
“ಹೀಗೆ ಮಾಡಿದ್ರೆ ಹಾಗಾಗ್ತಿತ್ತು, ಹಾಗೆ ಮಾಡಿದ್ರೆ ಇನ್ನೂ ಚೆನ್ನಾಗಿತ್ತು’ ಎಂದು ಮನದಲ್ಲೇ ಮಂಡಿಗೆ ತಿನ್ನುವವರು ಇದ್ದಾರೆ. ಹಾಗೆಯೇ, ಬೆಳಗ್ಗೆ ಅಪ್ಪನೊಂದಿಗೆ ಆದ ಮಾತುಕತೆಯನ್ನು ತಲೆಯಲ್ಲಿ ಹತ್ತಾರು ಬಾರಿ ತಂದುಕೊಂಡು ಅದರ ಬಗ್ಗೆಯೇ ಪ್ರಯೋಜನವಿಲ್ಲದ ಗಿಜಿಬಿಜಿ ತುಂಬಿಕೊಳ್ಳುವವರಿದ್ದಾರೆ. ಇವರನ್ನು ಸಿಂಪಲ್ಲಾಗಿ ಓವರ್ ಥಿಂಕರ್ಸ್ ಎನ್ನಬಹುದು. ಅತಿಯಾಗಿ ಯೋಚನೆ ಮಾಡುವ ಜನರು ನಿರಂತರವಾಗಿ ಏನಾದರೊಂದು ವಿಚಾರಕ್ಕೆ ತಲೆ ಕೆಡಿಸಿಕೊಳ್ಳುತ್ತಲೇ ಇರುತ್ತಾರೆ. ಅವರಿಗೆ ನೀವು ಹೆಚ್ಚು ಯೋಚನೆ ಮಾಡಬೇಡಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರ ಸ್ವಭಾವವೇ ಹಾಗಿರುತ್ತದೆ. ಕೆಲವು ವಿಚಾರಗಳ ಬಗ್ಗೆ ಡೀಪಾಗಿ ಯೋಚನೆ ಮಾಡುವುದು ಉತ್ತಮವೇ. ಆದರೆ, ಸಮಸ್ಯೆಯ ಬಗ್ಗೆ ಮಾತ್ರ ಯೋಚನೆ ಮಾಡುವುದು ಉತ್ತಮವಲ್ಲ. ಪರಿಹಾರದ ಬಗ್ಗೆ ಯೋಚಿಸಬೇಕೇ ಹೊರತು ಸಮಸ್ಯೆಯ ಬಗ್ಗೆಯೇ ಚಿಂತಿಸುವುದು ಉತ್ತಮ ಲಕ್ಷಣವಲ್ಲ. ಆದರೆ, ಈ ಗುಣವೇ ಅತಿಯಾಗಿ ಯೋಚನೆ ಮಾಡುವವರಲ್ಲಿ ಧಾರಾಳವಾಗಿರುತ್ತದೆ. ಹೀಗಾಗಿ, ಅವರು ದಿನವೂ ಕೆಲವು ರೀತಿಯ ಹೋರಾಟದಲ್ಲಿ ನಿರತರಾಗಿರುತ್ತಾರೆ.
• ನಿರ್ಧಾರ (Decision) ಕೈಗೊಳ್ಳುವುದೆಂದರೆ ಮೌಂಟ್ ಎವರೆಸ್ಟ್ ಹತ್ತಿದಂತೆ
ಅತಿಯಾಗಿ ಯೋಚನೆ (Over Think) ಮಾಡುವವರಿಗೆ ಯಾವುದಾದರೊಂದು ವಿಚಾರದ ಕುರಿತು ಫಟ್ ಎಂದು ನಿರ್ಧಾರ ಕೈಗೊಳ್ಳಲು ಸಾಧ್ಯವೇ ಆಗುವುದಿಲ್ಲ. ಏಕೆಂದರೆ, ಪ್ರತಿಯೊಂದು ನಿರ್ಧಾರದ ಕುರಿತಾದ ಹಲವು ಮಗ್ಗಲುಗಳ ಬಗ್ಗೆಯೂ ಅವರು ಸಾಕಷ್ಟು ವಿಚಾರ ಮಾಡುವುದರಿಂದ ಎಲ್ಲದರಲ್ಲೂ ಏನಾದರೊಂದು ಕೊರತೆ ಕಂಡುಬರುತ್ತದೆ. ಹೀಗಾಗಿ, ನಿರ್ಧಾರ ಕೈಗೊಳ್ಳುವುದೆಂದರೆ ಭಾರೀ ಕಷ್ಟವಾಗುತ್ತದೆ.
Health Tips: ಜೀವನದಲ್ಲಿ ಎಂದಿಗೂ ಇವುಗಳನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲೇಬೇಡಿ
• ಹೀಗಾದರೆ... (If What)
ಎಲ್ಲ ವಿಚಾರಗಳನ್ನೂ (Thought) ತಲೆಯಲ್ಲಿ (Head) ತುಂಬಿಕೊಂಡು, ಹೀಗಾದರೆ, ಹಾಗಾದರೆ ಎಂದು ಯೋಚಿಸುತ್ತಿರುವುದು ಇವರ ಗುಣ. ಇಂತಹ ಪ್ರಶ್ನೆಗಳಿಂದಲೇ ಇವರು ಪ್ರತಿದಿನ ನುಗ್ಗಾಗುತ್ತಾರೆ, ಸೋತು ಹೋಗುತ್ತಾರೆ. ಯಾವುದಾದರೂ ಸನ್ನಿವೇಶವನ್ನು (Situation) ಅತಿಯಾಗಿ ವೈಭವೀಕರಿಸಿಕೊಂಡು ಯೋಚಿಸುವುದರಲ್ಲಿ ಇವರು ಎಕ್ಸ್ ಪರ್ಟ್ ಆಗಿರುತ್ತಾರೆ. ಅಪಾರ ಸಾಧ್ಯತೆಗಳ (Possibility) ಬಗ್ಗೆ ಕಲ್ಪನೆ ಮಾಡುವುದರಲ್ಲೂ ಇವರು ಮುಂದಿರುತ್ತಾರೆ.
• ಆಗಿಹೋದ ಮಾತುಕತೆಯ (Conversation) ಬಗ್ಗೆ ವಿಮರ್ಶೆ
ಆಗಿಹೋದ ಮಾತುಕತೆಯ ಬಗ್ಗೆ ಹೆಚ್ಚು ಯೋಚನೆ ಮಾಡುವುದರಲ್ಲಿ ಅರ್ಥವಿಲ್ಲ. ಒಂದೊಮ್ಮೆ ತಪ್ಪೇ ಆಗಿಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕೇ ಹೊರತು ಅದರ ಬಗ್ಗೆ ಬರೀ ಯೋಚನೆ ಮಾಡುವುದು ತಪ್ಪು. ಹೀಗೆ ಮಾತನಾಡಿದರೆ ಚೆನ್ನಾಗಿತ್ತು, ಹಾಗೆ ಮಾತಾಡಿಬಿಟ್ಟೆ... ಇತ್ಯಾದಿ ಯೋಚನೆ ಮಾಡುತ್ತ ಹೈರಾಣಾಗುವುದು ಇವರ ಸ್ವಭಾವ (Behavior).
• ಅತಿಯಾದ ಯೋಚನೆಯಿಂದ ನಿದ್ರಾಹೀನತೆ (Sleep Problem)
ಹೆಚ್ಚು ಯೋಚನೆ ಮಾಡುವವರು ಸಾಮಾನ್ಯವಾಗಿ ನಿದ್ರಾಹೀನತೆಯಿಂದ ಬಳಲುವುದು ಹೆಚ್ಚು. ನಿದ್ರೆಗೆ ಜಾರುವ ಮುನ್ನ ಅತಿಯಾಗಿ ಯೋಚನೆಗಳು ಕಾಡಿ ನಿದ್ರೆಯಿಂದ ವಂಚಿತರಾಗುವುದು ಇವರ ಹಣೆಬರಹ. ಏಕೆಂದರೆ, ಅತಿಯಾದ ಯೋಚನೆ ಮಾಡುವುದರಿಂದ ಮಿದುಳಿನ (Brain) ಮೇಲೆ ಹೆಚ್ಚಿನ ಹೊರೆಯಾಗುತ್ತದೆ.
ಅತಿಯಾದ ಸೆಕ್ಸ್ ಬಯಕೆಗೆ ಇದೇ ಕಾರಣ, ಇದೊಂದು ಮಾನಸಿಕ ಸಮಸ್ಯೆಯೇ?
• ತಪ್ಪಾಗಿ ಭಾವಿಸುವ (Misunderstood) ಸಾಧ್ಯತೆ ಹೆಚ್ಚು
ಪದೇ ಪದೆ ಇವರನ್ನು ಯಾರಾದರೂ ತಪ್ಪಾಗಿ ಭಾವಿಸುವುದು ಹೆಚ್ಚು. ಏಕೆಂದರೆ, ಇವರು ಸುಮ್ಮನಿದ್ದಾರೆ ಎಂದರೆ ವಿಚಾರದಲ್ಲಿ ಆಸಕ್ತಿ ಇಲ್ಲ ಎಂದಲ್ಲ, ಯೋಚನಾಭರಿತರಾಗಿರುತ್ತಾರೆ ಎಂದರ್ಥ. ಹಾಗೆಯೇ, ಯಾರದ್ದಾದರೂ ಬಗ್ಗೆ ಆತಂಕಿತರಾಗಿದ್ದಾರೆ ಎಂದರೆ ನಿರಾಶಾವಾದಿಗಳು ಎಂದಲ್ಲ. ಅವರ ಬಗ್ಗೆ ಇವರು ಕಾಳಜಿ (Care) ಹೊಂದಿದ್ದು, ಎಲ್ಲ ರೀತಿಯಲ್ಲೂ ಅವರ ಬಗ್ಗೆ ಯೋಚಿಸುತ್ತಾರೆ ಎಂದರ್ಥ.
• ಭವಿಷ್ಯದಲ್ಲಿ (Future) ಮುಳುಗುವ ಮನಸ್ಸು
ಅತಿಯಾಗಿ ಯೋಚನೆ ಮಾಡುವವರು ಭವಿಷ್ಯಕ್ಕೆ ಸಂಬಂಧಿಸಿದ ಆಲೋಚನೆಗಳಲ್ಲಿ ಮುಳುಗುವುದು ಹೆಚ್ಚು. ಯಾವುದೇ ರೀತಿಯಲ್ಲಾದರೂ ಸರಿ, ಕೆಲಸ, ವೃತ್ತಿ, ಸಂಬಂಧ, ಕುಟುಂಬ, ಮಕ್ಕಳು ಹೀಗೆ ಎಲ್ಲದರ ಭವಿಷ್ಯದ ಬಗ್ಗೆಯೂ ತೀವ್ರವಾಗಿ ಚಿಂತೆ ಮಾಡುತ್ತ ಬಳಲುವುದು ಇವರ ದೈನಂದಿನ ಸಮಸ್ಯೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.