ಹೆಚ್ಚು ವರ್ಷ ಆರೋಗ್ಯವಾಗಿ ಬದುಕ್ಬೇಕಂದ್ರೆ ಬ್ಲೂ ಝೋನ್ ಡಯಟ್‌‌ಗೆ ಹೊರಳಿ

Published : Jan 04, 2024, 06:34 PM IST
ಹೆಚ್ಚು ವರ್ಷ ಆರೋಗ್ಯವಾಗಿ ಬದುಕ್ಬೇಕಂದ್ರೆ ಬ್ಲೂ ಝೋನ್ ಡಯಟ್‌‌ಗೆ ಹೊರಳಿ

ಸಾರಾಂಶ

ಭೂಮಿಯ ಮೇಲೆ ದೀರ್ಘಕಾಲ ಬದುಕುವ ಸಮುದಾಯಗಳ ನಿರ್ದಿಷ್ಟ ಆಹಾರಗಳು, ತಿನ್ನುವ ಮಾದರಿಗಳು ಮತ್ತು ಜೀವನಶೈಲಿಯೇ ಬ್ಲೂ ಝೋನ್ ಡಯಟ್‌ನ ತಳಹದಿ.

ಹೆಚ್ಚು ವರ್ಷ ಬದುಕ್ಬೇಕು, ಕಡೆವರೆಗೂ ಆರೋಗ್ಯವಾಗಿರ್ಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ? ಆದ್ರೆ ಇಂಥಾ ಲಕ್ ಕೆಲವರಿಗೆ ಮಾತ್ರ ಒಲಿದು ಬಂದಿರುತ್ತೆ. ನಿಮಗೂ ಇಂಥದೊಂದು ಅದೃಷ್ಟದ ಬದುಕು ಬೇಕೆಂದರೆ ಬ್ಲೂ ಝೋನ್ ಡಯಟ್‌ಗೆ ಹೊರಳಿಕೊಳ್ಳಿ. 

ಏನಪ್ಪಾ ಇದು ಬ್ಲೂ ಝೋನ್(ನೀಲಿ ವಲಯ) ಡಯಟ್ ಅಂದ್ರಾ?
ಇದೇನು ತೂಕ ಇಳಿಸೋ ತಂತ್ರವಲ್ಲ, ಬದಲಿಗೆ ಆರೋಗ್ಯವಾಗಿ ದೀರ್ಘಾಯುಷ್ಯ ಹೊಂದುವ ತಂತ್ರ. ಜಗತ್ತಿನ ಕೆಲ ಸ್ಥಳಗಳಲ್ಲಿ ಕೆಲ ಸಮುದಾಯಗಳು ಶತಾಯುಶಿಗಳಾಗಿರುತ್ತಾರೆ. ಅವರಿಗೆ ಆರೋಗ್ಯ ಸಮಸ್ಯೆಗಳೂ ಇರುವುದಿಲ್ಲ. ಹೀಗೆ ಜನರು ಹೆಚ್ಚು ಕಾಲ ಬದುಕುತ್ತಾರೆ ಎಂದು ಹೇಳಲಾದ ಸ್ಥಳಗಳನ್ನು ಸಂಶೋಧಕರು ಗ್ಲೋಬ್‌ನಲ್ಲಿ ಗುರುತಿಸಿ ಅವಕ್ಕೆ ಬ್ಲೂ ಝೋನ್ ಎಂದು ಹೆಸರಿಸಿದ್ದಾರೆ. ಇಂಥ ಸ್ಥಳಗಳಲ್ಲಿ ಜನರು ತಿನ್ನುವ ಆಹಾರವನ್ನೇ ಜಗತ್ತಿನ ಇತರ ಭಾಗದ ಜನರೂ ಅನುಸರಿಸಲಿ ಎಂಬ ಕಾರಣಕ್ಕೆ ಅವರ ಆಹಾರ ಪದ್ಧತಿಗೆ ಬ್ಲೂ ಝೋನ್ ಡಯಟ್ ಎಂದು ಹೆಸರಿಸಲಾಗಿದೆ. 

ಚರ್ಚ್ ಸ್ಟ್ರೀಟ್‌ನಲ್ಲಿ ಮತ್ತೆ ಹೊಸ ಅವತಾರದಲ್ಲಿ ತಲೆ ಎತ್ತುತ್ತಿದೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್!

ಬ್ಲೂ ಝೋನ್ಸ್ ಯಾವೆಲ್ಲ?
'ಬ್ಲೂ ಝೋನ್ಸ್' ಎಂದು ಕರೆಯಲ್ಪಡುವ ಐದು ಸ್ಥಳಗಳಿವೆ - ಇವು ಜಪಾನ್‌ನ ಓಕಿನಾವಾ, ಗ್ರೀಸ್‌ನ ಇಕಾರಿಯಾ, ಇಟಲಿಯ ಸಾರ್ಡಿನಿಯಾದಲ್ಲಿ ನುರೊ ಪ್ರಾಂತ್ಯ, ಕೋಸ್ಟರಿಕಾದ ನಿಕೋಯಾ ಪೆನಿನ್ಸುಲಾ, ಮತ್ತು ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾ. ಅಲ್ಲಿ ಜನರು ಸಾಮಾನ್ಯವಾಗಿ 100 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ ಮತ್ತು ಆರೋಗ್ಯದಿಂದಿದ್ದಾರೆ. ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ನೀವು ಆನುವಂಶಿಕ ಜೀನ್ ಪಡೆದಿರಬೇಕಿಲ್ಲ. ಆದರೆ ಈ ಪ್ರದೇಶಗಳಲ್ಲಿ ಅನುಸರಿಸುವ ಆಹಾರಗಳು ಮತ್ತು ಆರೋಗ್ಯಕರ ಜೀವನಶೈಲಿಯು ಜನರು ಉತ್ತಮ ವೃದ್ಧಾಪ್ಯವನ್ನು ಆನಂದಿಸಲು ಸಹಾಯ ಮಾಡುತ್ತವೆ  ಎಂದು ಈ ಸಮುದಾಯಗಳು ಸಾಬೀತುಪಡಿಸುತ್ತವೆ. 

ನೀಲಿ ವಲಯಗಳ ಆಹಾರ ಪದ್ಧತಿ ಹೇಗಿದೆ?
ಓಕಿನಾವಾದ ಆಹಾರವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಆದರೆ ಪೋಷಕಾಂಶಗಳಲ್ಲಿ ದಟ್ಟವಾಗಿರುತ್ತದೆ. ಅಕ್ಕಿಗಿಂತ ಬೇರು ತರಕಾರಿಗಳನ್ನು ಇಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇವರು ಹೊಟ್ಟೆ ಶೇ. 80ರಷ್ಟು ತುಂಬುವವರೆಗೆ ಮಾತ್ರ ತಿನ್ನುತ್ತಾರೆ. 

ಪಾಲಕ್‌ಗಿಂತ ಹೆಚ್ಚು ಪೌಷ್ಟಿಕಾಂಶ ನೀಡುತ್ತೆ ಈ ತರಕಾರಿ, ಕ್ಯಾನ್ಸರ್- ಶುಗರ್ ಗುಣಪಡಿಸಲೂ ಸಹಕಾರಿ

ಇಟಲಿಯ ನುರೊ ಪ್ರಾಂತ್ಯದ ಜನರು ಧಾನ್ಯಗಳು, ಬೀನ್ಸ್, ತೋಟದ ತರಕಾರಿಗಳು ಮತ್ತು ಹಣ್ಣುಗಳ ಜೊತೆಗೆ ಕುರಿ ಹಾಲು ಮತ್ತು ಚೀಸ್‌ನ ಸಸ್ಯ ಆಧಾರಿತ ಆಹಾರವನ್ನು ಆನಂದಿಸುತ್ತಾರೆ. ತಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳುತ್ತಾರೆ. 

ಗ್ರೀಸ್‌ನ ಇಕಾರಿಯಾದಲ್ಲಿ ಆಹಾರವು ಹೆಚ್ಚು ಸಾಂಪ್ರದಾಯಿಕವಾಗಿ ಮೆಡಿಟರೇನಿಯನ್ ಆಗಿದೆ. ಸಾಕಷ್ಟು ಹಣ್ಣುಗಳು, ತರಕಾರಿಗಳು (ಎಲೆಗಳ ಸೊಪ್ಪನ್ನು ಒಳಗೊಂಡಂತೆ), ಧಾನ್ಯಗಳು, ಆಲಿವ್ ಎಣ್ಣೆ ಜೊತೆಗೆ ಮೇಕೆ ಚೀಸ್, ಜೇನುತುಪ್ಪ ಮತ್ತು ಗಿಡಮೂಲಿಕೆಗಳನ್ನು ಈ ದ್ವೀಪದ ಜನರು ಸೇವಿಸುತ್ತಾರೆ. 

ಕೋಸ್ಟರಿಕಾದ ನಿಕೋಯಾದ ಜನರು ಯಾವುದೇ ಸಂಸ್ಕರಿಸಿದ ಆಹಾರ ಬಳಸುವುದಿಲ್ಲ. ಈ ಸಮುದಾಯವು ಗೆಣಸು, ಜೋಳ ಮತ್ತು ಸಿಹಿ ಗೆಣಸು,ಸಮೃದ್ಧ ಹಣ್ಣು ಮತ್ತು ತರಕಾರಿಗಳನ್ನು ಆನಂದಿಸುತ್ತದೆ; ಅವರು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಹೊಂದಿರುವ ಸ್ಥಳೀಯ ಖನಿಜಯುಕ್ತ ನೀರನ್ನು ಕುಡಿಯುತ್ತಾರೆ. 

ಕ್ಯಾಲಿಫೋರ್ನಿಯಾ ಬಳಿಯ ಲೋಮಾ ಲಿಂಡಾದ ಜನರು ಉಳಿದ ಅಮೆರಿಕರಂಥಲ್ಲದೆ, ಪ್ರಧಾನವಾಗಿ ಸಸ್ಯಾಹಾರಿ ಪಥ್ಯದ ಸೊಪ್ಪುಗಳು, ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುತ್ತಾರೆ. ಡೈರಿ, ಮೊಟ್ಟೆ ಮತ್ತು ಮೀನುಗಳನ್ನು ತಿನ್ನಲು ಆಯ್ಕೆ ಮಾಡುವವರು ಮಿತವಾಗಿ ಮತ್ತು ಮುಖ್ಯಕ್ಕಿಂತ ಹೆಚ್ಚಾಗಿ ಸೈಡ್ ಡಿಶ್ ಆಗಿ ಸೇವಿಸುತ್ತಾರೆ. ಧೂಮಪಾನ ಮತ್ತು ಮದ್ಯಪಾನವಿಲ್ಲದ ಜೀವನಶೈಲಿ ಇವರದಾಗಿರುತ್ತದೆ.

ನೀಲಿ ವಲಯದ ಜೀವನಶೈಲಿ
ಬ್ಲೂ ಝೋನ್ ಸಮುದಾಯಗಳು ಆಗಾಗ್ಗೆ ಜಿಮ್‌ಗೆ ಹೋಗುವುದಿಲ್ಲ, ಅವರು ದೈಹಿಕ ಚಟುವಟಿಕೆಯ ಅಗತ್ಯವಿರುವ ಪರಿಸರದಲ್ಲಿ ವಾಸಿಸುತ್ತಾರೆ. 
ಬ್ಲೂ ಝೋನ್ ಸಮುದಾಯಗಳು ಸಕಾರಾತ್ಮಕ ದೃಷ್ಟಿಕೋನವನ್ನು ಆನಂದಿಸುತ್ತವೆ. ಇದು ಜೀವಿತಾವಧಿಗೆ ಏಳು ವರ್ಷಗಳನ್ನು ಸೇರಿಸುತ್ತದೆ ಎಂದು ಅಂದಾಜಿಸಲಾಗಿದೆ.
ಅವರು ಸಮಯವನ್ನು ಕಳೆಯಲು ಪ್ರಾರ್ಥನೆ, ಸ್ನೇಹಿತರು ಅಥವಾ ಕುಟುಂಬದೊಂದಿಗೆ ಒಟ್ಟಿಗೆ ಸೇರುವುದು, ಮಧ್ಯಾಹ್ನದ ವಿಶ್ರಾಂತಿ ಅನುಭವಿಸುತ್ತಾರೆ.
ನೀಲಿ ವಲಯದ ಆಹಾರದಲ್ಲಿ ಮಧ್ಯಮ ಕ್ಯಾಲೋರಿ ಸೇವನೆಯು ಪ್ರಮುಖವಾಗಿ ಕಂಡುಬರುತ್ತದೆ. 
ಅವರ ಆಹಾರಕ್ರಮದಲ್ಲಿ ಬೀನ್ಸ್, ಕಾಳುಗಳು, ಬೇರು ಮತ್ತು ಹಸಿರು ಎಲೆಗಳ ತರಕಾರಿಗಳು  ದೊಡ್ಡ ಪಾತ್ರವನ್ನು ವಹಿಸುತ್ತವೆ, ಇದು ಆಹಾರದ ಸುಮಾರು 95 ಪ್ರತಿಶತವನ್ನು ಹೊಂದಿದೆ.
ಜೀವನ ಸಂಗಾತಿ, ಮಕ್ಕಳಿಗೆ ಸಮಯ ಕೊಡುವುದು ಅಥವಾ ವಯಸ್ಸಾದ ಪೋಷಕರನ್ನು ಬೆಂಬಲಿಸುವುದು ಇವರ ಜೀವನಶೈಲಿಯ ಭಾಗವಾಗಿದೆ.

ಹಾಗಿದ್ದರೆ, ಧೀರ್ಘಾಯಸ್ಸು, ಆರೋಗ್ಯಕ್ಕಾಗಿ ಎಂಥ ಜೀವನಶೈಲಿ, ಎಂಥ ಆಹಾರ ಬೇಕೆನ್ನುವುದನ್ನು ತಿಳಿದಿರಲ್ಲವೇ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?