Food and Mood: ಮೂಡಿನ ಮೇಲೆ ಪ್ರಭಾವ ಬೀರೋ ಆಹಾರ ಯಾವ್ದು?

By Suvarna NewsFirst Published Aug 3, 2022, 5:19 PM IST
Highlights

ಕರುಳಿನ ಭಾವನೆಗಳು ನಮ್ಮನ್ನು ರೂಪಿಸುತ್ತವೆ ಎಂದರೆ ತಪ್ಪಿಲ್ಲ. ಕರುಳಿನ ಫೀಲಿಂಗ್ಸ್‌ ರೂಪುಗೊಳ್ಳುವುದು ಆಹಾರದ ಮೇಲೆ. ಹೀಗಾಗಿ, ಅವು ಸರಿಯಾಗಿರಬೇಕು ಎಂದಾದರೆ ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಹೊಂದಿರುವ ಆಹಾರವನ್ನೇ ಸೇವನೆ ಮಾಡಬೇಕು. 
 

ದಿನದಿನವೂ ನಮ್ಮ ಮೂಡು ಏರಿಳಿತವಾಗುತ್ತದೆ. ಒಂದು ದಿನವಿದ್ದಂತೆ ಇನ್ನೊಂದು ದಿನವಿರಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಾವು ಸೇವಿಸುವ ಆಹಾರವನ್ನು ಒಮ್ಮೆ ಪರಾಮರ್ಶೆ ಮಾಡಬೇಕು. ಏಕೆಂದರೆ, ಕರುಳಿನ ಭಾವನೆಗಳು ನಮ್ಮ ಮೂಡನ್ನು ಬದಲಾವಣೆ ಮಾಡುವಷ್ಟು ಶಕ್ತಿಯುತವಾಗಿರುತ್ತವೆ. ಒಮ್ಮೊಮ್ಮೆ ನಾವು ಖುಷಿಯಾಗಿರುತ್ತೇವೆ. ಮಗದೊಮ್ಮೆ ಬೇಸರವಾಗುತ್ತಿರುತ್ತದೆ. ಒಂದು ದಿನ ಎಲ್ಲರಿಗಿಂತ ಉಲ್ಲಸಿತರಾಗಿದ್ದರೆ, ಮತ್ತೊಂದು ದಿನ ಏನೋ ಖಿನ್ನ ಮೂಡಿನಲ್ಲಿರುತ್ತೇವೆ. ಇದಕ್ಕೆಲ್ಲ ಕರುಳಿನಲ್ಲಿ ಮೂಡುವ ಭಾವನೆಗಳು ಕಾರಣ. ಕರುಳಿನ ಭಾವನೆಗಳು ಮುಖ್ಯವಾಗಿ ಆಹಾರದ ಮೇಲೆ ರೂಪುಗೊಳ್ಳುತ್ತವೆ. ಯಾವುದೇ ರೀತಿಯ ಮಾನಸಿಕ ಭಾವನೆಗಳಿಗೆ ಇದೇ ಕಾರಣ ಎಂದರೆ ಅಚ್ಚರಿಯಾಗಬಹುದು. ನಾವು ಸೇವಿಸುವ ಆಹಾರ ನಮ್ಮ ಮೂಡಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಕರುಳು ಇದಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕೆಲವು ರೀತಿಯ ಆಹಾರ ಸೇವನೆ ಮಾಡುವುದರಿಂದ ಭಾವನೆಗಳ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ. ಅಧಿಕ ಕೊಬ್ಬು ಮತ್ತು ಸಕ್ಕರೆ ಅಂಶವಿರುವ ಆಹಾರದ ಸೇವನೆಯಿಂದ ಏನೋ ಒಂದು ರೀತಿಯ ಹಿಂಸೆಯಾಗುತ್ತದೆ. ಮೊದಲಿನ ಸ್ಥಿತಿಗಿಂತ ಕೆಟ್ಟ ಸ್ಥಿತಿಯಲ್ಲಿ ಇದ್ದೇವೆ ಎನಿಸುವಂತೆ ಆಗುತ್ತದೆ. ಬದಲಿಗೆ, ಪ್ರೊಟೀನ್‌ ಭರಿತ ಆಹಾರ ತಿಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಸಮವಾಗುವ ಜತೆಗೆ ಇಡೀ ದಿನ ಮನಸ್ಥಿತಿಯೂ ಚೆನ್ನಾಗಿರುತ್ತದೆ. ಜತೆಗೆ, ನಾರಿನಂಶ ಇರುವ ಆಹಾರವೂ ಇದ್ದರೆ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಂಡು ಕ್ರಿಯಾಶೀಲರಾಗಿ ಇರುವಂತೆ ಮಾಡುತ್ತದೆ. 

ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್‌ (Stress Hormones)
ದೇಹಕ್ಕೆ ಶಕ್ತಿಯ (Energy) ಕೊರತೆಯಾದಾಗ ನಮಗೆ ಹಸಿವಾಗುತ್ತದೆ. ಹಸಿವಾದಾಗ (Hunger) ದೇಹಕ್ಕೆ ಬೇಕಾದ ಆಹಾರ (Food) ಸೇವಿಸಬೇಕು ಎಂದರ್ಥ. ಆದರೆ, ನಾವು ಸಾಮಾನ್ಯವಾಗಿ ರುಚಿಯಾದ ಅಧಿಕ ಆಹಾರ ಸೇವನೆಗೆ ಆದ್ಯತೆ ನೀಡುತ್ತೇವೆ. ಇದರಿಂದಾಗಿ ಕೆಲವು ರೀತಿಯ ಪೌಷ್ಟಿಕಾಂಶಗಳ (Nutrients) ಕೊರತೆ ಉಂಟಾಗುತ್ತದೆ. ಸೂಕ್ತ ಪೌಷ್ಟಿಕಾಂಶ ಹಾಗೂ ಕ್ಯಾಲರಿ (Calorie) ದೊರೆಯದೆ ಹೋದಾಗ ದೇಹದಲ್ಲಿ ಒತ್ತಡ ಸೃಷ್ಟಿಸುವ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ಕಾರ್ಟಿಸೋಲ್‌ (Cortisol) ಮತ್ತು ಅಡ್ರಿನಲಿನ್ (Adrinaline). ಈ ಹಾರ್ಮೋನುಗಳು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತವೆ. ಸ್ವಲ್ಪ ಆಹಾರ ಸೇವನೆ ಮಾಡುವ ಮೂಲಕ ಮೆಟಬಾಲಿಸಂ (Metabolism) ಕ್ರಿಯೆ ಸೂಕ್ತವಾಗಿ ಚಲಿಸುವಂತೆ ಮಾಡಬಹುದು. ಅಂದರೆ ಕಡಿಮೆ ಆಹಾರ ತಿಂದಾಗ ದೇಹಕ್ಕೆ ಅಧಿಕ ಪ್ರಮಾಣದ ಕ್ಯಾಲರಿ ದಕ್ಕಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಹಾಗೂ ಕಾರ್ಟಿಸೋಲ್‌ ಉತ್ಪಾದನೆಯಾಗುವುದಿಲ್ಲ. ಮುಖ್ಯವಾಗಿ, ರಾತ್ರಿ ಸಮಯದಲ್ಲಿ ಹೆಚ್ಚು ಊಟ ಮಾಡಬಾರದು ಎನ್ನುವುದು ಇದೇ ಕಾರಣಕ್ಕೆ.   

ಮೂಡ್ ಆಫ್ ಆಗುತ್ತಿದ್ದರೆ ಈ ಆಸನ ಟ್ರೈ ಮಾಡಿ

ಆಹಾರ ತಿಂದ ತಕ್ಷಣ ಬಿಡುಗಡೆಯಾಗುವ ಶಕ್ತಿಯ ಮೇಲೆ ಗ್ಲೈಸೆಮಿಕ್‌ ಇಂಡೆಕ್ಸ್‌ (Glycemic Index) ಪ್ರಮಾಣ ಮಾಡಲಾಗುತ್ತದೆ. ಅಂದರೆ ಕೆಲವು ಆಹಾರಗಳು ತಿಂದ ತಕ್ಷಣ ಶಕ್ತಿ ಬಿಡುಗಡೆಯಾಗುತ್ತದೆ, ಕೆಲವು ಆಹಾರಗಳು ನಿಧಾನವಾಗಿ ಶಕ್ತಿಯನ್ನು ರಕ್ತದಲ್ಲಿ ಬಿಡುಗಡೆ ಮಾಡುತ್ತವೆ. ಇವುಗಳನ್ನು ಕಡಿಮೆ ಜಿಐ ಹೊಂದಿರುವ ಆಹಾರ ಎಂದು ಹೇಳಲಾಗುತ್ತದೆ. ಅಧಿಕ ಜಿಐ ಎಂದರೆ ಶಕ್ತಿಯನ್ನು ಬಹುಬೇಗ ಬಿಡುಗಡೆ ಮಾಡುವ ಆಹಾರಗಳು. 

ಯಾವ ಹಣ್ಣಿನಲ್ಲಿ ಜಿಐ ಕಡಿಮೆ?
ಗ್ಲೈಸೆಮಿಕ್‌ ಇಂಡೆಕ್ಸ್‌ ಅಧಿಕವಾಗಿರುವ ಆಲೂಗಡ್ಡೆ (Potato) ಹಾಗೂ ಧಾನ್ಯಗಳು (Grains) ನಮ್ಮನ್ನು ಇಡೀ ದಿನ ಹೊಟ್ಟೆ ಭರ್ತಿಯಾಗಿರುವ ಭಾವನೆಯಲ್ಲಿ ಇಟ್ಟಿರುತ್ತವೆ. ಹೀಗಾಗಿಯೇ, ಜನ ಇವುಗಳನ್ನು ಹೊಟ್ಟೆ ತುಂಬ ತಿನ್ನುವ ಖಯಾಲಿ ಮಾಡಿಕೊಂಡಿದ್ದಾರೆ. ಹಲವಾರು ಹಣ್ಣುಗಳಲ್ಲಿ ಜಿಐ ಅಂಶ ಅಧಿಕವಾಗಿರುತ್ತದೆ. ಆದರೆ, ಕೆಲವು ಹಣ್ಣುಗಳು (Fruits) ಕಡಿಮೆ ಜಿಐ ಹೊಂದಿರುತ್ತವೆ. ಇವುಗಳನ್ನು ತಿಂದಾಗ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ. ಇದರಿಂದಾಗಿ ಸಕ್ಕರೆ (Sugar) ಅಂಶ ಹೆಚ್ಚಾಗಿರುವ ಆಹಾರ ತಿನ್ನಬೇಕೆಂಬ ಬಯಕೆ (Cravings) ಕಡಿಮೆ ಆಗುತ್ತದೆ. ಹಾಗೂ ಹೊಟ್ಟೆ ಭರ್ತಿಯಾಗಿರುವ ಭಾವನೆ ಮೂಡಿಸುತ್ತವೆ. ನಿಮಗೆ ತೂಕ ಇಳಿಸಿಕೊಳ್ಳಬೇಕು ಎನ್ನುವ ಆಸೆಯಿದ್ದರೆ ಕಡಿಮೆ ಜಿಐ ಹೊಂದಿರುವ ಆಹಾರ ಸೇವನೆ ಮಾಡುವುದು ಅಗತ್ಯ. ಈ ಆಹಾರದಿಂದ ದೀರ್ಘಕಾಲ ಹಸಿವೆ ಆಗುವುದಿಲ್ಲ. ಏಕೆಂದರೆ, ಇವು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಕಡಿಮೆ ಜಿಐ ಹೊಂದಿರುವ ಸೇಬು (Apple), ಪಿಯರ್ಸ್‌, ಪೀಚ್‌ ಮೊದಲಾದ ಹಣ್ಣುಗಳು ಈ ನಿಟ್ಟಿನಲ್ಲಿ ಭಾರೀ ಸಹಕಾರಿ. ನಿಮ್ಮ ಊಟದ ಜತೆಗೆ ಅಥವಾ ಊಟದ ಬಳಿಕ ಇವುಗಳನ್ನು ಸೇವಿಸಬಹುದು. ಏಕೆಂದರೆ, ಇವು ನಿಮ್ಮ ಸಕ್ಕರೆ ಮಟ್ಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಷ್ಟೇ ಅಲ್ಲ, ಇವುಗಳನ್ನು ಸ್ನ್ಯಾಕ್ಸ್‌ ನಂತೆ ಊಟದ ಮಧ್ಯೆ ಸೇವಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಸಂಸ್ಕರಿತ ಸಕ್ಕರೆ, ಆಲೂಗಡ್ಡೆ, ಅಕ್ಕಿ, ಬಾಳೆಹಣ್ಣುಗಳನ್ನು (Banana) ಸೇವನೆ ಮಾಡಬಾರದು. ಇದರಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ದಿಢೀರನೆ ಏರಿಕೆಯಾಗುತ್ತದೆ. ಮಧುಮೇಹಿಗಳಿಗಂತೂ ಇವು ಸೂಕ್ತವಾದ ಆಹಾರವಲ್ಲ. 

ಪ್ರೀತಿ ಹೆಚ್ಚಿಸೋ ಆಹಾರಗಳಿವು

click me!