ದಿನಕ್ಕೆಷ್ಟು ಹಣ್ಣು ತಿಂದರೊಳಿತು? ಹೇಗಿರಬೇಕು ಹಣ್ಣಿನ ಡಯಟ್?

By Suvarna News  |  First Published Jan 21, 2023, 1:32 PM IST

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಧಿಕ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ಟೈಪ್‌ ೨ ಮಧುಮೇಹ, ತೂಕ ಹೆಚ್ಚಳ, ಬೊಜ್ಜು, ಪೌಷ್ಟಿಕಾಂಶದ ಕೊರತೆ, ಕರುಳಿನ ಸಮಸ್ಯೆಗಳು ಬಾಧಿಸಬಹುದು. 
 


ಹಣ್ಣುಗಳ ಸೇವನೆ ಆರೋಗ್ಯಕರವೆಂದು ಭಾವಿಸಲಾಗುತ್ತದೆ. ಸೀಸನಲ್‌ ಅಂದರೆ ಆಯಾ ಕಾಲದಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸಬೇಕೆಂದು ಆಹಾರ ಪರಿಣಿತರು ಸಲಹೆ ನೀಡುವುದು ಸಾಮಾನ್ಯ. ಹಣ್ಣುಗಳಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ದೊರೆಯುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ಇರಬಹುದಾದ ಹಲವು ಪೌಷ್ಟಿಕಾಂಶಗಳ ಕೊರತೆ ನಿವಾರಣೆಯಾಗುತ್ತದೆ. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಹಣ್ಣುಗಳ ಅಧಿಕ ಸೇವನೆಯಿಂದಲೂ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು. ಬೊಜ್ಜು, ಮಧುಮೇಹ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಕ್ಕರೆಯನ್ನು ಅತ್ಯಂತ ಹಾನಿಕಾರಕ ಆಹಾರ ಪದಾರ್ಥವನ್ನಾಗಿ ಪರಿಗಣಿಸಲಾಗಿದೆ. ಆದರೂ ಸಾಕಷ್ಟು ಜನ ಪ್ರತಿದಿನ ಬಿಳಿ ಮತ್ತು ರಿಫೈನ್ಡ್‌ ಸಕ್ಕರೆಯನ್ನು ಆಹಾರದಲ್ಲಿ ಬಳಕೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ಇತ್ತೀಚೆಗೆ ಸಾಕಷ್ಟು ವೈದ್ಯರು, ಆಹಾರ ತಜ್ಞರು ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಸಿಹಿ ಪದಾರ್ಥ ಸೇವಿಸಬೇಕು ಎನ್ನುವ ಬಯಕೆಯನ್ನು ಹತ್ತಿಕ್ಕಲು ವೈದ್ಯರು ಹಣ್ಣುಗಳನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ಏಕೆಂದರೆ, ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ, ಕೃತಕ ಅಂಶವಿರುವುದಿಲ್ಲ. ರಿಫೈನ್ಡ್‌ ಸಕ್ಕರೆಗಿಂತ ಹಣ್ಣುಗಳಲ್ಲಿರುವ ಸಕ್ಕರೆ ಅಂಶ ಆರೋಗ್ಯಕಾರಿಯಾಗಿದೆ. ಆದರೂ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಇದು ಅಪಾಯಕಾರಿಯೂ ಆಗಬಲ್ಲದು.

ಹಣ್ಣುಗಳು (Fruits) ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ (Sugar) ಕಡಿಮೆ ಇರುತ್ತದೆ, ಇನ್ನು ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಕ್ಯಾಲರಿ (Calorie) ಅಧಿಕವಾಗಿರುತ್ತದೆ. ಇಂತಹ ಹಣ್ಣುಗಳು ಮುಖ್ಯವಾಗಿ ಮಧುಮೇಹಿಗಳಿಗೆ ಉತ್ತಮವಲ್ಲ. ಕ್ಯಾಲರಿ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿದರೆ ರಕ್ತದ (Blood) ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಹೆಚ್ಚು ಹಣ್ಣುಗಳನ್ನು ತಿನ್ನುವುದು ಆರೋಗ್ಯವಂತ (Healthy) ಜನರಿಗೂ ಒಳ್ಳೆಯದೇನಲ್ಲ. ಇದರಿಂದ ತೂಕ (Weight) ಹೆಚ್ಚುವ ಹಾಗೂ ಬೊಜ್ಜು (Obesity) ಬರುವ ಅಪಾಯ ಇದ್ದೇ ಇರುತ್ತದೆ. ಸೇಬು ಮತ್ತು ಬೆರಿ ರೀತಿಯ ಹಣ್ಣುಗಳಲ್ಲಿ ನಾರಿನಂಶ (Fibre) ಹಾಗೂ ವಿಟಮಿನ್‌ ಸಿ ದೊರೆಯುತ್ತದೆ. ಹಾಗೂ ಹೈಡ್ರೇಟ್‌ (Hydrate) ಆಗಿರಲು ಸಾಧ್ಯವಾಗುತ್ತದೆ. ಆದರೆ, ಆರೋಗ್ಯಕ್ಕೆ ಉತ್ತಮವೆಂದು ಹೆಚ್ಚು ಸೇವನೆ ಮಾಡುವುದರಿಂದ ಹಲವು ರೀತಿಯ ಪೋಷಕಾಂಶಗಳ (Nutrients) ಕೊರತೆಯೂ ಉಂಟಾಗಬಹುದು! ಜತೆಗೆ, ಕೆಲವು ರೋಗಗಳಿಗೂ ಕಾರಣವಾಗಬಹುದು. 

Fatty Liver: ಹೊಟ್ಟೆ ದೊಡ್ಡದಾಗ್ತಾ ಇದ್ಯಾ? ಇವುಗಳನ್ನು ಪಾಲನೆ ಮಾಡಿ

Tap to resize

Latest Videos

ನೀವು ಕೆಲವರನ್ನು ನೋಡಿರಬಹುದು. ಬೆಳಗಾದರೆ ಸೇಬು ಹಣ್ಣು, ಮಧ್ಯಾಹ್ನ ಪಪ್ಪಾಯ ಮತ್ತು ಬಾಳೆಹಣ್ಣು, ಸಂಜೆಗೆ ತಿಂಡಿ, ರಾತ್ರಿ ಮತ್ತೆ ಹಣ್ಣುಗಳ ಸೇವನೆ ಮಾಡುತ್ತಾರೆ. ಅವರ ಪ್ರಕಾರ, ಇದು ತೂಕ ಇಳಿಕೆಗೆ ಸಹಕಾರಿ. ಆದರೆ, ಇಷ್ಟೊಂದು ಪ್ರಮಾಣದ ಹಣ್ಣುಗಳ ಸೇವನೆಯಿಂದ ಕ್ರಮೇಣ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇ ಉಂಟಾಗುವ ಸಾಧ್ಯತೆಯೇ ಅಧಿಕ. ಹಣ್ಣುಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ, ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ, ತೂಕ ಹೆಚ್ಚುವುದು, ಬೊಜ್ಜು, ಟೈಪ್‌ 2 ಮಧುಮೇಹ, ಪೋಷಕಾಂಶಗಳ ಕೊರತೆ, ಪಚನಕ್ರಿಯೆಯಲ್ಲಿ ಸಮಸ್ಯೆ ಉಂಟಾಗುವುದು, ಗ್ಯಾಸ್ಟ್ರಿಕ್‌ (Gastric) ಹಾಗೂ ಬ್ಲೋಟಿಂಗ್‌ (Bloating), ಇರಿಟೇಬಲ್‌ ಬಾವೆಲ್‌ ಸಿಂಡ್ರೋಮ್‌ ಅಥವಾ ಕರುಳಿನ (Gut) ಸಮಸ್ಯೆಗಳು. 

ರೋಹಿತ್ ಶರ್ಮಾರಂತೆ ಹಣ್ಣು ತಿಂದು ತೂಕ ಇಳಿಸ್ಕೊಳ್ಳಿ

ದಿನದಲ್ಲಿ ಎಷ್ಟು ಪ್ರಮಾಣದ ಹಣ್ಣು ಸೇವನೆ ಉಚಿತ?
ಆಹಾರ ತಜ್ಞರ ಪ್ರಕಾರ, ದಿನದಲ್ಲಿ ಹಣ್ಣುಗಳ ಸೇವನೆ ಮಿತ ಪ್ರಮಾಣದಲ್ಲಿ ಇರಬೇಕು. ವಯಸ್ಕರು ಐದು ಬಗೆಯ ಹಣ್ಣು ಮತ್ತು ತರಕಾರಿಗಳನ್ನು 80 ಗ್ರಾಂ ನಷ್ಟು ದಿನಕ್ಕೆ ಐದು ಬಾರಿ ಸೇವನೆ ಮಾಡಬಹುದು. ಮಕ್ಕಳ ಪ್ರಮಾಣ ಇನ್ನೂ ಕಡಿಮೆ. ಹಣ್ಣುಗಳೊಂದಿಗೆ ತರಕಾರಿ (Vegetables), ಧಾನ್ಯ, ಬೀನ್ಸ್‌ (Beans), ಸಸ್ಯಾಧಾರಿತ ಪ್ರೊಟೀನ್‌ (Protein), ಸೊಪ್ಪುಗಳನ್ನು ಸೇವಿಸುವುದು ಸಹ ಅಗತ್ಯ. 
 

click me!