Health Tips: ಯಾಕೋ ಕೆಲಸದ ಮೇಲೆ ಫೋಕಸ್ ಮಾಡಲಾಗುತ್ತಿಲ್ಲ ಅನ್ನೋರ ಗಮನಕ್ಕೆ!

By Suvarna News  |  First Published Jul 25, 2023, 6:11 PM IST

ಮಿದುಳು ಚುರುಕಾಗಿ ಕೆಲಸ ಮಾಡಲು ಕೆಲವೊಮ್ಮೆ ತೊಂದರೆ ಎದುರಾಗಬಹುದು. ಸೂಕ್ತ ಆಹಾರ, ನಿದ್ರೆ ಇಲ್ಲದಿರುವಾಗ, ಕೆಟ್ಟ ಜೀವನಶೈಲಿಯಿಂದ ಮಿದುಳಿಗೆ ಹಾನಿಯಾಗುತ್ತದೆ. ಅಂತಹ ಸಮಯದಲ್ಲಿ ಕೆಲಸದಲ್ಲಿ ಮನಸ್ಸನ್ನು ತೊಡಗಿಸಲು ಸಾಧ್ಯವಾಗುವುದಿಲ್ಲ. 
 


ನಮ್ಮ ದೇಹದ ಅಷ್ಟೂ ನಿಯಂತ್ರಣ ಮಿದುಳಿನಲ್ಲಿರುತ್ತದೆ ಎನ್ನುವುದು ಎಲ್ಲರೂ ತಿಳಿದ ಸಂಗತಿ. ಮಿದುಳಿನ ಸಹಕಾರದಿಂದಲೇ ಎಲ್ಲ ಕೆಲಸಕಾರ್ಯಗಳನ್ನೂ ನಿರ್ವಹಿಸಲು ನಮ್ಮಿಂದ ಸಾಧ್ಯವಾಗುತ್ತದೆ. ಆದರೂ ಕೆಲವೊಮ್ಮೆ ಚಿಂತನೆ ಮಾಡುವ, ಅರ್ಥೈಸಿಕೊಳ್ಳುವ ಶಕ್ತಿಯೇ ಏಕಾಏಕಿ ಕುಂದಿದಂತೆ ಭಾಸವಾಗುತ್ತದೆ. ಕೆಲಸದಲ್ಲಿ ಮನಸ್ಸನ್ನು ತೊಡಗಿಸಲು ಸಾಧ್ಯವಾಗುವುದಿಲ್ಲ. ದೇಹದ ಶಕ್ತಿ, ಸಾಮರ್ಥ್ಯ ಕಳೆದುಹೋದಂತೆ ಅನಿಸುತ್ತದೆ. ತಲೆ ಮಂಕಾಗುತ್ತದೆ. ಯಾವುದೇ ಕೆಲಸ ಮಾಡಲೂ ಮುಂದಾಗದಷ್ಟು ದೇಹ ಸೋತು ಬಿಡುತ್ತದೆ. ನಿಃಶಕ್ತಿ ಕಾಡುತ್ತದೆ. ಕುಸಿದು ಬೀಳುವಂತಾಗುತ್ತದೆ. ಅಸಲಿಗೆ ಇದಕ್ಕೆ ಕಾರಣ ನಮ್ಮದೇ ಹಲವು ಅಭ್ಯಾಸಗಳಾಗಿರುತ್ತವೆ. ನಮ್ಮ ಜೀವನಶೈಲಿಯ ಕಾರಣದಿಂದಲೇ ಮಿದುಳಿಗೆ ಹಾನಿಯಾಗುತ್ತದೆ ಹಾಗೂ ಈ ಸಮಯದಲ್ಲಿ ಯೋಚಿಸುವ, ಕೆಲಸ ಮಾಡುವ ಶಕ್ತಿಗೂ ಹಾನಿಯಾಗುತ್ತದೆ. ದೈನಂದಿನ ಜೀವನದಲ್ಲಿ ನಾವು ಅನುಸರಿಸುವ ಕೆಲವು ಅಭ್ಯಾಸ, ಆಹಾರಗಳಿಂದಲೂ ಮಿದುಳಿನ ಕಾರ್ಯಕ್ಷಮತೆಗೆ ಧಕ್ಕೆಯಾಗುತ್ತದೆ. ಕೆಟ್ಟ ಜೀವನಶೈಲಿಯಿಂದ ಮಿದುಳು ನಿರಂತರವಾಗಿ ಸಮಸ್ಯೆಗೆ ಸಿಲುಕುತ್ತದೆ. ಮಿದುಳಿಗೆ ಹೊಂದಾಣಿಕೆಯಾಗದ ಕೆಲವು ಅಭ್ಯಾಸಗಳ ಬಗ್ಗೆ ಅರಿತುಕೊಂಡು ಅವುಗಳನ್ನು ಕೈಬಿಡುವುದು ಲೇಸು.

•    ಬೆಳಗಿನ ತಿಂಡಿ ಸ್ಕಿಪ್ (Breakfast Skip)
ಕಚೇರಿಗೆ (Office) ತಡವಾಯಿತೆಂದೋ, ಇನ್ಯಾವುದೋ ಕಾರಣದಿಂದ ಸಮಯವಿಲ್ಲವೆಂದೋ ಬೆಳಗ್ಗಿನ ತಿಂಡಿಯನ್ನು ಬಹಳಷ್ಟು ಜನ ಸೇವಿಸುವುದಿಲ್ಲ. ಇದು ಭಾರೀ ಅನಾರೋಗ್ಯಕರ ಪದ್ಧತಿ. ಬೆಳಗ್ಗಿನ ತಿಂಡಿ ಇಡೀ ದಿನದ ಆರಂಭಕ್ಕೆ ನಾಂದಿ ಹಾಡುವುದರಿಂದ ಪ್ರಮುಖವಾಗಿದೆ. ಅದನ್ನೇ ಸೇವನೆ ಮಾಡದಿದ್ದರೆ ಮಿದುಳು (Brain) ದುರ್ಬಲವಾಗುತ್ತ ಸಾಗುತ್ತದೆ. ಎಷ್ಟೋ ಜನ ಬೆಳಗಿನ ತಿಂಡಿಯನ್ನು ಮಧ್ಯಾಹ್ನದ ಹೊತ್ತಿಗೆ ಸೇವಿಸುತ್ತಾರೆ. ಇದೂ ಸಹ ಸರಿಯಲ್ಲ. ಬೆಳಗ್ಗೆ 9 ಗಂಟೆಯೊಳಗೆ ತಿಂಡಿ ತಿನ್ನುವುದು ಅಗತ್ಯ. 

Health Tips: ವಯಸ್ಸಾಯ್ತು 20, ಯುವತಿಯರು ಈ ಆಹಾರ ತಿನ್ನೋದ ಮರೀಬಾರದು!

Latest Videos

undefined

•    ಅಧಿಕ ಸಿಹಿ (Sugar) ಸೇವನೆ
ಸಿಹಿ ತಿನಿಸುಗಳನ್ನು ಸೇವನೆ ಮಾಡಬೇಕೆಂಬ ಬಯಕೆ ಹಲವರಿಗೆ ಆಗುತ್ತದೆ. ಸಿಹಿ ತಿನಿಸೆಂದರೆ ಅವರಿಗೆ ಇಷ್ಟ. ಆದರೆ, ಇವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಮಿದುಳು ಹಾನಿಗೆ ಒಳಗಾಗುತ್ತದೆ. ಮಧುಮೇಹದ (Diabetes) ಅಪಾಯವಂತೂ ಇದ್ದೇ ಇದೆ. ಜತೆಗೆ, ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಗೋಚರಿಸಿ, ಆಲಸ್ಯ ಉಂಟಾಗುತ್ತದೆ. ಬೊಜ್ಜು (Obesity) ಹೆಚ್ಚಬಹುದು. ಕ್ರೇವಿಂಗ್ಸ್ ಹೆಚ್ಚುತ್ತ ತಿನ್ನುವ ಬಯಕೆಯೂ ಹೆಚ್ಚಾಗಬಹುದು. ನಿರಂತರವಾಗಿ ಕರಿದ (Fried) ತಿಂಡಿಗಳು, ಬಾಹ್ಯ ಆಹಾರ, ಜಂಕ್ ಆಹಾರ ಸೇವನೆ ಮಾಡುವುದರಿಂದಲೂ ಮಿದುಳು ಹಾನಿಗೆ ತುತ್ತಾಗುತ್ತದೆ. ಅಧಿಕ ಉಪ್ಪು, ಸಕ್ಕರೆಭರಿತ ಪಾನೀಯಗಳು ಸಹ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (Bad Effect) ಬೀರುತ್ತವೆ.

•    ಕೋಪ (Angry) ದೂರವಿಡಿ
ಕೋಪ ಮಾಡಿಕೊಳ್ಳುವುದರಿಂದ ಮಿದುಳಿಗೆ ಭಾರೀ ಹಾನಿ ಉಂಟಾಗುತ್ತದೆ. ಕೋಪದಲ್ಲಿರುವ ಸಮಯದಲ್ಲಿ ಸರಿಯಾಗಿ ಯೋಚನೆ (Thought) ಮಾಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಅದು ನಿಜ. ಆ ಸಮಯದಲ್ಲಿ ಬಿಡುಗಡೆಯಾಗುವ ರಾಸಾಯನಿಕದಿಂದ ಮಿದುಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಜತೆಗೆ, ಮಾನಸಿಕ ಆರೋಗ್ಯವೂ (Mental Health) ಏರುಪೇರಾಗಲು ಕಾರಣವಾಗುತ್ತದೆ. ನೀವು ಒಂದೊಮ್ಮೆ ಹೆಚ್ಚು ಕೋಪ ಮಾಡಿಕೊಳ್ಳುವ ಜನರಾಗಿದ್ದರೆ, ನಿಮ್ಮ ಮಾನಸಿಕ ಆರೋಗ್ಯದ ಜತೆ ಆಟವಾಡುತ್ತಿದ್ದೀರಿ ಎಂದರ್ಥ. ಕೋಪದಿಂದಾಗಿ ಮಿದುಳಿನ ನರಗಳ ಮೇಲೆ ಹಾನಿ ಉಂಟಾಗಿ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಜತೆಗೆ, ದೇಹದಲ್ಲೂ (Body) ಅದರ ಪರಿಣಾಮ ಗೋಚರಿಸುತ್ತದೆ.

Mental Health Tips: ಏನೋ ಕಳೆದುಕೊಂಡ ಭಾವನೆಯೇ? ಅದರಿಂದ ಬಚಾವಾಗ್ಬೇಕು ಅಂದ್ರೆ ಇವಕ್ಕೆ ಬೈ ಹೇಳ್ಬಿಡಿ

•    ಕಡಿಮೆ ನಿದ್ರೆ (Sleep) ಮಾಡುವ ಅಭ್ಯಾಸ
ದಿನವೂ ಕಡಿಮೆ ನಿದ್ರೆ ಮಾಡುವ ಅಭ್ಯಾಸ ಮಿದುಳಿಗೆ ಸಿಕ್ಕಾಪಟ್ಟೆ ಘಾಸಿ ಉಂಟು ಮಾಡುತ್ತದೆ. ದಿನಕ್ಕೆ 7-8 ಗಂಟೆ ನಿದ್ರಿಸುವ ಅಭ್ಯಾಸವಿಲ್ಲದ ಜನರ ಮಿದುಳು ನಿರಂತರವಾಗಿ ಹಾನಿಗೆ (Damage) ತುತ್ತಾಗುತ್ತದೆ. ಇದರಿಂದ ಸುಸ್ತಾಗುತ್ತದೆ. ಮಿದುಳು ಕ್ರಿಯಾಶೀಲವಾಗಿ (Active) ಇರುವುದಿಲ್ಲ. ಸೂಕ್ತ ಪ್ರಮಾಣದ ನಿದ್ರೆ ಮನುಷ್ಯನ ದೇಹಕ್ಕೆ ಅತ್ಯಗತ್ಯ.  
 

click me!