ದೇಶಗಳು ಅನ್‌ಲಾಕ್ ಬಗ್ಗೆ ನಿಜಕ್ಕೂ ಮಹತ್ವ ನಿರ್ಧಾರ ತೆಗೆದುಕೊಳ್ಳುವುದಾದರೆ ಅವರಿಗೆ ಕೊರೋನಾ ಹರಡುವುದನ್ನು ತಡೆಯುವ ಮತ್ತು ಜನರ ಜೀವ ಉಳಿಸುವ ಬಗ್ಗೆಯೂ ಗಂಭೀರ್ಯತೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೋಸ್ ಅಧನೊಂ ಗೆಬ್ರಿಯಾಸಿಸ್ ಹೇಳಿದ್ದಾರೆ.
ಮಕ್ಕಳು ಶಾಲೆಯತ್ತ ಹೋಗೋದು, ಜನ ಕೆಲಸ ಕಚೇರಿಗೆ ಹೋಗುವುದನ್ನು ನೊಡಲು ವಿಶ್ವ ಆರೋಗ್ಯ ಸಂಸ್ಥೆಗೂ ಆಸೆ ಇದೆ. ಆದರೆ ಯಾವುದೇ ರಾಷ್ಟ್ರ ತಮಲ್ಲಿ ಕೊರೋನಾ ಮುಗಿಯಿತು ಎನ್ನುವಂತೆ ವರ್ತಿಸುವ ಹಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದೇಶಗಳು ಅನ್‌ಲಾಕ್ ಬಗ್ಗೆ ನಿಜಕ್ಕೂ ಮಹತ್ವ ನಿರ್ಧಾರ ತೆಗೆದುಕೊಳ್ಳುವುದಾದರೆ ಅವರಿಗೆ ಕೊರೋನಾ ಹರಡುವುದನ್ನು ತಡೆಯುವ ಮತ್ತು ಜನರ ಜೀವ ಉಳಿಸುವ ಬಗ್ಗೆಯೂ ಗಂಭೀರ್ಯತೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೋಸ್ ಅಧನೊಂ ಗೆಬ್ರಿಯಾಸಿಸ್ ಹೇಳಿದ್ದಾರೆ.
undefined
40 ಸಿಬ್ಬಂದಿಗೆ ವೈರಸ್: ನೋಟು ಪ್ರಿಂಟ್ ಸ್ಥಗಿತ!
ನಿಯಂತ್ರಣವಿಲ್ಲದೆ ಓಪನ್ ಮಾಡುವುದು ನಾಶಕ್ಕಿರುವ ದಾರಿ ಎಂದು ಅವರು ಹೇಳಿದ್ದಾರೆ. ಓಪನಿಂಗ್ ಮಾಡುವ ಸಂದರ್ಭ ಕೆಲವು ವಿಚಾರ ಗಮನವಿಡಲೇಬೇಕು ಎಂದಿದ್ದಾರೆ. ವೈಯಕ್ತಿಕವಾಗಿ ಎಲ್ಲರೂ ಅವರರವರ ಕರ್ತವ್ಯ ನಿಭಾಯಿಸಬೇಕು ಎಂದಿದ್ದಾರೆ.
ಕೊರೋನಾ ಸೋಂಕಿತರನ್ನು ಹುಡುಕುವುದು, ಪ್ರತ್ಯೇಕಿಸುವುದು, ಪರೀಕ್ಷಿಸುವುದು ಹಾಗೂ ಕಾಳಜಿ ವಹಿಸಬೇಕು, ಜನರನ್ನು ಸಂಪರ್ಕಿಸಿ ಕ್ವಾರೆಂಟೈನ್ ಮಾಡಬೇಕು, ದೊಡ್ಡ ಕಾರ್ಯಕ್ರಮಗಳನ್ನು ತಡೆಯಬೇಕು, ಗುಂಪು ಸೇರದಂತೆ ತಡೆದು ಸಾವಿನ ಪ್ರಮಾಣ ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ. ಜನರು ಜೊತೆಗೆ ಸೇರುವುದು ಹೇಗೆ, ಯಾವಾಗ ಎಂದು ನಿರ್ಧರಿಸುವುದು ರಿಸ್ಕ್ ತೆಗೆದುಕೊಂಡಂತೆ. ಸದ್ಯ 25,118,689 ಸೋಂಕಿತರಿದ್ದು, 844,312 ಸಾವು ಸಂಭವಿಸಿದೆ.