ಬಹುತೇಕ ಮಂದಿ ಟೂಥ್​ಪೇಸ್ಟ್​ ಹಾಕೋ ವಿಧಾನವೇ ತಪ್ಪಂತೆ! ಖ್ಯಾತ ಡೆಂಟಿಸ್ಟ್​ ಹೇಳಿದ್ದೇನು ಕೇಳಿ...

By Suchethana DFirst Published Oct 10, 2024, 7:46 PM IST
Highlights

 ಬಹುತೇಕ ಮಂದಿ ಟೂಥ್​ಪೇಸ್ಟ್​  ಹಾಕೋ ವಿಧಾನವೇ ತಪ್ಪಂತೆ! ಖ್ಯಾತ ಡೆಂಟಿಸ್ಟ್​ ಸರಿಯಾದ ವಿಧಾನ ಹೇಳಿಕೊಟ್ಟಿದ್ದಾರೆ ನೋಡಿ...
 

ಸಾಮಾನ್ಯವಾಗಿ ಎಲ್ಲರ ದಿನವೂ ಶುರುವಾಗುವುದು ಹಲ್ಲನ್ನು ಬ್ರಷ್​ ಮಾಡುವ ಮೂಲಕ. ಪುಟಾಣಿ ಕಂದಮ್ಮಗಳಿಗೂ ಮೊದಲು ಹೇಳಿಕೊಡುವ ಶುಚಿತ್ವದ ಪಾಠ ಹಲ್ಲುಜ್ಜುವುದೇ.  ಆದರೆ ನಿಮಗೆ ಬ್ರಷ್​ಗೆ ಟೂಥ್​ಪೇಸ್ಟ್​ ಹೇಗೆ ಹಾಕಿಕೊಳ್ಳಬೇಕು ಎನ್ನುವುದು ಗೊತ್ತಾ? ಇದೇನಿದು ಅಸಂಬಂಧ ಪ್ರಶ್ನೆ ಎಂದು ಕೇಳಬಹುದು. ಚಿಕ್ಕಮಕ್ಕಳಿಗೂ ಗೊತ್ತಿರೋ ಈ ವಿಷ್ಯವನ್ನು ದೊಡ್ಡವರಿಗೆ ಕೇಳ್ತಿರೋದು ಎಂಥ ವಿಚಿತ್ರನಪ್ಪಾ ಎಂದುಕೊಳ್ಳಲೂಬಹುದು. ಇನ್ನು ಹಲ್ಲುಜ್ಜುವುದು ಹೇಗೆ ಎನ್ನುವುದು ಗೊತ್ತಾ ಎಂಬ ಪ್ರಶ್ನೆ ಕೇಳಿದರಂತೂ ಪ್ರಶ್ನೆ ಕೇಳಿದವರೇ ಹುಚ್ಚರು ಎಂದುಕೊಳ್ಳಬಹುದು. ಆದರೆ ಖ್ಯಾತ ದಂತವೈದ್ಯರ ಪ್ರಕಾರ, ಎಷ್ಟೋ ಮಂದಿ ಸರಿಯಾದ ರೀತಿಯಲ್ಲಿ ಹಲ್ಲನ್ನು ಉಜ್ಜಿಕೊಳ್ಳುವುದಿಲ್ಲ, ಅಷ್ಟೇ ಅಲ್ಲದೇ ಟೂಥ್​ಪೇಸ್ಟ್​ ಅನ್ನು ಬ್ರಷ್​ಗೆ ಹೇಗೆ ಹಾಕಿಕೊಳ್ಳಬೇಕು ಎನ್ನುವುದೂ ತಿಳಿದಿರುವುದಿಲ್ಲ!

ಹೌದು. ಈ ಕೆಳಗೆ ಇರುವ ವಿಡಿಯೋದಲ್ಲಿ ವೈದ್ಯರು ಸಾಮಾನ್ಯವಾಗಿ ಮಾಡುವ ತಪ್ಪಿನ ಕುರಿತು ಹೇಳಿದ್ದಾರೆ ನೋಡಿ.  ನಿಯಮಿತವಾಗಿ ಹಲ್ಲುಜ್ಜುವ ಹೊರತಾಗಿಯೂ ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುವುದು ಇದೇ ತಪ್ಪಿನ ಕಾರಣಕ್ಕೆ ಎನ್ನುತ್ತಾ ವೈದ್ಯರು.  ಬ್ಯಾಕ್ ಮೋಲಾರ್‌ಗಳಲ್ಲಿ ಅಂದರೆ ನಾಲಿಗೆಯ ಕೆಳಗೆ ತಿಕ್ಕುವುದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ.  ಆದರೆ ಈ ಭಾಗದಲ್ಲಿ ಅಶುಚಿತ್ವ ಹೆಚ್ಚಾಗಿ ಇರುವ ಕಾರಣ, ಅಲ್ಲಿ ಕ್ಲೀನ್​ ಮಾಡಿಕೊಳ್ಳುವುದು ಅತ್ಯಂತ ಆವಶ್ಯಕ. ಅದೇ ರೀತಿ,  ನಿಮ್ಮ ಹಲ್ಲುಗಳು ನಿಮ್ಮ ವಸಡುಗಳನ್ನು ಸಂಧಿಸುವ ಸ್ಥಳದಲ್ಲಿ ಬ್ಯಾಕ್ಟೀರಿಯಾಗಳು ಅಡಗಿಕೊಳ್ಳಲು ಇಷ್ಟಪಡುತ್ತವೆ. 45 ಡಿಗ್ರಿ ಕೋನದಲ್ಲಿ ಹಲ್ಲುಜ್ಜುವುದು ಈ   ಸೂಕ್ಷ್ಮಾಣುಗಳನ್ನು ಹೊರಹಾಕಲು ಮತ್ತು ನಿಮ್ಮ ಒಸಡುಗಳನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.

Latest Videos

ಸದ್ದಿಲ್ಲದೇ ಬರುವ ತಲೆ, ಕುತ್ತಿಗೆ, ಹೊಟ್ಟೆ ಕ್ಯಾನ್ಸರ್‌: ಬಾಯಿ ಅಶುಚಿಯೇ ಮುಖ್ಯ ಕಾರಣ- ಕಂಡುಹಿಡಿಯೋದು ಹೇಗೆ?

 ಆದರೆ ಇದಕ್ಕಿಂತ ಮುಖ್ಯವಾದದ್ದು ಬ್ರಷ್​ ಮೇಲೆ ಟೂಥ್​ಪೇಸ್ಟ್​ ಹಾಕುವ ವಿಧಾನ. ಸಾಮಾನ್ಯವಾಗಿ ಎಲ್ಲರಿಗೂ ಬೆಳಿಗ್ಗೆ ಗಡಿಬಿಡಿ. ಬ್ರಷ್​ ತೆಗೆದುಕೊಂಡು ಅದರ ಮೇಲೆ ಪೇಸ್ಟ್​ ಹಾಕುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅರ್ಧಕ್ಕರ್ಧ ಪೇಸ್ಟ್​ ಬಾಯಿಯೊಳಗೆ ಹೋಗುವ ಬದಲು ಕೆಳಗೆ ಬೀಳುತ್ತದೆ. ಇದೇ ಕಾರಣಕ್ಕೆ ವೈದ್ಯರು ಹೇಳುವುದು ಏನೆಂದರೆ, ಬ್ರಷ್​ಗೆ ಅಂಟಿಸಿ ಪೇಸ್ಟ್​ ಹಾಕಬೇಕು. ಅಂದರೆ ಪೇಸ್ಟ್​ ಅನ್ನು ಬ್ರಷ್​ ಮೇಲೆ ತಿಕ್ಕಿ ಹಾಕಬೇಕು. ಇದರಿಂದ ಪೇಸ್ಟ್​ ಬ್ರಷ್​ನ ಒಳಗಡೆ ಸರಿಯಾಗಿ ಕುಳಿತು ಹಲ್ಲು ತಿಕ್ಕಲು ಸಹಕಾರಿಯಾಗುತ್ತದೆ. ಆದ್ದರಿಂದ ಹಲ್ಲಿನ ಶುಚಿತ್ವದ ಬಗ್ಗೆ ವಿಶೇಷ ಗಮನ ಕೊಡಬೇಕು. ಇಲ್ಲದೇ ಹೋದರೆ ಅಪಾಯಕಾರಿ ರೋಗಗಳು ಅದರಲ್ಲಿಯೂ ಹೆಚ್ಚಾಗಿ ಕ್ಯಾನ್ಸರ್​ ಬರುವುದು ಬಾಯಿಯ ಅಶುಚಿತ್ವದಿಂದಲೇ ಎನ್ನುವುದು ಸಾಬೀತಾಗಿದೆ. 

ಬಾಯಿಯನ್ನು ಶುಚಿಯಾಗಿ ಇಟ್ಟುಕೊಳ್ಳದಿದ್ದರೆ, ತಲೆ, ಕುತ್ತಿಗೆ, ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂಬ ಆತಂಕಕಾರಿ ಅಂಶವನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ!   ದೀರ್ಘಕಾಲದ ಆಘಾತ, ಬಾಯಿಯ ಉರಿಯೂತ ಮತ್ತು ಬಾಯಿಯಲ್ಲಿ ಇರುವ ಸೂಕ್ಷ್ಮಜೀವಿಗಳಲ್ಲಿನ ಬದಲಾವಣೆಗಳು ಕ್ಯಾನ್ಸರ್‌ಗೆ ಪ್ರಮುಖ ಕಾರಣ ಆಗಬಲ್ಲುದು ಎಂದು ವರದಿಯಲ್ಲಿ ತಿಳಿಸಲಾಗಿದೆ.  ಉದಾಹರಣೆಗೆ, ವಸಡು ಕಾಯಿಲೆ ಇರುವವರು ಅಥವಾ ಕನಿಷ್ಠ ನಾಲ್ಕು ಹಲ್ಲುಗಳನ್ನು ಕಳೆದುಕೊಂಡಿರುವ ಜನರು ಕರುಳುಬಳ್ಳಿಯ ಪೊಲಿಪ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ, ಇದು ಕರುಳಿನ ಕ್ಯಾನ್ಸರ್‌ಗೆ  ಕಾರಣವಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 
 
 
 
 

A post shared by Podcast Pub (@podcast.pub)

click me!