ಡಿಫರೆಂಟ್ ಸ್ಟೈಲಲ್ಲಿ ಗಡ್ಡ ಬಿಡೋದು ಚಂದ, ಮೆಂಟೇನ್ ಮಾಡದಿದ್ದರೆ ಅನಾರೋಗ್ಯ ಗ್ಯಾರಂಟಿ

By Suvarna News  |  First Published Nov 16, 2022, 3:28 PM IST

ಫ್ಯಾಷನ್ ವಿಷ್ಯದಲ್ಲಿ ಪುರುಷರು ಕೂಡ ಹಿಂದೆ ಬಿದ್ದಿಲ್ಲ. ಹೊಸ ಹೊಸ ಸ್ಟೈಲ್ ಫಾಲೋ ಮಾಡ್ತಾರೆ. ಉದ್ದುದ್ದದ ಗಡ್ಡ ಬಿಟ್ಟು ಸುಂದರ ನೋಟ ಹೊಂದಲು ಟ್ರೈ ಮಾಡ್ತಾರೆ. ಇದೇ ಗಡ್ಡ ರೋಗಕ್ಕೆ ಮೂಲ ಎಂಬುದು ಅವರಿಗೆ ತಿಳಿದಿಲ್ಲ.
 


ಗಡ್ಡ ಬಿಡೋದು ಈಗ ಫ್ಯಾಷನ್. ಕೆಜಿಎಫ್ ಚಿತ್ರದ ನಂತ್ರ ಗಡ್ಡ ಬಿಡೋದು ಮತ್ತಷ್ಟು ಪ್ರಸಿದ್ಧಿ ಪಡೆದಿದೆ. ಗಡ್ಡವಿರುವ ಹುಡುಗ್ರು ನೋಡಲು ಸುಂದರವಾಗಿ ಕಾಣ್ತಾರೆ. ಇದ್ರಲ್ಲಿ ಅನುಮಾನ ಇಲ್ಲ. ಹಾಗೆ ಗಡ್ಡ, ಮುಖದ ಅನೇಕ ಗುಟ್ಟುಗಳನ್ನು ಮುಚ್ಚಿಡುತ್ತೆ ಕೂಡ. ಆದ್ರೆ ಮುಖದ ಸೌಂದರ್ಯ ಹೆಚ್ಚಿಸುವ, ಹುಡುಗಿಯರನ್ನು ಆಕರ್ಷಿಸುವ ಈ ಗಡ್ಡ ನಾವಂದುಕೊಂಡಷ್ಟು ಒಳ್ಳೆಯದಲ್ಲ. ಗಡ್ಡ ಬೆಳೆಸೋದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ ಎನ್ನುತ್ತದೆ ವೈದ್ಯಲೋಕ. ನಾವಿಂದು ಗಡ್ಡದಿಂದ ಆಗುವ ಹಾನಿಗಳು ಏನು ಎಂಬುದನ್ನು ಹೇಳ್ತೇವೆ.

ಕೊರೊನಾ ಅಬ್ಬರ ಮುಗಿದಿದೆ ನಿಜ. ಆದ್ರೆ ಕೊರೊನಾ ಇನ್ನೂ ಸಂಪೂರ್ಣ ನಮ್ಮನ್ನು ಬಿಟ್ಟು ಹೋಗಿಲ್ಲ. ಕೊರೊನಾ (Corona) ಹೆಚ್ಚಿರುವಾಗ ಸೋಂಕು ತಗಲದಂತೆ ನಮ್ಮನ್ನು ರಕ್ಷಿಸಿಕೊಳ್ಳಲು ಎರಡು ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗ್ತಾಯಿತ್ತು. ಆದ್ರೆ ಗಡ್ಡ ಬೆಳೆಸಿದ ವ್ಯಕ್ತಿ ಎರಡು ಮಾಸ್ಕ್ ಧರಿಸಿದ್ರೂ ಕೊರೊನಾ ಸೋಂಕಿನ ಅಪಾಯ ಇದ್ದೇ ಇರುತ್ತದೆ. ಗಡ್ಡ ಸೋಂಕುಗಳನ್ನು ಹರಡುವ ಮೂಲವಾಗಿದೆ. 

Latest Videos

undefined

ಗಡ್ಡ (Beard) ವು ಕೊರೊನಾ ಸೋಂಕು (Infection) ಹರಡುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿಯ ಸದಸ್ಯ ಡಾ. ಆಂಟನಿ ಎಂ. ಜೋಶಿ ಹೇಳಿದ್ದಾರೆ. ಗಡ್ಡ ಬೆಳೆಸಿದ ವ್ಯಕ್ತಿ, ಎರಡು ಮಾಸ್ಕ್ ಧರಿಸಿದ ನಂತರವೂ ಅವರ ಮೂಗು ಮತ್ತು ಬಾಯಿ ಸಂಪೂರ್ಣವಾಗಿ ಮುಚ್ಚಲ್ಪಡುವುದಿಲ್ಲ. ಹಾಗಾಗಿ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಮಾಸ್ಕ್ ಗಾಳಿಯನ್ನು ಫಿಲ್ಟರ್ ಮಾಡಿ ಒಳಗೆ ಬಿಡುತ್ತದೆ. ಗಡ್ಡ ಬಿಟ್ಟ ವ್ಯಕ್ತಿಗೆ ಮಾಸ್ಕ್ ಸರಿಯಾಗಿ ಕೂರುವುದಿಲ್ಲ. ಅದ್ರಲ್ಲೂ ಉದ್ದ ಗಡ್ಡ ಬೆಳೆಸಿದ ವ್ಯಕ್ತಿಗೆ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು.

HEALTHY FOOD : ಪಿ ಅಕ್ಷರದಿಂದ ಶುರುವಾಗುವ ಈ ಹಣ್ಣಿನಲ್ಲಿವೆ ಮಹಾನ್ ಶಕ್ತಿ

ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಹಿಂದೆ ಗಡ್ಡದ ಬಗ್ಗೆ ಸಂಶೋಧನೆ ನಡೆಸಿದ್ದರು. ಈ ಅಧ್ಯಯನದ ಪ್ರಕಾರ, ಉದ್ದನೆಯ ಗಡ್ಡ ಹೊಂದಿರುವ ಪುರುಷರು ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ ಎಂಬ ವಿಷ್ಯ ಬಹಿರಂಗವಾಗಿತ್ತು.
ಗಡ್ಡವನ್ನು ನೀವು ಎಷ್ಟು ಸ್ವಚ್ಛಗೊಳಿಸಿದ್ರೂ ಅಪಾಯದ ಸಾಧ್ಯತೆಯಿರುತ್ತದೆ. ಹಲವಾರು ಬಾರಿ ಗಡ್ಡ ತೊಳೆದ ನಂತರವೂ ಗಡ್ಡದಲ್ಲಿ ವಿವಿಧ ರೀತಿಯ ರೋಗಾಣುಗಳು ಸಿಕ್ಕಿಹಾಕಿಕೊಂಡಿರುತ್ತವೆ. ಅವು ಚರ್ಮದೊಂದಿಗೆ ನೇರ ಸಂಪರ್ಕ ಹೊಂದಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಗಡ್ಡದಲ್ಲಿ ಬಹಳಷ್ಟು ಸೂಕ್ಷ್ಮಜೀವಿಗಳು ಅಡಗಿರುತ್ತವೆ. ಗಡ್ಡಬಿಟ್ಟ ಪುರುಷರು ಕ್ಲೀನ್ ಶೇವ್ ಮಾಡಿದ ಪುರುಷರಿಗಿಂತ ಹೆಚ್ಚು ಅನಾರೋಗ್ಯಕ್ಕೆ ಒಳಗಾಗ್ತಾರೆ ಎಂಬುದು ಪತ್ತೆಯಾಗಿದೆ.   

ಬರ್ಮಿಂಗ್ಹ್ಯಾಮ್ ಟ್ರೈಕಾಲಜಿ ಸೆಂಟರ್‌ನ ತಜ್ಞ ಕರೋಲ್ ವಾಕರ್  ಪ್ರಕಾರ,  ಮುಖದ ಮೇಲಿರುವ ಕೂದಲು, ಗಡ್ಡ, ಮೀಸೆ ಅಥವಾ ಮೂಗಿನ ಒಳಗಿರುವ ಕೂದಲು ಸೂಕ್ಷ್ಮಜೀವಿಗಳಿಗೆ ಚರ್ಮದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತವೆ. ಅದ್ರಲ್ಲೂ ಗಡ್ಡ ಕೊಳಕಾಗುವುದು ಹೆಚ್ಚು. ಧೂಳು, ಆಹಾರದ ಕಣಗಳು ಗಡ್ಡಕ್ಕೆ ಅಂಟಿಕೊಂಡಿರುತ್ತವೆ. ಇದು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ಒದಗಿಸುತ್ತದೆ ಎನ್ನುತ್ತಾರೆ ತಜ್ಞರು. ಉದ್ದದ ಗಡ್ಡದಲ್ಲಿ ಸ್ಟ್ಯಾಫಿಲೋಕೊಕಸ್ ಎಂಬ ಅಪಾಯಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯಾಗುತ್ತದೆ. ಇದು ಚರ್ಮದ ಸೋಂಕುಗಳಿಗೆ ಕಾರಣವಾಗುತ್ತದೆ. ಚರ್ಮ ರೋಗಗಳ ಅಪಾಯವನ್ನು ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ತುಂಬಾ ತೆಳ್ಳಗಿನ ವ್ಯಕ್ತಿ ಸಹ ಕೇವಲ 15 ದಿನಗಳಲ್ಲಿ ದಪ್ಪ ಆಗ್ಬಹುದು… ಹೇಗೆ ನೋಡಿ

ಈಗಿನ ಜನರು ಆರೋಗ್ಯ, ಸೌಂದರ್ಯ, ಫ್ಯಾಷನ್ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನಕ್ಕೆ 3-4 ಬಾರಿ ಮುಖ ತೊಳೆಯುತ್ತಾರೆ. ಮುಖವನ್ನು ತೊಳೆಯುವುದರಿಂದ ಮಾಲಿನ್ಯಕಾರಕಗಳು ನೀರಿನೊಂದಿಗೆ ಕರಗುತ್ತವೆ. ಹಾಗಾಗಿ ಇವು ದೇಹವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಗಡ್ಡ ಮತ್ತು ಮೀಸೆಯ ನಿರ್ವಹಣೆಗೆ ಕೆಲವು ಎಣ್ಣೆ ಹಚ್ಚಿಕೊಳ್ತಾರೆ. ಮಾಲಿನ್ಯಕಾರಕಗಳು ಅಲ್ಲಿ ಅಂಟಿಕೊಳ್ಳುತ್ತವೆ ಮತ್ತು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದ್ರೆ ಒಣ ಗಡ್ಡದಲ್ಲಿ ಇದು ಕಡಿಮೆ. ಧೂಳು ಸೇರಿದಂತೆ ಮಾಲಿನ್ಯಕಾರಕಗಳು ಉಸಿರಾಟದ ಮೂಲಕ ದೇಹವನ್ನು ತ್ವರಿತವಾಗಿ ತಲುಪುತ್ತವೆ. ಗಡ್ಡವಿದ್ದೂ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದ್ರೆ ಗಡ್ಡದ ಗಾತ್ರವನ್ನು ಚಿಕ್ಕದು ಮಾಡಬೇಕು. ಆಗಾಗ ಗಡ್ಡ ಸ್ವಚ್ಛಗೊಳಿಸಬೇಕು. 

click me!