Health Tips: ದಿನದಲ್ಲಿ ಒಂದೇ ಬಾರಿ ಊಟ ಮಾಡಿದ್ರೆ ಇಳಿಯುತ್ತಾ ತೂಕ?

By Suvarna News  |  First Published Jun 9, 2023, 4:32 PM IST

ಹೆಚ್ಚಿದ ತೂಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಂತ ತ್ವರಿತವಾಗಿ ತೂಕ ಇಳಿಸಿದ್ರೆ ಅದೂ ಅನಾರೋಗ್ಯ ತರುತ್ತದೆ. ತೂಕ ಇಳಿಕೆ ಯಾವಾಗ್ಲೂ ಆರೋಗ್ಯಕರವಾಗಿರಬೇಕು. ಸದ್ಯ ಸುದ್ದಿಯಾಗ್ತಿರುವ ಒಎಮ್ಎಡಿ ಡಯಟ್ ಲಾಭ ನೀಡುತ್ತಾ? 
 


ತೂಕ ಇಳಿಸಲು ಜನರು ನಾನಾ ಡಯಟ್ ಪ್ಲಾನ್ ಪಾಲನೆ ಮಾಡ್ತಾರೆ. ಮಧ್ಯಂತರ  ಉಪವಾಸ, ಕೀಟೋ ಡಯಟ್ ಸೇರಿದಂತೆ ಅನೇಕ ಡಯಟ್ ವಿಧಾನ ನಮ್ಮಲ್ಲಿದೆ. ಈ ಪಟ್ಟಿಗೆ ಈಗ ಮತ್ತೊಂದು ಡಯಟ್ ಪ್ಲಾನ್ ಸೇರಿದೆ. ಅದೇ ಒಎಂಎಡಿ. ಇದು ಮಧ್ಯಂತರ ಉಪವಾಸದ ಒಂದು ರೂಪ ಎನ್ನಬಹುದು. ನಾವಿಂದು ಒಎಂಎಡಿ ಉಪವಾಸ ಅಂದ್ರೇನು? ಅದ್ರಿಂದ ಲಾಭವೇನು ಎನ್ನುವ ಬಗ್ಗೆ ನಿಮಗೆ ತಿಳಿಸ್ತೇವೆ.

ಒಎಂಎಡಿ (OMAD) ಉಪವಾಸ ಅಂದ್ರೇನು?  : OMAD ಅಂದರೆ ಒಂದು ದಿನ ಒಂದು ಊಟ (One Meal a Day). ಇದನ್ನು 23:1 ಉಪವಾಸ ಎಂದೂ ಕರೆಯಲಾಗುತ್ತದೆ. ಇದ್ರಲ್ಲಿ ವ್ಯಕ್ತಿ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡ್ತಾನೆ. ಒಂದು ದಿನಕ್ಕೆ ಅಗತ್ಯವಿರುವ ಎಲ್ಲ ಕ್ಯಾಲೋರಿಯನ್ನು ಒಂದೇ ಊಟದಲ್ಲಿ ಪಡೆಯುತ್ತಾನೆ. ಉಳಿದ 23 ಗಂಟೆ ಆತ ಸಂಪೂರ್ಣ ಉಪವಾಸ (Fasting) ಇರ್ತಾನೆ. ಯಾವುದೇ ಆಹಾರವನ್ನು ಈ ಡಯಟ್ ಪ್ಲಾನ್ ನಲ್ಲಿ ಸೇವನೆ ಮಾಡೋದಿಲ್ಲ. ಆದ್ರೆ ನೀರು, ಟೀ, ಬ್ಲಾಕ್ ಕಾಫಿಯಂತಹ ಪಾನೀಯ ಸೇವನೆಗೆ ಇಲ್ಲಿ ಅವಕಾಶವಿದೆ. ಒಂದೇ ಊಟವಿರುವ ಕಾರಣ ಒಂದು ದಿನಕ್ಕೆ ಅಗತ್ಯವಿರುವಷ್ಟು ಕ್ಯಾಲೋರಿಯನ್ನು ನೀವು ತೆಗೆದುಕೊಂಡಿದ್ದೀರಾ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಕ್ಯಾಲೋರಿ ಅಗತ್ಯತೆ ಭಿನ್ನವಾಗಿರುತ್ತದೆ. ಇದು ಸಾಮಾನ್ಯವಾಗಿ 1,200 ರಿಂದ 2,500 ರ ನಡುವೆ ಇರುತ್ತದೆ.

Tap to resize

Latest Videos

Weight Loss Tips: ತೂಕ ಇಳಿಸಿಕೊಳ್ಳಲು ಬೆವರು ಇಳಿಸಬೇಕಿಲ್ಲ, ಹೀಗೂ ಮಾಡಿದ್ರೂ ಸಾಕು!

ಒಎಂಎಡಿ (OMAD) ಉಪವಾಸ ಲಾಭಕರವೇ? : ತಜ್ಞರ ಪ್ರಕಾರ ಒಎಂಎಡಿ ಡಯಟ್ ತೂಕ ಇಳಿಕೆಗೆ ಲಾಭದಾಯಕವಾಗಿದೆ. 

ಕ್ಯಾಲೋರಿ ಸೇವನೆಯಲ್ಲಿ ಇಳಿಕೆ : ಒಂದೇ ಬಾರಿ ಇದ್ರಲ್ಲಿ ನಾವು ಆಹಾರ ಸೇವನೆ ಮಾಡ್ತೇವೆ. ಹಾಗಾಗಿ ಹೆಚ್ಚುವರಿ ಕ್ಯಾಲೋರಿ ನಮ್ಮ ದೇಹ ಸೇರೋದಿಲ್ಲ. ಒಂದು ಬಾರಿ ಅಗತ್ಯವಿರುಷ್ಟು ಮಾತ್ರ ಕ್ಯಾಲೋರಿ ಒಳಗೆ ಹೋಗುವ ಕಾರಣ ತೂಕ ಸುಲಭವಾಗಿ ಇಳಿಯುತ್ತದೆ.

ಕೊಬ್ಬು ಕರಗಲು ಸಹಕಾರಿ : 23 ಗಂಟೆ ಉಪವಾವಿರುವ ಕಾರಣ ದೇಹ  ಶಕ್ತಿಗಾಗಿ ದೇಹದ ಕೊಬ್ಬನ್ನು ಹೆಚ್ಚು ಅವಲಂಬಿಸುತ್ತದೆ. ಇದ್ರಿಂದ ಕೊಬ್ಬು ಬೇಗ ಕರಗುತ್ತದೆ.

Health Tips: ಏಳೇ ದಿನದಲ್ಲಿ ತೂಕ ಇಳಿಸೋದು ಹೇಗೆ ಗೊತ್ತಾ?

ಊಟದ ತಯಾರಿ ಸುಲಭ : ದಿನಕ್ಕೆ ಒಂದು ಊಟವನ್ನು ಮಾತ್ರ ತಿನ್ನುವುದರಿಂದ ಊಟವನ್ನು ತಯಾರಿಸೋದು ಸುಲಭ. ಮತ್ತೆ ಮತ್ತೆ ಊಟದ ಬಗ್ಗೆ ಆಲೋಚನೆ ಮಾಡಿ, ತಯಾರಿ ನಡೆಸಿ ಶ್ರಮ ಹಾಗೂ ಶಕ್ತಿಯನ್ನು ಕಳೆದುಕೊಳ್ಳಬೇಕಾಗಿಲ್ಲ.

ಒಎಮ್ಎಡಿ ಡಯಟ್ ನಿಂದಾಗುವ ನಷ್ಟ : ಕ್ಷಿಪ್ರ ತೂಕ ನಷ್ಟ ಯಾವಾಗ್ಲೂ ಅಪಾಯಕಾರಿ. ಇದ್ರಿಂದ ಕೆಲ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡಬಹುದು. ಒಎಮ್ಎಡಿ ಡಯಟ್ ನಿಂದಲೂ ಕೆಲ ನಷ್ಟವಿದೆ.
• ಪೌಷ್ಟಿಕಾಂಶದ ಕೊರತೆ ನಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. ಒಂದೇ ಬಾರಿ ಹೆಚ್ಚಿನ ಆಹಾರ ಸೇವನೆ ಸಾಧ್ಯವಿಲ್ಲ. ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶ ದೇಹ ಸೇರೋದಿಲ್ಲ. ಈ ಡಯಟ್ ಮಾಡ್ತೇನೆ ಎನ್ನುವವರು ಸಮತೋಲಿತ ಆಹಾರ ಸೇವನೆ ಮಾಡ್ಬೇಕಾಗುತ್ತದೆ. ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬು, ಜೀವಸತ್ವ ಮತ್ತು ಖನಿಜ ನಮ್ಮ ದೇಹ ಸೇರುವಂತೆ ನೋಡಿಕೊಳ್ಳಬೇಕು.
• ಹಸಿವು ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. 23 ಗಂಟೆಗಳ ಕಾಲ ಉಪವಾಸವಿರುವ ಕಾರಣ ಅತಿ ಹಸಿವು ನಿಮ್ಮನ್ನು ಹೆಚ್ಚೆಚ್ಚು ತಿನ್ನುವಂತೆ ಒತ್ತಾಯಿಸಬಹುದು. 
• ಶಕ್ತಿಯ ಕೊರತೆ ಕೂಡ ಈ ಡಯಟ್ ನಲ್ಲಿ ಕಾಡಬಹುದು. ಒಂದೇ ಬಾರಿ ಆಹಾರ ಸೇವನೆ ಮಾಡುವುದ್ರಿಂದ ದೇಹಕ್ಕೆ ಅಗತ್ಯವಿರುಷ್ಟು ಶಕ್ತಿ ಸಿಗದೆ ಇರಬಹುದು. ಶಕ್ತಿ ಕಡಿಮೆಯಾದ್ರೆ ಕೆಲಸ ಕಷ್ಟವಾಗುತ್ತದೆ. ಒಂದೇ ಕಡೆ ನಿಮ್ಮ ಗಮನ ಕೇಂದ್ರೀಕರಿಸಲು ನಿಮಗೆ ಸಮಸ್ಯೆಯಾಗಬಹುದು. ನಿಮ್ಮ ದೈನಂದಿನ ಚಟುವಟಿಕೆ ಮೇಲೆ ಇದು ಪರಿಣಾಮ ಬೀರುತ್ತದೆ.

click me!