ಆ್ಯಪಲ್ ವಾಚ್‌ ಅಲರ್ಟ್‌ನಿಂದ ಉಳಿಯಿತು ತುಂಬು ಗರ್ಭಿಣಿ ಜೊತೆ ಮಗುವಿನ ಪ್ರಾಣ!

By Chethan Kumar  |  First Published Sep 5, 2024, 3:28 PM IST

ಆ್ಯಪಲ್ ವಾಚ್ ನೀಡಿದ ಅಲರ್ಟ್ ವಾರ್ನಿಂಗ್‌ನಿಂದ 8 ತಿಂಗಳ ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿನ ಪ್ರಾಣ ಉಳಿದ ಘಟನೆ ನಡೆದಿದೆ. 


ಕ್ಯಾಲಿಫೋರ್ನಿಯಾ(ಸೆ.05) ತಂತ್ರಜ್ಞಾನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಜೀವನದ ಹಲವು ಸವಾಲುಗಳು, ಸಂಕಷ್ಟಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ. ಅತ್ಯಾಧುನಿಕ ತಂತ್ರಜ್ಞಾನದ ಆ್ಯಪಲ್ ವಾಚ್ ಈಗಾಗಲೇ ಹಲವರ ಜೀವ ಉಳಿಸಿದೆ. ಇದೀಗ 8 ತಿಂಗಳ ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ ಉಳಿಸುವಲ್ಲಿ ಆ್ಯಪಲ್ ಸ್ಮಾರ್ಟ್‌ವಾಚ್ ಯಶಸ್ವಿಯಾಗಿದೆ. ಆ್ಯಪಲ್ ವಾಚ್ ನೀಡಿದ ಎದೆಬಡಿತ ಅಲರ್ಟ್‌ನಿಂದ ಮಹಿಳೆ ತಕ್ಷಣವೇ ಆಸ್ಪತ್ರೆ ದಾಖಲಾಗಿದ್ದಾಳೆ. ಇದರ ಪರಿಣಾಮ ಅಮೂಲ್ಯ ಎರಡು ಜೀವ ಉಳಿದಿದೆ.

ರಾಚೆಲ್ ಮನಾಲೋ 8 ತಿಂಗಳ ಗರ್ಭಿಣಿ. ವೈದ್ಯರ ಸೂಚನೆಯಿಂದ ಆರೈಕೆ, ಆಹಾರ, ವ್ಯಾಯಾಮದಲ್ಲಿ ತೊಡಗಿದ್ದರು. ಈ ವೇಳೆ ರಾಚೆಲ್‌ಗೆ ಉಸಿರಾಟ ಸಮಸ್ಯೆ, ಅಸ್ವಸ್ಥತೆ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಎದುರಾಗಿದೆ. 8 ತಿಂಗಳ ಗರ್ಭಿಣಿ ಕಾರಣದಿಂದ ಇದು ಸಾಮಾನ್ಯ ಎಂದು ರಾಚೆಲ್ ಸುಮ್ಮನಾಗಿದ್ದಾರೆ. ಆದರೆ ಕೆಲ ಹೊತ್ತಲ್ಲೇ ರಾಚೆಲ್ ಎದೆಬಡಿತ ಹೆಚ್ಚಾಗಿದೆ. 

Tap to resize

Latest Videos

undefined

ದೆಹಲಿ ಯುವತಿಯ ಜೀವ ಉಳಿಸಿದ ಆ್ಯಪಲ್ ವಾಚ್, ಸ್ನೇಹಾಗೆ ಸಿಇಒ ಕುಕ್ ಪ್ರತಿಕ್ರಿಯೆ!

ಎದೆಬಡಿತದಲ್ಲಿ ವ್ಯತ್ಯಾಸವಾಗುತ್ತದ್ದಂತೆ ಕೈಗೆ ಕಟ್ಟಿದ್ದ ಆ್ಯಪಲ್ ಸ್ಮಾರ್ಟ್ ವಾಚ್ ಅಲರ್ಟ್ ನೀಡಿದೆ. ಆರಂಭದಲ್ಲೇ ಆ್ಯಪಲ್ ಸ್ಮಾರ್ಟ್‌ವಾಚ್ ಎದೆಬಡಿತ ಭಾರಿ ವ್ಯತ್ಯಾಸದ ಸೂಚನೆ ನೀಡಿದೆ. ಸಾಮಾನ್ಯವಾಗಿ ಪ್ರತಿ ನಿಮಷಕ್ಕೆ 60 ರಿಂದ 100 ಬಾರಿ ಎದೆಬಡಿತವಿರುತ್ತದೆ. ಆದರೆ ರಾಚೆಲ್ ಎದೆಬಡಿತ ಏಕಾಏಕಿ 150ಕ್ಕೆ ಹೆಚ್ಚಳವಾಗಿತ್ತು. ಆ್ಯಪಲ್ ವಾಚ್ EKG ಫೀಚರ್ ಈ ಎದೆಬಡಿತದ ಅಲರ್ಟ್ ನೀಡಿತ್ತು.

ಆದರೆ ತನ್ನ ಎದೆಬಡಿತ ಹೆಚ್ಚಾಗಿದೆ, ವ್ಯತ್ಯಾಸವಾಗಿದೆ ಅನ್ನೋ ಅನುಭವ ರಾಚೆಲ್‌ಗೆ ಆಗಿಲ್ಲ. ಮೊದಲೇ ಕಂಡು ಬಂದ ಉಸಿರಾಟ ಸಮಸ್ಯೆ ಹಾಗೂ ಅಸ್ವಸ್ಥತೆ ಹೊರತುಪಡಿಸಿದರೆ ಎದೆಬಡಿತ ಏರಿಳಿತದ ವ್ಯತ್ಯಾಸ ಅನುಭವಕ್ಕೆ ಬಂದಿಲ್ಲ. ಆದರೆ ಆ್ಯಪಲ್ ವಾಚ್ ಅಲರ್ಟ್‌ನಿಂದ ಗಂಭೀರತೆ ಅರಿವಾಗಿದೆ. ತಕ್ಷಣವೇ ತುರ್ತು ಸೇವೆ ನೆರವು ಪಡೆದ ಮಹಿಳೆ ಆಸ್ಪತ್ರೆ ದಾಖಲಾಗಿದ್ದಾರೆ.

ತುರ್ತು ನಿಘಾಟ ಘಟಕಕ್ಕೆ ದಾಖಲಾದ ಮಹಿಳೆಯನ್ನು ವೈದ್ಯರ ತಂಡ ತಪಾಸಣೆ ಮಾಡಿದೆ. ಮಹಿಳೆಯ ಹೃದಯ ಕೆಳಭಾಗದ ಕೋಣೆ ಸರಿಯಾಗಿ  ರಕ್ತವನ್ನು ಪಂಪ್ ಮಾಡುತ್ತಿರಲಿಲ್ಲ. ಇದು ಅತೀದೊಡ್ಡ ಅಪಾಯದ ಸೂಚನೆಯನ್ನು ಎದೆಬಡಿತದ ಮೂಲಕ ನೀಡಿದೆ. ಹೃದಯಾಘಾತದ ಸೂಚನೆ ಸಿಕ್ಕ ಬೆನ್ನಲ್ಲೇ ಮಹಿಳೆ ಆಸ್ಪತ್ರೆ ದಾಖಲಾದ ಕಾರಣ ಸೂಕ್ತ ಚಿಕಿತ್ಸೆ ನೀಡಿದ ವೈದ್ಯರು ಮಹಿಳೆ ಹಾಗೂ ಆಕೆಯ ಗರ್ಭದಲ್ಲಿದ್ದ 8 ತಿಂಗಳ ಮಗುವಿನ ಪ್ರಾಣ ಉಳಿಸಿದ್ದಾರೆ.

ಆ್ಯಪಲ್ ವಾಚ್‌ ಹಲವರ ಪ್ರಾಣ ಉಳಿಸಿದ ಘಟನೆ ನಡೆದಿದೆ. ಅಪಘಾತದ ವೇಳೆ ಆಪ್ತರಿಗೆ, ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಹಾಗೂ ಲೊಕೋಶನ್ ಕಳುಹಿಸುವ ಮೂಲಕ ಗೋಲ್ಡನ್ ಹವರ್‌ನಲ್ಲಿ ಚಿಕಿತ್ಸೆ ಪಡೆದು ಹಲವರ ಪ್ರಾಣ ಉಳಿದಿದೆ. ತುರ್ತು ಸಂದರ್ಭಗಳಲ್ಲಿ ಆ್ಯಪಲ್ ವಾಚ್ ಅಲರ್ಟ್ ಮೆಸೇಜ್‌ಗಳು ಆಪ್ತರನ್ನು ಬದುಕಿಸಲು ನೆರವಾಗಿದೆ. ತಂತ್ರಜ್ಞಾನದ ಬಳಕೆಯಿಂದ ಹಲವು ಪ್ರಯೋಜನಗಳು ಇವೆ. ಆದರೆ ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು ಅಷ್ಟೆ.

ಸಾವಿನಂಚಿನಲ್ಲಿದ್ದ ವಿದ್ಯಾರ್ಥಿನಿ ಜೀವ ಉಳಿಸಿದ ಸ್ಮಾರ್ಟ್ ವಾಚ್

ದೆಹಲಿಯ 35 ವರ್ಷದ ಸ್ನೇಹಾ ಸಿನ್ಹ ಅನ್ನೋ ಯುವತಿ ಕಳೆದ ವರ್ಷ ಇದೇ ಆ್ಯಪಲ್ ವಾಚ್‌ನಿಂದ ಬದುಕಿದ್ದಳು. ಎದೆಬಡಿತ ಹೆಚ್ಚಾದ ಬೆನ್ನಲ್ಲೇ ಆ್ಯಪಲ್ ವಾರ್ಚ್ ಅಲರ್ಟ್ ಮಾಡಿತ್ತು. ಕೆಲ ಹೊತ್ತಲ್ಲೇ ಈಕೆಯ ಎದೆಬಡಿತ ಮತ್ತೆ ಹೆಚ್ಚಾಗಿತ್ತು. ಈ ವೇಳೆ ಆ್ಯಪಲ್ ವಾಚ್, ವೈದ್ಯರನ್ನು ಸಂಪರ್ಕಿಸಲು ಸೂಚಿಸಿದೆ. ಇದರಿಂದ ವೈದ್ಯರನ್ನು ಬೇಟಿಯಾದ ಸ್ನೇಹಾ ಗಂಭೀರ ಅಪಾಯದಿಂದ ಪಾರಾಗಿ ಬದುಕುಳಿದಿದ್ದಾಳೆ. ಕುರಿತು ಆ್ಯಪಲ್ ವಾಚ್‌ಗೆ ಧನ್ಯವಾದ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ಹಾಕಿದ್ದಳು. ಇದಕ್ಕೆ ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿಕ್ರಿಯಿಸಿದ್ದರು. 
 

click me!