ದೇಶಾದ್ಯಂತ ಟೊಮೆಟೋ ಫ್ಲೂ ಭೀತಿ: ಕೇರಳ, ಒಡಿಶಾದಲ್ಲಿ ಕಟ್ಟೆಚ್ಚರ

By Kannadaprabha News  |  First Published Aug 21, 2022, 10:20 AM IST

ಕೋವಿಡ್‌ 4ನೇ ಅಲೆಯ ಭೀತಿಯ ನಡುವೆಯೇ ಭಾರತದಲ್ಲಿ ಟೊಮೆಟೋ ಫ್ಲೂ ನಿಧಾನವಾಗಿ ವ್ಯಾಪಿಸುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.


ನವದೆಹಲಿ: ಕೋವಿಡ್‌ 4ನೇ ಅಲೆಯ ಭೀತಿಯ ನಡುವೆಯೇ ಭಾರತದಲ್ಲಿ ಟೊಮೆಟೋ ಫ್ಲೂ ನಿಧಾನವಾಗಿ ವ್ಯಾಪಿಸುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮೇ 6ರಂದು ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದ್ದ ಈ ಭಾರೀ ಸಾಂಕ್ರಾಮಿಕ ರೋಗ ಒಡಿಶಾಗೂ ವ್ಯಾಪಿಸಿ ಇದುವರೆಗೂ 82 ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಕೇರಳದ ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡಲ್ಲಿ ಹೈ ಅಲರ್ಟ್‌‌ ಘೋಷಿಸಲಾಗಿದೆ ಎಂದು ಲ್ಯಾನ್ಸೆಟ್‌ ಜರ್ನಲ್‌ನ ವರದಿ ಹೇಳಿದೆ.

ಸಾಮಾನ್ಯವಾಗಿ 1ರಿಂದ 5ರ ವಯೋಮಾನದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮೊದಲಿಗೆ ಸಣ್ಣ ಗುಳ್ಳೆಯ ರೂಪದಲ್ಲಿದ್ದು ಬಳಿಕ ಟೊಮೆಟೋ ಗಾತ್ರಕ್ಕೆ ತಿರುಗುತ್ತದೆ. ಹೀಗಾಗಿ ಇದನ್ನು ಟೊಮೆಟೋ ಫ್ಲೂ ಎಂದು ಗುರುತಿಸಲಾಗುತ್ತದೆ. ವಯಸ್ಕರ ದೇಹದಲ್ಲಿ ಈ ಸೋಂಕಿಗೆ ಸೂಕ್ತ ಪ್ರತಿರೋಧ ತೋರುವ ಜೀವರಕ್ಷಕ ವ್ಯವಸ್ಥೆ ಅಭಿವೃದ್ಧಿಯಾಗಿರುತ್ತದೆ ಎಂದು ವರದಿ ಹೇಳಿದೆ.

Tap to resize

Latest Videos

ಉಡುಪಿಯಲ್ಲಿ ಪತ್ತೆಯಾಗಿದ್ದು ಟೊಮೆಟೊ ಫ್ಲೂ ಅಲ್ಲ, ಮತ್ತೊಂದು ವೈರಸ್!

ಮಕ್ಕಳ ಕೈ, ಕಾಲು ಮತ್ತು ಬಾಯಿಯಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮೊದಲಿಗೆ ಮೇ 6ರಂದು ಕೇರಳದಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಒಡಿಶಾದಲ್ಲೂ ಹಲವು ಪ್ರಕರಣಗಳು ದಾಖಲಾಗಿದ್ದವು. ಇದುವರೆಗೆ ದೇಶದಲ್ಲಿ ಒಟ್ಟು 82 ಪ್ರಕರಣ ದಾಖಲಾಗಿದ್ದು, ಎಲ್ಲಾ 5 ವರ್ಷದೊಳಗಿನ ಮಕ್ಕಳು ಎಂದು ವರದಿ ಹೇಳಿದೆ. ತೀವ್ರ ಜ್ವರ, ಮೈಕೈ ನೋವು, ಸಂದುಗಳಲ್ಲಿ ಊತ, ಆಯಾಸ, ಮೈಯಲ್ಲಿ ಗುಳ್ಳೆ ರೋಗ ಲಕ್ಷಣಗಳಾಗಿವೆ. ಕೆಲವರಿಗೆ ತಲೆಸುತ್ತು, ವಾಂತಿ, ಅತಿಸಾರ, ನಿರ್ಜಲೀಕರಣದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಸದ್ಯ ಇದಕ್ಕೆ ಯಾವುದೇ ನಿರ್ದಿಷ್ಟಔಷಧವೂ ಇಲ್ಲ ಎಂದು ವರದಿ ಹೇಳಿದೆ.

click me!