ಪತ್ನಿ ಹೆರಿಗೆಯ ನಂತರ ಪುರುಷರನ್ನೂ ಕಾಡುತ್ತೆ ಖಿನ್ನತೆ!

By Suvarna News  |  First Published Jul 18, 2021, 2:32 PM IST

ಪ್ರಸವಾನಂತರ ಅನೇಕ ಮಹಿಳೆಯರ ಖಿನ್ನತೆ ಅನುಭವಿಸುತ್ತಾರೆ. ಆದರೆ, ಗಂಡಸರಲ್ಲೂ ಹೀಗೆ ಹೆರಿಗೆಯ ಬಳಿ ಖಿನ್ನತೆ ಉಂಟಾಗುತ್ತದೆ ಎಂದರೆ ನಂಬುತ್ತೀರಾ?
 


ಪ್ರಸವಾನಂತರ ಅನೇಕ ಮಹಿಳೆಯರ ಖಿನ್ನತೆ ಅನುಭವಿಸುತ್ತಾರೆ. ಹೆರಿಗೆಯ ನೋವು, ದೈಹಿಕ ಆರೋಗ್ಯದ ಏರುಪೇರು ಹಾಗೂ ನಂತರ ಮಗುವಿನ ಲಾಲನೆ ಪಾಲನೆಯ ಒತ್ತಡಗಳು ಈ ಖಿನ್ನತೆಯನ್ನು ಸೃಷ್ಟಿಸುತ್ತವೆ. ಆದರೆ, ಗಂಡಸರಲ್ಲೂ ಹೀಗೆ ಹೆರಿಗೆಯ ಬಳಿ ಖಿನ್ನತೆ ಉಂಟಾಗುತ್ತದೆ ಎಂದರೆ ನಂಬುತ್ತೀರಾ?

ಹೆರಿಗೆಯ ನೋವನ್ನು ಅವರು ಅನುಭವಿಸದೇ ಇರಬಹುದು, ಆದರೆ ಅವರು ಭಾವನೆಗಳ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಾರೆ. ಹೊಸ ಸವಾಲುಗಳು, ಹೆಚ್ಚುವರಿ ಜವಾಬ್ದಾರಿ, ನಿದ್ರೆಯಿಲ್ಲದ ರಾತ್ರಿಗಳು ಎಲ್ಲವೂ ತಂದೆಯ ಮಾನಸಿಕ ಆರೋಗ್ಯಕ್ಕೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಮಹಿಳೆಯರಂತೆಯೇ ಪುರುಷರು ಕೂಡ ಮಗುವನ್ನು ಮನೆಗೆ ಕರೆತಂದ ನಂತರ ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ.

Latest Videos

undefined

ಪಿತೃತ್ವದ ಪಾತ್ರವನ್ನು ನಿಭಾಯಿಸುವುದು ಸರಳ ಕೆಲಸವಲ್ಲ. ಮಗುವಿನ ಅಗತ್ಯತೆಗಳನ್ನು ನೋಡಿಕೊಳ್ಳುವುದು ಮತ್ತು ವೇಳಾಪಟ್ಟಿಯ ಪ್ರಕಾರ ಕಾರ್ಯವನ್ನು ನಿಗದಿಪಡಿಸುವುದು ಸಾಕಷ್ಟು ಕಷ್ಟ. ಹೆರಿಗೆಯ ನಂತರ ದಣಿದ ಮತ್ತು ಒತ್ತಡದ ಭಾವನೆ ಸಾಮಾನ್ಯ. ಆದರೆ ಈ ಚಿಹ್ನೆಗಳು ಸಾಮಾನ್ಯಕ್ಕಿಂತ ಹೆಚ್ಚು ಕಾಲ ತಿಂದರೆ ಅವುಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. 

ರಾತ್ರಿ ಎಡಮಗ್ಗುಲಲ್ಲೇ ಯಾಕೆ ಮಲಗಬೇಕು ಗೊತ್ತೆ?

ಲಕ್ಷಣಗಳು:

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಸಾಮಾನ್ಯವಾಗಿರುವ ಕೆಲವು ಚಿಹ್ನೆಗಳು ಇಲ್ಲಿವೆ.

  • ಹಸಿವಿನಲ್ಲಿ ಬದಲಾವಣೆ
  • ತೂಕ ಇಳಿಕೆ
  • ನಿದ್ರಾಹೀನತೆ- ಮಗು ರಾತ್ರಿಯ ನಿದ್ರೆಯನ್ನು ಕಸಿಯಬಹುದು. 
  • ವಿವರಿಸಲಾಗದ ಕಿರಿಕಿರಿ 
  • ತೀವ್ರ ಬಳಲಿಕೆ
  • ಜೀವನಾಸಕ್ತಿಯ ಮತ್ತು ಲೈಂಗಿಕ ಆಸಕ್ತಿಯ ನಷ್ಟ
  • ದುಃಖ ಅಥವಾ ಹತಾಶ ಭಾವನೆ- ಮಗು ಇಷ್ಟು ಬೇಗನೆ ಬೇಡ, ಅಥವಾ ಮಗುವೇ ಬೇಡವಿತ್ತು ಎಂಬ ಭಾವನೆ ಇದ್ದಿದ್ದರೆ. 
  • ನಿಷ್ಪ್ರಯೋಜಕ ಅಥವಾ ತಪ್ಪಿತಸ್ಥ ಭಾವನೆ
  • ಅತಿಯಾದ ಚಿಂತೆ- ಮುಂದೆ ಹೇಗೆ ಎಂಬ ತೀವ್ರ ಆಲೋಚನೆ. 
  • ಹಠಾತ್ ಮನಸ್ಥಿತಿ ಬದಲಾವಣೆ 

ಆಟಿಸಂ ಮಕ್ಕಳ ಉತ್ತಮ ಆರೋಗ್ಯಕ್ಕೆ ಸರಿಯಾದ ಕ್ರೀಡೆಗಳಿವು

ಎಲ್ಲಾ ಪುರುಷರು ಪ್ರಸವಾನಂತರದ ಖಿನ್ನತೆಯ ಲಕ್ಷಣಗಳನ್ನು ತೋರಿಸುತ್ತಾರೆ ಎಂದೇನಿಲ್ಲ. ಆದರೆ ಕಾಣಿಸುವ ಕೆಲವರೂ ನಿರ್ಲಕ್ಷ್ಯದಿಂದಾಗಿ ಸುಮ್ಮನಿರುತ್ತಾರೆ. ಶೇಕಡಾ 8ರಷ್ಟು ತಂದೆಯರು ಖಿನ್ನತೆಯನ್ನು ಅನುಭವಿಸುತ್ತಾರೆ ಎಂದು ಡೇಟಾ ಸೂಚಿಸುತ್ತದೆ. ಪ್ರಸವಾನಂತರದ ಖಿನ್ನತೆಯ ಬೆಳವಣಿಗೆ ಅಥವಾ ಹದಗೆಡಲು ಹಲವಾರು ಅಂಶಗಳು ಕಾರಣವಾಗಬಹುದು.

  • ಖಿನ್ನತೆಯ ಇತಿಹಾಸ, ಈ ಹಿಂದೆ ಎಂದಾದರೂ ನಿಮ್ಮನ್ನು ಖಿನ್ನತೆ ಕಾಡಿಸಿದ್ದರೆ.
  • ಖಿನ್ನತೆಯ ಕುಟುಂಬದ ಇತಿಹಾಸ, ಈ ಹಿಂದೆ ಕುಟುಂಬದಲ್ಲಿ ಯಾರಾದರೂ ಅದನ್ನು ಹೊಂದಿದ್ದರೆ. 
  • ಪಿತೃತ್ವದ ಪಾತ್ರವನ್ನು ವಹಿಸಿಕೊಳ್ಳುವ ಬಗ್ಗೆ ಚಿಂತೆ- ತಂದೆಯಾಗಿ ತನ್ನ ಪಾತ್ರ ಸರಿಯಾಗಿ ನಿರ್ವಹಿಸುತ್ತೇನಾ ಎಂಬ ಆತಂಕ.
  • ಹಣಕಾಸಿನ ತೊಂದರೆಗಳು- ಕೆಲಸವಿಲ್ಲದಿದ್ದರೆ, ಆದಾಯವಿಲ್ಲದೆ ಇದ್ದರೆ. 
  • ಸಾಮಾಜಿಕ ಅಥವಾ ಭಾವನಾತ್ಮಕ ಬೆಂಬಲದ ಕೊರತೆ. ಒಂದೇ ಕಾಲಕ್ಕೆ ದಿಡೀರಾಗಿ ಮೈಮೇಲಿ ಬೀಳುವ ಹತ್ತುಹಲವು ಜವಾಬ್ದಾರಿಗಳು.
  • ಕುಟುಂಬ ಅಥವಾ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಒತ್ತಡ
  • ಸಂಗಾತಿಯಿಂದ ಗಮನರಾಹಿತ್ಯ, ಲೈಂಗಿಕತೆಯಲ್ಲಿ ಕೊರತೆ- ಲೈಂಗಿಕ ಸುಖದಿಂದ ದೂರವಾಗಿ ಬಹು ಕಾಲ ಆಗಿದ್ದರೆ, ಅದೊಂದು ಮರೀಚಿಕೆಯಂತೆ ಆಗಿದೆ ಎಂಬ ಭಾವನೆ ಮೂಡಿದ್ದರೆ.  
  • ಪ್ರಸವ ಕಾಲದ ತೊಂದರೆಗಳು- ಘಟನೆಗಳಿಂದಾಗಿ ಮಾನಸಿಕ ಆಘಾತ ಉಂಟಾಗಿದ್ದರೆ. 

ಮಹಿಳೆಯರಲ್ಲಿ ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಸುಲಭವಾಗಿ ಪತ್ತೆಯಾಗುತ್ತವೆ. ಆದರೆ ಪುರುಷರ ವಿಷಯದಲ್ಲಿ ಹೆಚ್ಚಾಗಿ ವರದಿಯಾಗುವುದಿಲ್ಲ. ಪುರುಷರಲ್ಲಿ ಹೆರಿಗೆಗೆ ಸಂಬಂಧಿಸಿ ಏನೂ ಆಗುವುದಿಲ್ಲ ಎಂಬ ತಪ್ಪು ತಿಳಿವಳಿಕೆಯೂ ಇರಬಹುದು. ಖಿನ್ನತೆಯ ನಿರಂತರ ಲಕ್ಷಣಗಳನ್ನು ಅನುಭವಿಸಿದರೆ ಚಿಕಿತ್ಸೆ ಪಡೆಯಲೇಬೇಕು. ರೋಗನಿರ್ಣಯ ಪ್ರಕ್ರಿಯೆಗೆ ಡಾಕ್ಟರ್ ಬಳಿ ಹೋಗಬೇಕು. ವೈದ್ಯರು ಮೊದಲು ದೈಹಿಕ ರೋಗಲಕ್ಷಣಗಳನ್ನು ಮತ್ತು ಖಿನ್ನತೆಯ ಲಕ್ಷಣಗಳನ್ನು ಹುಡುಕುತ್ತಾರೆ.

ಹೊಸ ಜೀವನಕ್ಕೆ ಹೊಂದಿಕೊಳ್ಳಲು ನಿಮಗೆ ತೊಂದರೆಯಾಗಿದೆ ಎಂದು ನೀವು ಭಾವಿಸಿದರೆ, ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಖಿನ್ನತೆಯು ಗಂಭೀರವಾದ ಮಾನಸಿಕ ಸ್ಥಿತಿಯಾಗಿದ್ದು ಅದು ತಾನಾಗಿಯೇ ವಾಸಿ ಆಗುವುದಿಲ್ಲ. ಅದರಿಂದ ಚೇತರಿಸಿಕೊಳ್ಳಲು ಸರಿಯಾದ ಸಮಯದಲ್ಲಿ ತಜ್ಞರ ಸಹಾಯ ತೆಗೆದುಕೊಳ್ಳುವುದು ಅತ್ಯಗತ್ಯ. ದೀರ್ಘಕಾಲದ ಖಿನ್ನತೆ ನಂತರದ ಜೀವನದಲ್ಲಿ ತೀವ್ರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

click me!