ಕೋಮಲ ತ್ವಚೆಗೆ ಹಾಲಿನಲ್ಲಿದೆ ಮನೆಮದ್ದು!

By Megha MSFirst Published Aug 3, 2022, 7:58 PM IST
Highlights

ದೈನಂದಿನ ಜೀವನದಲ್ಲಿ ಹಾಲು ಬಹಳ ಮುಖ್ಯ. ನಮ್ಮ ದೇಹಕ್ಕೆ ಹಾಲಿನ ಅಗತ್ಯ ಎಷ್ಟಿದೆ ಎಂದರೆ ಹಾಲಿನಿಂದ ಮಾಡಿದ ಟೀ, ಕಾಫಿ ಒಂದು ಹೊತ್ತು ಕುಡಿಯಲಿಲ್ಲ ಎಂದರೂ ತಲೆ ನೋವು ಬರುತ್ತದೆ. ಅಷ್ಟೇ ಅಲ್ಲ ಹಾಲಿನಿಂದ ತಯಾರಾಗುವ ಮೊಸರು ನಮ್ಮ ಆಹಾರದಲ್ಲಿ ಇರಲೇಬೇಕು. ನಮ್ಮ ದೈನಂದಿನ ಜೀವನದಲ್ಲಿ ಹಾಲು ಅಷ್ಟು ಪ್ರಮುಖವಾಗಿದೆ. ಹಾಲು ಕಾಯಿಸಿದಾಗ ಮೇಲ್ಭಾಗದಲ್ಲಿ ಕಟ್ಟುವ ಕೆನೆಯೂ ಅಷ್ಟೇ ಪ್ರಮುಖವಾಗಿದೆ. ಅದರಲ್ಲೂ ಚರ್ಮ ಹಾಗೂ ತ್ವಚೆಗೆ ಇದು ಮನೆಯಲ್ಲಿನ ಬೆಸ್ಟ್ ಮೆಡಿಸಿನ್ ಸಹ ಹೌದು. ಅದು ಹೇಗೆ? ಹಾಲಿನ ಕೆನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಲೈ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹಾಲಿನ ಕೆನೆ ಹಲವಾರು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಒಂದು ರೀತಿಯ ದಪ್ಪ ಹಳದಿ ಹೆಪ್ಪುಗಟ್ಟಿದ ಕೆನೆಯಾಗಿದ್ದು, ಸಂಪೂರ್ಣ ಹಾಲನ್ನು ಬಿಸಿ ಮಾಡಿ ತಯಾರಿಸಲಾಗುತ್ತದೆ. ಹಾಲಿನಿಂದ ಕೇವಲ ಮೊಸರು, ಸ್ವೀಟ್ಸ್ ಅಷ್ಟೇ ಅಲ್ಲದೆ ಸೌಂದರ್ಯವರ್ಧಕವಾಗಿಯೂ ಇದನ್ನು ಬಳಸಲಾಗುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಹೊಸ ಕೋಶಗಳ ಬೆಳವಣಿಗೆಗೆ ಅಗತ್ಯವಾದ ಜೀವಸತ್ವ, ಖನಿಜ, ಕೊಬ್ಬು ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದನ್ನು ತೇವಗೊಳಿಸಲು, ಹೊಳಪು ನೀಡಲು, ಚರ್ಮದ ಟೋನ್ ಸುಧಾರಿಸಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಹೆಚ್ಚಿಸಲು ಬಳಸಲಾಗುತ್ತದೆ. ಹಾಲಿನಲ್ಲಿ ಆಲ್ಫಾ ಹೈಡ್ರಾಕ್ಸಿಲ್ ಅಂಶವಿದ್ದು, ಇದು ಚರ್ಮದ ಹೊಳಪನ್ನು ಹೆಚ್ಚಿಸಿ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಚರ್ಮದ ಮೇಲಿನ ಡ್ಯಾಮೇಜ್‌ಗಳನ್ನು ಇದು ತೆಗೆದುಹಾಕಲು ಸಹಾಯ ಮಾಡುತ್ತದೆ. 

ಮುಖಕ್ಕೆ ಹಾಲಿನ ಕೆನೆಯ ಉಪಯೋಗಗಳು

ಕಪ್ಪು ಕಲೆ: ಹಾಲಿನ ಕೆನೆಯನ್ನು ನಿಯಮಿತವಾಗಿ ಮುಖಕ್ಕೆ ಬಳಸುವುದರಿಂದ ಬಿಸಿಲು ಮತ್ತು ಮೊಡವೆಗಳಿಂದ ಉಂಟಾಗುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಲಿನ ಕೆನೆಯಲ್ಲಿರುವ ವಿಟಮಿನ್ ಮತ್ತು ಪ್ರೋಟೀನ್ ಹೊಸ ಚರ್ಮದ ಕೋಶಗಳ ರಚನೆಗೆ ಉತ್ತೇಜಿಸುತ್ತದೆ. ಅಲ್ಲದೆ ಸತ್ತ ಚರ್ಮದ ಕೋಶಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಎಫ್‌ಡಿಎ ಪ್ರಕಾರ ಆಲ್ಫಾ-ಹೈಡ್ರಾಕ್ಸಿ ಸ್ಕಿನ್ ಎಕ್ಸ್ಫೋಲಿಯೇಶನ್‌ನಲ್ಲಿ ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ನಿಂಬೆಯನ್ನು ಹಾಲಿನ ಕೆನೆಯೊಂದಿಗೆ ಬೆರೆಸಬಹುದು.

ಸ್ಕಿನ್ ಸಾಫ್ಟ್: ಹಾಲಿನ ಕೆನೆಯಲ್ಲಿ ಮಾಯಿಶ್ಚರೈಸಿಂಗ್ ಎಫೆಕ್ಟ್ ಇದೆ. ಹಾಗಾಗಿ ಇದು ಮುಖದ ಚರ್ಮವನ್ನು ಮೃದುಗೊಳಿಸುತ್ತದೆ. ಹಾಲಿನ ಕೆನೆ, ಅರಿಶಿಣ ಮತ್ತು ಹಾಲನ್ನು ನಿಯಮಿತವಾಗಿ ಮುಖದ ಮೇಲೆ ಸಮವಾಗಿ ಹಚ್ಚಬಹುದು. ಎಕ್ಸ್ಫೋಲಿಯೇಟಿಂಗ್ ಪರಿಣಾಮವನ್ನು ನೀಡಲು ಓಟ್ ಮೀಲ್ ಅನ್ನು ಹಾಲಿನ ಕೆನೆಗೆ ಸೇರಿಸಬಹುದು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ  ರಬ್ ಮಾಡಿದರೆ ಅದರ ಫಲಿತಾಂಶ ಕಂಡುಕೊಳ್ಳಬಹುದು.

ಅಕಾಲಿಕ ವಯಸ್ಸಾಗುವುದು: ಮುಖಕ್ಕೆ ಹಾಲಿನ ಕೆನೆ ಹಚ್ಚುವುದರಿಂದ ಮುಖದಲ್ಲಿನ ಸುಕ್ಕು ಮತ್ತು ಮೃದುವಾದ ರೇಖೆಗಳ ನೋಟವನ್ನು ವಿಳಂಬಗೊಳಿಸುತ್ತದೆ. ಏಕೆಂದರೆ ಇದರಲ್ಲಿನ ಪ್ರೋಟೀನ್ ಮತ್ತು ವಿಟಮಿನ್‌ಗಳು ಚರ್ಮವನ್ನು ಮೃದುವಾಗಿಡಲು ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ. ಜೇನುತುಪ್ಪವನ್ನು ಹಾಲಿಗೆ ಸೇರಿಸಿದರೆ ಚರ್ಮದ ಮೃದುತ್ವ ಮತ್ತು ಸುಕ್ಕುಗಳ ರಚನೆಯನ್ನು ತೆಗೆದುಹಾಕುತ್ತದೆ. 

ಶುಷ್ಕತೆ ಕಾಯ್ದುಕೊಳ್ಳುತ್ತದೆ: ಹಾಲಿನ ಕೆನೆಯಲ್ಲಿ ಆಳವಾದ ಚರ್ಮದ ಪದರದಿಂದ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ ಮತ್ತು ಅಂಗಾAಶವನ್ನು ಪೋಷಿಸಿ ತೇವವಾಗಿಡುತ್ತದೆ. ಕೊಬ್ಬಿನಾಂಶ ಹೇರಳವಾಗಿದ್ದು ಉತ್ತಮ ಮಾಯಿಶ್ಚರೈಸರ್ ಆಗಿದೆ. ಒಣ ಚರ್ಮವನ್ನು ಶುಷ್ಕತೆಯಿಂದಿರುವAತೆ ಸಹಾಯ ಮಾಡುತ್ತದೆ.

ಕಿರಿಕಿರಿ ನಿವಾರಣೆ: ಹಾಲಿನ ಕೆನೆಯು ಗಾಯಗಳನ್ನು ತ್ವರಿತವಾಗಿ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಗಾಯ ಒಣಗುವವರೆಗೂ ಹಾಲಿನ ಕೆನೆಯನ್ನು ಗಾಯದ ಮೇಲೆ ಹಚ್ಚಬೇಕು. ಇದು ಗಾಯದಿಂದಾಗುವ ಕಿರಿಕಿರಿ ಹಾಗೂ ಚರ್ಮವನ್ನು ನಿಭಾಯಿಸುವುದಲ್ಲದೆ ಸಾಂತ್ವನ ನೀಡುತ್ತದೆ. ಹಾಲಿನ ಕೆನೆಗೆ ಅರಿಶಿಣ ಸೇರಿಸಿ ಗಾಯಕ್ಕೆ ಹಚ್ಚಬೇಕು. ಇದು ಆಂಟಿಮೈಕ್ರೊಬಿಯಲ್, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡುತ್ತದೆ.

ತ್ವಚೆಯನ್ನು ಹಗುರಗೊಳಿಸುತ್ತದೆ: ಹಾಲಿನಿಂದ ತಯಾರಾಗುವ ಹಾಲಿನ ಕೆನೆಯು ತ್ವಚೆಯನ್ನು ಹಗುರಾಗಿಸುವ ಗುಣ ಹೊಂದಿದೆ. ಹಾಲಿನ ಕೆನೆಗೆ ಸ್ವಲ್ಪ ನಿಂಬೆ ರಸ ಸೇರಿಸಿ ಚರ್ಮಕ್ಕೆ ಹಚ್ಚಿ ೧೫ ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಸ್ಟ್ರಾಬೆರಿ ತಿಂದ್ರೆ ಅಲ್ಝೈಮರ್ ಬರೋದೇ ಇಲ್ವಂತೆ !

ಮೊಡವೆ ಸಮಸ್ಯೆಗೆ ಪರಿಹಾರ: ಹಾಲಿನ ಕೆನೆ ವಿಶೇಷವಾಗಿ ದೊಡ್ಡ ರಂಧ್ರ ಮತ್ತು ಕಾಡುವ ಮೊಡವೆ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಹಾಲಿನ ಕೆನೆಯನ್ನು ಮುಖದ ಮೇಲೆ ಹಚ್ಚಿ ೧೫ ನಿಮಿಷ ಬಿಟ್ಟು ಶುದ್ಧ ನೀರಿನಲ್ಲಿ ತೊಳೆಯಬೇಕು. ಬಿಗಿಯಾದ ರಂಧ್ರಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ, ಆದ್ದರಿಂದ ಮೊಡವೆ ಕಡಿಮೆ ಮಾಡುವುದಲ್ಲದೆ ರಂದ್ರಗಳ್ನು ಬಿಗಿಗೊಳಿಸುತ್ತದೆ.

Food and Mood: ಮೂಡಿನ ಮೇಲೆ ಪ್ರಭಾವ ಬೀರೋ ಆಹಾರ ಯಾವ್ದು?

ಹೊಳೆಯುವ ತ್ವಚೆ: ಹಾಲಿನ ಕೆನೆಯಲ್ಲಿ ಜಿಡ್ಡಿನಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಕೆನೆಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮವು ಹೊಳೆಯುತ್ತದೆ. ಅಲ್ಲದೆ ಚರ್ಮವನ್ನು ಆರೋಗ್ಯವಾಗಿಡುತ್ತದೆ.

click me!