ಯಾವುದೇ ವರ್ಕ್ಔಟ್‌ ಮಾಡದೆ ಬಿಲಿಯನೇರ್‌ ಮುಖೇಶ್ ಅಂಬಾನಿ 15 ಕೆ ಜಿ ತೂಕ ಇಳಿಸಿಕೊಂಡಿದ್ದೇಗೆ?

By Gowthami K  |  First Published Jun 2, 2024, 6:49 PM IST

ಮುಖೇಶ್ ಅಂಬಾನಿ ವ್ಯಾಪಾರ ವ್ಯವಹಾರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಆಹಾರ ಮತ್ತು ಫಿಟ್ನೆಸ್ ಕೂಡ ಅಷ್ಟೇ  ಪ್ರಾಮುಖ್ಯತೆ ಕೊಡ್ತಾರೆ. ಇದು ಆರೋಗ್ಯಕರ ಜೀವನಶೈಲಿಗಾಗಿ ಅವರ ಆಹಾರ ಕ್ರಮಗಳ ಬಗ್ಗೆ ತಿಳಿಯಿರಿ.


ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಭಾರತದ ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಉದ್ಯಮಿ ಏಪ್ರಿಲ್ 19, 2024 ರಂದು 67 ವರ್ಷಕ್ಕೆ ಕಾಲಿಟ್ಟರು. 67 ನೇ ವಯಸ್ಸಿನಲ್ಲಿಯೂ ಸಹ ಅತ್ಯಂತ ಚುರುಕುತನದ ವ್ಯಕ್ತಿಯಾಗಿದ್ದಾರೆ. ಕಂಪೆನಿಯ  ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಮುಖೇಶ್ ಅಂಬಾನಿ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಹ ಪೂರೈಸುತ್ತಾರೆ. ಅವರ ಮೊಮ್ಮಕ್ಕಳಾದ ಆದಿಯಾ ಪಿರಮಾಲ್, ಕೃಷ್ಣ ಪಿರಾಮಲ್, ಪೃಥ್ವಿ ಅಂಬಾನಿ ಮತ್ತು ವೇದಾ ಅಂಬಾನಿ ಅವರೊಂದಿಗೆ ಉತ್ತಮ ಸಮಯವನ್ನು ಕೂಡ ಕಳೆಯುತ್ತಾರೆ. ಇದರ ಜೊತೆಗೆ, ಮುಖೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿ ಪಿರಮಾಲ್, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರ ವ್ಯಾಪಾರದ ಜವಾಬ್ದಾರಿಗಳಲ್ಲಿ ಮಾರ್ಗದರ್ಶನ ನೀಡುತ್ತಿರುತ್ತಾರೆ. ಈಗ ವಿಷ್ಯ ಅದಲ್ಲ.

57ರಲ್ಲೂ ಕುಗ್ಗದ ಸೌಂದರ್ಯ, ನಟಿ ಮಾಧುರಿ ದೀಕ್ಷಿತ್ ಡಯೆಟ್‌ ಸೀಕ್ರೆಟ್‌ ಇದು

Tap to resize

Latest Videos

ಮುಖೇಶ್ ಅಂಬಾನಿ ವ್ಯಾಪಾರ ವ್ಯವಹಾರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಆಹಾರ ಮತ್ತು ಫಿಟ್ನೆಸ್ ಕೂಡ ಅಷ್ಟೇ  ಪ್ರಾಮುಖ್ಯತೆ ಕೊಡ್ತಾರೆ. ಇದು ಆರೋಗ್ಯಕರ ಜೀವನಶೈಲಿಗಾಗಿ ಆಗಿದೆ. ಇಷ್ಟೇ ಅಲ್ಲ ವರದಿ ಪ್ರಕಾರ ಮುಖೇಶ್ ಅಂಬಾನಿ ಅವರು ದೇಹವನ್ನು ದಂಢಿಸದೇ ತೂಕವನ್ನು ಎತ್ತದೆ ಮತ್ತು ವ್ಯಾಯಾಮ ಮಾಡದೆ 15 ಕೆಜಿ ಉಳಿಸಿಕೊಂಡಿದ್ದಾರೆ. ಅವರ ಕಟ್ಟುನಿಟ್ಟಿನ ಆಹಾರಕ್ರಮದಿಂದಾಗಿ  ಇದನ್ನು ಸಾಧಿಸಿದ್ದಾರೆ. ಹೀಗಾಗಿ, ಇಂದು, ನಾವು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ಉದ್ಯಮಿ ಅವರ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸುವ  ಅಂಬಾನಿ ಜೀವನಶೈಲಿ ಬಗ್ಗೆ ತಿಳಿಯೋಣ.

ಮುಖೇಶ್ ಅಂಬಾನಿ ದಿನವಿಡೀ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ.  ಯೋಗ ಮತ್ತು ಧ್ಯಾನದಿಂದ ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಮುಕೇಶ್ ಅಂಬಾನಿ ಬೆಳಗ್ಗೆ 5:30ಕ್ಕೆ ಏಳುತ್ತಾರೆ.  ಬಳಿಕ ಯೋಗ ಮತ್ತು ಧ್ಯಾನಕ್ಕಾಗಿ  ಮಾಡುತ್ತಾರೆ. ಸೂರ್ಯ ನಮಸ್ಕಾರ, 1 ಗಂಟೆ ವಾಕಿಂಗ್, ಧ್ಯಾನಕ್ಕೆ  ವಿಶೇಷ ಸಮಯ ಮೀಸಲಿಟ್ಟಿದ್ದು ಇದು ಮುಕೇಶ್ ಅಂಬಾನಿ ತಮ್ಮ ಕಟ್ಟುನಿಟ್ಟಾದ ಜೀವನಶೈಲಿಯ ಅಡಿಪಾಯವಾಗಿದೆ. ಅವರು ಎಂದಿಗೂ ತಮ್ಮ ಬೆಳಗಿನ ದಿನಚರಿಯನ್ನು ಮರೆಯುವುದಿಲ್ಲ.

ಇದು ಕಾಕತಾಳೀಯ! ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು-ಗೊಂಬೆ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿ!

ಬೆಳಗ್ಗಿನ ತಿಂಡಿಗೆ ಮುಖೇಶ್ ಅಂಬಾನಿ  ಹಗುರವಾದ, ಮಿತವಾದ ಆಹಾರ ಬಳಸುತ್ತಾರೆ. ಉಪಾಹಾರದಲ್ಲಿ ತಾಜಾ ಹಣ್ಣುಗಳು, ಜ್ಯೂಸ್ ಮತ್ತು ಇಡ್ಲಿ-ಸಾಂಬಾರ್ ಒಳಗೊಂಡಿರುತ್ತದೆ. ಮುಕೇಶ್ ಅಂಬಾನಿ ಬೆಳಗಿನ ಉಪಾಹಾರಕ್ಕಾಗಿ ಯಾವುದೇ ಅಲಂಕಾರಿಕ ಊಟ ಸೇವಿಸುವುದಿಲ್ಲ.

ಅಂಬಾನಿಯವರ  ಊಟ ಮತ್ತು ರಾತ್ರಿಯ ಊಟವು ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಒಳಗೊಂಡಿದೆ ಎಂದು ಹಲವಾರು ವರದಿಗಳು ಸೂಚಿಸಿವೆ. ಅವರು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಗುಜರಾತಿ ಶೈಲಿಯಲ್ಲಿ ದಾಲ್, ಸಬ್ಜಿ, ಅನ್ನ, ಸೂಪ್‌ಗಳು ಮತ್ತು ಸಲಾಡ್‌ಗಳನ್ನು ಇಷ್ಟಪಡುತ್ತಾರೆ.  ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯಲ್ಲಿ ತಯಾರಿಸಿದ ಊಟವನ್ನೇ ಅವರು ಸೇವಿಸುತ್ತಾರೆ. ಅವರ ಆಹಾರದಲ್ಲಿ ಜಂಕ್ ಫುಡ್ ಕಡ್ಡಾಯವಾಗಿ ಸೇವಿಸುವುದಿಲ್ಲ. ಕೋಟ್ಯಧಿಪತಿ ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ಇಷ್ಟೆಲ್ಲಾ ಪಾರ್ಟಿ, ಸಮಾರಂಭಗಳಲ್ಲಿ ಭಾಗವಹಿಸಿದರೂ ಕಿಂಚಿತ್ತೂ ಜಂಕ್ ಫುಡ್ ಸೇವಿಸುವುದೇ ಇಲ್ಲ. 

ಮುಖೇಶ್ ಅಂಬಾನಿ ತಮ್ಮ ಜೀವನಶೈಲಿಯಲ್ಲಿ ಅನುಸರಿಸುವ ಮತ್ತೊಂದು ಪ್ರಮುಖ ನಿಯಮವೆಂದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು. ಹಲವು ವರದಿಗಳ ಪ್ರಕಾರ, ಬಿಲಿಯನೇರ್ ಉದ್ಯಮಿ ಪಾರ್ಟಿಗಳಲ್ಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ಎಂದಿಗೂ  ಸಹ ಮದ್ಯ ಸೇವಿಸುವುದಿಲ್ಲ.  ಈ ಕಟ್ಟುನಿಟ್ಟನ ಆಹಾರ ಕ್ರಮ 67ರ ವಯಸ್ಸಿನಲ್ಲೂ ಫಿಟ್‌ನೆಸ್‌ಗೆ ಕಾರಣವಾಗಿದೆ. 

click me!