
ತಪ್ಪು ಆಹಾರ (Food) ಸೇವನೆ ಮತ್ತು ಜೀವನಶೈಲಿ(Lifestyle)ಯಿಂದಾಗಿ ಜೀರ್ಣಕ್ರಿಯೆ(Digestion)ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಒಂದು ಗ್ಯಾಸ್ ಸಮಸ್ಯೆ. ಗ್ಯಾಸ್ ಸಮಸ್ಯೆಯಿಂದ ಬಳಲುವವರು ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಾರೆ. ಅನೇಕರ ಹೊಟ್ಟೆಯಲ್ಲಿರುವ ಗ್ಯಾಸ್ ವಾಸನೆ ರೂಪದಲ್ಲಿ ಹೊರ ಬರುತ್ತದೆ. ಇದು ಮುಜುಗರಕ್ಕೆ ಕಾರಣವಾಗುತ್ತದೆ. ಅಪರಿಚಿತರ ಮಧ್ಯೆ,ಕಚೇರಿಯಲ್ಲಿ ದೊಡ್ಡ ಶಬ್ಧದ ಜೊತೆ ವಾಸನೆ ಬಂದರೆ ಅವಮಾನವಾಗುತ್ತದೆ. ಸದಾ ಕಿರಿಕಿರಿ ಎನ್ನಿಸುವ ಈ ಗ್ಯಾಸ್ ಸಮಸ್ಯೆಗೆ ಪರಿಹಾರ ಬೇಕೆನ್ನುವವರು ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ ಇದರಿಂದ ಮುಕ್ತಿ ಪಡೆಯಬಹುದು.
ಗ್ಯಾಸ್(Gas) ಸಮಸ್ಯೆಗೆ ಕಾರಣ ಹಾಗೂ ಪರಿಹಾರಗಳನ್ನು ನಾವಿಂದು ಹೇಳ್ತೆವೆ.
ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಕಾರಣಗಳು :
ಒಂದೇ ಬಾರಿ ಅತಿಯಾದ ಆಹಾರ ಸೇವನೆ, ಮಾತನಾಡುತ್ತ ಭೋಜನ ಮಾಡುವುದು, ಪ್ರತಿ ದಿನ ಬಬಲ್ ಗಮ್ ಸೇವನೆ ಮಾಡುವುದು, ಅತಿಯಾದ ತಣ್ಣನೆಯ ಆಹಾರ ಸೇವನೆ ಅಥವಾ ಅತಿಯಾದ ಬಿಸಿಯಾದ ಆಹಾರ ಸೇವನೆ ಇದರಿಂದ ಗ್ಯಾಸ್ ಉತ್ಪತ್ತಿಯಾಗುತ್ತದೆ. ಇದಲ್ಲದೆ, ಸಿಗರೇಟು, ಗುಟ್ಕಾ ಇತ್ಯಾದಿ ಸೇವನೆ, ಬಿಗಿಯಾದ ಬಟ್ಟೆಗಳನ್ನು ಧರಿಸುವುದ್ರಿಂದಲೂ ಅನೇಕರಿಗೆ ಗ್ಯಾಸ್ ಸಮಸ್ಯೆ ಶುರುವಾಗುತ್ತದೆ.
ಗ್ಯಾಸ್ ಸಮಸ್ಯೆಗೆ ಪರಿಹಾರ :
ಪುದೀನಾ : ಪುದೀನಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪುದೀನಾ ಚಹಾ ಅಥವಾ ನೀರನ್ನು ಕುಡಿಯಬಹುದು. ಇದಲ್ಲದೇ ಇದನ್ನು ಆಹಾರ ರೂಪದಲ್ಲಿಯೂ ಸೇವನೆ ಮಾಡಬಹುದು. ಕೆಲವರು ಅದನ್ನು ಹಸಿಯಾಗಿ ತಿನ್ನುತ್ತಾರೆ. ಪುದೀನಾ ನಿಮ್ಮ ಹೊಟ್ಟೆಯಲ್ಲಿರುವ ಗ್ಯಾಸ್ ಕಡಿಮೆ ಮಾಡುತ್ತದೆ.
ಜೀರಿಗೆ : ಅನೇಕರು ಅಡುಗೆ ತಯಾರಿಸುವಾಗ ಜೀರಿಗೆಯನ್ನು ಹೆಚ್ಚಾಗಿ ಬಳಸ್ತಾರೆ. ಇದನ್ನು ಹೊರತುಪಡಿಸಿ ನೀವು ಜೀರಿಗೆಯನ್ನು ನೀರು ಅಥವಾ ಚಹಾದೊಂದಿಗೆ ಬೆರೆಸಿ ಕುಡಿಯಬಹುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಗುಣಲಕ್ಷಣಗಳು ಹೊಟ್ಟೆಯ ಗ್ಯಾಸ್, ಅಜೀರ್ಣ, ಅಸಿಡಿಟಿ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಓಂ ಕಾಳು : ಯಾವುದೇ ಆಹಾರ ಸೇವನೆ ನಂತ್ರ ಓಂ ಕಾಳು ಸೇವನೆ ಮಾಡಿದ್ರೆ ಗ್ಯಾಸ್ ಸಮಸ್ಯೆ ದೂರವಾಗುತ್ತದೆ. ಡೈನಿಂಗ್ ಟೇಬಲ್ ಮೇಲೆ ಓಂಕಾಳು ಹಾಗೂ ಸಕ್ಕರೆಯನ್ನು ಬೆರೆಸಿಡಬಹುದು. ಆಗ ಊಟವಾದ ತಕ್ಷಣ ಇದ್ರ ಸೇವನೆ ಮರೆಯುವುದಿಲ್ಲ. ಓಂಕಾಳು ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ಗುಣಪಡಿಸುತ್ತದೆ.
ತುಳಸಿ : ತುಳಸಿಯು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ತುಳಸಿ ಸೇವಿಸಿದ್ರೆ ಹೊಟ್ಟೆಯ ಅನಿಲ ಸಮಸ್ಯೆ ಕಡಿಮೆಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತುಳಸಿ ಚಹಾ, ನೀರು ಅಥವಾ ಕಷಾಯ ಮಾಡಿ ಕುಡಿಯಬಹುದು.
ಮೊಸರು : ಮೊಸರು ಉತ್ತಮ ಬ್ಯಾಕ್ಟೀರಿಯಾದಿಂದ ಸಮೃದ್ಧವಾಗಿದೆ. ಪ್ರತಿದಿನ ಒಂದು ಬೌಲ್ ಮೊಸರು ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್ ಕಡಿಮೆಯಾಗುತ್ತದೆ. ಇದನ್ನು ಊಟದ ನಂತ್ರ ಸೇವನೆ ಮಾಡಬಹುದು.
Breast Cancer: ನಗರದ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್
ಗ್ಯಾಸ್ ಸಮಸ್ಯೆಗೆ ಮನೆ ಮದ್ದು :
1. ಬಾಣಲೆಗೆ ಒಂದು ಲೋಟ ನೀರು, ಅರ್ಧ ಚಮಚ ಜೀರಿಗೆ, 1-2 ಬೆಳ್ಳುಳ್ಳಿ ಎಸಳು ಮತ್ತು ಸ್ವಲ್ಪ ಕಪ್ಪು ಉಪ್ಪನ್ನು ಹಾಕಿ ಕುದಿಸಿ. ತಯಾರಾದ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಿಸಿ ಮತ್ತು ದಿನಕ್ಕೆ 2-3 ಬಾರಿ ಕುಡಿಯಿರಿ. ಇದರಿಂದ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
2. ಒಂದು ಚಮಚ ಕೊತ್ತಂಬರಿ ಬೀಜಗಳನ್ನು ಉಗುರುಬೆಚ್ಚಗಿನ ನೀರಿನ ಜೊತೆ ಸೇವಿಸಿ. ಇದನ್ನು ಸೇವಿಸುವುದರಿಂದ ಗ್ಯಾಸ್ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ.
3. ಗ್ಯಾಸ್‌ನಿಂದ ಮುಕ್ತಿ ಪಡೆಯಲು ನೀವು ಲಸ್ಸಿಯನ್ನು ಕಪ್ಪು ಉಪ್ಪು ಮತ್ತು ಕೊತ್ತಂಬರಿ ಬೀಜಗಳೊಂದಿಗೆ ಬೆರೆಸಿ ಕುಡಿಯಬಹುದು.
Health Tips: ಮಹಿಳೆಯರಿಗೆ ಹಾರ್ಟ್ ಅಟ್ಯಾಕ್ ಆಗೋದು ಇದೇ ಕಾರಣಕ್ಕೆ..!
ಗ್ಯಾಸ್ ಹೋಗಲಾಡಿಸಲು ಇದು ಕೂಡ ಪ್ರಯೋಜನಕಾರಿ :
1. ಆಹಾರವನ್ನು ನಿಧಾನವಾಗಿ ಮತ್ತು ಸಂಪೂರ್ಣವಾಗಿ ಅಗೆದು ತಿನ್ನಬೇಕು.
2. ಒಂದೇ ಬಾರಿಗೆ ಹೆಚ್ಚು ತಿನ್ನುವ ಬದಲು, ದಿನಕ್ಕೆ 4-5 ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿ.
3. ಅತಿ ಬಿಸಿ, ಅತಿ ತಣ್ಣನೆಯ ಆಹಾರ ಬೇಡ. ಕೋಣೆಯ ಉಷ್ಣಾಂಶದಲ್ಲಿ ಆಹಾರವನ್ನು ಸೇವಿಸಿ. ತುಂಬಾ ಬಿಸಿಯಾದ ಅಥವಾ ತಣ್ಣನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
4. ದಿನವಿಡೀ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವ ಬದಲು, ದೈಹಿಕ ಚಟುವಟಿಕೆಯನ್ನು ಮಾಡಿ.
5. ಆಹಾರ ತಿಂದ ನಂತರ ಮಲಗುವ ತಪ್ಪು ಮಾಡಬೇಡಿ. ಬದಲಾಗಿ, ನೇರವಾಗಿ ಕುಳಿತುಕೊಳ್ಳಿ ಅಥವಾ ಸ್ವಲ್ಪ ನಡೆಯಿರಿ. ಪ್ರತಿ ದಿನ 10 ನಿಮಿಷಗಳ ಕಾಲ ವ್ರಜಾಸನದಲ್ಲಿ ಕುಳಿತುಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.