯಾಯಾಮ,ಡಯಟ್ ಎಲ್ಲವನ್ನೂ ಮಾಡ್ತೆವೆ. ಆದ್ರೆ ತೂಕ ನಿಯಂತ್ರಣಕ್ಕೆ ಇಷ್ಟು ಮಾಡಿದ್ರೆ ಸಾಲದು. ಪರಿಸರ ರಕ್ಷಣೆ ಕೂಡ ನಮ್ಮ ತೂಕ ಇಳಿಕೆಗೆ ನೆರವಾಗಬಹುದು. ಕಳೆದ ದಶಕದಲ್ಲಿ ಸ್ಥೂಲಕಾಯದ ಪ್ರಕರಣಗಳು ಜಾಗತಿಕವಾಗಿ ಬಹಳ ವೇಗವಾಗಿ ಹೆಚ್ಚುತ್ತಿವೆ. ಆರೋಗ್ಯ ತಜ್ಞರ ಪ್ರಕಾರ, ಜೀವನಶೈಲಿ ಮತ್ತು ಆಹಾರದ ಅಡಚಣೆಗಳು ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಇತ್ತೀಚಿನ ಅಧ್ಯಯನವೊಂದರಲ್ಲಿ  ವಿಜ್ಞಾನಿಗಳು ಮಹತ್ವದ ವಿಷ್ಯ ಹೇಳಿದ್ದಾರೆ.  ಹೆಚ್ಚುತ್ತಿರುವ ಪ್ಲಾಸ್ಟಿಕ್ (Plastic )ವಸ್ತುಗಳ ಬಳಕೆ ಕೂಡ ಬೊಜ್ಜು ಹೆಚ್ಚಾಗಲು ಕಾರಣವೆಂದು ಅವರು ಹೇಳಿದ್ದಾರೆ. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ವಸ್ತುಗಳಲ್ಲಿರುವ ರಾಸಾಯನಿಕಗಳು ಕಾಲಕ್ರಮೇಣ ನಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇದ್ರಿಂದ ನಾವು ದಪ್ಪಗಾಗುವುದು ಮಾತ್ರವಲ್ಲ, ಇದು ಇತರ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ಈ ಅಧ್ಯಯನದ ಪ್ರಮುಖ ಅಂಶಗಳನ್ನು ನಾವು ತಿಳಿದುಕೊಳ್ಳೋಣ. 

ಸಂಶೋಧನೆಯ ಸಮಯದಲ್ಲಿ, ವಿಜ್ಞಾನಿಗಳು ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ವಸ್ತುಗಳು ಅನೇಕ ರೀತಿಯ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ ಎಂದು ಕಂಡುಹಿಡಿದಿದ್ದಾಎ. ಅವುಗಳಲ್ಲಿ ಹಲವು ನಮಗೆ ತಿಳಿದಿರುವುದಿಲ್ಲ. ಇಲಿಗಳ ಮೇಲೆ ಅಧ್ಯಯನ ನಡೆದಿದೆ. ಅಧ್ಯಯನದಲ್ಲಿ ವಿಜ್ಞಾನಿಗಳು ಪರಿಸರದೊಂದಿಗೆ ಸಂಪರ್ಕಕ್ಕೆ ಬರುವ ಮತ್ತು ಕೊಬ್ಬಿನ ಕೋಶಗಳನ್ನು ಹೆಚ್ಚಿಸಲು ಪ್ರಾರಂಭಿಸುವ ಅನೇಕ ರಾಸಾಯನಿಕಗಳು ಇವೆ ಎಂದು ಕಂಡುಹಿಡಿದಿದ್ದಾರೆ. ಇದಲ್ಲದೆ, ಈ ಕೆಲವು ರಾಸಾಯನಿಕಗಳು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು, ಇದು ಸ್ಥೂಲಕಾಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  

Tap to resize

Latest Videos

undefined

ಪ್ಲಾಸ್ಟಿಕ್ ವಸ್ತುವಿನಲ್ಲಿ ಆಹಾರ ಸೇವನೆ ಹಾನಿಕಾರಕ : ಆಹಾರದಲ್ಲಿ ಪ್ಲಾಸ್ಟಿಕ್ ರಾಸಾಯನಿಕಗಳೂ ಸೇರಿಕೊಂಡಿವೆ.  ಪ್ಲಾಸ್ಟಿಕ್ ನಮ್ಮ ಆಹಾರ ಸರಪಳಿಯಲ್ಲಿ ಸೇರಿಕೊಂಡಿದೆ ಎನ್ನುತ್ತಾರೆ ಸಂಶೋಧಕರು. ಭೂಮಿಯ ಮತ್ತು ಸಮುದ್ರ ಪರಿಸರದಲ್ಲಿ ಮ್ಯಾಕ್ರೋ-ಪ್ಲಾಸ್ಟಿಕ್ ಮಾಲಿನ್ಯವು ಹೆಚ್ಚುತ್ತಲೇ ಇರುವುದರಿಂದ, ಈ ರಾಸಾಯನಿಕವು ನಮ್ಮ ದೇಹವನ್ನು ಸಮುದ್ರ ಆಹಾರ, ಮೀನು ಮತ್ತು ಇತರ ಅನೇಕ ಆಹಾರಗಳ ಮೂಲಕ ಪ್ರವೇಶಿಸಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ಪದಾರ್ಥಗಳಲ್ಲಿ ಬಿಸಿ ಆಹಾರವನ್ನು ಸೇವಿಸುವುದರಿಂದ ಅನೇಕ ರೀತಿಯ ರಾಸಾಯನಿಕಗಳು ದೇಹಕ್ಕೆ ಪ್ರವೇಶಿಸುತ್ತವೆ.  

Winter Tips: ಚಳಿಗಾಲದಲ್ಲಿ ತಲೆಯನ್ನು ಮುಚ್ಕೋಳ್ಬೇಕು ಯಾಕೆ ?

ದೇಹಕ್ಕೆ ಗಂಭೀರ ಹಾನಿ : ಪ್ಲಾಸ್ಟಿಕ್‌ನಿಂದ ದೇಹಕ್ಕೆ ಆಗುವ ಹಾನಿಯನ್ನು ಈಗಾಗಲೇ ಅನೇಕ ಅಧ್ಯಯನಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ಲಾಸ್ಟಿಕ್ ನಲ್ಲಿರುವ ರಾಸಾಯನಿಕಗಳು ಮಾನವನ ಅಭಿವೃದ್ಧಿ ಹಾಗೂ ಫಲವತ್ತತೆ ಮೇಲೆ ಪರಿಣಾಮ ಬೀರುತ್ತವೆ ಎಂದು ಕೆಲ ಸಂಶೋಧನೆಗಳು ಹೇಳಿದ್ದವು. ಈಗ ಸ್ಥೂಲಕಾಯಕ್ಕೂ ಪ್ಲಾಸ್ಟಿಕ್ ಕಾರಣವಾಗ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗ್ ನಲ್ಲಿ 4,000 ಕ್ಕೂ ಹೆಚ್ಚು ತಿಳಿದಿರುವ ರಾಸಾಯನಿಕಗಳಿವೆ. ಇದು ದೇಹಕ್ಕೆ ಗಂಭೀರ ಹಾನಿಯ ಅಪಾಯವನ್ನುಂಟುಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Health Tips: ಮಹಿಳೆಯರಿಗೆ ಹಾರ್ಟ್ ಅಟ್ಯಾಕ್ ಆಗೋದು ಇದೇ ಕಾರಣಕ್ಕೆ..!

ಯುವಕರಲ್ಲಿ ಬೊಜ್ಜಿನ ಸಮಸ್ಯೆ : ದೈನಂದಿನ ಜೀವನದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದ ಬೊಜ್ಜಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅಧ್ಯಯನದ ಕೊನೆಯಲ್ಲಿ ವಿಜ್ಞಾನಿಗಳು ಹೇಳಿದ್ದಾರೆ. ದೇಹದ ತೂಕವನ್ನು ಹೆಚ್ಚಿಸುವುದರಿಂದ ಟೈಪ್-2 ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಪಾರ್ಶ್ವವಾಯು ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವೂ ಹೆಚ್ಚಾಗುತ್ತದೆ. ನಮ್ಮ ಈ ಅಭ್ಯಾಸವು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ತೂಕ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಪ್ಲಾಸ್ಟಿಕ್ ನಿಂದ ಸಂಪೂರ್ಣ ದೂರವಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. 
 

click me!