Health Tips: ಮಾವಿನ ಹಣ್ಣಿನ ಸಿಪ್ಪೆಯೂ ಬೇಕು ದೇಹಕ್ಕೆ, ವಿಷ ಇರಬಾರದು ಅಷ್ಟೆ!

By Suvarna News  |  First Published Jun 27, 2022, 2:29 PM IST

ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಬಹುತೇಕ ಎಲ್ಲರೂ ಹಣ್ಣಿನ ರಾಜ ಮಾವನ್ನು ತಿನ್ನುತ್ತಾರೆ. ಆದ್ರೆ ಹಣ್ಣು ತಿಂದು ಸಿಪ್ಪೆ ಕಸಕ್ಕೆ ಹಾಕ್ತಾರೆ. ಈ ಸಿಪ್ಪೆಯಲ್ಲಿರುವ ಔಷಧಿ ಗುಟ್ಟು ಅನೇಕರಿಗೆ ತಿಳಿದಿಲ್ಲ.
 


ಬೇಸಿಗೆ (Summer) ಬಂತೆಂದ್ರೆ ಮಾವಿ (Mango) ನ ಹಣ್ಣಿನ ಋತು ಶುರುವಾಗ್ತಿದೆ. ಜನರು ಮುಗಿಬಿದ್ದು ಮಾವಿನ ಹಣ್ಣನ್ನು ತಿನ್ನುತ್ತಾರೆ. ಮಾವಿನ ಹಣ್ಣು ಆರೋಗ್ಯ (Health) ಕ್ಕೆ ಒಳ್ಳೆಯದು. ಈಗ ಮಳೆಗಾಲ ಶುರುವಾಗಿದೆ. ಮಾವಿನ ಋತು ಮುಗಿಯುತ್ತಿದೆ. ಜನರು ಈ ಋತುವಿನ ಕೊನೆ ಮಾವಿನ ಹಣ್ಣನ್ನು ತಿನ್ನುವ ಆತುರದಲ್ಲಿದ್ದಾರೆ. ಸಾಮಾನ್ಯವಾಗಿ ಜನರು ಮಾವಿನ ಹಣ್ಣನ್ನು ತಿನ್ನುವ ಮೊದಲು ಸಿಪ್ಪೆ ತೆಗೆಯುತ್ತಾರೆ. ಆ ಸಿಪ್ಪೆಯಿಂದ ಏನೂ ಪ್ರಯೋಜನವಿಲ್ಲವೆಂದು ಕಸಕ್ಕೆ ಎಸೆಯುತ್ತಾರೆ. ಆದ್ರೆ ಮಾವಿನ ಹಣ್ಣಿನ ಸಿಪ್ಪೆಯನ್ನು ನೀವೂ ಬಿಸಾಡುತ್ತಿದ್ದರೆ ಇನ್ಮುಂದೆ ಆ ಕೆಲಸ ಮಾಡ್ಬೇಡಿ. ಮಾವಿನ ಹಣ್ಣಿನ ಸಿಪ್ಪೆ ಸಾಕಷ್ಟು ಪ್ರಯೋಜನಕ್ಕೆ ಬರುತ್ತೆ. ನಾವಿಂದು ಮಾವಿನ ಹಣ್ಣಿನ ಸಿಪ್ಪೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬ ಸಂಗತಿಯನ್ನು ಹೇಳ್ತೇವೆ.
ಮಾವಿನ ಹಣ್ಣನ್ನು ತಿನ್ನುವಾಗ ಅದ್ರ ಸಿಪ್ಪೆ ತಿಂದ್ರೆ ಮಾವಿನ ಹಣ್ಣಿನ ರುಚಿ ಕೆಡುತ್ತದೆ. ಹಾಗಾಗಿಯೇ ಬಹುತೇಕರು ಹಣ್ಣಿನ ಸಿಪ್ಪೆ ತಿನ್ನೋದಿಲ್ಲ. ಒಳಗಿನನ ತಿರುಳು ತಿಂದು ಸಿಪ್ಪೆಯನ್ನು ಕಸಕ್ಕೆ ಹಾಕ್ತಾರೆ. ಅದೇ ಮಾವಿನ ಕಾಯಿಯಿದ್ದಾಗ ಅನೇಕರು ಸಿಪ್ಪೆ ಸಮೇತ ಅದರ ಸೇವನೆ ಮಾಡ್ತಾರೆ. ರುಚಿ ಸ್ವಲ್ಪ ಹೆಚ್ಚುಕಮ್ಮಿ ಅನ್ನಿಸಿದ್ರೂ ನೀವು ಮಾವಿನ ಹಣ್ಣಿನ ಸಿಪ್ಪೆಯನ್ನು ತಿಂದ್ಲೇಬೇಕು. 

ಮಾವಿನ ಹಣ್ಣಿನ ಸಿಪ್ಪೆಯಿಂದಾಗುವ ಪ್ರಯೋಜನಗಳು : 
ಆಂಟಿ-ಆಕ್ಸಿಡೆಂಟ್ ಗುಣಲಕ್ಷಣ :
ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಆಂಟಿ – ಆಕ್ಸಿಡೆಂಟ್ ಕಂಡು ಬರುತ್ತದೆ. ಈ ಆಂಟಿ ಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ಸ್ ನಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತವೆ. ವಿಶೇಷವಾಗಿ ಫ್ರೀ ರಾಡಿಕಲ್ಸ್ ಅಂಗಗಳಿಗೆ ಹಾನಿಯುಂಟು ಮಾಡುತ್ತದೆ. ಕಣ್ಣು, ಹೃದಯ ಮತ್ತು ಚರ್ಮಕ್ಕೆ ಹೆಚ್ಚಿನ ಹಾನಿ ಮಾಡುವ ಫ್ರೀ ರಾಡಿಕಲ್ಸ್ ಹಾನಿಯನ್ನು ಮಾವಿನ ಹಣ್ಣಿನ ಸಿಪ್ಪೆ ರಕ್ಷಿಸುತ್ತದೆ. 

Tap to resize

Latest Videos

ಮಳೆಗಾಲದಲ್ಲಿ ಕಾಡೋ ಕಾಲ್ಬೆರಳಿನ ಫಂಗಸ್ ಸಮಸ್ಯೆ: ಮನೆಯಲ್ಲಿದೆ ಮದ್ದು!

ಕ್ಯಾನ್ಸರ್ ಗೆ ಮಾವಿನ ಹಣ್ಣಿನ ಸಿಪ್ಪೆ ಮದ್ದು : ಮೊದಲೇ ಹೇಳಿದಂತೆ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಮಾವಿನ ಸಿಪ್ಪೆಯಲ್ಲಿ ಕಂಡುಬರುತ್ತವೆ. ಇದು ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಮಾವಿನ ಸಿಪ್ಪೆಯು ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಮಾವಿನ ಸಿಪ್ಪೆಯು ಸಸ್ಯಗಳಲ್ಲಿ ಕಂಡುಬರುವ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿದೆ ಎಂಬುದು ನಿಮಗೆ ತಿಳಿದಿರಲಿ.

ತೂಕ ಕಡಿಮೆ ಮಾಡಲು ನೆರವಾಗುತ್ತೆ ಮಾವಿನ ಹಣ್ಣಿನ ಸಿಪ್ಪೆ : ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಮಾವಿನ ಸಿಪ್ಪೆಯನ್ನು ಸಹ ತಿನ್ನಬಹುದು. ಇದರ ಸಿಪ್ಪೆಗಳು ತೂಕವನ್ನು ಕಡಿಮೆ ಮಾಡಲು ಸಹಾಯಕಾರಿ ಎಂದು ನಂಬಲಾಗಿದೆ. ತೂಕ ಕಡಿಮೆಯಾಗ್ಬೇಕೆಂದು ಬಯಸುವ ಜನರು ಮಾವಿನ ಸಿಪ್ಪೆಯನ್ನು ಎಸೆಯಬಾರದು. ಸಿಪ್ಪೆ ಸಮೇತ ಮಾವಿನ ಹಣ್ಣಿನ ಸೇವನೆ ಮಾಡ್ಬೇಕು.

ಖಾರ ಅಂತ ದೂರವಿಡೋ ಹಸಿ ಮೆಣಸು ಹಲವು ಕಾಯಿಲೆಗೆ ಮದ್ದು

ಸುಕ್ಕು ನಿವಾರಕ : ಮಾವಿನ ಹಣ್ಣು ಆರೋಗ್ಯದ ಜೊತೆ ಸೌಂದರ್ಯ ವರ್ಧಕವೂ ಹೌದು. ಮಾವಿನ ಹಣ್ಣನಿ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಕತ್ತರಿಸಿ, ರುಬ್ಬಬೇಕು. ನಂತ್ರ ಅದಕ್ಕೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದ್ರೆ ಮುಖದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ. 

ಮೊಡವೆಗಳಿಗೆ ಮುಕ್ತಿ : ಮುಖದ ಮೇಲೆ ಮೊಡವೆ ಕಲೆಯಿದ್ದು, ನಿಮ್ಮ ಸೌಂದರ್ಯಕ್ಕೆ ಧಕ್ಕೆಯಾಗ್ತಿದೆ ಅಂದ್ರೆ ನೀವು ಮಾವಿನ ಹಣ್ಣಿನ ಸಿಪ್ಪೆ ಬಳಸಬಹುದು. ಅದನ್ನು ಮಿಕ್ಸಿ ಮಾಡಿ, ರಸವನ್ನು ಮೊಡವೆ ಮೇಲೆ ಹಚ್ಚಿಕೊಳ್ಳಬೇಕು. ಕೆಲವೇ ದಿನಗಳಲ್ಲಿ ಕಲೆ ಮಾಯವಾಗುತ್ತದೆ. 

ಗೊಬ್ಬರ (Fertilizer) : ಬೇರೆ ಹಣ್ಣಿನ ಸಿಪ್ಪೆಯ ಜೊತೆ ಬೆರೆಸಿ ಮಾವಿನ ಹಣ್ಣಿನ ಸಿಪ್ಪೆಯಿಂದ ಒಳ್ಳೆಯ ಗೊಬ್ಬರ ಮಾಡ್ಬಹುದು. ಅದ್ರಲ್ಲಿ ವಿಟಮಿನ್, ಕಾಪರ್, ಫೋಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಗಿಡಗಳು ಸಮೃದ್ಧವಾಗಿ ಬೆಳೆಯಲು ನೆರವಾಗುತ್ತವೆ.

click me!