ಜೀವನದಲ್ಲಿ ಏನೋ ಅಸಂತೋಷ ಮನೆ ಮಾಡಿದೆಯೇ? ಏನೋ ಕಳೆದುಕೊಂಡಂತೆ, ಯಾವುದೂ ಸರಿಯಾಗಿಲ್ಲ ಎನ್ನುವಂತೆ ಭಾಸವಾಗುತ್ತದೆಯೇ? ಜೀವನದಲ್ಲಿ ಎಲ್ಲ ಇದ್ದೂ ಏನೂ ಇಲ್ಲದ ಭಾವನೆ ಮೂಡುತ್ತಿದ್ದರೆ ಇದುವರೆಗಿನ ಹಲವು ಅಭ್ಯಾಸಗಳಿಗೆ ಬೈ ಹೇಳಲೇಬೇಕಾದ ಸಮಯ ಬಂದಿದೆ ಎಂದರ್ಥ.
ಕೆಲವೊಮ್ಮೆ ಜೀವನ ಎನ್ನುವುದು ಕಡಿದಾದ ಅರಣ್ಯದಂತೆ ಭಾಸವಾಗುತ್ತದೆ. ಮುಂದೆ ದಾರಿಯೇ ಗೋಚರಿಸದಂತೆ ಕಪ್ಪು ಆವರಿಸಿದಂತಾಗುತ್ತದೆ. ಎಷ್ಟೇ ಅತ್ಯುತ್ಸಾಹದಿಂದ, ಆಶಾವಾದಿಯಾಗಿ ಇರಬೇಕು ಎಂದುಕೊಂಡರೂ ಕೆಲ ಹೊತ್ತಿನಲ್ಲೋ ಆ ನಿರ್ಧಾರಗಳೆಲ್ಲ ಮಾಯವಾಗಿ ಮತ್ತೆ ಭರವಸೆ ಕಳೆದುಕೊಳ್ಳುವಂತಾಗುತ್ತದೆ. ನಿಮಗೂ ಪದೇ ಪದೆ ಇಂತಹ ಅನುಭವ ಆಗುತ್ತಿದೆಯೇ? ಹಾಗಿದ್ದರೆ ನಿಮ್ಮಲ್ಲಿರುವ ಕೆಲವು ಅಭ್ಯಾಸಗಳನ್ನು ಚೆಕ್ ಮಾಡಿಕೊಳ್ಳುವ ಸಮಯ ಇದು. ಏಕೆಂದರೆ, ನಮ್ಮ ಹಲವು ಅಭ್ಯಾಸಗಳೇ ಬದುಕನ್ನು ನಿಧಾನವಾಗಿ ಖಾಲಿ ಎನಿಸುವಂತೆ ಮಾಡುತ್ತವೆ. ಅಂತಹ ಸಮಯದಲ್ಲಿ ಹೊಸದಾದ ಜೀವನ ನೋಟ ಬೇಕು ಎಂದಾದರೆ ನಾವು ಸಹ ಬದಲಾಗಬೇಕಾಗುತ್ತದೆ. ದೈನಂದಿನ ಕೆಲವು ಹಾನಿಕಾರಕ ಅಭ್ಯಾಸಗಳನ್ನು ಬಿಟ್ಟು, ಧನಾತ್ಮಕ ಬದಲಾವಣೆ ತಂದುಕೊಳ್ಳಬೇಕಾಗುತ್ತದೆ. ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಸುತ್ತಲ ಪ್ರಪಂಚ ಮತ್ತೆ ಅದೇ ಪ್ರಪಾತಕ್ಕೆ ತಳ್ಳಲು ಯತ್ನಿಸಲಿ, ನಾವು ಬದಲಾವಣೆಯ ಹಾದಿಯಲ್ಲಿ ಸಾಗಬೇಕಾಗುತ್ತದೆ. ಇಷ್ಟು ದಿನಗಳ ಕಾಲ ನಿಜವಾಗಿ ನಮಗೇನು ಬೇಕು ಎಂದರಿಯದೇ ಮಾಡುತ್ತಿದ್ದ ಕಾರ್ಯಗಳಿಗೆ ಫುಲ್ ಸ್ಟಾಪ್ ಹಾಕಬೇಕಾಗುತ್ತದೆ. ಕೆಲವು ಅಭ್ಯಾಸಗಳಿಗೆ ಬೈ ಹೇಳಲೇಬೇಕಾಗುತ್ತದೆ.
• ದೂರುವುದು (Complaining)
ನಮಗೆಲ್ಲರಿಗೂ ಸಾಮಾನ್ಯವಾಗಿ ಇದೊಂದು ಅಭ್ಯಾಸ. ನಮ್ಮ ಹಲವಾರು ವರ್ತನೆಗಳಿಗೆ (Behave) ಮತ್ತೊಬ್ಬರನ್ನು ಹೊಣೆಯಾಗಿಸುವುದು. ನಾನೇಕೆ ಕೋಪ ಮಾಡಿದೆ ಎನ್ನುವುದಕ್ಕೆ ನಮ್ಮಲ್ಲಿ ಹಲವಾರು ವಿವರಣೆಗಳಿರುತ್ತವೆ. ಕೆಟ್ಟ ಚಟಗಳಿಂದ ಹಿಡಿದು, ನಮ್ಮ ಪ್ರತಿಯೊಂದು ದುರ್ವರ್ತನೆಗಳಿಗೂ ನಮ್ಮಲ್ಲಿ ಸಕಾರಣಗಳಿರುತ್ತವೆ. ತಪ್ಪೆಂದು ತಿಳಿದರೂ ಮಾಡುತ್ತಿರುವುದು ನಮ್ಮ ದೌರ್ಬಲ್ಯ (Weakness) ಎಂದುಕೊಳ್ಳದೇ ಬೇರೆಯವರ ಬಗ್ಗೆ ದೂರುತ್ತೇವೆ.
undefined
ನಶೆ ಏರಿಸಿ, ಕಿಕ್ ನೀಡೋ ಗಾಂಜಾ… ದೇಹ ಸೇರಿದರೆ ನಿತ್ಯ ನರಕ, ತರೋ ಕಾಯಿಲೆ ಒಂದೆರಡಲ್ಲ
ಜೀವನದ ಬಗ್ಗೆ ನೂರಾರು ತಕರಾರುಗಳಿರುತ್ತವೆ. ಪತ್ನಿಗೆ ಪತಿಯ ಮೇಲೆ, ಪತಿಗೆ ಪತ್ನಿಯ ಮೇಲೆ, ಮಕ್ಕಳಿಗೆ ಪಾಲಕರ ಮೇಲೆ, ಪಾಲಕರಿಗೆ ಮಕ್ಕಳ ಮೇಲೆ ಸಿಕ್ಕಾಪಟ್ಟೆ ದೂರುಗಳಿರುತ್ತವೆ. ಹೀಗೆ ಮಾಡುತ್ತಲೇ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಹೀಗಾಗಿ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆ (Positive Change) ಬೇಕು ಎಂದಾದರೆ ಮೊಟ್ಟಮೊದಲು ದೂರುವುದನ್ನು ನಿಲ್ಲಿಸಬೇಕು.
• ಭವಿಷ್ಯದ ಬಗ್ಗೆ ಆತಂಕ (Anxiety)
ಹಲವರು ಮುಂದೇನಾಗುವುದೋ ಎನ್ನುವ ಚಿಂತೆಯಲ್ಲೇ ಇಂದಿನ ದಿನ ಕಳೆಯುತ್ತಾರೆ. ಇದರಿಂದ ಏನಾದರೂ ಪ್ರಯೋಜನವಿದೆಯೇ? ನಾಳೆ ಏನಾಗಿ ಬಿಡುತ್ತದೆಯೋ, ಅಪಘಾತವಾದರೆ, ಯಾರಿಗಾದರೂ ಆರೋಗ್ಯದ ಸಮಸ್ಯೆಯಾದರೆ.. ಎಂದೆಲ್ಲ ಚಿಂತಿಸುತ್ತಿರುವುದು ಅನಗತ್ಯ. ಯಾವುದರ ಮೇಲೂ ನಮ್ಮ ನಿಯಂತ್ರಣವಿಲ್ಲ (Control) ಎಂದಾದರೆ ಮುಂದಿನ ಬಗ್ಗೆ ಇಂದು ಆತಂಕಪಟ್ಟುಕೊಳ್ಳುವುದು ಸರಿಯಲ್ಲ. ಇದು ಮನಸ್ಥಿತಿಯನ್ನು (Mentality) ಹಾಳು ಮಾಡುವ ಮೂಲಕ ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಮಾಡಿಬಿಡುತ್ತದೆ.
• ಸುಮ್ಮನೆ ಕಾಲ ಕಳೆಯೋದು (Procrastinating)
ಸುಮ್ಮನೆ ಕಾಲ ಕಳೆಯುವ ಮನಸ್ಥಿತಿ ಕೂಡ ಭಾರೀ ಅಪಾಯಕಾರಿ. ಎಲ್ಲರೂ ಒಂದಲ್ಲ ಒಂದು ಬಾರಿ ಸುಮ್ಮನೆ ಸಮಯ ಕಳೆಯುತ್ತೇವೆ. ಏನೂ ತೋಚದೆ ಕುಳಿತುಕೊಳ್ಳುತ್ತೇವೆ. ಆದರೆ, ಮಾಡಬೇಕಾದ ಕೆಲಸಗಳು ಅಲ್ಲಿಯೇ ಬಿದ್ದುಕೊಂಡಿದ್ದರೂ ಅವುಗಳನ್ನು ಗಮನಿಸದೇ ಸುಮ್ಮನೆ ಬಿದ್ದುಕೊಂಡು ಮೊಬೈಲ್ (Mobile), ಟಿವಿ ವೀಕ್ಷಣೆ ಮಾಡುತ್ತ ಸಮಯ ಕಳೆಯುವ ಮನಸ್ಥಿತಿ ಇದೆಯಲ್ಲ, ಅದರಿಂದ ಜೀವನ ದುರ್ಗಮವೆನ್ನುವ ಭಾವನೆ ಮೂಡುತ್ತದೆ. ಏನನ್ನೋ ಕಳೆದುಕೊಂಡ ಭಾವನೆ (Feel Lost) ದಟ್ಟವಾಗುತ್ತದೆ.
ಕಂಡ್ ಕಂಡೋರ ಜೊತೆ ಸಂಬಂಧ ಇಟ್ಕೊಂಡರೆ ಏನಾಗುತ್ತೆ ಹೇಳ್ತಾರೆ ಸದ್ಗುರು, ಇಲ್ ಕೇಳಿ!
• ಸ್ವ ಕಾಳಜಿ (Self Care) ಇಲ್ಲದಿರುವುದು
ಸ್ವಯಂ ಕಾಳಜಿ ಇಲ್ಲದಿರುವ ಜನರ ಸ್ಥಿತಿ ಯಾರಿಗೂ ಬೇಡ. ಏಕೆಂದರೆ, ಅವರಿಗೆ ಗುರಿ ಎನ್ನುವುದೇ ಇರುವುದಿಲ್ಲ. ಸ್ವತಃ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸದವರು ಇನ್ನೇನು ಬೇರೆ ಜವಾಬ್ದಾರಿಗಳನ್ನು ಹೊರಬಲ್ಲರು? ಅವರಲ್ಲಿ ಇನ್ನೆಷ್ಟು ಸಾಮರ್ಥ್ಯ ಇರಲು ಸಾಧ್ಯ? ನೀವೂ ಹೀಗೆ ವರ್ತನೆ ಮಾಡುತ್ತಿದ್ದರೆ ಈಗಲೇ ಬಿಟ್ಟಾಕಿ. ನಿಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೆ (Health) ಏನು ಬೇಕೋ ಅವುಗಳ ಬಗ್ಗೆ ಗಮನ ಹರಿಸಿ.