ಪ್ರತಿಭಟನಾ ನಿರತ ಆಂಬುಲೆನ್ಸ್ ಸಿಬ್ಬಂದಿಯ ಕೆಲ ಮುಖಂಡರೊಂದಿಗೆ ಸಭೆ ಮಾಡಿ ಡಿಸೆಂಬರ್‍ವರೆಗೆ ಕೆಲಸ ಮಾಡುವಂತೆ ಮನವೊಲಿಕೆ ಮಾಡಲಾಗುತ್ತದೆ. ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡದ್ದಾರೆ.
ತುಮಕೂರು (ನ.16) : ರಾಜ್ಯದಲ್ಲಿ 108 ಆಂಬುಲೆನ್ಸ್ ಸಿಬ್ಬಂದಿ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪರಿಹಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲ ಸಿಬ್ಬಂದಿಗೆ ವೇತನ ಬಾಕಿ ಕೊಡಿಸುವ ಜವಬ್ದಾರಿ ನಮ್ಮ ಸರ್ಕಾರದ್ದಾಗಿದೆ. ಪ್ರತಿಭಟನಾ ನಿರತ ಸಿಬ್ಬಂದಿಯ ಕೆಲ ಮುಖಂಡರೊಂದಿಗೆ ಸಭೆ ಮಾಡಿ ಡಿಸೆಂಬರ್‍ವರೆಗೆ ಕೆಲಸ ಮಾಡುವಂತೆ ಮನವೊಲಿಕೆ ಮಾಡಲಾಗುತ್ತದೆ. ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಆಂಬುಲೆನ್ಸ್ (Ambulance)ಸಿಬ್ಬಂದಿಯೊಂದಿಗೆ ಸಭೆನಡೆಸಿ ಡಿಸೆಂಬರ್ ವರೆಗೂ ಕೆಲಸ ನಡೆಸುವಂತೆ ಮನವೊಲಿಸುತ್ತೇನೆ. ಡಿಸೆಂಬರ್ ನಂತರ ಹೊಸ ಗುತ್ತಿಗೆ (Contract) ಸಂಸ್ಥೆ ಆಡಳಿತ ನಿರ್ವಹಣೆ (Managemnet)ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುತ್ತದೆ. ಆಗ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ (Fulltime Solution) ಸಿಗಲಿದೆ. ಈಗ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ವೇತನ (Salary) ಬಾಕಿ ಕೊಡಿಸುವ ಜವಬ್ದಾರಿ ನಮ್ಮ ಸರ್ಕಾರದ್ದಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಹೇಳಿದರು.
undefined
ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ
ಜಿವಿಕೆ ಸಂಸ್ಥೆ ವಿರುದ್ಧ ಕ್ರಮ: ರಾಜ್ಯದಲ್ಲಿ 108 ಆರೋಗ್ಯ ಕವಚ (Arogya Kavacha) ಸೇವೆಯ ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ಮಾಡುತ್ತಿರುವ ಜಿವಿಕೆ (GVk) ಸಂಸ್ಥೆ, ಮತ್ತೊಮ್ಮೆ ಗುತ್ತಿಗೆ ಪಡೆಯಲು ಚಾಪೆ ಕೆಳಗೆ ತೂರಲು ಬಂದರೂ ನಾವು ಸಂಸ್ಥೆಗೆ ಅವಕಾಶ ಮಾಡಿಕೊಡುವುದಿಲ್ಲ. ಕಾನೂನು ಅಡ್ಡ ಇಟ್ಟುಕೊಂಡು, ಸರ್ಕಾರಕ್ಕೆ ಹಾಗೂ ಜನರಿಗೆ ಯಾವ ರೀತಿ ಸಮಸ್ಯೆಕೊಟ್ಟಿರುವ ಬಗ್ಗೆ ಗೊತ್ತಾಗಿದೆ. ಜಿವಿಕೆ ಸಂಸ್ಥೆಯ ಸೇವೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಈಗ ಅದು ದೊಡ್ಡ ಮಟ್ಟದಲ್ಲಿ ಬಿಗಡಾಯಿಸಿದೆ. ಅವರು ಕೋರ್ಟ್ ಗೆ ಹೋಗಿ ಪರಿಹಾರ ತೆಗೆದುಕೊಂಡು ಬಂದಿದ್ದರಿಂದ ಇಲ್ಲಿವರೆಗೂ ಅವರ ನಿರ್ವಹಣಾ ಕಾರ್ಯ ನಡೆದಿದೆ. ಆರೋಗ್ಯ ಇಲಾಖೆಯಲ್ಲಿ ಪ್ರತಿ ಬುಧವಾರ ಪರಿವೀಕ್ಷಣೆ (Inspection) ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಇಂದು ತುಮಕೂರು ಜಿಲ್ಲಾಸ್ಪತ್ರೆಗೆ (District Hospital) ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ಆರೋಗ್ಯ ಸಚಿವರ ಹಾದಿಯಾಗಿ ಒಂದು ಸಣ್ಣ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪರಿಶೀಲನೆ ಮಾಡಿದ ಕಾರ್ಯದ ಬಗ್ಗೆ ಸಭೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಗುವಿನ ಹೆಸರಲ್ಲಿ 10 ಲಕ್ಷ ರೂ. ಎಫ್‌ಡಿ:
ಹತ್ತು ದಿನಗಳ ಹಿಂದೆ ತುಮಕೂರಿನ ಭಾರತಿ ನಗರದಲ್ಲಿ ನಡೆದಿದ್ದ ತಾಯಿ ಮತ್ತು ಅವಳಿ ಶಿಶು ಸಾವು ಪ್ರಕರಣದಲ್ಲಿ ಏಕಮುಖ ತನಿಖೆ ನಡೆಯುತ್ತಿಲ್ಲ. ಆದರೆ, ನಾನೇ ಖುದ್ದಾಗಿ ಸಿಸಿ ಕ್ಯಾಮರಾ (CC Camera) ವೀಕ್ಷಣೆ ಮಾಡಿದ್ದು, ಏಕಮುಖ (One Way) ನಿರ್ಧಾರ ತೆಗೆದುಕೊಳ್ಳದಂತೆ ಕ್ರಮವಹಿಸುತ್ತಿದ್ದೇನೆ. ಅವರು ಆಪರೇಷನ್ ಕೊಠಡಿಯಿಂದ (OT) ಬಂದಿದ್ದು, ವಿಡಿಯೋ ಫ್ರೇಮ್ ನಲ್ಲಿ ರೋಗಿ ಹಾಗೂ ವೈದ್ಯೆ ಉಷಾ ಇಬ್ಬರು ಇದ್ದಾರೆ. ಈ ಕುರಿತ ಪ್ರಕರಣ ಆರೋಗ್ಯ ಇಲಾಖೆ ಆಯುಕ್ತರ ಹಂತದಲ್ಲಿ ತನಿಖೆ (Investigation)ನಡೆಯುತ್ತಿದೆ. ತನಿಖೆಯ ವರದಿ ಬಳಿಕ ತಪ್ಪು ಯಾರದ್ದೆಎಂಬುದು ತೀರ್ಮಾನ ಆಗುತ್ತದೆ. ಅಲ್ಲಿವರೆಗೂ ವೈದ್ಯರು ಅಮಾನತ್ತಿನಲ್ಲಿರುತ್ತಾರೆ. ಆದರೆ ಅದು ಶಾಶ್ವತ ಅಮಾನತು ಆಗಿರುವುದಿಲ್ಲ. ಒಂದು ವೇಳೆ ತಪ್ಪಿತಸ್ಥ ಅಲ್ಲ ಎಂದು ತಿಳಿದಲ್ಲಿ ಅಮಾನತ್ತು ವಾಪಸ್ ಆಗುತ್ತದೆ. ತಾಯಿಯನ್ನು ಕಳೆದುಕೊಂಡ 6 ವರ್ಷದ ಬಾಲಕಿ(ಶಂಕರಿ) ಯನ್ನು ಸರ್ಕಾರದಿಂದ ನೋಡಿಕೊಳ್ಳಲಾಗುವುದು. ಬಾಲಕಿ ಹೆಸರಿಗೆ ಆರೋಗ್ಯ ಇಲಾಖೆಯಿಂದ 10 ಲಕ್ಷ ರೂ. ಎಫ್.ಡಿ. ಇಡಲಾಗುವುದು ಎಂದರು.
Ambulance ಸಿಗದೆ ಬೈಕ್‌ನಲ್ಲಿ ಮಗಳ ಮೃತದೇಹವನ್ನು 65 ಕಿ.ಮೀ. ಹೊತ್ತೊಯ್ದ ಪೋಷಕರು
ವೈದ್ಯರ ಕೊರತೆಯಿಲ್ಲ: ತುಮಕೂರು ಜಿಲ್ಲೆಯಲ್ಲಿ ಎಲ್ಲಿಯೂ ವೈದ್ಯರ (Doctors) ಕೊರತೆಯಿಲ್ಲ. ಎರಡು ವರ್ಷದಲ್ಲಿ ವೈದ್ಯರನ್ನು ಭರ್ತಿ ಮಾಡಿಕೊಂಡಿದ್ದೇವೆ. ಕೆಲ ಸಿಬ್ಬಂದಿ (Staff) ವರ್ತನೆಯಿಂದ ಈ ರೀತಿಯಾಗಿದೆ ಎಂಬುದು ಗೊತ್ತಾಗಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮ (Action) ಕೈಗೊಂಡಿದ್ದೇವೆ. ತನಿಖೆಯಲ್ಲಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಶೀಘ್ರ ಸಹಾಯವಾಣಿ (Helpline) ತೆರೆಯಲಾಗುವುದು. ಸಹಾಯವಾಣಿಯಲ್ಲಿ ನಾಲ್ವರು ಸಿಬ್ಬಂದಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಕೋಲಾರದಲ್ಲಿ ಕಾಂಗ್ರೆಸ್ ಬುಡ ಅಲುಗಾಟ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಕೋಲಾರದ ಕಾಂಗ್ರೆಸ್‌ನಲ್ಲಿ (Congress) ದೊಡ್ಡನಾಯಕರಿದ್ದಾರೆ. ಈಗ ಅವರ ಬುಡ (Base) ಅಲ್ಲಾಡುತ್ತಿದೆ. ಹೀಗಾಗಿ ಆ ಬುಡ ಸರಿಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಲಿ (Oblation) ಕೊಡಲಾಗುತ್ತಿದೆ. ಸಿದ್ದರಾಮಯ್ಯ ಚಿಕ್ಕಬಳ್ಳಾಪುರಕ್ಕೆ ಕಾರ್ಯಕ್ರಮಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ಅವರ ಪಕ್ಷದಿಂದ ಚುನಾವಣೆ (Election) ಸ್ಪರ್ಧೆಗೆ ಬರುತ್ತಾರೆ ಎಂದರೆ ಅದನ್ನು ಬೇಡ ಎನ್ನಲು ಆಗುವುದಿಲ್ಲ. 2019ರಲ್ಲಿ ಸಿದ್ದರಾಮಯ್ಯ ನನ್ನ ವಿರುದ್ಧ 5 ಕಡೆ ಪ್ರಚಾರ ಮಾಡಿದ್ದಾರೆ ಎಂದು ತಿಳಿಸಿದರು.