ಆಗಿರೋ ಮೊಡವೆ ನೋಡಿದ್ರೆ ಆರೋಗ್ಯ ಹೇಗಿದೆ ಗೊತ್ತಾಗುತ್ತೆ!

Published : May 16, 2025, 01:06 PM ISTUpdated : May 16, 2025, 01:10 PM IST
ಆಗಿರೋ ಮೊಡವೆ ನೋಡಿದ್ರೆ ಆರೋಗ್ಯ ಹೇಗಿದೆ ಗೊತ್ತಾಗುತ್ತೆ!

ಸಾರಾಂಶ

ಚರ್ಮದ ಸಮಸ್ಯೆಗಳಲ್ಲಿ ಮೊಡವೆ ಸಾಮಾನ್ಯ. ಟಿ-ವಲಯದ ಮೊಡವೆ ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆ ಸೂಚಿಸಬಹುದು. ಕೆನ್ನೆಯ ಮೊಡವೆ ಹಲ್ಲು ಅಥವಾ ಹೊಟ್ಟೆಯ ಸಮಸ್ಯೆ, ತೊಡೆ-ಬೆನ್ನಿನ ಮೊಡವೆ ಹಾರ್ಮೋನ್ ಏರುಪೇರು, ಗಲ್ಲದ ಮೊಡವೆ ಹೊಟ್ಟೆ ಅಥವಾ ಹಾರ್ಮೋನ್ ಸಮಸ್ಯೆ ಮತ್ತು ಹಣೆಯ ಮೊಡವೆ ಜೀರ್ಣಕ್ರಿಯೆ ಅಥವಾ ಒತ್ತಡ ಸೂಚಿಸುತ್ತದೆ. 

ಪ್ರತಿದಿನ ವಿವಿಧ ಚರ್ಮ (Skin) ಸಂಬಂಧಿ ಸಮಸ್ಯೆಗೆ ಜನರು ಒಳಗಾಗ್ತಾರೆ.  ಕೆಲವು ಕಾಲಾನಂತರದಲ್ಲಿ ಗುಣವಾಗುತ್ತೆ. ಮತ್ತೆ ಕೆಲವು ಜೀವನಪರ್ಯಂತ ಇರುತ್ತವೆ. ಚರ್ಮದ ಸಮಸ್ಯೆ ಪರಿಹರಿಸಲು ಮಾರುಕಟ್ಟೆಯಲ್ಲಿ ನೂರಾರು ಚರ್ಮದ ಉತ್ಪನ್ನಗಳು ಲಭ್ಯವಿದೆ. ಅದ್ರೆ ಅನೇಕ ಬಾರಿ ಈ ಉತ್ಪನ್ನ ಕೆಲಸಕ್ಕೆ ಬರೋದಿಲ್ಲ. ಕಪ್ಪು ಕಲೆ, ಒಣ ಚರ್ಮ, ಡಾರ್ಕ್ ಸರ್ಕಲ್ ಇವೆಲ್ಲದರ ಜೊತೆ ಮೊಡವೆ ಸಮಸ್ಯೆಯನ್ನು ಜನರು ಎದುರಿಸ್ತಾರೆ. ಮೊಡವೆ (acne)  ಸಾಮಾನ್ಯ ಸಮಸ್ಯೆಯಾಗಿದೆ. ಮುಖ, ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಈ ಮೊಡವೆ ಬರೀ ಸೌಂದರ್ಯ ಹಾಳು ಮಾಡೋದು ಮಾತ್ರವಲ್ಲ ವಿಪರೀತ ನೋವುನ್ನು ನೀಡುತ್ತದೆ. ಒಂದ್ಕಡೆ ಎದ್ದ ಮೊಡವೇ ಸುತ್ತಲೂ ಹರಡಿ, ಮುಂದೆ ದೊಡ್ಡ ಕಲೆಯಾಗಿ ಕಾಡುತ್ತದೆ. ಮೊಡವೆ ಸಾಮಾನ್ಯವಾಗಿ ತೈಲ ಗ್ರಂಥಿಗಳ ಅತಿಯಾದ ಚಟುವಟಿಕೆಯಿಂದ ಉಂಟಾಗುತ್ತವೆ. ವಿಜ್ಞಾನದ ಪ್ರಕಾರ,  ಹಣೆ, ಕೆನ್ನೆ, ಗಲ್ಲ ಇತ್ಯಾದಿಗಳ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳು ದೇಹದೊಳಗಿನ ಕೆಲವು ಸಮಸ್ಯೆಗಳನ್ನು ಸೂಚಿಸುತ್ತವೆ.  ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಮೊಡವೆಗೂ ನಮ್ಮ ಆರೋಗ್ಯಕ್ಕೂ ಏನು ಸಂಬಂಧ? 

ಟಿ ವಲಯ (T-zone )ದಲ್ಲಿ ಕಾಣಿಸಿಕೊಳ್ಳುವ ಮೊಡವೆ  : ಹಣೆ ಮತ್ತು ಮೂಗನ್ನು ಟಿ ವಲಯ ಎಂದು ಕರೆಯಲಾಗುತ್ತದೆ. ಈ ಭಾಗದಲ್ಲಿ ಮೊಡವೆ ಕಾಣಿಸಿಕೊಂಡರೆ ಯಕೃತ್ತು ಅಥವಾ ಮೂತ್ರಪಿಂಡದಲ್ಲಿ  ಸಮಸ್ಯೆ ಇದೆ ಎಂದರ್ಥ. ಯಕೃತ್ತು ಹಾಗೂ ಮೂತ್ರಪಿಂಡ ಆರೋಗ್ಯವಾಗಿಲ್ಲ ಎಂದಾಗ ಟಿ ವಲಯದಲ್ಲಿ ಮೊಡವೆ ಕಾಣಿಸಿಕೊಲ್ಳುತ್ತದೆ.  ಅತಿ ಅಪರೂಪಕ್ಕೆ ಈ ಭಾಗದಲ್ಲಿ ಮೊಡವೆ ಕಾಣಿಸಿಕೊಂಡರೆ ಭಯಪಡಬೇಕಾಗಿಲ್ಲ. ಪದೇ ಪದೇ ಟಿ ವಲಯದಲ್ಲಿ ಮೊಡವೆ ಏಳ್ತಿದೆ ಎಂದಾದ್ರೆ ಈ ಭಾಗದ ಪರೀಕ್ಷೆ ಒಳಗಾಗೋದು ಒಳ್ಳೆಯದು. 

ಕೆನ್ನೆ ಮೇಲೆ ಮೊಡವೆ : ಕೆನ್ನೆ ಮೇಲೆ ಮೊಡವೆ ಕಾಣಿಸಿಕೊಳ್ತಿದೆ ಎಂದಾದ್ರೆ ನಿಮ್ಮ ಹಲ್ಲು ಹಾಗೂ ಹೊಟ್ಟೆಯಲ್ಲಿ ಸಮಸ್ಯೆ ಇದೆ ಎನ್ನಬಹುದು. ಹೊಟ್ಟೆ ಹಾಗೂ ಹಲ್ಲಿನ ಸಮಸ್ಯೆ ಬಗೆಹರಿಸಿಕೊಂಡ್ರೆ ನಿಮ್ಮ ಮೊಡವೆ ಸಮಸ್ಯೆ ತಾನಾಗಿಯೇ ಕಡಿಮೆಯಾಗುತ್ತೆ. ಅನೇಕ ಬಾರಿ ಕೊಳಕು ಕೂಡ ನಿಮ್ಮ ಕೆನ್ನೆ ಮೇಲೆ ಮೊಡವೆ ಮೂಡಲು ಕಾರಣವಾಗುತ್ತದೆ. ದಿಂಬಿನ ಕವರ್ ಕೊಳಕಾಗಿದ್ದರೆ ಕೆನ್ನೆ ಮೇಲೆ ಮೊಡವೆಯಾಗುತ್ತದೆ ಎಂದು ತಜ್ಞರು ಹೇಳ್ತಾರೆ. 

ತೊಡೆ ಮತ್ತು ಬೆನ್ನಿನ ಮೇಲೆ ಮೊಡವೆ : ಕೆಲವರ ಬೆನ್ನಿನ ಮೇಲೆ ಹಾಗೂ ತೊಡೆ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಾರ್ಮೋನ್ ಕಾರಣ. ಹಾರ್ಮೋನ್ ನಲ್ಲಿ ಏರುಪೇರಾದ್ರೆ ತೊಡೆ ಹಾಗೂ ಬೆನ್ನಿನ ಮೇಲೆ ಮೊಡವೆ ಏಳುವ ಸಾಧ್ಯತೆ ಹೆಚ್ಚಿರುತ್ತದೆ. 

ಗಲ್ಲದ ಮೇಲೆ ಮೊಡವೆ : ಹೊಟ್ಟೆಯಲ್ಲಿ ಸಮಸ್ಯೆ ಇದ್ದರೆ ಅನೇಕರಿಗೆ ಗಲ್ಲದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ತಜ್ಞರ ಪ್ರಕಾರ, ಹಾರ್ಮೋನ್ ಏರುಪೇರಾದ್ರೂ ನಿಮಗೆ ಗಲ್ಲದ ಮೇಲೆ ಮೊಡವೆ ಕಾಣಿಸಿಕೊಳ್ಳುವುದಿದೆ. ಗಲ್ಲದ ಮೇಲೆ ಮೊಡವೆ  ಆಗಾಗ ಕಾಣಿಸಿಕೊಳ್ತಿದ್ದರೆ ನೀವು ಹೊಟ್ಟೆ ಹಾಗೂ ಹಾರ್ಮೋನ್ ಮೇಲೆ ಗಮನ ಹರಿಸುವುದು ಸೂಕ್ತ

ಹಣೆ ಮೇಲೆ ಮೊಡವೆ : ಹಣೆಯ ಮೇಲೆ ಮೊಡವೆ ಮೂಡ್ತಿದೆ ಎಂದಾದ್ರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದೆ ಎಂದರ್ಥ. ಜೀರ್ಣಾಂಗ ಸರಿಯಾಗಿ ಕೆಲ್ಸ ಮಾಡ್ದೆ ಹೋದ್ರೆ ಮೊಡವೆ ಹಣೆ ಮೇಲೆ ಕಾಣಿಸಿಕೊಳ್ಳೋದಿದೆ. ಒತ್ತಡದಿಂದಲೂ ಹಣೆ ಮೇಲೆ ಮೊಡವೆ ಏಳುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅತಿ ಹೆಚ್ಚು ಒತ್ತಡಕ್ಕೆ ಒಳಗಾಗುವ ಜನರಲ್ಲಿ ಹಣೆ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. 

ಮೊಡವೆಯಿಂದ ಮುಕ್ತಿ ಪಡೆಯಲು ಏನು ಮಾಡ್ಬೇಕು? : ಮುಖದ ಸೌಂದರ್ಯವನ್ನು ಮೊಡವೆ ಹಾಳು ಮಾಡಬಾರದು ಅಂದ್ರೆ ಪ್ರತಿದಿನ ಸಾಕಷ್ಟು ನೀರು ಕುಡಿಐಿರಿ.  ಅಲೋವೆರಾವನ್ನು ಹಚ್ಚಿ, ಚರ್ಮವನ್ನು ತೇವಗೊಳಿಸಿ. ನಿಯಮಿತವಾಗಿ ಹಣ್ಣುಗಳನ್ನು ತಿನ್ನಿ. ದಿನಕ್ಕೆ ಎರಡು ಬಾರಿ ಗ್ರೀನ್ ಟೀ ಕುಡಿಯಿರಿ. ಒತ್ತಡವನ್ನು ಕಡಿಮೆ ಮಾಡಿ. ಹಾಗೆಯೇ ಪ್ರತಿ ದಿನ ವ್ಯಾಯಾಮ ಮಾಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೀವು ಸಣ್ಣ ಸಣ್ಣ ವಿಷಯಕ್ಕೂ ಬೇಜಾರು ಮಾಡ್ಕೋತೀರಾ?: ಇಲ್ಲಿವೆ 5 ಮನೋವೈಜ್ಞಾನಿಕ ಕಾರಣಗಳು
Storage Tips: ತಪ್ಪಾಗಿ ಸಹ ಈ 5 ಹಣ್ಣನ್ನು ಫ್ರಿಜ್‌ನಲ್ಲಿ ಇಡಬಾರದು..