Run For Sight: ನಾರಾಯಣ ನೇತ್ರಾಲಯದಿಂದ ಗ್ಲುಕೋಮಾ ಜಾಗೃತಿ ಓಟ

Published : Mar 13, 2022, 03:40 PM IST
Run For Sight: ನಾರಾಯಣ ನೇತ್ರಾಲಯದಿಂದ ಗ್ಲುಕೋಮಾ ಜಾಗೃತಿ ಓಟ

ಸಾರಾಂಶ

ವಿಶ್ವ ಗುಕೋಮಾ ವಾರ ಆಚರಣೆ ಹಿನ್ನೆಲೆಯಲ್ಲಿ ಗ್ಲುಕೋಮಾ ಕುರಿತ ಜಾಗೃತಿ ಮೂಡಿಸಲು ಬೆಂಗಳೂರಿನ ನಾರಾಯಣ ನೇತ್ರಾಲಯದಿಂದ 5 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು. 

ವಿಶ್ವ ಗ್ಲುಕೋಮಾ ವಾರ(World Glucoma week) ಆಚರಣೆ ಹಿನ್ನೆಲೆಯಲ್ಲಿ ಗ್ಲುಕೋಮಾ ಕುರಿತ ಜಾಗೃತಿ ಮೂಡಿಸಲು ಬೆಂಗಳೂರಿನ ನಾರಾಯಣ ನೇತ್ರಾಲಯ(Narayana Netralaya)ವು 5 ಕಿಲೋಮೀಟರ್ ದೂರದ ಓಟ ಆಯೋಜಿಸಿತ್ತು. ಇಂದಿರಾ ನಗರದ ನಾರಾಯಣ ನೇತ್ರಾಲಯದಿಂದ ಆರಂಭವಾದ ಮ್ಯಾರಥಾನ್‌(Marathan)ನಲ್ಲಿ 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

ಮ್ಯಾರಥಾನ್‌ನಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾ ಶಂಕರ್ ಗುಳೇದ್ ಭಾಗಿಯಾಗಿದ್ದರೆ ಉಳಿದಂತೆ ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ, ನಾರಾಯಣ ನೇತ್ರಾಲಯದ ಸಿಇಓ ನಿವೃತ್ತ ಕ್ಯಾಪ್ಟನ್ ಎಸ್ ಕೆ ಮಿತ್ತಲ್ ಭಾಗಿಯಾಗಿದ್ದರು. 

'ಕಣ್ಣಿನ ಕಾಯಿಲೆ ಗ್ಲುಕೋಮ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಈ ಮ್ಯಾರಥಾನ್‌ದಾಗಿದೆ. ಗ್ಲುಕೋಮಾ ಕಾಯಿಲೆ ಬಗ್ಗೆ ಜನರಿಗೆ ಸರಿಯಾಗಿ ಗೊತ್ತಿಲ್ಲ, ಈಗಾಗಲೇ 12 ಮಿಲಿಯನ್ ಜನರಿಗೆ ಈ ಕಾಯಿಲೆ ಇದೆ, ಗ್ಲುಕೋಮಾ ಕಾಯಿಲೆಯಿಂದ 1.9 ಮಿಲಿಯಮ್ ಜನರು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ,' ಎಂದು  ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ಹೇಳಿದರು. 

Put The Phone Away: ಮಲಗುವ ಮುನ್ನ ಮೊಬೈಲ್ ಬಳಸಿದ್ರೆ ಆರೋಗ್ಯಕ್ಕೆ ತೊಂದ್ರೆ

ಮುಂದುವರಿದು, 'ಈ ಕಾಯಿಲೆ ಬಗ್ಗೆ ಜನರಿಗೆ ಅಷ್ಟೊಂದಾಗಿ ತಿಳಿದಿಲ್ಲ. ಸ್ಟಿರಾಯ್ಡ್(Steroid), ಕಣ್ಣಿಗೆ ಅತಿಯಾಗಿ ಬಳಸುವ ಡ್ರಾಪ್‌ಗಳಿಂದ ಈ ಕಾಯಿಲೆ ಬರುವಂತ ಸಾಧ್ಯತೆ ಇದೆ, ಅಲ್ಲದೆ, ವಂಶವಾಹಿಯಾಗಿಯೂ ಗ್ಲುಕೋಮಾ ಬರುತ್ತದೆ. ಇದೇನು ಚಿಕಿತ್ಸೆ ಇರದಂಥ ಕಾಯಿಲೆ ಅಲ್ಲ. ಆದರೆ, ಸರಿಯಾದ ಸಮಯಕ್ಕೆ ಪತ್ತೆ ಮಾಡದಿದ್ದರೆ ಮಾತ್ರ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ' ಎಂದರು. 

ಸಾಮಾನ್ಯವಾಗಿ ಗ್ಲುಕೋಮಾವು 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವೈದ್ಯರ ಬಳಿ ಬೇರೆ ಕಣ್ಣಿನ ಸಮಸ್ಯೆಗೆ ಹೋದಾಗ ಗ್ಲುಕೋಮಾ ಪತ್ತೆಯಾಗುವುದೇ ಹೆಚ್ಚು. ಆದರೆ ಗ್ಲುಕೋಮಾಕ್ಕಾಗಿಯೇ ಪರೀಕ್ಷೆಗೆ ಹೋಗುವವರು ಬಹಳ ಕಡಿಮೆ.  ಈ ಬಗ್ಗೆ ಜಾಗೃತಿ ಇದ್ದರೆ, ಹಲವರು ತಮ್ಮ ದೃಷ್ಟಿಯನ್ನು ಕಡೆವರೆಗೂ ಉಳಿಸಿಕೊಳ್ಳಬಹುದಾಗಿದೆ. ಇದೇ ಕಾರಣಕ್ಕಾಗಿ ಓಟ ಆಯೋಜನೆ ಮಾಡಿದ್ದಾಗಿ ಭುಜಂಗ ಶೆಟ್ಟಿ ಹೇಳಿದರು. 

Food And Mood: ಮೂಡ್‌ ಕೆಟ್ಟಾಗ ಹ್ಯಾಪಿಯಾಗೋಕೆ ಬೆಸ್ಟ್ ಆಹಾರವಿದು

ಗ್ಲುಕೋಮಾ(Glucoma) ಎಂದರೇನು?
ನಿಮ್ಮ ಜೀವನದುದ್ದಕ್ಕೂ ಆರೋಗ್ಯಕರ ದೃಷ್ಟಿಯನ್ನು ಆನಂದಿಸಲು ನೀವು ಬಯಸಿದರೇ ನಿಮ್ಮ ಕಣ್ಣುಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಗ್ಲುಕೋಮಾ ಎಂಬುದು ಕಣ್ಣಿನೊಳಗೆ ಹೆಚ್ಚಾದ ದ್ರವ ಒತ್ತಡದಿಂದ ಉಂಟಾಗುವ ಗಂಭೀರ ಕಣ್ಣಿನ ಕಾಯಿಲೆಯಾಗಿದ್ದು, ಇದು ಮೆದುಳಿಗೆ ಚಿತ್ರಗಳನ್ನು ರವಾನಿಸುವ ಆಪ್ಟಿಕ್ ನರಗಳನ್ನು ಹಾನಿಗೊಳಿಸುತ್ತದೆ. ಇದು ಬಹಳ ಅಪಾಯಕಾರಿ ಏಕೆಂದರೆ ಇದು ನೋವು ರಹಿತವಾಗಿ ಇರುವುದರಿಂದ ಬಹಳಷ್ಟು ಜನ ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ, ಕ್ರಮೇಣ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ.  ರೋಗ ನಿರ್ಣಯ ಮಾಡದಿದ್ದರೆ ಮತ್ತು ಚಿಕಿತ್ಸೆ ನೀಡದಿದ್ದರೆ, ಗ್ಲುಕೋಮಾ ದೃಷ್ಟಿಗೆ ಬದಲಾಯಿಸಲಾಗದ ನಷ್ಟವನ್ನು ತರುವುದಕ್ಕೆ ಕಾರಣವಾಗಬಹುದು. ತಡವಾಗಿ ಕೊಡುವ ಚಿಕಿತ್ಸೆ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ, ರೋಗ ಮತ್ತಷ್ಟು ಪ್ರಗತಿಯಾಗಿ ಕುರುಡುತನ ಉಂಟಾಗುವುದನ್ನು ನಿಲ್ಲಿಸಬಹುದು. 

ಇದಕ್ಕಾಗಿ ನಾರಾಯಣ ನೇತ್ರಾಲಯ ಹೇಳುವಂತೆ, ಪ್ರತಿಯೊಬ್ಬರೂ ಎರಡು ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾಸ್, ಅಸಿಡಿಟಿಗೆ ರಾಮಬಾಣ: ಒಣ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ?
ರಾತ್ರಿ ಮೊಸರು ತಿನ್ನುವುದು ಅಮೃತವೋ ಅಥವಾ ವಿಷವೋ? ತಿಂದರೆ ಏನಾಗುತ್ತೆ?