Mpox Outbreak: ಜನರೇ ಹುಷಾರಾಗಿರಿ..ದೇಶದ ಗಡಿಯಲ್ಲಿದೆ ಮಂಕಿಪಾಕ್ಸ್‌ ವೈರಸ್‌!

By Santosh Naik  |  First Published Aug 20, 2024, 8:11 AM IST

monkeypox in India ಮಂಕಿಪಾಕ್ಸ್‌ ಅಥವಾ ಎಂಪಾಕ್ಸ್‌ ವೈರಸ್‌ ಈಗಗಾಲೇ ವಿಶ್ವದ ಗಮನ ಸೆಳೆದಿದ್ದು ಭಾರತಕ್ಕೆ ಆತಂಕದ ವಿಚಾರ ಏನೆಂದರೆ,ಸ ಈಗ ಇದು ಭಾರತದ ನೆರೆಯ ದೇಶ ಪಾಕಿಸ್ತಾನದಲ್ಲೂ ಪತ್ತೆಯಾಗಿದೆ. ಈಗಾಗಲೇ ವಿಶ್ವ ಅರೋಗ್ಯ ಸಂಸ್ಥೆ ಈ ವೈರಸ್‌ಅನ್ನು ಸಾಂಕ್ರಾಮಿಕ ಎಂದು ಘೋಷಣೆ ಮಾಡಿದೆ.


ಇಸ್ಲಾಮಾಬಾದ್‌ (ಆ.20): ಕೊನೆಗೂ ಎಂಪಾಕ್ಸ್‌ ಅಥವಾ ಮಂಕಿಪಾಕ್ಸ್‌ ವೈರಸ್‌ ಬಗ್ಗೆ ಭಾರತೀಯರು ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ.  ನೆರೆಯ ಪಾಕಿಸ್ತಾನದಲ್ಲಿ ಮತ್ತೊಂದು ಮಂಕಿಪಾಕ್ಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಕಳೆದ 3 ದಿನದಲ್ಲಿ ಪತ್ತೆಯಾದ ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿದೆ. ಇತ್ತೀಚೆಗೆ ಸೌದಿ ಅರೇಬಿಯಾದಿಂದ ಆಗಮಿಸಿದ್ದ ಪಾಕ್‌ ಆಕ್ರಮಿತ ಕಾಶ್ಮೀರದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ದೃಢಪಟ್ಟಿದೆ. ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದರು. ಇದಕ್ಕೂ ಮುನ್ನ ಆಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಖೈಬರ್‌ ಪಖ್ತೂನ್‌ ಖ್ವಾಹ್‌ ಪ್ರದೇಶಕ್ಕೆ ಕೊಲ್ಲಿ ದೇಶದಿಂದ ಆಗಮಿಸಿದ್ದ ಮೂವರು ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿತ್ತು. ಇದು ಏಷ್ಯಾಖಂಡದಲ್ಲಿ ಈ ವರ್ಷ ದಾಖಲಾದ ಮೊದಲ ಪ್ರಕರಣವಾಗಿತ್ತು. ಮಂಕಿಪಾಕ್ಸ್‌ ಈ ವರ್ಷ ಆಫ್ರಿಕಾ ದೇಶಗಳಲ್ಲಿ ತೀವ್ರವಾಗಿ ಹಬ್ಬಿದ್ದು, 14000ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟು 500ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ.

ಏರ್‌ಪೋರ್ಟ್‌ಗಳಲ್ಲಿ ಕಟ್ಟೆಚ್ಚರಕ್ಕೆ ಭಾರತ ಸೂಚನೆ: ಭಾರತದ ನೆರೆ ದೇಶ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾದ ಬೆನ್ನಲ್ಲಿಯೇ ರೋಗದ ಗುಣಲಕ್ಷಣಗಳುಳ್ಳ ವಿದೇಶಿ ಪ್ರಯಾಣಿಕರ ಕುರಿತು ಎಚ್ಚರಿಕೆಯಿಂದ ಇರಲು ಕೇಂದ್ರ ಅರೋಗ್ಯ ಸಚಿವಾಲಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಗಡಿಗಳಲ್ಲಿರುವ ಎಲ್ಲಾಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ಮಂಕಿ ಪಾಕ್ಸ್‌ ಸೋಂಕಿತರ ಐಸೋಲೇಷನ್‌, ನಿರ್ವಹಣೆ ಮತ್ತು ಚಿಕಿತ್ಸಗೆರಾಮ್‌ ಮನೋಹರ್‌ ಲೋಹಿಯಾ, ಸಫ್ದರ್‌ಜಂಗ್‌ ಮತ್ತು ಲೇಡಿ ಹಾರ್ಡಿಂಜ್‌ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಈವರೆಗೂ ಮಂಕಿಪಾಕ್ಸ್‌ ಸೋಂಕು ಕಂಡುಬಂದಿಲ್ಲವಾದರೂ, ಪಕ್ಕದ ಪಾಕಿಸ್ತಾನದಲ್ಲಿ ನಾಲ್ಕು ಮಂಕಿ ಪಾಕ್ಸ್‌ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲಿಯೇ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.

Tap to resize

Latest Videos

ಕೋವಿಡ್ -19 ಪ್ರಪಂಚದಾದ್ಯಂತ ಭಾರಿ ಆತಂಕವನ್ನು ಸೃಷ್ಟಿಸಿದ ನಂತರ, ಕಳೆದ ಎರಡು ವರ್ಷಗಳಲ್ಲಿ ಮಂಕಿಪಾಕ್ಸ್ ಅದೇ ರೀತಿಯ ಇನ್ನೊಂದು ಪ್ರಮುಖ ವೈರಸ್‌ ಆಗಿದೆ. ಈಗ WHO ನಿಂದ ಪ್ರಮುಖ ಆರೋಗ್ಯ ಸಮಸ್ಯೆ ಎಂದು ಗುರುತಿಸಲಾಗಿರುವ Mpox, ಏಷ್ಯಾದಲ್ಲಿ ಜನನಿಬಿಡ ಪ್ರದೇಶಗಳಿಗೆ ಹರಡುತ್ತಿರುವುದರಿಂದ ಪೂರ್ಣ ಪ್ರಮಾಣದ ಬಿಕ್ಕಟ್ಟು ಎದುರಾಗಬಹುದು ಎನ್ನಲಾಗಿದೆ. ಈ ದೇಶಗಳಲ್ಲಿನ ಜನಸಂಖ್ಯೆಯ ಪ್ರಮಾಣದಿಂದಾಗಿ ಭಾರತ, ಪಾಕಿಸ್ತಾನ ಮತ್ತು ಚೀನಾದಲ್ಲಿನ ಪ್ರಕರಣಗಳು ಕೆಟ್ಟದಾಗಿ ತಿರುವು ಪಡೆದುಕೊಳ್ಳಬಹುದು ಎಂದು ಎಚ್ಚರಿಸಿದೆ.

Breaking: ಮಂಕಿಪಾಕ್ಸ್‌ ಸೆಕ್ಸ್‌ನಿಂದಲೂ ಹರಡುತ್ತೆ ಎಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ ಇದ್ಯಾ ಆತಂಕ?

ಕೋವಿಡ್‌ಗೆ ಹೋಲಿಸಿದರೆ ಇದರ ಪರಿಣಾಮಗಳು ಮತ್ತು ಹರಡುವಿಕೆಯು ತುಲನಾತ್ಮಕವಾಗಿ ಕಡಿಮೆಯಾದರೂ, ಇದು ಪ್ರಪಂಚದ ಪ್ರಮುಖ ಭಾಗಗಳಲ್ಲಿ ಇನ್ನೂ ಕೆಲವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಿದ್ದರೂ, ಮಂಕಿಪಾಕ್ಸ್ ನಿಯಂತ್ರಣಕ್ಕಾಗಿ ರಾಷ್ಟ್ರಗಳು ಲಾಕ್‌ಡೌನ್‌ಗೆ ಹೋಗುವ ಸಾಧ್ಯತೆಗಳು ತುಂಬಾ ಕಡಿಮೆ.

ಮಂಕಿಪಾಕ್ಸ್‌ಗೆ ಎಂಪಾಕ್ಸ್‌ ಎಂದು ಮರುನಾಮಕರಣ ಮಾಡಿದ WHO

ಪ್ರಪಂಚದಾದ್ಯಂತ ಆತಂಕ ಸೃಷ್ಟಿಸುವ ಪ್ರಮುಖ ವೈರಸ್ ಮಂಕಿಪಾಕ್ಸ್ ಅನ್ನು ಈಗ ಎಂಪಾಕ್ಸ್ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಈ ಹೆಸರು ನೀಡಿದೆ. ಅನೇಕ ಸಂದರ್ಭಗಳಲ್ಲಿ ಮಂಕಿಪಾಕ್ಸ್ ಮಾರಣಾಂತಿಕವಾಗಿದೆ ಎಂದು ಸಾಬೀತಾಗಿದೆ ಮತ್ತು ಈ ನಿರ್ದಿಷ್ಟ ವೈರಸ್ ಪ್ರಕಾರಕ್ಕೆ ಸರಿಯಾದ ಚಿಕಿತ್ಸೆ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಇದು ಆಫ್ರಿಕಾ ಮತ್ತು ಏಷ್ಯಾದಂತಹ ಪ್ರದೇಶಗಳಲ್ಲಿ ಹರಡುವುದನ್ನು ಮುಂದುವರೆಸಿದೆ.

click me!