COVID-19 ಇನ್ನೂ ಮುಗಿದಿಲ್ಲ, ಬೂಸ್ಟರ್ ಡೋಸ್ ತೆಗೆದುಕೊಳ್ಳಲು ತಜ್ಞರ ಸೂಚನೆ

Published : Aug 18, 2022, 11:24 AM IST
COVID-19 ಇನ್ನೂ ಮುಗಿದಿಲ್ಲ, ಬೂಸ್ಟರ್ ಡೋಸ್ ತೆಗೆದುಕೊಳ್ಳಲು ತಜ್ಞರ ಸೂಚನೆ

ಸಾರಾಂಶ

ಭಾರತದಲ್ಲಿ ಕೊರೋನಾ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೆಲ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಮಧ್ಯೆ COVID-19 ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ, ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ತಜ್ಞರು ಸೂಚನೆ ನೀಡಿದ್ದಾರೆ.

ನವದೆಹಲಿ: ಕೊರೋನಾ ವೈರಸ್ ದೇಶದ ಆತಂಕ ಹೆಚ್ಚಿಸಿದೆ. ಈಗಾಗಲೇ ಹಲವು ಅವಾಂತರಗಳಿಗೆ ಕಾರಣವಾಗಿರುವ ಕೋವಿಡ್ ಕಳೆದೊಂದು ವರ್ಷದಿಂದ ನಿಧಾನವಾಗಿ ಭಾರತೀಯರ ಮನಸ್ಸಿನಿಂದ ದೂರವಾಗುತ್ತಿತ್ತು. ಇದೀಗ ಕೋವಿಡ್ ಮತ್ತೆ ಸ್ಫೋಟಗೊಳ್ಳುತ್ತಿದೆ. ಭಾರತದಲ್ಲಿ ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಪ್ರತಿದಿನ ಸುಮಾರು 10,000 ಹೊಸ ಸೋಂಕುಗಳು ವರದಿಯಾಗುತ್ತಿರುವುದರಿಂದ COVID-19 ವಿರುದ್ಧ ಮುನ್ನೆಚ್ಚರಿಕೆ ಅಥವಾ ಲಸಿಕೆಗಳ ಪ್ರಮಾಣವನ್ನು ಹೆಚ್ಚಿಸುವಂತೆ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ ಪೌಲ್ ಜನರನ್ನು ಒತ್ತಾಯಿಸಿದ್ದಾರೆ.

ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಮತ್ತು ಇದಕ್ಕಾಗಿ ಬೂಸ್ಟರ್‌ ಡೋಸ್ ತೆಗೆದುಕೊಳ್ಳಬೇಕಾಗಿದೆ. ಎರಡನೇ ಡೋಸ್ ತೆಗೆದುಕೊಂಡವರು ಮತ್ತು 6 ತಿಂಗಳು ಮೀರಿದವರು ಶೀಘ್ರವಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಎಂದು ಡಾ.ಪೌಲ್ ತಿಳಿಸಿದ್ದಾರೆ. ಚುಚ್ಚುಮದ್ದಿನ ಅಲಭ್ಯತೆಯ ಕುರಿತು ಮಾತನಾಡಿದ ಅವರು, ಲಸಿಕೆ ಲಭ್ಯತೆಯ ಕೊರತೆಯಿಲ್ಲ, ಆದ್ದರಿಂದ ಅರ್ಹ ವ್ಯಕ್ತಿಗಳು ಮುಂಜಾಗ್ರತಾ ಪ್ರಮಾಣದಲ್ಲಿ ಲಸಿಕೆಯನ್ನು ಪಡೆಯಬೇಕು ಎಂದರು.

Corona Crisis: ಕೋವಿಡ್‌ ಸೋಂಕಿತರ ಸಾವು ಹೆಚ್ಚಳ: ಆತಂಕ

ಡೋಸ್ ಹಂಚಿಕೆಯಲ್ಲಿ ಸುಧಾರಣೆ
ಬೂಸ್ಟರ್‌ ಡೋಸ್ ಹಂಚಿಕೆ ಆರಂಭದಲ್ಲಿ ನಿಧಾನಗತಿಯಿತ್ತು ಎಂದು ಹೇಳಲಾಗಿದೆ. ಆದರೆ ಅಮೃತ್ ಮಹೋತ್ಸವಕ್ಕೆ 75 ದಿನಗಳಲ್ಲಿ, ಇನಾಕ್ಯುಲೇಷನ್ ದರದಲ್ಲಿ ಸುಧಾರಣೆ ಕಂಡುಬಂದಿದೆ ಮತ್ತು ಇದು ತೃಪ್ತಿಕರವಾಗಿದೆ ಎಂದು ಅವರು ಹೇಳಿದರು. ಹಿಂದಿನ ಮತ್ತು ಕಳೆದ ತಿಂಗಳಿನ ಇನಾಕ್ಯುಲೇಷನ್ ದರದ ನಡುವಿನ ತುಲನಾತ್ಮಕ ಡೇಟಾವನ್ನು ಪ್ರಸ್ತುತಪಡಿಸಿದ ಅವರು, ಇದು ಮುನ್ನೆಚ್ಚರಿಕೆ ಡೋಸ್ ವ್ಯಾಕ್ಸಿನೇಷನ್ ದರದ ಶೇಕಡಾ 8 ರಷ್ಟಿತ್ತು ಮತ್ತು ಈಗ ಇದು ಒಂದು ತಿಂಗಳೊಳಗೆ 17 ಶೇಕಡಾವನ್ನು ತಲುಪಿದೆ ಆದರೆ ಈ ವೇಗವನ್ನು ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದರು.

ಬೂಸ್ಟರ್‌ ಡೋಸ್ ಲಸಿಕೆಗಳ ಕೊರತೆಯಿಲ್ಲ
ಲಸಿಕೆಗಳ ಕೊರತೆ ಇಲ್ಲ ಮತ್ತು ಅರ್ಹ ಫಲಾನುಭವಿಗಳು ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬೇಕು. COVID-19 ಇನ್ನೂ ಮುಗಿದಿಲ್ಲ. ನೀವು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡಾಗ ಮಾತ್ರ ವೈರಸ್‌ನಿಂದ ರಕ್ಷಣೆ ಪಡೆಯುತ್ತೀರಿ ಎಂದು ಡಾ.ಪೌಲ್ ಹೇಳಿದರು. ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಇತ್ತೀಚೆಗೆ ಸೇರ್ಪಡೆಗೊಂಡ ಕಾರ್ಬೆವಾಕ್ಸ್ ಸೇರಿದಂತೆ ಮೂರು ಲಸಿಕೆಗಳನ್ನು ಮುನ್ನೆಚ್ಚರಿಕೆಯಾಗಿ ತೆಗೆದುಕೊಳ್ಳಲು ಲಭ್ಯವಿದೆ ಎಂದು ಅವರು ಹೇಳಿದರು. ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಹೆಟೆರೊಲಾಜಸ್ ಅಥವಾ ಮಿಕ್ಸ್-ಮ್ಯಾಚ್ ಆಯ್ಕೆಗಾಗಿ ಮುನ್ನೆಚ್ಚರಿಕೆ ಡೋಸ್‌ಗಾಗಿ ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದರು.

ಲಸಿಕೆಗಳ ಕುರಿತು ಸಂಶೋಧನೆ ಇನ್ನೂ ನಡೆಯುತ್ತಿದೆ, ಇಂಟ್ರಾನಾಸಲ್ ಲಸಿಕೆ ಮುಂದುವರಿದ ಹಂತದಲ್ಲಿದೆ ಮತ್ತು ಎಂಆರ್‌ಎನ್‌ಎ ಲಸಿಕೆಯ ಕೆಲಸವೂ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.  ಇಂಟ್ರಾನಾಸಲ್ ಲಸಿಕೆ ಮುಂದುವರಿದ ಹಂತದಲ್ಲಿದೆ ಮತ್ತು ಜನರು Omicron ನಿರ್ದಿಷ್ಟ ಲಸಿಕೆಯನ್ನು ತಯಾರಿಸಬೇಕು ಎಂದು ಮಾತನಾಡುತ್ತಿದ್ದಾರೆ. ಈ ಕುರಿತಾಗಿ ಸಂಶೋಧನೆ ನಡೆಯುತ್ತಿದೆ ಎಂದು ಡಾ.ಪೌಲ್ ತಿಳಿಸಿದ್ದಾರೆ.

ಕಾರ್ಬೆವಾಕ್ಸ್​ ಬೂಸ್ಟರ್‌ ಡೋಸ್ ಹಾಕಿಸಿಕೊಳ್ಳೋ ಮೊದ್ಲು ಈ ವಿಷ್ಯ ಗೊತ್ತಿರ್ಲಿ

ವೇಗವಾಗಿ ಹರಡುವ, ಅಪಾಯಕಾರಿ ಹೊಸ ಒಮಿಕ್ರಾನ್ ಉಪತಳಿ ಪತ್ತೆ
ಇದರ ನಡುವೆ ದೆಹಲಿಯಲ್ಲಿ ಒಮಿಕ್ರಾನ್ ಹೊಸ ಉಪತಳಿ ಪತ್ತೆಯಾಗಿದೆ. BA 2.75 ಹೊಸ ವೇರಿಯೆಂಟ್ ಅತೀ ವೇಗವಾಗಿ ಹರಡಲಿದೆ. ಹಾಗೂ ಅಪಾಯವೂ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ. ದೆಹಲಿಯ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತ ವ್ಯಕ್ತಿಯ ಮಾದರಿ ಪರೀಕ್ಷಾ ಫಲಿತಾಂಶದಲ್ಲಿ ಈ ಹೊಸ ವೇರಿಯೆಂಟ್ ಬೆಳಕಿಗೆ ಬಂದಿದೆ. ಕಳೆದ ಬಾರಿ ಭಾರತದಲ್ಲಿ ಪತ್ತೆಯಾದ ಓಮಿಕ್ರಾನ್ ಹಾಗೂ ಒಮಿಕ್ರಾನ್ ಉಪತಳಿಗಿಂತ ಈ ಬಾರಿ ಪತ್ತೆಯಾಗಿರುವ ಹೊಸ BA 2.75 ವೇರಿಯೆಂಟ್ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

90 ಕೋವಿಡ್ ಸೋಂಕಿತರ ಮಾದರಿ ವರದಿಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿಯಲ್ಲಿ BA 2.75 ಓಮಿಕ್ರಾನ್ ತಳಿ ಪತ್ತೆಯಾಗಿದೆ. ಇದರ ತೀವ್ರತೆ ಕುರಿತು ಅಧ್ಯಯನ ನಡೆಯುತ್ತಿದೆ. BA 2.75 ವೇರಿಯೆಂಟ್ ತಳಿ ಅಪಾಯಕಾರಿಯಾಗಿರುವುದರಿಂದ ಆಗಸ್ಟ್ ತಿಂಗಳು ಅತೀವ ಎಚ್ಚರಿಕೆ ಅಗತ್ಯ. ಕಾರಣ ಇದು ಹರಡುವಿಕೆ ವೇಗ ಹೆಚ್ಚಾಗಿರುವ ಕಾರಣ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಅಪಾಯದ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!