
ಈತನ ಬಾಡಿ ನೋಡಿ ಮೋಸ ಹೋಗಬೇಡಿ. ಇವನ ವಯಸ್ಸು 72 ವರ್ಷ. ಹಲವರು ಈತನಿಗೆ ಅಷ್ಟು ವಯಸ್ಸಾಗಿರಲಿಕ್ಕಿಲ್ಲ ಅಂತಲೇ ಹೇಳುತ್ತಾರೆ. ಇಂಟರ್‌ನೆಟ್‌ನಲ್ಲಿ ಈತನ ದೇಹದ ಚಿತ್ರ ನೋಡಿ ಇವನಿಗೆ ಮೂವತ್ತಿರಬಹುದು, ನಲುವತ್ತಿರಬಹುದು ಅಷ್ಟೇ ಎನ್ನುವವರೇ ಜಾಸ್ತಿ. ನಿರ್ದಿಷ್ಟವಾಗಿ ಈತನಿಗೆ ಎಪ್ಪತ್ತೆರಡು ವಯಸ್ಸು ಎಂದು ಹೇಳದೆ ಹೋದರೆ ಯಾರಿಗೂ ಗೊತ್ತಾಗುವುದೇ ಇಲ್ಲ.
ಇವನು ಚಚೀನಾದ ಕ್ಸಿನ್‌ಮಿನ್ ಯಾಂಗ್. ಇವನು ಬಾಡಿ ಬಿಲ್ಡಿಂಗ್‌ನಿಂದಲೇ ಕೆರಿಯರ್ ಕಟ್ಟಿಕೊಂಡವನು. ಅದೇ ಅವನ ಹವ್ಯಾಸ, ವೃತ್ತಿ, ಜೀವನ ಎಲ್ಲವೂ. ಅದಕ್ಕಾಗಿಯೇ ದೇಹವನ್ನು ಹುರಿಗೊಳಿಸಿದ ಬಿಲ್ಲಿನಂತೆ ಸದಾ ಇಟ್ಟುಕೊಂಡಿರುತ್ತಾನೆ. 1984ರಷ್ಟು ಹಿಂದೆಯೇ ಇವನು ಬಾಡಿ ಬಿಲ್ಡಿಂಗ್‌ನಲ್ಲಿ ತನ್ನ ಜೀವನ ಆರಂಭಿಸಿದ. ರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಪಟುವೂ ಹೌದು. ಇದು ಹೆಚ್ಚಿನ ಜನರ ಗಮನ ಸೆಳೆದಿರಲಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣ ರೆಡ್ಡಿಟ್ ಈತನದೊಂದು ಫೊಟೋ ಪ್ರಕಟಿಸಿ ಇವನ ವಿವರಗಳನ್ನು ಹಾಕಿದಾಗ ಮಾತ್ರ ಜನ ಹೌಹಾರಿದರು. ''72 ಇರಲಿಕ್ಕಿಲ್ಲ, ನೀವು ತಮಾಷೆ ಮಾಡ್ತಿದೀರಿ'' "ಇವನ ವಯಸ್ಸು ನಿಜಕ್ಕೂ ನಲುವತ್ತು ಇರಬಹುದು, ಆದರೆ ಮುಖ ಮಾತ್ರ ಸ್ವಲ್ಪ ವಯಸ್ಸಾದವರಂತಿದೆ ಅಷ್ಟೇ'' "72 ಅಂತ ನಂಬೋಕಾಗ್ತಿಲ್ಲ'' ಎಂಬಂತ ಸುಮಾರು ಕಮೆಂಟ್‌ಗಳು ಬಂದವು. ಕಡೆಗೆ ಯಾಂಗ್‌ನೇ ತನಗೆ 72 ವರ್ಷ ಎಂಬುದನ್ನು ರುಜುವಾತುಪಡಿಸಬೇಕಾಯಿತು.
ಯಾಂಗ್ ಕಾಪಾಡಿಕೊಂಡಿರುವ ಹೆಲ್ದಿ ಬಾಡಿಯ ರಹಸ್ಯವೇನು? ಇದರಲ್ಲಿ ರಹಸ್ಯವೇನೂ ಇಲ್ಲ ಅಂತಾನೆ ಯಾಂಗ್. ಬಾಡಿ ಬಿಲ್ಡಿಂಗ್ ಮಾಡಲು ದೇಹ ಫಿಟ್ ಆಗಿ ಇರಬೇಕಲ್ಲ. ಅದಕ್ಕೆ ಕೋಚ್ ಮೂಲಕ ಪಡೆದುಕೊಂಡ ಡಯಟ್ ಮತ್ತು ನಿತ್ಯ ವ್ಯಾಯಾಮದ ಅಭ್ಯಾಸವನ್ನೇ ಆತ ಈಗಲೂ ಮುಂದುವರಿಸಿದ್ದಾನೆ. ಒಂದು ದಿನವೂ ಆ ಡಯಟ್ ಮತ್ತು ವ್ಯಾಯಾಮವನ್ನು ಆತ ಬಿಟ್ಟುಕೊಡುವುದಿಲ್ಲ. ಆರೋಗ್ಯವಾಗಿರೋಕೆ, ಆನಂದವಾಗಿರೋಕೆ ಇಂಥ ಡಯಟ್ ಮತ್ತು ವ್ಯಾಯಾಮ ಪ್ರಾಕ್ಟೀಸ್ ಮಾಡಿಕೊಳ್ಳಿ ಅಂತಾನೆ ಆತ.
ವಿಟಮಿನ್ ಡಿ ನಿಮ್ಮಲ್ಲಿ ಸಾಕಷ್ಟಿದೆಯಾ? ತಿಳಿಯೋದು ಹೇಗೆ?
ಹಾಗಿದ್ದರೆ ಅವನ ಫಿಟ್ನೆಸ್ ರಿಜೈಮ್ ಏನು?
ಅವನು ಬೆಳಗ್ಗೆ ಬೇಗ ಏಳುತ್ತಾನೆ. ಕನಿಷ್ಠ ಎಂಟು ಕಿಲೋಮೀಟರ್ ಓಡುತ್ತಾನೆ. ಸಾಕಷ್ಟು ನೀರು ಕುಡಿಯುತ್ತಾನೆ.
ಬ್ರೇಕ್‌ಫಾಸ್ಟ್‌ಗೆ ಕನಿಷ್ಠ ಎಂಟು ಮೊಟ್ಟೆ ತಿನ್ನುತ್ತಾನೆ. ಟೊಮೆಟೋ, ಸೌತೆಕಾಯಿ, ಓಟ್‌ಮೀಲ್, ಚಿಕನ್ ಸೇವಿಸುತ್ತಾನೆ. ಅನಗತ್ಯ ಕಾರ್ಬೊಹೈಡ್ರೇಟ್ ಸೇವಿಸುವುದಿಲ್ಲ. ವಾರಕ್ಕೆ ಮೂರು ಬಾರಿ ಮಾತ್ರ ಕಾರ್ಬೊ ಹೆಚ್ಚಿರುವ ಆಹಾರವನ್ನು ಸೇವಿಸುತ್ತಾನೆ. ಉಳಿದಂತೆ ಅವನ ಮುಖ್ಯ ಆಹಾರವೆಂದರೆ ಪ್ರೊಟೀನ್ ಹೆಚ್ಚಾಗಿರುವ ಎಲ್ಲ ಬಗೆಯ ಹಸಿರು ತರಕಾರಿಗಳು, ಮೊಟ್ಟೆ, ಗೋಧಿ, ಜೋಳ, ದ್ವಿದಳ ಧಾನ್ಯಗಳು, ಓಟ್ಸ್, ಇತ್ಯಾದಿ.
ಪಿಜ್ಜಾ, ಬರ್ಗರ್ ಮುಂತಾದ ಜಂಕ್ಫುಡ್ ಮಸಾಲೆಯುಕ್ತ ಆಹಾರ ಸೇವಿಸುವುದೇ ಇಲ್ಲ. ಒಂದೊಮ್ಮೆ ಸ್ನೇಹಿತರ ಜೊತೆ ಸೇರಿ ಸೇವಿಸಿದರೂ ಅದು ದೇಹದಿಂದ ಪೂರ್ತಿ ಖರ್ಚಾಗುವವರೆಗೆ ವರ್ಕ್ಔಟ್ ಮಾಡಿಯೇ ತೆಗೆಯುತ್ತಾನೆ. ಮದ್ಯಪಾನದಿಂದ ದೂರ. ಎರಡು ಮೂರು ತಿಂಗಳಿಗೊಮ್ಮೆ ಸ್ನೇಹಿತರ ಜೊತೆ ಸೇರಿ ಸ್ವಲ್ಪ ಬಿಯರ್ ಕುಡಿಯುವುದುಂಟು. ಬಿಯರ್ ಸೇವಿಸಿದಾಗ ಮಾಂಸ, ಕರಿದ ಆಹಾರ ಸೇವಿಸುವುದಿಲ್ಲ. ಉಪ್ಪು ಬೆರೆಸಿದ ತರಕಾರಿ ತಿನ್ನುತ್ತಾನೆ.
ಕಂಪ್ಯೂಟರ್ ನೋಡಿ ಕಣ್ಣು ಬಳಲುತ್ತಿದೆಯೇ? ಪರಿಹಾರ ಇಲ್ಲಿದೆ
ರಾತ್ರಿ ಮಲಗಲು ಎರಡು ಗಂಟೆ ಮುಂಚೆ ಆಹಾರ ಸೇವಿಸುತ್ತಾನೆ. ರಾತ್ರಿಯ ಊಟವಾದ ಮೇಲೆ ನಾಲ್ಕು ಕಿಲೋಮೀಟರ್ ನಡೆಯುತ್ತಾನೆ.
ಇನ್ನು ಅವನ ವರ್ಕ್ಔಟ್‌ಗಳು ಸಾಕಷ್ಟು ಇವೆ. ಪುಶಪ್‌ಗಳು, ಬೆನ್ನು ಹಾಗೂ ತೋಳಿನ ಮೂಳೆಗಳಿಗೆ ವ್ಯಾಯಾಮ ನೀಡುವ ಭಾರ ಎತ್ತುವಿಕೆಗಳು, ತೊಡೆಯ ಸ್ನಾಯುಗಳನ್ನು ಬಲ ಮಾಡುವ ಟ್ರೆಡ್‌ಮಿಲ್, ಕುತ್ತಿಗೆಗೆ ವ್ಯಾಯಾಮ ನೀಡುವ ಕೆಲವು ಯೋಗಾಸನಗಳು- ಇವೆಲ್ಲವನ್ನೂ ಮಾಡುತ್ತಾನೆ.
ಯಾಂಗ್‌ನ ಬ್ಲಡ್‌ಪ್ರೆಶರ್, ಬ್ಲಡ್ ಲಿಪಿಡ್ ಎಲ್ಲವೂ ನಾರ್ಮಲ್ಲಾಗಿವೆ. ಅವನ ಬೋನ್ ಡೆನ್ಸಿಟಿ 30 ವರ್ಷದವರಲ್ಲಿ ಹೇಗಿರಬೇಕೋ ಹಾಗಿದೆ. ಅವನು ಈಗ ಯುವಕರಿಗೆ ವೇಟ್‌ಲಿಫ್ಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಾನೆ. ನೀವೂ ಇಂಥ ವರ್ಕ್ಔಟ್ ರೂಢಿಸಿಕೊಳ್ಳಿ- ನೀವೂ ನನ್ನ ಹಾಗೇ ಆಗಬಹುದು ಎಂಬುದು ಇವನ ಸಂದೇಶ.
ನೀವು ಕಾಲ ಮೇಲೆ ಕಾಲು ಹಾಕಿ ಕೂರೋದ್ರಿಂದ ಪುರುಷತ್ವಕ್ಕೆ ಹಾನಿಯಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.