ಬೇಸಿಗೆ ಬಂತೆಂದ್ರೆ ಸಾಕು ನಾನಾ ಖಾಯಿಲೆ ಮುತ್ತಿಕೊಳ್ಳುತ್ತದೆ. ಈಗಾಗಲೇ ಅನೇಕರು ನೆಗಡಿ, ಜ್ವರ, ಕೆಮ್ಮಿನಿಂದ ಬಳಲ್ತಿದ್ದಾರೆ. ಬೇಸಿಗೆ ನಮ್ಮನ್ನು ವಿಪರೀತ ಸುಸ್ತು ಮಾಡುತ್ತದೆ. ಈ ಋತುವಿನಲ್ಲಿ ನಾವು ಆರೋಗ್ಯವಾಗಿರಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ದಿನದಿಂದ ದಿನಕ್ಕೆ ಬಿಸಿಲ ಅಬ್ಬರ ಹೆಚ್ಚುತ್ತಿದೆ. ಇನ್ನೂ ಎರಡು ತಿಂಗಳು ಬೇಸಿಗೆ ಹೀಗೆ ಮುಂದುವರೆಯಲಿದೆ. ಇನ್ನೊಂದೆಡೆ ಹಂದಿ ಜ್ಞರ ಹಾಗೂ ಮತ್ತೆ ಪಿಸುಗುಟ್ಟುತ್ತಿರುವ ಕೊರೊನಾ ಜನರ ಸುತ್ತ ಸುತ್ತುತ್ತಲೇ ಇದೆ. ಇವೆಲ್ಲ ಕಷ್ಟಗಳ ಜೊತೆ ಬೇಸಿಗೆಯಲ್ಲಿ ದಣಿವು, ವಾಂತಿ, ತಲೆಸುತ್ತು ಮುಂತಾದ ಸಮಸ್ಯೆಗಳು ಇದ್ದೇ ಇರುತ್ತದೆ. ಬಿಸಿಲ ಧಗೆ ಎಷ್ಟೇ ಇದ್ದರೂ ಮನೆಯಿಂದ ಹೊರಗೆ ಹೋಗಿ ದುಡಿಯುವವರು ದುಡಿಯಲೇಬೇಕು.
ಬೇಸಿಗೆ (Summer) ಯ ವಿಪರೀತ ಬಿಸಿಲಿನ ಕಾರಣ ಡಿಹೈಡ್ರೇಶನ್ (Dehydration) , ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಗಳು, ಸುಸ್ತು ಮತ್ತು ಕೆಲವರಿಗೆ ರಕ್ತದೊತ್ತಡದಲ್ಲಿ ಏರುಪೇರು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ನೀವು ನಿಮ್ಮ ರುಟಿನ್ ನಲ್ಲಿಯೇ ಕೆಲವು ಬದಲಾವಣೆಯನ್ನು ಮಾಡುವ ಮೂಲಕ ನಿಮ್ಮನ್ನು ನೀವು ಖಾಯಿಲೆ (Disease) ಯಿಂದ ದೂರವಿಡಬಹುದು. ಅಂತಹ ಕೆಲವು ಸಲಹೆಗಳು ಇಲ್ಲಿವೆ..
DHARMENDRA PRATAP SINGH: ಎತ್ತರದ ಧರ್ಮೇಂದ್ರ: ಸೊಂಟ ಬಾಗಿತು, ಆರೋಗ್ಯ ಸಮಸ್ಯೆ ಹೆಚ್ಚಿತು!
ನಿಮ್ಮನ್ನು ನೀವು ಹೀಗೆ ಹೈಡ್ರೇಟ್ ಆಗಿರಿಸಿಕೊಳ್ಳಿ : ಬೇಸಿಗೆಯ ಸೆಕೆಯಿಂದ ಮೈ ಹೆಚ್ಚು ಬೆವರುತ್ತದೆ. ಈ ಕಾರಣದಿಂದ ಶರೀರ ಡೀ ಹೈಡ್ರೇಟ್ ಆಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಶರೀರಕ್ಕೆ ಹೆಚ್ಚಿನ ದ್ರವಾಹಾರದ ಅವಶ್ಯಕತೆ ಇರುತ್ತದೆ. ಆದ್ದರಿಂದ ಜಲಜೀರಾ, ಮಜ್ಜಿಗೆ, ಲಸ್ಸಿ, ಮಿಲ್ಕ್ ಶೇಕ್ ಮುಂತಾದ ಪಾನೀಯಗಳಿಂದ ನಿಮ್ಮನ್ನು ನೀವು ಹೈಡ್ರೇಟ್ ಆಗಿರಿಸಿಕೊಳ್ಳಬಹುದು. ಇದರ ಜೊತೆಗೆ ನೀವು ಉಪ್ಪು ಮತ್ತು ಸಕ್ಕರೆಯ ದ್ರಾವಣವನ್ನು ಸಹ ಕುಡಿಯಬಹುದು. ಇದು ಒಂದು ರೀತಿಯ ಎಲೆಕ್ಟ್ರೋಲೈಟ್ ಆಗಿದ್ದು ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸುತ್ತದೆ.
ವಿಟಮಿನ್ `ಸಿ’ಯುಕ್ತ ಆಹಾರ ಸೇವಿಸಿ : ವಿಟಮಿನ್ ಸಿ ಹೇರಳವಾಗಿರುವ ಆಹಾರಗಳನ್ನು ಬೇಸಿಗೆಯಲ್ಲಿ ಹೆಚ್ಚು ಸೇವಿಸಬೇಕು. ಏಕೆಂದರೆ ವಿಟಮಿನ್ ಸಿ ಯಿಂದ ನಮ್ಮ ಶರೀರ ತಂಪಾಗಿರುತ್ತದೆ ಮತ್ತು ಅದರಲ್ಲಿ ಹೆಚ್ಚಿನ ಪ್ರಮಾಣದ ಎಂಟಿಆಕ್ಸಿಡೆಂಟ್ ಇರುತ್ತದೆ. ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ನಿಮ್ಮ ಶರೀರವನ್ನು ರಕ್ಷಿಸಿಕೊಳ್ಳಲು ಎಂಟಿಆಕ್ಸಿಡೆಂಟ್ ಗಳ ಅವಶ್ಯಕತೆ ಇರುತ್ತದೆ. ವಿಟಮಿನ್ ಸಿ ಯುಕ್ತ ಆಹಾರ ಸೇವಿಸಿದಾಗ ಸೂರ್ಯನ ಕಿರಣ ಮತ್ತು ವಾಯುಮಾಲಿನ್ಯದ ವಿರುದ್ಧ ಸ್ವತಃ ನಿಮ್ಮ ಚರ್ಮವೇ ಹೋರಾಡುತ್ತದೆ.
ಹಸಿರು ತರಕಾರಿಗಳನ್ನು ತಿನ್ನಿ : ಬೇಸಿಗೆಯ ಸಮಯದಲ್ಲಿ ಹಸಿ ತರಕಾರಿಗಳನ್ನು ತಿನ್ನುಬೇಕು. ಏಕೆಂದರೆ ಇದರಲ್ಲಿ ಕ್ಯಾರೊಟಿನೈಡ್ ಅಂಶ ಇರುತ್ತದೆ. ಇದರಿಂದ ಶರೀರದಲ್ಲಿ ವಿಟಮಿನ್ ಎ ಉತ್ಪತ್ತಿಯಾಗುತ್ತೆ. ಬಿಸಿಲಿನ ಕೆಟ್ಟ ಪ್ರಭಾವ ಶರೀರದ ಮೇಲೆ ಉಂಟಾಗದೇ ಇರಲು ಹಸಿರು ತರಕಾರಿಗಳು ಬಹಳ ಉಪಕಾರಿಯಾಗಿವೆ. ಪಾಲಕ್ ಸೊಪ್ಪು, ಪುದಿನ ಮುಂತಾದವು ಬೇಸಿಗೆಗೆ ಹೇಳಿ ಮಾಡಿಸಿದ ತರಕಾರಿಗಳಾಗಿವೆ. ಇವುಗಳಿಂದ ಸೂಪ್, ದಾಲ್, ಪರೋಟಾ, ಸಲಾಡ್ ಮುಂತಾದವುಗಳನ್ನು ತಯಾರಿಸಿ ಸವಿಯಬಹುದು. ಇವುಗಳಲ್ಲಿ ಕ್ಯಾಲ್ಸಿಯಂ, ಐರನ್, ಪೊಲೆಟ್ ಮತ್ತು ನೀರಿನ ಪ್ರಮಾಣವೂ ಅಧಿಕವಾಗಿರುತ್ತದೆ.
ಜೆಲ್ ರೂಪದಲ್ಲಿ ಬರಲಿದೆ ಹೊಸ ಪುರುಷ ಗರ್ಭ ನಿರೋಧಕ; ಭುಜಕ್ಕೆ ಹಚ್ಚಿದ್ರೆ ಸಾಕು ಆಗುತ್ತೆ ಜನನ ನಿಯಂತ್ರಣ!
ಬೇಸಿಗೆಗೆ ಬಾಳೆಹಣ್ಣು ಮತ್ತು ಮೊಸರು ಕೂಡ ಒಳ್ಳೆಯದು : ಬಿಸಿಲಿನ ದಿನಗಳಲ್ಲಿ ಬಾಳೆಹಣ್ಣು ಮತ್ತು ಮೊಸರಿನ ಸೇವನೆ ಆರೋಗ್ಯಕ್ಕೆ ಹಿತಕರ. ಮೊಸರಿನಲ್ಲಿ ಪ್ರೊಬಯೋಟಿಕ್ಸ್ ಇರುತ್ತದೆ. ಪ್ರೊಬಯೋಟಿಕ್ಸ್ ನಮ್ಮ ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆಗಳನ್ನು ನೀಗಿಸಲು ಬಾಳೆಹಣ್ಣು ಬಹಳ ಸಹಕಾರಿ. ಬಾಳೆಹಣ್ಣಿನಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಬಲಪಡಿಸುತ್ತದೆ.
ಬೇಸಿಗೆಯಲ್ಲಿ ಇವುಗಳಿಂದ ದೂರವಿರಿ : ಬೇಸಿಗೆಯಲ್ಲಿ ನಮ್ಮ ಬಾಹ್ಯ ಶರೀರವನ್ನು ಕಾಪಾಡಲು ಏನೆಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೇವೆಯೋ ಹಾಗೆ ನಮ್ಮ ಒಳಗಿನ ಶರೀರವನ್ನು ಕೂಡ ಸುಸ್ಥಿತಿಯಲ್ಲಿಡುವುದು ಅತೀ ಮುಖ್ಯವಾಗಿದೆ. ಬೇಸಿಗೆಯಲ್ಲಿ ನೀವು ಹೊರಗಡೆ ಹೋಗುತ್ತೀರಿ ಎಂದಾದರೆ ನೀವು ಹೆಚ್ಚು ಮಸಾಲೆಯುಕ್ತ ಆಹಾರಗಳ ಸೇವನೆ ಮಾಡಕೂಡದು. ಇಂತಹ ಮಸಾಲೆಭರಿತ ಪದಾರ್ಥಗಳು ನಿಮ್ಮ ಹೊಟ್ಟೆ ಮತ್ತು ಶರೀರದ ತಾಪಮಾನವನ್ನು ಹೆಚ್ಚಿಸುತ್ತೆ. ಬೇಸಿಗೆಯ ಸೆಕೆಗೆ ತಣ್ಣನೆಯ ಪಾನೀಯ ಕುಡಿಯಬೇಕೆನಿಸುವುದು ಸಹಜ. ಹಾಗಂತ ನೀವು ಫ್ರಿಜ್ ನಲ್ಲಿರಿಸಿದ ಆಹಾರವನ್ನು ಕೂಡ ತಿನ್ನಬಾರದು. ಹೆಚ್ಚು ಪ್ರೊಟೀನ್ ಮತ್ತು ಸಕ್ಕರೆಯುಕ್ತ ಆಹಾರವೂ ಬೇಡ. ಟೀ, ಕಾಫಿ ಸೇವನೆ ಕೂಡ ನಿಮ್ಮಲ್ಲಿ ಡೀಹೈಡ್ರೇಶನ್ ಸಮಸ್ಯೆಯುಂಟುಮಾಡಬಹುದು.