Health Tips: ರಾತ್ರಿ ಮಲಗೋ ಮುನ್ನ ಹಣ್ಣು ತಿನ್ನಬಾರ್ದಾ?

By Suvarna News  |  First Published Jun 23, 2022, 4:16 PM IST

ನಮ್ಮ ಆರೋಗ್ಯಕ್ಕೆ ಹಣ್ಣುಗಳ ಸೇವನೆ ಅತಿ ಮುಖ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ, ಸಂಜೆ ಸಮಯದಲ್ಲಿ ತಿನ್ನಬಾರದು ಎನ್ನಲಾಗುತ್ತದೆ. ಇದು ನಿಜಕ್ಕೂ ಸರಿಯೇ? ಹಣ್ಣುಗಳನ್ನು ಯಾವುದೇ ಸಮಯದಲ್ಲಾದರೂ ಏಕೆ ಸೇವಿಸಬೇಕು ಎಂದು ಮಾಹಿತಿ ನೀಡಿದ್ದಾರೆ ಆಹಾರ ತಜ್ಞೆ ಮೋಹಿತಾ ಗುಪ್ತಾ. 
 


ಹಣ್ಣುಗಳಲ್ಲಿ (Fruits) ಪೌಷ್ಟಿಕಾಂಶದ (Nutrients) ಆಗರವೇ ಅಡಗಿದೆ ಎಂದರೆ ತಪ್ಪಿಲ್ಲ. ನಮ್ಮ ದೇಹಕ್ಕೆ ಅಗತ್ಯವಾಗಿರುವ ಅನೇಕ ಪೌಷ್ಟಿಕಾಂಶಗಳು ಹಣ್ಣುಗಳಲ್ಲಿ ಧಾರಾಳವಾಗಿ ಅಡಕವಾಗಿವೆ. ಹೀಗಾಗಿಯೇ ಹಣ್ಣುಗಳು ಆರೋಗ್ಯಪೂರ್ಣ (Healthy) ಆಹಾರದಲ್ಲಿ ಪ್ರಮುಖ ಸ್ಥಾನ ಗಳಿಸುತ್ತವೆ. ಆದರೂ ಕೆಲವು ಹಣ್ಣುಗಳನ್ನು ರಾತ್ರಿ (Night) ಮಲಗುವ ಮುನ್ನ ಹಾಗೂ ಬೆಳಗ್ಗೆ (Morning) ಎದ್ದಾಕ್ಷಣ ತಿನ್ನಬಾರದು ಎನ್ನುವ ನಂಬಿಕೆ ಜನರಲ್ಲಿದೆ. ಇದು ನಿಜಕ್ಕೂ ಸತ್ಯವೇ? ರಾತ್ರಿ ಹಣ್ಣುಗಳನ್ನು ತಿನ್ನಬಾರದೇ ಎನ್ನುವ ಕುರಿತು ಆಹಾರ ತಜ್ಞೆ ಮೋಹಿತಾ ಗುಪ್ತಾ (Mohita Gupta) ಅವರು ಇತ್ತೀಚೆಗೆ ತಮ್ಮ ಇನ್‌ ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಎಷ್ಟೋ ಜನರು ರಾತ್ರಿ ಮಲಗುವ ಮುನ್ನ ಬಾಳೆಹಣ್ಣು (Banana), ಮಾವಿನಹಣ್ಣುಗಳನ್ನು (Mango) ಸೇವಿಸುವುದಿಲ್ಲ. ಹಾಗೆಯೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲೂ ಇವುಗಳನ್ನು ತಿನ್ನುವುದಿಲ್ಲ. ಹಾಗಿದ್ದರೆ ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ (Time) ಯಾವುದು? ಹಣ್ಣುಗಳಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಂಪೂರ್ಣವಾಗಿ ಸಿಗಲು ಏನು ಮಾಡಬೇಕು ಎಂದು ಮೋಹಿತಾ ತಿಳಿಸಿದ್ದಾರೆ. 

ದಾಖಲೆ ಬರೆದ ಅಸ್ಸಾಂ ಟೀ

ಕ್ಯಾಲರಿ (Calorie) ಹೆಚ್ಚಿಸುವುದಿಲ್ಲ
ಮೋಹಿತಾ ಪ್ರಕಾರ, ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ಮಧುಮೇಹ (Diabetes) ಹೆಚ್ಚಾಗುತ್ತದೆ ಎನ್ನುವುದು ಸತ್ಯವಲ್ಲ. ರಕ್ತದಲ್ಲಿ ಸಕ್ಕರೆ ಪ್ರಮಾಣ ಇದರಿಂದಾಗಿ ಹೆಚ್ಚುವುದಿಲ್ಲ. ತೂಕ (Weight) ಅಧಿಕವಾಗುವುದಿಲ್ಲ. ಹಣ್ಣುಗಳು ರಾತ್ರಿ ಸಮಯದಲ್ಲಿ ಕ್ಯಾಲರಿಯನ್ನು ಹೆಚ್ಚಿಸುವುದಿಲ್ಲ. ಮಧ್ಯಾಹ್ನ ಎರಡು ಅಥವಾ ನಾಲ್ಕು ಗಂಟೆಯ ಬಳಿಕ ಅವುಗಳನ್ನು ತಿನ್ನಬಾರದು ಎನ್ನುವ ಥಿಯರಿ ಸರಿಯಲ್ಲ. ಅವು ಹೇಗಿರುತ್ತವೆಯೋ ಹಾಗೆಯೇ ಇರುತ್ತವೆ. ಹಾಗೂ ರಾತ್ರಿಯಲ್ಲಿ ಅವು ವಿಷಕಾರಿಯಾಗಿ ಬದಲಾಗುವುದಿಲ್ಲ. ಈ ಕುರಿತು ಭಯ ಬೇಡ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 

ನಾರು ಹಾಗೂ ಹಲವಾರು ಪೌಷ್ಟಿಕ ಅಂಶಗಳನ್ನು ಹೊಂದಿರುವ ಹಣ್ಣುಗಳು ಹಗಲಿನಲ್ಲೂ ರಾತ್ರಿಯಲ್ಲೂ ಒಂದೇ ರೀತಿಯ ಪರಿಣಾಮ ಬೀರುತ್ತವೆ. ಹೀಗಾಗಿ, ಯಾವುದೇ ಸಮಯದಲ್ಲೂ ಅವುಗಳನ್ನು ಸೇವನೆ ಮಾಡಬಹುದು. ಅದಕ್ಕಾಗಿಯೇ ಉತ್ತಮ ಸಮಯ ಎಂಬುದಿಲ್ಲ. ಯಾವುದೇ ಸಮಯದಲ್ಲಾದರೂ ಹಣ್ಣುಗಳು ಒಂದೇ ರೀತಿಯ ಪರಿಣಾಮ ನೀಡುತ್ತವೆ. ಆದರೆ, ರಾತ್ರಿ ಮಲಗುವ ಕನಿಷ್ಠ ಮೂರು ಗಂಟೆಗಳ ಮೊದಲು (Before 3 Hour) ಹಣ್ಣು ಸೇರಿದಂತೆ ಯಾವುದೇ ಆಹಾರ ಸೇವಿಸುವುದು ಸೂಕ್ತವಲ್ಲ. ಚೆನ್ನಾಗಿ ನಿದ್ರೆ ಬರಲು ಈ ನಿಯಮವನ್ನು ಪಾಲನೆ ಮಾಡಬೇಕು. ಆಹಾರ ಸೇವಿಸಿದ ತಕ್ಷಣ ಮಲಗಿದರೆ ಉತ್ತಮ ನಿದ್ರೆ ಹತ್ತಿರ ಸುಳಿಯುವುದಿಲ್ಲ. ಹಾಗೂ ಮಧ್ಯರಾತ್ರಿಯಲ್ಲಿ ಹಣ್ಣುಗಳನ್ನು ಸೇವಿಸಬಾರದು. 
ಹಣ್ಣುಗಳಲ್ಲಿ ಪೊಟ್ಯಾಸಿಯಂ, ನಾರಿನಂಶ (Fibre), ವಿಟಮಿನ್‌ ಸಿ ಹಾಗೂ ಫೊಲೇಟ್‌ (Folate) ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಹೀಗಾಗಿ, ದೈನಂದಿನ ಆಹಾರದಲ್ಲಿ ಹಣ್ಣುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. 

Tap to resize

Latest Videos

ದೇಹಕ್ಕೆ ಒಗ್ಗಿದರೆ ಮಾತ್ರ….
ಒಂದು ವಿಚಾರ ನೆನಪಿನಲ್ಲಿರಲಿ. ನಮ್ಮ ದೇಹಕ್ಕೆ ಒಗ್ಗುತ್ತದೆ ಎಂದಾದರೆ ಮಾತ್ರ ಸಂಜೆಯ ವೇಳೆಗೂ ಯಾವುದೇ ಹಣ್ಣನ್ನಾದರೂ ಸೇವಿಸಬಹುದು. ಕೆಲವರಿಗೆ ಬಾಳೆಹಣ್ಣನ್ನು ರಾತ್ರಿ ಮಲಗುವ ಮುನ್ನ (Before Going to Bed) ತಿಂದರೆ ಕಫ ಕಟ್ಟಿಕೊಳ್ಳಬಹುದು, ಶೀತವಾದಂತೆ (Cold) ಆಗಬಹುದು. ಅವರ ದೇಹಪ್ರಕೃತಿಗೆ ಇದು ಒಗ್ಗುವುದಿಲ್ಲ ಎಂದರ್ಥ. ಅಂತಹ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನುವ ಪ್ರಯತ್ನ ಸಲ್ಲದು. ಹಾಗೆಯೇ ಎಲ್ಲ ಹಣ್ಣುಗಳು ಕೂಡ. ಆಯುರ್ವೇದದ ಪ್ರಕಾರ, ಅಸ್ತಮಾ, ಕೆಮ್ಮು (Caugh), ಕಫ ಇರುವವರು ರಾತ್ರಿ ಮಲಗುವ ಮುನ್ನ ಸಿಟ್ರಸ್‌ (Citrus) ಜಾತಿಗೆ ಸೇರಿದ ಹಣ್ಣುಗಳು ಮತ್ತು ಬಾಳೆಹಣ್ಣನ್ನು ತಿನ್ನಬಾರದು. ರಾತ್ರಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಎದೆಯಲ್ಲಿ ಕಫ ಗಟ್ಟಿಯಾಗಿ ಉಸಿರಾಟದ ಸಮಸ್ಯೆ ಸೃಷ್ಟಿಯಾಗಬಹುದು. ಆದರೆ, ಅಂತಹ ಸಮಸ್ಯೆ ಇಲ್ಲದವರು ಆರಾಮಾಗಿ ಸೇವಿಸಬಹುದು. ಬಾಳೆಹಣ್ಣು, ಮಾವು ಯಾವುದೇ ಹಣ್ಣಾದರೂ ಅವುಗಳಲ್ಲಿ ನಾರಿನಂಶ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಆಹಾರ ನಿಧಾನವಾಗಿ ಜೀರ್ಣವಾಗುತ್ತದೆ. ಹೀಗಾಗಿಯೇ, ಮಲಗುವ ಕೆಲವು ತಾಸುಗಳ ಮೊದಲೇ ತಿನ್ನುವುದು ಸೂಕ್ತ.

ಡ್ರೈ ಫ್ರೂಟ್ಸ್ ಆರೋಗ್ಯಕ್ಕೊಳಿತು ಅಂತ ಸಿಕ್ಕಾಪಟ್ಟೆ ತಿನ್ನಬೇಡಿ

click me!